ಹೆಲೆನಾ ಆರ್ಭಟಕ್ಕೆ ನಲುಗಿದ ಅಮೆರಿಕ – ಮಳೆ, ಗಾಳಿಯ ಅಬ್ಬರ 44ಕ್ಕೂ ಹೆಚ್ಚು ಸಾವು..!
7,000 ಜನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ

ಹೆಲೆನಾ ಆರ್ಭಟಕ್ಕೆ ನಲುಗಿದ ಅಮೆರಿಕ –  ಮಳೆ, ಗಾಳಿಯ ಅಬ್ಬರ 44ಕ್ಕೂ ಹೆಚ್ಚು ಸಾವು..!7,000 ಜನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ

ಹೆಲೆನಾ ಚಂಡಮಾರುತದ ಅಬ್ಬರಕ್ಕೆ ಆಗ್ನೇಯ ಅಮೆರಿಕ ನಲುಗಿ ಹೋಗಿದೆ. ಚಂಡಮಾರುತದಿಂದಾಗಿ ಸಾಕಷ್ಟು ಸಾಲು ನೋವು ಸಂಭವಿಸಿದ್ದು, ಇಲ್ಲಿಯ ತನಕ 44 ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ  15-26 ಬಿಲಿಯನ್ ಡಾಲರ್ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಫ್ಲೋರಿಡಾ, ಜಾರ್ಜಿಯಾ, ಉತ್ತರ ಕೆರೊಲಿನಾ, ದಕ್ಷಿಣ ಕೆರೊಲಿನಾ ಮತ್ತು ವರ್ಜೀನಿಯಾ ಚಂಡಮಾರುತದ ಅಬ್ಬರಕ್ಕೆ ನಲುಗಿ ಹೋಗಿವೆ..

ಹೆಲೆನಾ ಚಂಡಮಾರುತದ ಆರ್ಭಟಕ್ಕೆ 3 ಜನ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಸುಮಾರು 44 ಜನರು ಸಾವನ್ನಪ್ಪಿದ್ದಾರೆ. ಜಾರ್ಜಿಯಾದ ಹಲವು ಆಸ್ಪತ್ರೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರೆ, ಯುನಿಕೊಯ್ ಕೌಂಟಿ ಆಸ್ಪತ್ರೆ ಜಲಾವೃತಗೊಂಡ ನಂತರ ಹೆಲಿಕಾಪ್ಟರ್ ಸಹಾಯದಿಂದ 54 ಜನರನ್ನು ರಕ್ಷಿಸಲಾಗಿದೆ. ಹಾಗೇ  ಟೆನ್ನೆಸ್ಸಿಯ ನ್ಯೂಪೋರ್ಟ್ ಬಳಿ 7,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಚಂಡಮಾರುತವು ಫ್ಲೋರಿಡಾ ಕರಾವಳಿಯನ್ನು ದಾಟುತ್ತಿದ್ದಂತೆ ಗಂಟೆಗೆ 225 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆಯಂತೆ. ಹಾಗೇ  ಅಟ್ಲಾಂಟಾದಲ್ಲಿ 48 ಗಂಟೆಗಳಲ್ಲಿ 28.24 ಸೆಂ.ಮೀ ಮಳೆ ದಾಖಲಾಗಿದೆ. 1886 ರಲ್ಲಿ 24.36 ಸೆಂ.ಮೀ. ದಾಖಲೆ ಮುರಿದಿದೆ.  ಚಂಡಮಾರುತದಿಂದ ಜೀವ ಹಾನಿ ಆಗಬಾರದೆಂದು ಶಾಲೆಗಳು ಮತ್ತು ಕಾಲೇಜುಗಳಿಗೆ  ರಜೆ ಘೋಷಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ತೀವ್ರವಾಗಿ ಮುಂದುವರೆದಿದೆ ಎಂದು ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.  ಹಾಗೇ ಎಲ್ಲರೂ ಸುರಕ್ಷಿತವಾಗಿರಲಿ ಎಂದು  ಕೇಳಿಕೊಂಡಿದ್ದಾರೆ.

 

Kishor KV

Leave a Reply

Your email address will not be published. Required fields are marked *