3 ಗಂಟೆ ಕೆಲಸ.. 4 ಲಕ್ಷ ರೂ. ಸಂಪಾದನೆ.. ಅಬ್ಬಬ್ಬಾ.. ಈ ಯುವತಿಯ ಕೆಲಸ ಏನು ಗೊತ್ತಾ?

3 ಗಂಟೆ ಕೆಲಸ.. 4 ಲಕ್ಷ ರೂ. ಸಂಪಾದನೆ.. ಅಬ್ಬಬ್ಬಾ.. ಈ ಯುವತಿಯ ಕೆಲಸ ಏನು ಗೊತ್ತಾ?

ದುಡ್ಡೇ ದೊಡ್ಡಪ್ಪ ಗಾದೇ ಈಗಿನ ಕಾಲಕ್ಕೆ ಹೇಳಿ ಮಾಡಿಸಿದಂತಿದೆ.. ಈ ಜಮಾನದಲ್ಲಿ ನೂರು ಇನ್ನೂರು ರೂಪಾಯಿಗೆ ಬೆಲೆ ಇಲ್ಲ ಅನ್ನೋತರ ಆಗಿದೆ.. ಕೈಯಲ್ಲಿ ಸಾವಿರಾರೂ ರೂಪಾಯಿ ಇದ್ರೂ ಒಂದೇ ಕ್ಷಣಕ್ಕೆ ಖರ್ಚಾಗಿ ಹೋಗುತ್ತೆ.. ಆದ್ರೆ ಅಷ್ಟೊಂದು ದುಡ್ಡನ್ನ ಗಳಿಸಲು ದಿನವಿಡಿ ಕೆಲಸ ಮಾಡಬೇಕಾಗುತ್ತೆ.. ಆದ್ರೆ ಇಲ್ಲೊಬ್ಬ ಯುವತಿ ಮೂರೇ ಗಂಟೆಯಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ.

ಇದನ್ನೂ ಓದಿ: ಗೋಲ್ಡ್‌ ಸುರೇಶ್‌ ಗೆ ಚೈನ್‌ ಕಳ್ಳಿ ಭಯ – ಚೈತ್ರಾ ಕುಂದಾಪುರ ಟಾರ್ಗೆಟ್‌!

ಹೌದು, ಅಚ್ಚರಿಯಾದ್ರೂ ಸತ್ಯ.. ಈಗಿನ ಕಾಲದಲ್ಲಿ ದುಡ್ಡೇ ಮುಖ್ಯ ಆಗಿದೆ.. ಆದ್ರೆ 10. 20 ಸಾವಿರ ರೂಪಾಯಿ ಸಂಪಾದನೆ ಮಾಡ್ಬೇಕು ಅಂದ್ರೂ ತಿಂಗಳಿಡೀ ದುಡಿಬೇಕಾಗುತ್ತೆ.. ಇನ್ನೂ ಕೆಲವರು ತಮ್ಮ ಸ್ಮಾರ್ಟ್‌ ವರ್ಕ್‌ನಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುತ್ತಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ತಮ್ಮ ಸ್ಮಾರ್ಟ್‌ ವರ್ಕ್‌ನಿಂದ ಕೇವಲ ಮೂರು ಗಂಟೆಯಲ್ಲಿ ಬರೋಬ್ಬರಿ 4 ಲಕ್ಷ ರೂ. ಗಳನ್ನು ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ  ಸ್ವತಃ ಈ ಯುವತಿಯೇ ಹೇಳಿಕೊಂಡಿದ್ದಾಳೆ. ಇದೀಗ ಆಕೆ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡಿತಾ ಇದೆ..

ಯಾವುದೇ ವ್ಯಾಪಾರ ಅಥವಾ ಸಂಸ್ಥೆಯನ್ನು ಬೆಳೆಸುವಲ್ಲಿ ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌, ಸ್ಟ್ರಾಟರ್ಜಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಲ್ಲೊಬ್ರು ಮಹಿಳೆ ಕೂಡಾ ತಮ್ಮ ಕ್ಲೈಂಟ್‌ ಒಬ್ಬರಿಗೆ ಸೋಷಿಯಲ್‌ ಮೀಡಿಯಾ ಸ್ಟ್ರಾಟರ್ಜಿ ಹೇಳಿಕೊಟ್ಟಿದ್ದಕ್ಕೆ, ಅವರು ಬರೋಬ್ಬರಿ 4 ಲಕ್ಷ ರೂ. ಸಂಬಳವನ್ನು ಪಡೆದುಕೊಂಡಿದ್ದಾರೆ. ಶ್ವೇತಾ ಕುಕ್ರೇಜಾ (ShwetaKukreja_) ಎಂಬವರು 3 ಗಂಟೆಗಳ ಕೆಲಸಕ್ಕೆ ಬರೋಬ್ಬರಿ 4 ಲಕ್ಷದ 40 ಸಾವಿರ ರೂ. ಸಂಬಳವನ್ನು ಪಡೆದುಕೊಂಡಿದ್ದಾರೆ. ಹಣ ಜಮೆಯಾದ ಸ್ಕ್ರೀನ್‌ಶಾಟ್‌ ಫೋಟೋವನ್ನು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆದ ಪೋಸ್ಟ್‌ ನಲ್ಲಿ. ಈ ತಿಂಗಳು ನಾನು ಕ್ಲೈಂಟ್‌ ಒಬ್ಬರಿಂದ $5,2000 ಡಾಲರ್‌ ಅಂದ್ರೆ ಸುಮಾರು 4,40,000 ರೂ. ಗಳನ್ನು ಪಡೆದುಕೊಂಡೆ. ಕೇವಲ 3 ಗಂಟೆಗಳ ಸಮಯದಲ್ಲಿ ಅವರು ಸೋಷಿಯಲ್‌ ಮೀಡಿಯಾ ಸ್ಟ್ರಾಟರ್ಜಿ ಸಲಹೆ ಹೇಳಿಕೊಟ್ಟಿದ್ದಕ್ಕಾಗಿ ಕ್ಲೈಂಟ್‌ 4 ಲಕ್ಷ ರೂ. ಸಂಭಾವನೆಯನ್ನು ನೀಡಿದ್ದಾರೆ. ಈ ರೀತಿಯ ದಿನಗಳು ಕೆಲಸಗಳನ್ನು ಹೆಚ್ಚು ತೃಪ್ತಿಕರವಾಗಿಸುತ್ತದೆʼ ಎಂದು ಹೆಳಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *