ಮಹಿಷಾ ದಸರಾದಿಂದ ಸಾಂಸ್ಕೃತಿಕ ನಗರಿಯ ಹೆಸರೇ ಚೇಂಜ್!‌ – ಮೈಸೂರು ಅಲ್ಲ.. ‘ಮಹಿಷೂರು’

ಮಹಿಷಾ ದಸರಾದಿಂದ ಸಾಂಸ್ಕೃತಿಕ ನಗರಿಯ ಹೆಸರೇ ಚೇಂಜ್!‌ – ಮೈಸೂರು ಅಲ್ಲ.. ‘ಮಹಿಷೂರು’

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈಗಾಗಲೆ ತಯಾರಿ ಆರಂಭವಾಗಿದೆ. ಅರಮನೆ ನಗರಿ ಜಗಮಗಿಸುವ ಲೈಟಿಂಗ್​ನಿಂದ ಕಂಗೊಳಿಸುತ್ತಿದೆ. ಇದೀಗ ದಸರಾ ಆರಂಭಕ್ಕೂ ಮುನ್ನವೇ ವಿವಾದವೊಂದು ಉದ್ಭವವಾಗಿದೆ. ಮಹಿಷಾ ದಸರಾದಿಂದ  ಮೈಸೂರು  ಹೆಸರೇ ಬದಲಾಗಿದೆ.

ಇದನ್ನೂ ಓದಿ: IPL ಹರಾಜು ಬಗ್ಗೆ ಬಿಗ್ ಅಪ್ ಡೇಟ್ –  6 ಜನರ ರಿಟೇನ್ ಗೆ ಒಪ್ಪಿತಾ BCCI?

ಹೌದು, ಮೈಸೂರು ದಸರಾ ಆರಂಭವಾಗುತ್ತಿದ್ದಂತೆ ಮಹಿಷಾ ದಸರಾ ವಿವಾದ ಉದ್ಭವವಾಗುತ್ತದೆ. ಈ ಬಾರಿಯೂ ದಸರಾ ಆರಂಭಕ್ಕೂ ಮುನ್ನವೇ ಈ ವಿವಾದ ಶುರುವಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ  ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇದೇ ತಿಂಗಳು 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದೆ. ಚಾಮುಂಡಿ ಬೆಟ್ಟದಲ್ಲಿ   ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

Shwetha M

Leave a Reply

Your email address will not be published. Required fields are marked *