ಲಡ್ಡು ವಿವಾದ ಎಫೆಕ್ಟ್‌ – ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿದ್ದೂ ಲಡ್ಡು ಕೌಂಟರ್‌ ಖಾಲಿ ಖಾಲಿ!

ಲಡ್ಡು ವಿವಾದ ಎಫೆಕ್ಟ್‌ – ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿದ್ದೂ ಲಡ್ಡು ಕೌಂಟರ್‌ ಖಾಲಿ ಖಾಲಿ!

ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಕೊಬ್ಬು ಬಳಕೆ ಮಾಡಿದ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ದೇವಸ್ಥಾನದಲ್ಲಿ ಪ್ರಸಾದ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.

ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಲಾಗಿದೆ ಎಂಬ ಆರೋಪ ಭಾರೀ ಸದ್ದು ಮಾಡುತ್ತಿತ್ತು. ಇದು ತಿರುಪತಿಯ ಭಕ್ತರ ಭಾವನಗೆ ಭಾರೀ ಧಕ್ಕೆಯಾಗಿತ್ತು. ಲಡ್ಡು ತಿಂದ ಭಕ್ತರೆಲ್ಲ ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಿಗ್‌ ಬಾಸ್‌ ನಲ್ಲಿ ಸಿಂಗಲ್‌ ಸಿಂಹ..  ಎರಡು ಮನೆಗೂ ಜಗದೀಶ್‌ ಬಾಸ್‌! – ಚೈತ್ರ ಪಳಗಿಸಲು ಚಿನ್ನ, ರನ್ನ ಪ್ಲ್ಯಾನ್‌!

ಲಡ್ಡು ವಿವಾದವನ್ನು ಮುನ್ನೆಲೆಗೆ ತಂದಿದ್ದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದ ಬೆನ್ನಲ್ಲೇ ಈ ಆರೋಪದ ನೈಜತೆ ಬಗ್ಗೆ ಭಕ್ತರಲ್ಲಿ ಅನುಮಾನ ಮೂಡಿತ್ತು. ಈ ಆರೋಪ ನಿಜವೋ ಅಥವಾ ರಾಜಕೀಯ ಗಿಮಿಕ್ಕೋ ಎಂಬ ಚರ್ಚೆ ಶುರುವಾಗಿತ್ತು. ಆದರೂ ಸಹ ಲಡ್ಡು ವಿವಾದ ಮಾತ್ರ ಭಕ್ತರ ಮನಸ್ಸಿಗೆ ಭಾರೀ ನಾಟಿದೆ ಅನ್ನೋದು ನಿಜವಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರೂ ಸಹ ಲಡ್ಡು ಖರೀದಿಸುವವರ ಸಂಖ್ಯೆ ಮಾತ್ರ ತೀರಾ ಕಡಿಮೆಯಾಗಿದೆ. ದೇವರ ದರ್ಶನಕ್ಕೆ ಮಾತ್ರ ಎಂದಿನಂತೆ ಬಹುದೊಡ್ಡ ಕ್ಯೂ ಇದ್ದು, ಆದರೆ ಲಡ್ಡು ಕೌಂಟರ್‌ಗಳು ಮಾತ್ರ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ. ದೇಗುಲದಲ್ಲಿರುವ ಬಹುತೇಕ ಲಡ್ಡು ಕೌಂಟರ್‌ಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು, ಬಹುತೇಕ ಭಕ್ತರು ನಂದಿನಿ ತುಪ್ಪ ಹಾಕಿದ್ದಾರೆ ಅಂತ ಲಡ್ಡು ಖರೀದಿ ಮಾಡುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *