ಏಷ್ಯಾ ಪೆಸಿಫಿಕ್‌ನಲ್ಲಿಭಾರತ – ನಂ.3- ಏಷ್ಯಾಕ್ಕೆ ಭಾರತ ಅತಿದೊಡ್ಡ ಶಕ್ತಿ
ಜಪಾನ್ ಕ್ಕಿಂತ ಭಾರತ ‘ಪವರ್ ಫುಲ್’

ಏಷ್ಯಾ ಪೆಸಿಫಿಕ್‌ನಲ್ಲಿಭಾರತ – ನಂ.3- ಏಷ್ಯಾಕ್ಕೆ ಭಾರತ ಅತಿದೊಡ್ಡ ಶಕ್ತಿಜಪಾನ್ ಕ್ಕಿಂತ ಭಾರತ ‘ಪವರ್ ಫುಲ್’

ಭಾರತ ಶರವೇಗದಲ್ಲಿ ಬೆಳೆಯುತ್ತಿರೋ ದೇಶ..  ಇಡೀ ವಿಶ್ವಕ್ಕೆ ತನ್ನ ತಾಕತ್ತು ಏನು ಅನ್ನೋದನ್ನ ಭಾರತ ತೋರಿಸುತ್ತಿದೆ.. ಸಾಕಷ್ಟು ವಿಚಾರಲ್ಲಿ ಭಾರತ ತನ್ನ ಶಕ್ತಿ ತೋರಿಸಿದೆ. ಹೀಗೆ  ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆದಿರುವ ಭಾರತ, ಏಷ್ಯಾ ಖಂಡದಲ್ಲಿ ಮೂರನೇ ‘ಪವರ್​​ಫುಲ್​​’ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಿದ್ರೆ ಭಾರತ ಯಾವ ದೇಶವನ್ನ ಹಿಂದಿಕ್ಕಿ ಈ ಸಾಧನೆ ಮಾಡಿದೆ.

ಇದನ್ನೂ ಓದಿ: 6 ಗಂಟೆ 4 ನಿಮಿಷ.. ಗ್ರಹಣ ಗ್ರಹಚಾರ – ಮಹಾಲಯ ಅಮಾವಾಸ್ಯೆಯಂದು ಕೆಡುಕಾಗುತ್ತಾ?

ಹೌದು.. ಭಾರತ ಏಷ್ಯಾ ಖಂಡದಲ್ಲಿ 3ನೇ ಶಕ್ತಿಶಾಲಿ ದೇಶ ಎಂಬ ಹೆಗ್ಗಳಿಕೆ ಪಡೆದಿದೆ.  ತಾಂತ್ರಿಕತೆಗೆ ಹೆಸರಾಗಿರುವ  ಜಪಾನ್​ ಅನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ. ಕಳೆದ ಬುಧವಾರ ಬಿಡುಗಡೆಯಾಗಿರುವ ಏಷ್ಯಾದ ಶಕ್ತಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನ ಪಡೆದ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತವು ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಎಂದಿದೆ.

ಇದು ಭಾರತದ ಕ್ರಿಯಾತ್ಮಕ ಬೆಳವಣಿಗೆ, ಯುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಯು ಏಷ್ಯಾದಲ್ಲಿ ಪ್ರಮುಖ ಶಕ್ತಿ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದೆ.  ಲೋವಿ ಸಂಸ್ಥೆಯು ಏಷ್ಯಾ ಪವರ್ ಇಂಡೆಕ್ಸ್ 2024 ರ ಸಾಲಿನ ವರದಿಯನ್ನು ಬಿಡುಗಡೆ ಮಾಡಿದ್ದು, ಏಷ್ಯಾ-ಪೆಸಿಫಿಕ್​​ನ ಪವರ್​ಫುಲ್​ ಡೈನಾಮಿಕ್ಸ್‌ ರಾಷ್ಟ್ರಗಳನ್ನು ಇದು ಗುರುತಿಸಿದೆ. ಏಷ್ಯಾ-ಪೆಸಿಫಿಕ್‌ ಪ್ರದೇಶದ 27 ದೇಶಗಳನ್ನು ಮೌಲ್ಯಮಾಪನ ಮಾಡಿದ್ದು, ಭಾರತಕ್ಕೆ ಮೂರನೇ ಶಕ್ತಿಯುತ ರಾಷ್ಟ್ರ ಎಂಬ ಮನ್ನಣೆ ನೀಡಿದೆ. ವಿಶೇಷವೆಂದರೆ, ತಾಂತ್ರಿಕವಾಗಿ ಮುಂದಿರುವ ಜಪಾನ್​, ಭಾರತಕ್ಕಿಂತ ಹಿಂದೆ ಬಿದ್ದಿದೆ.

ಏಷ್ಯಾ ಪವರ್​ ಇಂಡೆಕ್ಸ್​​ ವರದಿಯ ಪ್ರಕಾರ, ಭಾರತ ಪ್ರಾದೇಶಿಕವಾಗಿ ಅತಿ ಬಲಿಷ್ಠವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಕೊರೊನಾ ಸಾಂಕ್ರಾಮಿಕದ ನಂತರ ಕ್ಷಿಪ್ರಗತಿಯಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ಇದು ದೇಶವನ್ನು ರಾಜಕೀಯ, ಬೌಗೋಳಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬಲಾಢ್ಯವನ್ನಾಗಿ ಮಾಡಿದೆ ಎಂದು ಹೇಳಿದೆ. ಭಾರತವು ತನ್ನ ಆರ್ಥಿಕ ಸಾಮರ್ಥ್ಯದಲ್ಲಿ 4.2 ಪಾಯಿಂಟ್ ಏರಿಕೆ ಕಂಡಿದೆ. ದೇಶದ ಅಗಾಧ ಜನಸಂಖ್ಯೆ ಮತ್ತು ಜಿಡಿಪಿ ಬೆಳವಣಿಗೆಯು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯುವಲ್ಲಿ ಸಹಾಯ ಮಾಡುತ್ತದೆ. ಭಾರತದ ಭವಿಷ್ಯದ ಸಂಪನ್ಮೂಲಗಳ ಸ್ಕೋರ್ 8.2 ಪಾಯಿಂಟ್‌ ಇದೆ. ಇದು ಸಂಭಾವ್ಯ ಜನಸಂಖ್ಯೆ ಲಾಭಾಂಶವನ್ನೂ ಸೂಚಿಸುತ್ತದೆ. ಪ್ರಾದೇಶಿಕ ಪ್ರತಿಸ್ಪರ್ಧಿಗಳಾದ ಚೀನಾ, ಜಪಾನ್​​ಗಿಂತ ಭಿನ್ನವಾಗಿ ಮುಂಬರುವ ದಶಕಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಕಾರ್ಮಿಕ ಬಲವನ್ನು ಹೊಂದಲಿದೆ ಎಂದು ಇಂಡೆಕ್ಸ್​ ತಿಳಿಸಿದೆ.

ಏಷ್ಯಾ ಪವರ್ ಇಂಡೆಕ್ಸ್ ಎಂಟು ಪ್ರಮುಖ ಮಾನದಂಡಗಳ ಆಧಾರದ ಮೇಲೆ ದೇಶಗಳನ್ನು ಪವರ್​ಫುಲ್​ ಎಂದು ಮೌಲ್ಯಮಾಪನ ಮಾಡಿದೆ.  ಸಂಪನ್ಮೂಲ   ಆರ್ಥಿಕತೆ ,  ಸೇನಾ ಸಾಮರ್ಥ್ಯ  , ಸ್ಥಿತಿಸ್ಥಾಪಕತ್ವ ,  ಭವಿಷ್ಯದ ಸಂಪನ್ಮೂಲಗಳು,  ರಾಜತಾಂತ್ರಿಕ ಪ್ರಭಾವ ಮತ್ತು  ಸಾಂಸ್ಕೃತಿಕ ಪ್ರಭಾವದ ಆಧಾರದ ಮೇಲೆ ಭಾರತಕ್ಕೆ 3ನೇ ಸ್ಥಾನವನ್ನ ನೀಡಿದೆ.

ನಿಜಕ್ಕೂ ಈ ವಿಚಾರವನ್ನ ಕೇಳಿದಾಗ ಬಹಳ ಖುಷಿಯಾಗುತ್ತೆ.. ದೇಶದ ಅಭಿವೃದ್ಧಿಯಾದ್ರೆ ನಾವು ಅಭಿವೃದ್ಧಿಯಾದಂತೆ.ಯಾಕಂದ್ರೆ ನಾವು ಕೂಡ ಅಭಿವೃದ್ಧಿಯ ಒಂದು ಭಾಗ.. ಹೀಗೆ ನಮ್ಮ ದೇಶ ಎಲ್ಲದರಲ್ಲೂ ನಂಬರ್ ಆಗಲಿ ಆದಷ್ಟು ಬೇಗ ಅನ್ನೋದು ಎಲ್ಲರ ಆಶಯ.. ನಮಸ್ಕಾರ..

 

Kishor KV