ಬಾಂಗ್ಲಾ ಸರಣಿಯ HERO ಅಶ್ವಿನ್ – ಮುತ್ತಯ್ಯ ರೆಕಾರ್ಡ್ ಸರಿಗಟ್ಟಿದ ಬೌಲರ್
ಒಂದೇ ಟೆಸ್ಟ್ ನಲ್ಲಿ ದಾಖಲೆಗಳೆಷ್ಟು?

ಬಾಂಗ್ಲಾ ಸರಣಿಯ HERO ಅಶ್ವಿನ್ – ಮುತ್ತಯ್ಯ ರೆಕಾರ್ಡ್ ಸರಿಗಟ್ಟಿದ ಬೌಲರ್ಒಂದೇ ಟೆಸ್ಟ್ ನಲ್ಲಿ ದಾಖಲೆಗಳೆಷ್ಟು?

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆದ್ದು ಬೀಗಿರೋ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​ನಲ್ಲಿ ಮತ್ತಷ್ಟು ಬಲಿಷ್ಠವಾಗಿದೆ. 2 ಪಂದ್ಯಗಳ ಸಿರೀಸ್​ನಲ್ಲಿ ಭಾರತೀಯ ಆಟಗಾರರು ಸಾಲು ಸಾಲು ದಾಖಲೆಗಳನ್ನ ಬರೆದಿದ್ದಾರೆ. ಅದ್ರಲ್ಲೂ ಚೆನ್ನೈನಲ್ಲಿ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತು ಗೆಲ್ಲಿಸಿದ್ದೇ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಮಿಂಚಿದ ಅಶ್ವಿನ್ ಒಂದೇ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ಬ್ರೇಕ್ ಮಾಡಿದ್ರು. ಕಾನ್ಪುರದಲ್ಲೂ ತಮ್ಮ ಬೌಲಿಂಗ್ ಜಾದೂ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಇದರ ಜೊತೆಗೆ ಶ್ರೀಲಂಕಾದ ಸರ್ವಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಅವ್ರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಒಂದು ಸರಣಿಯಲ್ಲಿ ಅಶ್ವಿನ್ ಬರೆದಿರೋ ದಾಖಲೆಗಳೆಷ್ಟು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇರಾನ್‌ ಮೇಲೆ ಇಸ್ರೇಲ್‌ ದಾಳಿ  – ಸಂಘರ್ಷದ ಬೆನ್ನಲ್ಲೇ ಭಾರತೀಯರಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ ರಾಯಭಾರ ಕಚೇರಿ

ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಪಾಕಿಸ್ತಾನವನ್ನ ವೈಟ್ ವಾಶ್ ಮಾಡಿ ಭಾರತವನ್ನೂ ಸೋಲಿಸುವ ಸವಾಲಿನೊಂದಿಗೆ ಭಾರತಕ್ಕೆ ಕಾಲಿಟ್ಟಿದ್ದ ಬಾಂಗ್ಲಾ ಪಡೆಗೆ ತೀವ್ರ ಮುಖಭಂಗಬವಾಗಿದೆ. ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯ ಹಾಗೂ ಕಾನ್ಪುರದಲ್ಲಿ ನಡೆದ ಎರಡನೇ ಮ್ಯಾಚ್​ನಲ್ಲೂ ರಣರೋಚಕ ರೀತಿಯಲ್ಲಿ ಟೀಂ ಇಂಡಿಯಾ ಗೆಲುವು ಕಂಡಿದೆ. ನಿಜ ಹೇಳ್ಬೇಕಂದ್ರೆ ಈ ಗೆಲುವಿನ ಬಹುತೇಕ ಕ್ರೆಡಿಟ್ ಭಾರತದ ಹಿರಿಯ ಹಾಗೂ ಅನುಭವಿ ಆಟಗಾರ ಆರ್.ಅಶ್ವಿನ್​ಗೆ ಸಲ್ಲಬೇಕು. ಯಾಕೆ ಅನ್ನೋದನ್ನ ಹೇಳ್ತೇನೆ ನೋಡಿ.

ದಾಖಲೆಗಳ ವೀರ ಅಶ್ವಿನ್!

ಚೆನ್ನೈ ಮತ್ತು ಕಾನ್ಪುರದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲೂ ರವಿಚಂದ್ರನ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದರು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಭರ್ಜರಿ ಶತಕದ ಜೊತೆಗೆ 6 ವಿಕೆಟ್​ಗಳನ್ನು ಕಬಳಿಸಿದ್ದರು. ಹಾಗೇ ಸರಣಿಯ 2ನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 2 ವಿಕೆಟ್ ಪಡೆದಿದ್ದ ಅಶ್ವಿನ್, 2ನೇ ಇನಿಂಗ್ಸ್​ನಲ್ಲಿ ಮೂರು ವಿಕೆಟ್ ಉರುಳಿಸಿದ್ದರು. ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಸರಣಿಯ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಶ್ವಿನ್ ಎರಡು ಪಂದ್ಯಗಳಲ್ಲಿ 114 ರನ್ ಹಾಗೂ 11 ವಿಕೆಟ್ ಪಡೆದು ಈ ಗೌರವಕ್ಕೆ ಪಾತ್ರರಾದರು. ಈ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 11 ನೇ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸರಣಿ ಪ್ರಶಸ್ತಿಗಳನ್ನು ಗೆದ್ದರು. ಈ ಲಿಸ್ಟ್ ನಲ್ಲಿ ಶ್ರೀಲಂಕಾದ ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್ ಅವರು ಮುತ್ತಯ್ಯ ಮುರಳಿಧರನ್ ಅವರೊಂದುಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಮುತ್ತಯ್ಯ ಮುರಳಿ ಧರನ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 11 ಬಾರಿ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಜಾಕ್ ಕಾಲಿಸ್  9ಸಲ, ನ್ಯೂಜಿಲೆಂಡ್ ನ  ಸರ್ ರಿಚರ್ಡ್ ಹ್ಯಾಡ್ಲಿ 8 ಸಲ ಹಾಗೇ ಪಾಕಿಸ್ತಾನದ ಇಮ್ರಾನ್ ಖಾನ್ 8 ಸಲ, ಆಸ್ಟ್ರೇಲಿಯಾದ ಶೇನ್ ವಾರ್ನ್ 8 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ದೇ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ರಲ್ಲಿ ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಶ್ವಿನ್ 10 ಪಂದ್ಯಗಳಲ್ಲಿ 21.18 ಸರಾಸರಿಯಲ್ಲಿ 53 ವಿಕೆಟ್ ಪಡೆದಿದ್ದಾರೆ. ಅಲ್ದೇ ರವಿಚಂದ್ರನ್ ಅಶ್ವಿನ್ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದುವರೆಗೂ ಈ ದಾಖಲೆ ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಹೆಸರಿನಲ್ಲಿತ್ತು. ಜಹೀರ್ ಒಟ್ಟು 31 ವಿಕೆಟ್ ಪಡೆದರೆ, ಅಶ್ವಿನ್ 34 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಕ್ರಿಸ್ ಲಿನ್​ ಇದ್ದು, 43 ಪಂದ್ಯಗಳಿಂದ 187 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿರುವ ಅಶ್ವಿನ್ 37 ಪಂದ್ಯಗಳಿಂದ 185 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಪ್ಯಾಟ್​ ಕಮಿನ್ಸ್ ಹಾಗೂ ಸ್ಟಾರ್ಕ್​ ಕ್ರಮವಾಗಿ 175 ಮತ್ತು 147 ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ಗೂ ಸೈ, ಬೌಲಿಂಗ್ ಗೂ ಜೈ ಅನ್ನೋ ರವಿಚಂದ್ರನ್ ಅಶ್ವಿನ್ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಪವರ್ ಫುಲ್ ಪರ್ಫಾಮೆನ್ಸ್ ನೀಡಿ ದಿಗ್ಗಜ ಆಟಗಾರರ ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ. ಅದ್ರಲ್ಲೂ ಶ್ರೀಲಂಕಾದ ಲೆಜೆಂಡರಿ ಮಾಜಿ ಕ್ರಿಕೆಟ್ ಪ್ಲೇಯರ್ ಮುತ್ತಯ್ಯ ಮುರಳೀಧರ್ ಅವರ ರೆಕಾರ್ಡ್ ಪಕ್ಕ ನಿಲ್ಲೋದು ಅಂದ್ರೆ ಸಾಮಾನ್ಯದ ಮಾತಲ್ಲ. ಹೀಗಾಗಿ ಮುಂದಿನ ಸರಣಿಗೂ ಮು್ನನವೇ ಅಶ್ವಿನ್ ಮೇಲೆ ಅಭಿಮಾನಿಗಳ ನಿರೀಕ್ಚೆ ಮತ್ತಷ್ಟು ಹೆಚ್ಚಾಗಿದೆ.

Shwetha M

Leave a Reply

Your email address will not be published. Required fields are marked *