ಆಕಾಶ್ ದೀಪ್ RCBಗೆ ಲೆಕ್ಕಕ್ಕಿಲ್ವಾ? – ಚಿನ್ನದಂಥ ಪ್ಲೇಯರ್ ಗೆ ಚಾನ್ಸ್ ಇಲ್ಲ ಏಕೆ?
ಬಾಂಗ್ಲಾ ಬೇಟೆ.. Rohit ಮೆಚ್ಚಿದ ಹೀರೋ

ಆಕಾಶ್ ದೀಪ್ RCBಗೆ ಲೆಕ್ಕಕ್ಕಿಲ್ವಾ? – ಚಿನ್ನದಂಥ ಪ್ಲೇಯರ್ ಗೆ ಚಾನ್ಸ್ ಇಲ್ಲ ಏಕೆ?ಬಾಂಗ್ಲಾ ಬೇಟೆ.. Rohit ಮೆಚ್ಚಿದ ಹೀರೋ

ಐಪಿಎಲ್​ನಲ್ಲಿ ಒಂದಲ್ಲ ಎರಡಲ್ಲ 17 ಸೀಸನ್ ಕಳೀತು. ಬಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಅದೇನು ಫ್ರಾಂಚೈಸಿ ಅದೃಷ್ಟ ಚೆನ್ನಾಗಿಲ್ವೋ ಅಥವಾ ಆಟಗಾರರೇ ಆಡಲ್ವೋ ಒಂದೂ ಗೊತ್ತಿಲ್ಲ. ಲೀಗ್ ಆರಂಭವಾದ ವರ್ಷದಿಂದ ಈವರೆಗೂ ಬೆಂಗಳೂರು ಪರ ಸ್ಟಾರ್​​ ಆಟಗಾರರ ದಂಡೇ ಕಣಕ್ಕಿಳಿದ್ರೂ ಕೂಡ ಕಪ್ ಮಾತ್ರ ನಮ್ದಾಗಿಲ್ಲ. ಬಟ್ ಒಂದಂತೂ ಸತ್ಯ. ಆರ್​ಸಿಬಿ ತಂಡದಲ್ಲಿ ಎಲೆ ಮರೆಯ ಕಾಯಿಯಂತೆ ಸಾಕಷ್ಟು ಆಟಗಾರರಿದ್ದಾರೆ. ಅಂಥವ್ರಿಗೆ ಅವಕಾಶ ನೀಡದ ಫ್ರಾಂಚೈಸಿ ಸ್ಟಾರ್ಸ್ ಅಂತೇಳಿ ಕೆಲವ್ರನ್ನ ಪದೇಪದೆ ಮೈದಾನಕ್ಕಿಳಿಸಿ ಎಡವಟ್ಟು ಮಾಡಿಕೊಳ್ತಿದೆ. ಬೆಂಗಳೂರು ತಂಡದಲ್ಲಿ ಬೆಂಚ್ ಬಿಸಿ ಮಾಡಿ ಮಾಡಿ ಸುಸ್ತಾದ ಪ್ಲೇಯರ್ಸ್ ಈಗ ದೇಶೀಯ ಟೂರ್ನಿಗಳಲ್ಲಿ ಹಾಗೇ ಟೀಂ ಇಂಡಿಯಾದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದಾರೆ. ಅದ್ರಲ್ಲೂ ಈಗ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್​ಸಿಬಿ ವೇಗಿಯೇ ಸೆಂಟರ್ ಆಫ್ ಅಟ್ರಾಕ್ಷನ್. ಅಷ್ಟಕ್ಕೂ ಯಾರು ಆ ಆಟಗಾರ? ಐಪಿಎಲ್​ನಲ್ಲಿ ಯಾಕೆ ಆಡೋಕೆ ಅವಕಾಶ ಸಿಗ್ಲಿಲ್ಲ? ಅವ್ರ ಹಿನ್ನೆಲೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 6 ಗಂಟೆ 4 ನಿಮಿಷ.. ಗ್ರಹಣ ಗ್ರಹಚಾರ – ಮಹಾಲಯ ಅಮಾವಾಸ್ಯೆಯಂದು ಕೆಡುಕಾಗುತ್ತಾ?

ಆಕಾಶ್ ದೀಪ್. ಸದ್ಯ ಭಾರತ ವರ್ಸಸ್ ಬಾಂಗ್ಲಾ ನಡುವಿನ ಟೆಸ್ಟ್ ಮ್ಯಾಚ್​ನ ಸೆನ್ಸೇಷನಲ್ ನೇಮ್. ದುಲೀಪ್ ಟ್ರೋಫಿಯಲ್ಲಿ ಮಿಂಚಿದ್ದ ಆಕಾಶ್ ದೀಪ್ ಈಗ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮ್ಯಾಜಿಕಲ್ ರೀತಿಯಲ್ಲಿ ಬೌಲಿಂಗ್ ಮಾಡ್ತಿದ್ದಾರೆ. ಅದ್ರಲ್ಲೂ ಎರಡನೇ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದ ಮೊದಲ 2 ವಿಕೆಟ್​ಗಳನ್ನ ಕಿತ್ತು ಹೀರೋ ಆಗಿದ್ದಾರೆ. ಅಷ್ಟೇ ಯಾಕೆ ಸ್ಟಾರ್ ಬೌಲರ್​ಗಳನ್ನೂ ಹಿಂದಿಕ್ಕಿ ಜಾದೂ ಮಾಡ್ತಿದ್ದಾರೆ.

ಬುಮ್ರಾ, ಸಿರಾಜ್ ಗಿಂತ ಮೊದಲೇ ವಿಕೆಟ್ ಕಿತ್ತ ಆಕಾಶ್!

ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಮ್ಯಾಚ್ ಕಾನ್ಪುರದಲ್ಲಿ ಆರಂಭ ಆದಾಗ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್​ರಂತಹ ಅನುಭವಿ ವೇಗಿಗಳನ್ನ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಸಿದ್ರು. ಆದ್ರೆ ಪಂದ್ಯದ ಮೊದಲ ಎಂಟು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್​ಗೆ ಯಾವುದೇ ವಿಕೆಟ್ ಸಿಗಲಿಲ್ಲ. ಹೀಗಾಗಿ ಬೌಲಿಂಗ್‌ನಲ್ಲಿ ಬದಲಾವಣೆ ತಂಡ ನಾಯಕ ರೋಹಿತ್ ಶರ್ಮಾ, ಯುವ ಬೌಲರ್ ಆಕಾಶ್​ ದೀಪ್​ಗೆ ಬಾಲ್ ನೀಡಿದರು. ಈ ವೇಳೆ ದಾಳಿಗಿಳಿದ ಆಕಾಶ್, ಬಾಂಗ್ಲಾದೇಶ ತಂಡದ ಆರಂಭಿಕರಿಬ್ಬರನ್ನು ಪೆವಿಲಿಯನ್​ಗಟ್ಟಿದರು. ಅದರಲ್ಲೂ ಆಕಾಶ್ ಉರುಳಿಸಿದ ಎರಡನೇ ವಿಕೆಟ್​ ನಾಯಕ ರೋಹಿತ್ ಶರ್ಮಾಗೂ ಅಚ್ಚರಿ ತರಿಸಿತು. ಆಕಾಶ್ ತನ್ನ ಮೊದಲ ಓವರ್‌ನಲ್ಲಿ ಆರಂಭಿಕ ಝಾಕಿರ್ ಹಸನ್‌ನನ್ನು ಔಟ್ ಮಾಡಿದರು. ಜಾಕಿರ್ ಬರೋಬ್ಬರಿ 24 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಮತ್ತೊಬ್ಬ ಆರಂಭಿಕ ಶದ್ಮಾನ್ ಇಸ್ಲಾಂ ಅವರನ್ನು ಆಕಾಶ್ ಎಲ್​ಬಿ ಬಲೆಗೆ ಬೀಳಿಸಿದರು.

ತಂಡದ ಆಟಗಾರರನ್ನ ಅಚ್ಚರಿಗೊಳಿಸಿದ ಡಿಆರ್ ಎಸ್ ವಿಕೆಟ್!

ಆಕಾಶ್ ದೀಪ್ ಎಸೆದ ಮೂರನೇ ಓವರ್‌ನ ಮೊದಲ ಎಸೆತವೇ ಶದ್ಮಾನ್ ಇಸ್ಲಾಂ ಅವರ ಪ್ಯಾಡ್‌ಗೆ ಬಡಿದಿತ್ತು. ಹೀಗಾಗಿ ಟೀಂ ಇಂಡಿಯಾ ಆಟಗಾರರು ಅಂಪೈರ್‌ಗೆ ಮನವಿ ಸಲ್ಲಿಸಿದರೂ ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಆದ್ರೆ ಆಕಾಶ್ ದೀಪ್​ಗೆ ಇದು ಖಂಡಿತ ಔಟ್ ಅನ್ನೋದು ಗೊತ್ತಿತ್ತು. ಹೀಗಾಗೇ ನಾಯಕ ರೋಹಿತ್​ಗೆ ಡಿಆರ್​ಎಸ್ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಕೊಂಚ ಸಮಯ ಯೋಚಿಸಿದ ರೋಹಿತ್ ಕೊನೆಗೂ ಡಿಆರ್​ಎಸ್ ತೆಗೆದುಕೊಂಡರು. ಡಿಆರ್‌ಎಸ್​ನಲ್ಲಿ ಶದ್ಮಾನ್ ಔಟ್ ಆಗಿರೋದು ಕನ್ಫರ್ಮ್ ಆಗಿತ್ತು. ಅಲ್ಲಿಯವರೆಗೂ ಆಕಾಶ್ ದೀಪ್​ರನ್ನು ಹೊರತುಪಡಿಸಿ ತಂಡದ ಮತ್ತ್ಯಾವ ಆಟಗಾರ ಕೂಡ ಡಿಆರ್​ಎಸ್ ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಸ್ವತಃ ನಾಯಕ ರೋಹಿತ್ ಕೂಡ ನಂಬಿರಲಿಲ್ಲ. ಔಟ್ ಎಂದು ಬರ್ತಾ ಇದ್ದಂತೆ ಆಟಗಾರರೆಲ್ಲರೂ ಅಚ್ಚರಿಗೊಂಡರು. ನಾಯಕ ರೋಹಿತ್​ ಕೂಡ ವಿಕೆಟ್​ ಸಿಕ್ಕ ಅಚ್ಚರಿಯಲ್ಲಿ ಆಕಾಶ್​ ದೀಪ್​ರನ್ನು ತಬ್ಬಿಕೊಂಡು ಸಂಭ್ರಮಿಸಿದ್ದರು.

ಮೊದಲ ಪಂದ್ಯದಲ್ಲೂ ಮಿಂಚಿದ್ದ ಆಕಾಶ್ ದೀಪ್!

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲೂ ಆಕಾಶ್ ದೀಪ್ ಸದ್ದು ಮಾಡಿದ್ರು. 5 ಓವರ್ ಬೌಲ್ ಮಾಡಿದ್ದ ಆಕಾಶ್ ದೀಪ್  19 ರನ್ ನೀಡಿ ಎರಡು ವಿಕೆಟ್ ಬೇಟೆಯಾಡಿದ್ರು. ಎರಡನೇ ಇನ್ನಿಂಗ್ಸ್​ನಲ್ಲಿ ವಿಕೆಟ್ ಕೀಳದೇ ಇದ್ರೂ ಕೂಡ ರನ್ ಬಿಟ್ಟುಕೊಟ್ಟಿರಲಿಲ್ಲ. 6 ಓವರ್ ಬೌಲ್ ಮಾಡಿದ್ದ ಆಕಾಶ್ ದೀಪ್ 20 ರನ್ ಕೊಟ್ಟಿದ್ರು. ಹೀಗೆ ಬಾಂಗ್ಲಾವನ್ನ 280 ರನ್​ಗಳಿಂದ ಸೋಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ರು.

RCBಯಲ್ಲಿ ಆಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು ದೀಪ್!

ಯೆಸ್. ಅಷ್ಟಕ್ಕೂ ಈ ಆಕಾಶ್ ದೀಪ್ ಐಪಿಎಲ್​ನಲ್ಲಿ ಆರ್​ಸಿಬಿ ತಂಡದಲ್ಲೇ ಇದ್ದಾರೆ. ಹೇಳಿ ಕೇಳಿ ಆರ್ ಸಿಬಿಗೆ ಮುಖ್ಯವಾಗಿ ಕಾಡುವುದು ಉತ್ತಮ ಬೌಲರ್ ಸಮಸ್ಯೆ. ಹೀಗಿದ್ರೂ ಆಕಾಶ್ ದೀಪ್​ಗೆ ಫ್ರಾಂಚೈಸಿ ಬೆಂಚ್ ಗೆ ಸೀಮಿತ ಮಾಡಿದೆ. ಅದ್ರಲ್ಲೂ ಮೊಹಮ್ಮದ್ ಸಿರಾಜ್ ಗಿಂತ ಆಕಾಶ್ ದೀಪ್ ಬೆಸ್ಟ್ ಅನ್ನೋದು ಅಭಿಮಾನಿಗಳ ವಾದ ಕೂಡ. ಆಕಾಶ್ ದೀಪ್ ಐಪಿಎಲ್‌ನಲ್ಲಿ ಈವರೆಗೂ ಕೇವಲ 8 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅನುಭವದ ಕೊರತೆ ಇದ್ದರೂ, ಅವರಲ್ಲಿ ಉತ್ತಮ ಸಾಮರ್ಥ್ಯವಿದೆ. ಸ್ವಿಂಗ್‌ ಮಾಡುವ ಮತ್ತು ವೇಗವಾಗಿ ಬೌಲಿಂಗ್ ಮಾಡುವ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನ ಹೊಂದಿದ್ದಾರೆ. ಸಿರಾಜ್ ಅವರಿಗೆ ಹೋಲಿಕೆ ಮಾಡಿದರೆ ಆಕಾಶ್ ದೀಪ್ ಬೌಲಿಂಗ್‌ನಲ್ಲಿ ಹಲವು ಅಸ್ತ್ರಗಳನ್ನು ಹೊಂದಿದ್ದಾರೆ.  ಹೀಗಾಗಿ ಈ ವರ್ಷದ ಹರಾಜಿನಲ್ಲಿ ಆಕಾಶ್​ನನ್ನ ಉಳಿಸಿಕೊಂಡು ಸಿರಾಜ್​ರನ್ನ ಕೈ ಬಿಡಿ ಅಂತಾ ಸಲಹೆ ನೀಡ್ತಿದ್ದಾರೆ. ಆಕಾಶ್ ದೀಪ್‌ರನ್ನು ಆರ್ ಸಿಬಿ 20 ಲಕ್ಷ ರೂಪಾಯಿಗಳಿಗೆ ಬಿಡ್ ಮಾಡಿದೆ. ಆದರೆ ಮೊಹಮ್ಮದ್ ಸಿರಾಜ್‌ಗಾಗಿ 7 ಕೋಟಿ ರೂಪಾಯಿ ಖರ್ಚು ಮಾಡಿದೆ. ಈಗ ಸಿರಾಜ್‌ರನ್ನು ಕೈಬಿಟ್ಟರೆ ಫ್ರಾಂಚೈಸಿ ಬಳಿ ಮೆಗಾಹರಾಜಿನಲ್ಲಿ ಹೆಚ್ಚಿನ ಹಣ ಇರಲಿದ್ದು, ಮತ್ತೊಬ್ಬ ಪ್ರಮುಖ ವೇಗಿಗಾಗಿ ಬಿಡ್ ಮಾಡಬಹುದು.

ಇನ್ನು ಆಕಾಶ್ ದೀಪ್ 2024ರ ಸಾಲಿನ ದುಲೀಪ್ ಟ್ರೋಫಿ ಟೂರ್ನಿಯಲ್ಲೂ ಸದ್ದು ಮಾಡಿದ್ದಾರೆ. ಮೊದಲ ಸುತ್ತಿನಲ್ಲಿ ಇಂಡಿಯಾ ‘ಬಿ’ ತಂಡದಲ್ಲಿ ಆಡಿ ಇಂಡಿಯಾ ‘ಎ’ ಎದುರು 2 ಇನಿಂಗ್ಸ್‌ಗಳಿಂದ ಒಟ್ಟು 9 ವಿಕೆಟ್‌ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿ 2ನೇ ಇನಿಂಗ್ಸ್‌ ವೇಳೆ 43 ರನ್‌ ಸಿಡಿಸಿದ್ದರು. ಈ ಮೂಲಕ ತಾನೂ ಒಬ್ಬ ಆಲ್​ರೌಂಡರ್ ಅನ್ನೋದನ್ನ ಪ್ರೂವ್ ಮಾಡಿದ್ರು. ಒಟ್ನಲ್ಲಿ ಟ್ಯಾಲೆಂಟ್ ಅನ್ನೋದು ಇದ್ರೆ ಇಂದಲ್ಲ ನಾಳೆ ಅದು ನಮ್ಮನ್ನ ಕೈ ಹಿಡಿಯುತ್ತೆ ಅನ್ನೋದನ್ನೆ ಆಕಾಶ್ ದೀಪ್ ಬೆಸ್ಟ್ ಎಕ್ಸಾಂಪಲ್. ಆದ್ರೆ ಇದನ್ನ ನಮ್ಮ ಬೆಂಗಳೂರು ಫ್ರಾಂಚೈಸಿ ಅದ್ಯಾವಾಗ ಅರ್ಥ ಮಾಡಿಕೊಳ್ಳುತ್ತೋ.

Shwetha M

Leave a Reply

Your email address will not be published. Required fields are marked *