IPL ರೂಲ್ಸ್.. RCBಗೆ ಟೆನ್ಷನ್! – ಐವರು ಆಟಗಾರರಿಗೆ ₹75 ಕೋಟಿ
ಕೊಹ್ಲಿ ಓಕೆ.. ಉಳಿದವ್ರಿಗೆ ಅಷ್ಟು ಹಣನಾ?

IPL ರೂಲ್ಸ್.. RCBಗೆ ಟೆನ್ಷನ್! – ಐವರು ಆಟಗಾರರಿಗೆ ₹75 ಕೋಟಿಕೊಹ್ಲಿ ಓಕೆ.. ಉಳಿದವ್ರಿಗೆ ಅಷ್ಟು ಹಣನಾ?

ಐಪಿಎಲ್ ರೂಲ್ಸ್ ಅನೌನ್ಸ್ ಆಗಿದ್ದೇ ಆಗಿದ್ದು. ಫ್ರಾಂಚೈಸಿಗಳಲ್ಲಿ ಅಸಲಿ ಲೆಕ್ಕಾಚಾರ ಶುರುವಾಗಿದೆ. ತಂಡದಲ್ಲಿ ಯಾರನ್ನ ಉಳಿಸಿಕೊಳ್ಬೇಕು ಯಾರನ್ನ ರಿಲೀಸ್ ಮಾಡ್ಬೇಕು ಅಂತಾ ಮಾಲೀಕರು ಗೇಮ್ ಪ್ಲ್ಯಾನ್ ಮಾಡ್ತಿದ್ದಾರೆ. ಡಿಸೆಂಬರ್ ಎಂಡ್ ಅಥವಾ ಜನವರಿ ಫಸ್ಟ್ ವೀಕ್​ನಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಕೂಡ ಸಿದ್ಧತೆ ನಡೆಸಿಕೊಳ್ತಿದೆ. ಬಟ್ ಈಗ ಇರೋ ಡೌಟ್ ಅಂದ್ರೆ ಒಟ್ಟು ಆರು ಆಟಗಾರರನ್ನ ಉಳಿಸಿಕೊಳ್ಳೋಕೆ ಅವಕಾಶ ನೀಡಿರೋದು ಹಾಗೇ ಇಂತಿಷ್ಟೇ ಅಮೌಂಟ್ ಕೊಡ್ಬೇಕು ಅಂತಾ ಫಿಕ್ಸ್ ಮಾಡಿರೋದು ಫ್ರಾಂಚೈಸಿಗಳಿಗೆ ಲಾಭನೋ ನಷ್ಟನೋ ಅನ್ನೋದು..? ಹಾಗಾದ್ರೆ ಐಪಿಎಲ್ ರೂಲ್ಸ್ ಬೆಂಗಳೂರು ಫ್ರಾಂಚೈಸಿಗೆ ಪ್ಲಸ್ ಅಥವಾ ಮೈನಸ್? ಯಾರನ್ನ ಉಳಿಸಿಕೊಂಡ್ರೆ ಬೆಟರ್? ಯಾರೆಲ್ಲಾ ರಿಲೀಸ್ ಲಿಸ್ಟ್​ನಲ್ಲಿ ಇದ್ದಾರೆ?  ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದರ್ಶನ್‌ ಗೆ ಬೆಂಬಿಡದೆ ಕಾಡುತ್ತಿದೆ ಬೆನ್ನು ನೋವು! – ಸರ್ಜರಿಗೆ ಒಳಗಾಗಬೇಕಾ ನಟ?

2025ರ ಐಪಿಎಲ್​ಗೆ ನಿಯಮಗಳನ್ನ ರೂಪಿಸಿರೋ ಬಿಸಿಸಿಐ ಒಟ್ಟು 6 ಆಟಗಾರರನ್ನು ಉಳಿಸಿಕೊಸಿಕೊಳ್ಳಲು ಅನುಮತಿ ನೀಡಿದೆ. ಆದರೆ, ಬಿಸಿಸಿಐ ಇಲ್ಲೊಂದು ಟ್ವಿಸ್ಟ್ ಕೂಡ ಇಟ್ಟಿದೆ. ಪರ್ಸ್​​ ಮೊತ್ತವನ್ನ 120 ಕೋಟಿಗೆ ಏರಿಸಿದ್ರೂ ಕೂಡ ಉಳಿಸಿಕೊಳ್ಳೋ ಆಟಗಾರರಿಗೆ ಸಂಭಾವನೆಯನ್ನೂ ಬಿಸಿಸಿಐಯೇ ಫಿಕ್ಸ್ ಮಾಡಿದೆ. ಹಾಗೇ ಟೂರ್ನಿ ಮಧ್ಯದಲ್ಲೇ ಕಾರಣ ಕೊಟ್ಟು ಹೊರ ಹೋಗುವವರಿಗೂ ಖಡಕ್ಕಾಗೇ ವಾರ್ನಿಂಗ್ ಕೊಟ್ಟಿದೆ. ಸದ್ಯ ಐಪಿಎಲ್​ನಲ್ಲಿ 10 ಫ್ರಾಂಚೈಸಿಗಳಿದ್ದು ಪ್ರತೀ ಫ್ರಾಂಚೈಸಿಯೂ ಐವರನ್ನ ರಿಟೈನ್ ಮತ್ತು ರೈಟ್ ಟು ಮ್ಯಾಚ್​ ಮೂಲಕ ಒಬ್ಬರನ್ನು ಉಳಿಸಿಕೊಳ್ಳಬಹುದು. ರಿಟೈನ್​ನ ಐವರಲ್ಲಿ ದೇಶೀಯ ಹಾಗೇ ವಿದೇಶೀ ಆಟಗಾರರು ಕೂಡ ಇರ್ಬೋದು. ಇಬ್ಬರು ಅನ್‌ಕ್ಯಾಪ್ಡ್‌ ಪ್ಲೇಯರ್ಸ್​ ಉಳಿಸಿಕೊಳ್ಳೋಕೂ ಅವಕಾಶ ನೀಡಿದೆ. ಬಟ್ ಇದೇ ನಿಯಮ ಆರ್​ಸಿಬಿ ಫ್ರಾಂಚೈಸಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಪರ್ಫಾಮೆನ್ಸ್ ಜೊತೆ ಮ್ಯಾಚ್ ಫೀ ಕೂಡ ಕೊಡ್ಬೇಕು ಫ್ರಾಂಚೈಸಿ!

ಫ್ರಾಂಚೈಸಿಗಳ ಪರ್ಸ್ ಮೊತ್ತವನ್ನ ಬಿಸಿಸಿಐ 120 ಕೋಟಿಗೆ ಏರಿಸಿದೆ. ಇದರಲ್ಲಿ ಫ್ರಾಂಚೈಸಿಗಳು ಆಟಗಾರರಿಗೆ ಪರ್ಫಾಮೆನ್ಸ್ ಪೇ ಮತ್ತು ಮ್ಯಾಚ್ ಫೀ ಕೂಡ ಕೊಡ್ಬೇಕು. ಹಿಂದಿನ ಆವೃತ್ತಿಯಲ್ಲಿ ಒಂದು ಇದು 100 ಕೋಟಿ ರೂಪಾಯಿ ಇತ್ತು. 2026ರ ಐಪಿಎಲ್‌ ಟೂರ್ನಿಗೆ ಇದರ ಮೊತ್ತ 151 ಕೋಟಿ ರೂಪಾಯಿಗೆ ಏರಿಕೆ ಕಾಣಲಿದೆ. ಐಪಿಎಲ್ 2027ಕ್ಕೆ 157 ಕೋಟಿ ಆಗಲಿದೆ. ಬಟ್ ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಆಟಗಾರರಿಗೆ ಪಂದ್ಯದ ಶುಲ್ಕವನ್ನು ಕೂಡ ಕೊಡ್ಬೇಕಾಗಿದೆ. ಇಂಪ್ಯಾಕ್ಟ್‌ ಪ್ಲೇಯರ್‌ ಮತ್ತು ಮೈದಾನಕ್ಕೆ ಇಳಿಯುವ ಎಲ್ಲಾ ಆಟಗಾರರು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಮ್ಯಾಚ್‌ ಫೀ ಪಡೆಯಲಿದ್ದಾರೆ. ಒಪ್ಪಂದ ಪಡೆಯುವ ಹೊರತಾಗಿಯೂ ಕೂಡ ಈ ಹಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತೆ. ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಆಡಲು ಇಷ್ಟ ಇದ್ರೆ ಮೆಗಾ ಆಕ್ಷನ್​ಗೆ ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಕು. ಹೆಸರು ನೋಂದಾವಣಿ ಮಾಡಿಕೊಳ್ಳಲಿಲ್ಲ ಎಂದಾದರೆ ಅಂತಹವರು ಮುಂಬರುವ ಟೂರ್ನಿಗಳಲ್ಲಿ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುವಂತ್ತಿಲ್ಲ. ಹಾಗೇ ಒಬ್ಬ ಆಟಗಾರನನ್ನು ತಂಡವೊಂದು ಖರೀದಿಸಿದ ನಂತರ ಟೂರ್ನಿಯುದ್ದಕ್ಕೂ ಹಾಜರಾಗುವುದು ಕಡ್ಡಾಯ. ಟೂರ್ನಿಯಲ್ಲಿ ಭಾಗಿಯಾಗ್ದೇ ಇದ್ರೆ ಅಂತಹ ಆಟಗಾರನಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ ಹೇರಲಾಗುತ್ತದೆ. ಇದೇ ನಿಯಮ ವಿದೇಶಿ ಆಟಗಾರರಿಗೆ ಆತಂಕ ಹೆಚ್ಚಿಸಿದೆ.

ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ನಿಯಮದಲ್ಲೂ ಬದಲಾವಣೆ ತರಲಾಗಿದೆ. ಈ ನಿಯಮ ಜಾರಿಗೆ ಸಿಎಸ್​ಕೆ ಮನವಿ ಮಾಡಿತ್ತು. ಇನ್ಮುಂದೆ ಯಾವುದೇ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ನಂತರ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಸೇರಿಸಬೇಕು. ಆದರೆ, ಈ ನಿಯಮವನ್ನು 2021ರಲ್ಲಿ ಕೈ ಬಿಡಲಾಗಿತ್ತು. ಇದೀಗ ಮತ್ತೆ ಜಾರಿಗೊಳಿಸಿದೆ. ಈ ನಿಯಮ ಧೋನಿಗೆ ಅನ್ವಯವಾಗುತ್ತದೆ.

ಆಟಗಾರನಿಗೆ ಹಣವನ್ನೂ ಫಿಕ್ಸ್ ಮಾಡಿದ ಬಿಸಿಸಿಐ!

ಌಕ್ಷುಲಿ ಸಮಸ್ಯೆ ಶುರುವಾಗಿರೋದೇ ಇಲ್ಲಿ. ಒಂದು ಫ್ರಾಂಚೈಸಿ ರಿಟೈನ್ ಮಾಡಿಕೊಂಡ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂಪಾಯಿ ನೀಡ್ಬೇಕು. ಅಂದ್ರೆ ಇಲ್ಲಿ 120 ಕೋಟಿ ರೂಪಾಯಿ ಮೆಗಾ ಹರಾಜು ಮೊತ್ತದಲ್ಲಿ 75 ಕೋಟಿ ರೂಪಾಯಿ ರಿಟೈನ್ ಮಾಡುವ ಆಟಗಾರನಿಗೇ ಕೊಡ್ಬೇಕು. ಉಳಿದಿರುವ 45 ಕೋಟಿಯಲ್ಲಿ 13ರಿಂದ 20 ಆಟಗಾರರನ್ನು ಖರೀದಿ ಮಾಡ್ವೇಕು. ಸೋ ಅಮೌಂಟ್ ಕೂಡ ಫಿಕ್ಸ್ ಮಾಡಿರೋದ್ರಿಂದ ಆರ್​ಸಿಬಿಗೆ ದೊಡ್ಡ ಹಿನ್ನಡೆಯಾಗ್ತಿದೆ.

ಸ್ಟಾರ್ ಆಟಗಾರರಿಲ್ಲದ ಆರ್ ಸಿಬಿಯಲ್ಲಿ ರಿಟೈನ್ ಟೆನ್ಷನ್!

ಹೇಳಿ ಕೇಳಿ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಯವ್ರನ್ನ ಹೊರತುಪಡಿಸಿದ್ರೆ ಮತ್ಯಾವ ಸ್ಟಾರ್ ಪ್ಲೇಯರ್ ಕೂಡ ಇಲ್ಲ. ಸೋ ಇಂಥಾ ಟೈಮಲ್ಲಿ ರೀಟೇನ್ ಆಟಗಾರರಿಗೆ ಅಷ್ಟೊಂದು ಹಣ ನೀಡೋಕೂ ಆಗಲ್ಲ. ಹಾಗಂತ ಎಲ್ರನ್ನೂ ಹರಾಜಿಗೆ ಬಿಡೋದೂ ಕಷ್ಟ. ಇದೇ ಈಗ ಆರ್​ಸಿಬಿ ಫ್ರಾಂಚೈಸಿ ತಲೆನೋವು ತಂದಿಟ್ಟಿದೆ. ಅಲ್ದೇ ಐದು ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾ ಪರ ಆಡದ ಆಟಗಾರರನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸುವ ನಿಯಮ ಬಂದಿದ್ರೂ ಇದ್ರಿಂದ ಬೆಂಗಳೂರಿಗೆ ಯಾವ ಲಾಭವೂ ಇಲ್ಲ.

ವಿರಾಟ್ ಕೊಹ್ಲಿಗೆ ಮಾತ್ರ ಅಷ್ಟೊಂದು ಹಣ ಕೊಡೋದು ಓಕೆ!

ರನ್ ಮಷಿನ್ ವಿರಾಟ್ ಕೊಹ್ಲಿಯವ್ರನ್ನ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳೋದಂತೂ ಗ್ಯಾರಂಟಿ. ದಾಖಲೆಯ 18ನೇ ಬಾರಿಗೆ ಬೆಂಗಳೂರು ಜೆರ್ಸಿ ಧರಿಸಿ ಐಪಿಎಲ್‌ನಲ್ಲಿ ಆಡೋದು ಪಕ್ಕಾ. ಅದಕ್ಕಾಗಿ 18 ಕೋಟಿ ಕೊಹ್ಲಿಯವ್ರನ್ನ ಮೊದಲನೇ ಆಟಗಾರನಾಗಿ ಉಳಿಸಿಕೊಳ್ತಾರೆ. ಬಟ್ ಉಳಿದಂತೆ ನಾಲ್ವರಿಗೆ 14 ಕೋಟಿ, 11 ಕೋಟಿ, 18 ಕೋಟಿ ಹಾಗೂ 14 ಕೋಟಿ ಕೊಟ್ಟು ಉಳಿಸಿಕೊಳ್ಬೇಕು. ಅಷ್ಟೊಂದು ಹಣ ಕೊಟ್ರೂಈ ವರ್ಥ್ ಇರೋ ಮತ್ಯಾವ ಆಟಗಾರನೂ ತಂಡದಲ್ಲಿಲ್ಲ. ಹೀಗಾಗಿ ಅಷ್ಟೊಂದು ಹಣ ಕೊಟ್ರೂ ನೋ ಯೂಸ್. ಇದೇ ಈಗ ಬೆಂಗಳೂರು ಫ್ರಾಂಚೈಸಿಗೆ ತಲೆನೋವು ತಂದಿಟ್ಟಿದೆ. ಸದ್ಯ ಬೆಂಗಳೂರು ಫ್ರಾಂಚೈಸಿಯ ರೀಟೇನ್ ಲಿಸ್ಟ್​ನಲ್ಲಿ ರಜತ್ ಪಟೀದಾರ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಮ್ಯಾಕ್ಸ್ ವೆಲ್ ಹಾಗೇ ಫಾಫ್ ಡುಪ್ಲೆಸಿಸ್ ಇದ್ದಾರೆ. ಹಾಗೇ ಕ್ಯಾಮರಾನ್ ಗ್ರೀನ್ ಮತ್ತು ಯಶ್ ದಯಾಳ್ ಕೂಡ ಆಲ್ಟರ್ ನೇಟಿವ್ ಲಿಸ್ಟ್​​ನಲ್ಲಿದ್ದಾರೆ. ಅಂತಿಮವಾಗಿ ಯಾರನ್ನ ಉಳಿಸಿಕೊಳ್ಬೇಕು ಅಷ್ಟೊಂದು ಹಣ ಇನ್ವೆಸ್ಟ್ ಮಾಡ್ಬೇಕಾ ಅನ್ನೋದು ಮಾಲೀಕರ ಕನ್ಫ್ಯೂಷನ್​ಗೆ ಕಾರಣ ಆಗಿದೆ.

Shwetha M

Leave a Reply

Your email address will not be published. Required fields are marked *