ಐಶ್‌ ಗೆ ಗಂಭೀರ ಆರೋಗ್ಯ ಸಮಸ್ಯೆ? – ಊದಿದ ಮುಖ.. ತೂಕ ಹೆಚ್ಚಿದ್ದೇಕೆ?
ಮೈ ತುಂಬಾ ಬಟ್ಟೆಯ ಗುಟ್ಟು ಇದೇನಾ?

ಐಶ್‌ ಗೆ ಗಂಭೀರ ಆರೋಗ್ಯ ಸಮಸ್ಯೆ? – ಊದಿದ ಮುಖ.. ತೂಕ ಹೆಚ್ಚಿದ್ದೇಕೆ?ಮೈ ತುಂಬಾ ಬಟ್ಟೆಯ ಗುಟ್ಟು ಇದೇನಾ?

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಸದ್ಯ ಬಿಟೌನ್‌ ನಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ.. ಒಂದಲ್ಲ ಒಂದು ವಿಚಾರವಾಗಿ ಚರ್ಚೆಗೆ ಒಳಗಾಗ್ತಿದ್ದಾರೆ.. ಇತ್ತೀಚೆಗಷ್ಟೇ ಅವರ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಶೀಘ್ರದಲ್ಲೇ ಡಿವೋರ್ಸ್‌ ಪಡ್ಕೊಳ್ತಿದ್ದಾರೆ ಅನ್ನೋ ಗಾಸಿಪ್‌ ಹರಿದಾಡಿತ್ತು.. ಈ ವಿಚಾರ ಸ್ವಲ್ವ ತಣ್ಣಗಾಗುತ್ತಿದ್ದಂತೆ ಮತ್ತೊಂದು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗ್ತಾ ಇದೆ. ಐಶ್ವರ್ಯ ರೈ ಅವರನ್ನ ಗಂಭೀರ ಆರೋಗ್ಯ ಸಮಸ್ಯೆ ಕಾಡ್ತಾ ಇದ್ಯಾ ಅನ್ನೋದು? ಅದ್ಯಾಕೆ ಈ ಸುದ್ದಿ ಚರ್ಚೆಯಾಗ್ತಿದೆ? ಐಶ್‌ ಗೆ ಏನಾಯ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೇವರ ಸಿನಿಮಾದಲ್ಲಿ ಎನ್‌ಟಿಆರ್ ಅಬ್ಬರ.. ಪ್ರೇಕ್ಷಕರ ನಿರೀಕ್ಷೆ ಏನಾಯ್ತು?- ಮೂರೇ ದೃಶ್ಯದಲ್ಲಿ ಮರೆಯಾದ ಜಾನ್ವಿ ಕಪೂರ್

ಐಶ್ವರ್ಯ ರೈ ಕೆಲ ತಿಂಗಳಿನಿಂದ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಅನಂತ್‌ ಅಂಬಾನಿ ಮದುವೆ ಬಳಿಕ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ಜೀವನದಲ್ಲಿ ಸಮಸ್ಯೆಯಿದೆ.. ಇವರಿಬ್ಬರು ವಿಚ್ಚೇದನ ಪಡೆಯುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗೇ ಸದ್ದು ಮಾಡಿತ್ತು.. ಇತ್ತೀಚೆಗಷ್ಟೇ ಐಶ್‌ ಅವರು ಮದುವೆ ಸಮಯದಲ್ಲಿ ಹಾಕಿಕೊಂಡಿದ್ದ ಒಡ್ಡುಂಗಿಲ ವನ್ನ ಧರಿಸಿದ್ದನ್ನ ತೋರಿಸಿ ಹರಿದಾಡ್ತಿರೋ ಸುದ್ದಿಗೆ ಬ್ರೇಕ್‌ ಹಾಕಿದ್ರು.. ಇದ್ರ ಬೆನ್ನಲ್ಲೇ   ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ. ಐಶ್‌ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಅನ್ನೋದು..

ಹೌದು, ಐಶ್ವರ್ಯ ರೈಗೆ ವಯಸ್ಸು 50 ದಾಟಿದರೂ ಇಂದಿಗೂ ಸೌಂದರ್ಯ ಕಾಪಾಡಿಕೊಂಡೇ ಬಂದಿದ್ದಾರೆ. ಆದ್ರೆ ಇತ್ತೀಚಿನ ಅವರ ತೂಕ ಹೆಚ್ಚಾಗುತ್ತಲೇ ಇದೆ.. ಸದಾ ಬ್ಯೂಟಿಯ ಕಡೆಗೆ ಗಮನ ಕೊಡುವ ಐಶ್ವರ್ಯ ಮಾತ್ರ ದಿನದಿಂದ ದಿನಕ್ಕೆ ತೂಕ ಏರಿಸಿಕೊಳ್ಳುತ್ತಲೇ ಇರುವುದು ಯಾಕೆ ಅನ್ನೋ ಚಿಂತೆ ಅವರ ಅಭಿಮಾನಿಗಳಿಗೂ ಕಾಡುತ್ತಿತ್ತು.. ಅಷ್ಟೇ ಅಲ್ಲದೇ, ಐಶ್ವರ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೇ ಹೋದರೂ ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತಿದ್ದಾರೆ.  ಹೀಗಾಗಿ ಅವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾ ಇದ್ದಾರೆ. ಆದ್ರೆ ಬಾಲಿವುಡ್ ನಟಿ ಐಶ್ವರ್ಯಾ ರೈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕಾಗಿಯೇ ಅವರ ದೇಹ ಸಂಪೂರ್ಣ ಬದಲಾಗಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಇವರ ಆರೋಗ್ಯ ಸಮಸ್ಯೆಗೆ ಸಂಬಂಧ ಪಟ್ಟಂತೆ ಪೋಸ್ಟ್ ಒಂದು ವೈರಲ್ ಕೂಡ ಆಗಿತ್ತು.

ಹೌದು. ನಟಿ ಐಶ್ವರ್ಯ,   L’Oréal ಪ್ಯಾರಿಸ್ ರಾಯಭಾರಿಯಾಗಿದ್ದರು. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಹೆಜ್ಜೆ ಹಾಕಿ ಬಂದಿದ್ದರು. ಆ ವೇಳೆ ಐಶ್ವರ್ಯಾ ರೈ ಧರಿಸಿದ ಕಾಸ್ಟ್ಯೂಮ್ ಹಾಗೂ ಹೇರ್‌ಸ್ಟೈಲ್ ಟ್ರೋಲಿಗರಿಗೆ ಆಹಾರ ಆಗಿತ್ತು. ಭಾರತವನ್ನು ಪ್ರತಿನಿಧಿಸಿದ್ದ ಐಶ್ವರ್ಯಾ ರೈ ಬಗ್ಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಅತೀಯಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದಕ್ಕೆ ಟ್ರೋಲ್ ಮಾಡುತ್ತಿದ್ದಾರೆ. ಇದಾದ್ಮೇಲೆ ರೆಡ್ಡಿಟ್‌ ನಲ್ಲಿ ಪೋಸ್ಟ್‌ವೊಂದು ವೈರಲ್‌ ಆಗಿದೆ..  ಈ ಪೋಸ್ಟ್‌ನಲ್ಲಿ ಐಶ್ವರ್ಯಾ ರೈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಅವರ ತೂಕ ಹೆಚ್ಚಾಗಿದೆ. ಈ ಕಾರಣಕ್ಕೆ ಸುಲಭವಾಗಿ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಬರೆಯಲಾಗಿತ್ತು. ಆದರೆ, ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಕ್ಷಣವೇ ಆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.

ಅಂದ್ಹಾಗೆ ರೆಡ್ಡಿಟ್ ನಲ್ಲಿ ಹಾಕಿದ ಪೋಸ್ಟ್‌ನಲ್ಲಿ ಹೀಗಿತ್ತು. “ನನ್ನ ಸ್ನೇಹಿತೆ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಾಳೆ. ಆಕೆ ಹೇಳಿದ ಪ್ರಕಾರ, ಐಶ್ವರ್ಯಾ ರೈ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದನ್ನು ನಾನು ಇಲ್ಲಿ ಬಹಿರಂಗ ಪಡಿಸುವುದಿಲ್ಲ. ಆ ಕಾರಣದಿಂದ ಐಶ್ವರ್ಯಾ ಡಯೆಟ್ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲದೆ ತೂಕ ಇಳಿಸಿಕೊಳ್ಳುವುದಕ್ಕೆ ಔಷಧಿಯ ಮೊರೆ ಹೋಗುವುದಕ್ಕೂ ಆಗುವುದಿಲ್ಲ. ಆಕೆಯ ಹೇರ್ ಸ್ಟೈಲಿಸ್ಟ್ ಅನ್ನು ದೂರಬೇಡಿ. ಆಕೆ ತನ್ನ ದೇಹವನ್ನು ಸಂಪೂರ್ಣವಾಗಿ ಕವರ್ ಮಾಡಿಕೊಳ್ಳುವಂತಹ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡಿಕೊಳ್ಳುತ್ತಿದ್ದಾರೆ  ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇಷ್ಟೇ ಅಲ್ಲದೆ ಐಶ್ವರ್ಯಾ ರೈ ತಾನು ಧರಿಸುವ ಧಿರಿಸುಗಳ ಜೊತೆ ಪ್ರಯೋಗ ಮಾಡುವುದಕ್ಕೆ ಸಿದ್ಧಳಿಲ್ಲ. ತನ್ನ ದೇಹವನ್ನು ಎಷ್ಟು ಕವರ್ ಮಾಡಿಕೊಳ್ಳಲು ಸಾಧ್ಯವೋ ಅಷ್ಟು ಕವರ್ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ ಅಂದು ಪೋಸ್ಟ್‌ ನಲ್ಲಿ ಬರೆಯಲಾಗಿತ್ತು.. ಆದ್ರೆ ಈ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.

ಇದೀಗ ಐಶ್‌ ತೂಕ ದಿನೇ ದಿನೇ ಹೆಚ್ಚಾಗ್ತಿದೆ.. ಹೀಗಾಗಿ ಅವರ ಆರೋಗ್ಯದ ಬಗ್ಗೆ ಫ್ಯಾನ್ಸ್‌ ಫುಲ್‌ ತಲೆ ಕೆಡಿಸಿಕೊಂಡಿದ್ದಾರೆ.. ಐಶ್‌ ಗೆ ಏನಾಯ್ತು ಅಂತಾ ಕೇಳ್ತಿದ್ದಾರೆ.. ಆದ್ರೆ ಹರಿದಾಡ್ತಿರೋ ಸುದ್ದಿ ನಿಜಾನಾ? ನಿಜಕ್ಕೂ ಐಶ್ವರ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಸ್ಪಷ್ಟನೆ ಸಿಗುತ್ತಾ ಅಂತಾ ಕಾದು ನೋಡ್ಬೇಕು..

Shwetha M

Leave a Reply

Your email address will not be published. Required fields are marked *