ಕ್ರಿಕೆಟ್ ನಲ್ಲೂ ಪಾತಾಳಕ್ಕೆ ಕುಸಿದ PAK – ಕೊಹ್ಲಿಗೆ ಕಂಪೇರ್.. ಆಟದಲ್ಲಿ ಫೇಲ್ಯೂರ್
ಬಿಲ್ಡಪ್ ಬಾಬರ್ ಗೆ ಕ್ಯಾಪ್ಟನ್ಸಿಯಿಂದ ಕೊಕ್

ಕ್ರಿಕೆಟ್ ನಲ್ಲೂ ಪಾತಾಳಕ್ಕೆ ಕುಸಿದ PAK – ಕೊಹ್ಲಿಗೆ ಕಂಪೇರ್.. ಆಟದಲ್ಲಿ ಫೇಲ್ಯೂರ್ಬಿಲ್ಡಪ್ ಬಾಬರ್ ಗೆ ಕ್ಯಾಪ್ಟನ್ಸಿಯಿಂದ ಕೊಕ್

ಪಾಕಿಸ್ತಾನದ ಆಟಗಾರ ಬಾಬರ್ ಅಝಮ್ ಆಟದಲ್ಲಿ ಒಂದು ರೇಂಜ್​ಗೆ ಚೆನ್ನಾಗೇ ಆಡ್ತಿದ್ರು. ಇವ್ರನ್ನ ಟೀಂ ಇಂಡಿಯಾದ ಹೀರೋ ಕಿಂಗ್ ವಿರಾಟ್ ಕೊಹ್ಲಿಗೂ ಹೋಲಿಕೆ ಮಾಡ್ತಿದ್ರು. ಆದ್ರೆ ಅಹಂ ನೆತ್ತುಗೇರಿಸಿಕೊಂಡಿರೋ ಬಾಬರ್ ಇತ್ತೀಚೆಗೆ ಆಟದಲ್ಲೂ ಸದ್ದು ಮಾಡ್ತಿಲ್ಲ. ಇದೀಗ ಬಾಬರ್ ಅಜಮ್ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಟೆಸ್ಟ್ ಮಾದರಿಯ ನಾಯಕತ್ವಕ್ಕೆ  ವಿದಾಯ ಹೇಳಿರುವ ಬಾಬರ್ ಏಕದಿನ ಹಾಗೂ ಟಿ20 ನಾಯಕತ್ವದ ಜವಾಬ್ದಾರಿ ನಿಭಾಯಿಸಲು ಆಗದೇ ಕೈ ಬಿಟ್ಟಿದ್ದಾಕೆ.  2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಾಬರ್ ಆಝಮ್ ಅವರನ್ನು ಮತ್ತೆ ವೈಟ್‌ ಬಾಲ್‌ ತಂಡಗಳ ನಾಯಕನ್ನಾಗಿ ನೇಮಿಸಿತ್ತು. ಆದರೆ ಈ ಟೂರ್ನಿಯಲ್ಲಿಯೂ ಪಾಕಿಸ್ತಾನ ತಂಡ ಅತ್ಯಂತ ಹೀನಾಯ ಪ್ರದರ್ಶನವನ್ನು ತೋರಿತ್ತು. ಇದೀಗ ಮತ್ತೊಮ್ಮೆ ನಾಯಕತ್ವ ಬದಲಾವಣೆಯಿಂದ ಪಾಕ್ ತಂಡದ ಒಗ್ಗಟ್ಟಿಗೆ ಕುತ್ತು ಬಂದಿದ್ದು,  ಆಟಗಾರರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.  ಒಮ್ಮೆ ಎಲ್ಲದ್ರೂ  ಬಾಬರ್ ರಾಜೀನಾಮೆ ನೀಡದಿದ್ದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಕಿತ್ತು ಹಾಕುತಿತ್ತು ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ.

ಕಳಪೆ ಪ್ರದರ್ಶನ ನೀಡುತ್ತಿದ್ದ ಬಾಬರ್

2023 ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್​ಗೆ ಶಾನ್ ಮಸೂದ್ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದರಂತೆ  ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ಕಣಕ್ಕಿಳಿದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಶಾಹೀನ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ 2024ರ ಟಿ20 ವಿಶ್ವಕಪ್​ಗೂ ಮುನ್ನ ಬಾಬರ್ ಆಝಂ ಅವರನ್ನು ಮತ್ತೆ ನಾಯಕನಾಗಿ ನೇಮಿಸಲಾಯಿತು. ಆದರೆ ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಯುಎಸ್​ಎ ವಿರುದ್ದ ಪರಾಜಯಗೊಳ್ಳುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿತ್ತು. ಅಲ್ಲದೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಹೀಗಾಗಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎನ್ನಲಾಗಿತ್ತು. ಅದರಂತೆ ಇದೀಗ ಖುದ್ದು ಬಾಬರ್ ಆಝಂ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ಇನ್ಮುಂದೆ ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಪಾಕಿಸ್ತಾನ್ ತಂಡಕ್ಕೆ ಹೊಸ ನಾಯಕ ಆಯ್ಕೆಯಾಗುವ ಸಾಧ್ಯತೆಯಿದೆ. ಇಲ್ಲಿ ಪಾಕಿಸ್ತಾನ್ ತಂಡದ ನೂತನ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನ್ ಸೂಪರ್ ಲೀಗ್ ಹಾಗೂ ಚಾಂಪಿಯನ್ಸ್​ ಕಪ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ರಿಝ್ವಾನ್ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುವ ಸಾಧ್ಯತೆಯಿದೆ.

ಇನ್ನು X ನಲ್ಲಿ ರಾಜೀನಾಮೆ ಬಗ್ಗೆ ಪೋಸ್ಟ್ ಮಾಡಿರೋ ಬಾಬರ್  ತಂಡದ ನಾಯಕತ್ವ ವಹಿಸಿರುವುದು ದೊಡ್ಡ ಗೌರವ. ಆದರೆ ನನ್ನ ವೈಯಕ್ತಿಕ ಪ್ರದರ್ಶನದ ಮೇಲೆ ಮೇಲೆ ಕೇಂದ್ರೀಕರಿಸಲು ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾಯಕತ್ವದ ಭಾವನೆ ಒಂದು ಕೊಡುಗೆಯಾಗಿದೆ. ಜತೆಗೆ ಕೆಲಸದ ಹೊರೆಯೂ ಹೆಚ್ಚುತ್ತಿದೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು. ನಾನು ಒಟ್ಟಿಗೆ ನನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತೇನೆ. ಆಟಗಾರನಾಗಿ ತಂಡಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲು ಸಂತೋಷವಾಗಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಬಾಬರ್ ಆಝಮ್ ಟ್ವೀಟ್‌ ಮಾಡಿದ್ದಾರೆ. ಅದೇನೇ ಇದ್ರೂ ಪಾಕ್​ನಲ್ಲಿ ಬಾಬರ್​ನನ್ನ ಪ್ರೀತಿಸೋ ಕೋಟ್ಯಂತರ ಜನರಿದ್ದಾರೆ. ವೈಟ್ ಬಾಲ್ ಕ್ರಾಯ್ಟನ್ಸಿಯಿಂದಲೂ ಹಿಂದೆ ಸರಿದಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *