ಪವಾಡ ಹುಡುಗ ಪಂತ್ – ರಿಷಭ್ ಗೆಲ್ಲಿಸಿದ್ದೇ ಗಟ್ಟಿ ಗುಂಡಿಗೆ
KL ರಾಹುಲ್ ಕೆರಿಯರ್ ಗೆ ಪೆಟ್ಟು

ಪವಾಡ ಹುಡುಗ ಪಂತ್ – ರಿಷಭ್ ಗೆಲ್ಲಿಸಿದ್ದೇ ಗಟ್ಟಿ ಗುಂಡಿಗೆKL ರಾಹುಲ್ ಕೆರಿಯರ್ ಗೆ ಪೆಟ್ಟು

ಸೋಲೇ ಗೆಲುವಿನ ಸೋಪಾನ ಅನ್ನೋ ಮಾತು ಕ್ರಿಕೆಟ್ ಲೋಕದಲ್ಲಿ ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಸೋತು ಗೆದ್ದು ಇತಿಹಾಸ ನಿರ್ಮಿಸಿದವರ ಕಥೆ ಅದೆಷ್ಟೋ.. ಇದೇ ಲಿಸ್ಟ್ ಗೆ ಸೇರಿದ ಕ್ರಿಕೆಟರ್ ಡೆಲ್ಲಿ ಡೇರ್ ಡೆವಿಲ್ ರಿಷಭ್ ಪಂತ್. ಬಹುಶಃ ರಿಷಭ್ ಪಂತ್ ಕ್ರಿಕೆಟ್ ಕೆರಿಯರ್ ಎಂಡ್ ಆಯ್ತೇನೋ ಅನ್ನೋ ಹಾಗಾಗಿತ್ತು ಅವತ್ತು ನಡೆದ ಭೀಕರ ಆಕ್ಸಿಡೆಂಟ್. ಆದರೆ, ಗುಂಡಿಗೆ ಗಟ್ಟಿಯಿರಬೇಕು. ಗೆಲ್ಲೋ ಛಲವಿರಬೇಕು. ಇದನ್ನ ರಿಯಲ್ ಲೈಫ್ ನಲ್ಲಿ ಪ್ರೂವ್ ಮಾಡಿ ತೋರಿಸಿದ್ದಾರೆ ರಿಷಭ್ ಪಂತ್. ಅಷ್ಟೇ ಯಾಕೆ, ಐಪಿಎಲ್ನಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡಿದ ಪಂತ್. ಇದೀಗ ಬಾಂಗ್ಲಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೂ ಸೆಂಚೂರಿ ಸಿಡಿಸಿ ತನ್ನ ತೋಳಿನ ತಾಕತ್ತು ತೋರಿಸಿದ್ದಾರೆ. ಪಂತ್ ತಾಕತ್ತು ನೋಡ್ತಾ ಹೋಗ್ತಿದ್ದಂತೆ ನಮ್ಮ ಕನ್ನಡಿಗರ ಎದೆ ಡವ ಡವ ಅಂತಿದೆ. ರಿಷಭ್ ಪಂತ್ ಗೆಲುವಿನಲ್ಲಿ ಕೆ.ಎಲ್ ರಾಹುಲ್ ಸೋಲು ನೋಡಬೇಕಾ ಅನ್ನೋ ಟೆನ್ಷನ್ ಎದುರಾಗಿದೆ. ಆದ್ರೆ, ಕ್ರಿಕೆಟ್ ಅಂತಾ ಬಂದಾಗ ಹಾಗೇನೂ ಆಗಲ್ಲ ಅಂತಿದ್ದಾರೆ ಕ್ರಿಕೆಟ್ ದಿಗ್ಗಜರು. ಈ ಬಗ್ಗೆ ಕಂಪ್ಲೀಂಟ್ ಡಿಟೇಲ್ಸ್ ಇಲ್ಲಿದೆ.

ಇದನ್ನೂ ಓದಿ:  ಗೋಬಿ, ಕಬಾಬ್‌ ಬಳಿಕ ಈಗ ಸ್ವೀಟ್‌ ಸರದಿ – ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಸುರಕ್ಷತ ಇಲಾಖೆ!

ರಿಷಭ್ ಪಂತ್ ಬಗ್ಗೆ ಮೊದ್ಲೇ ಹೇಳಿದಂತೆ ಆತ ಗಟ್ಟಿ ಗುಂಡಿಗೆಯ ಪವರ್ ಫುಲ್ ಕ್ರಿಕೆಟರ್. ಅಷ್ಟೇ ಅಲ್ಲ, ಕಾರ್ ಸ್ಟೇರಿಂಗ್ ಕೈಯಲ್ಲಿದ್ರೂ ಅಷ್ಟೇ. ಕ್ರಿಕೆಟ್ ಗ್ಲೌಸ್ ಕೈಯಲ್ಲಿದ್ರೂ ಅಷ್ಟೇ, ಕ್ರಿಕೆಟ್ ಬ್ಯಾಟ್ ಕೈಯಲ್ಲಿದ್ರೂ ಅಷ್ಟೇ. ಮೈಮೇಲೆ ಅದೇನೋ ಪವರ್ ಬಂದಂಗೆ ಆಡ್ತಾರೆ ರಿಷಭ್ ಪಂತ್. ಅಂದು 2022ರಲ್ಲಿ ವೇಗವಾಗಿ ಕಾರು ಓಡಿಸುವ ಶೋಕಿಯಲ್ಲೇ ಆಕ್ಸಿಡೆಂಟ್ ಆಗಿದ್ದು. ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಪಂತ್ ಮೈಯೆಲ್ಲಾ ಸುಟ್ಟಗಾಯ. ಪ್ರಜ್ಞೆಯೇ ಇರಲಿಲ್ಲ. ಆತನ ಸ್ಥಿತಿ ನೋಡಿದ ಎಷ್ಟೋ ಜನ ಬದುಕಿದ್ದೇ ಹೆಚ್ಚು ಬಿಡಿ ಅಂದಿದ್ರು. ಬಟ್ ಇನ್ನೆಂದೂ ಕ್ರಿಕೆಟ್ ಮೈದಾನಕ್ಕೆ ಇಳಿಯೋಕೆ ಚಾನ್ಸೇ ಇಲ್ಲ ಎಂದು ನಿರ್ಧರಿಸಿ ಬಿಟ್ಟಿದ್ರು. ಆದ್ರೆ, ಮತ್ತೊಮ್ಮೆ ಪಂಥ್ ಕ್ರಿಕೆಟ್ ಆಟ ನೋಡೋ ಭಾಗ್ಯ ಎಲ್ಲರಿಗೂ ಇತ್ತು. ಸಾವನ್ನೇ ಜಯಿಸಿ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು ಪಂಥ್. ಅಲ್ಲಿಂದ ಭರ್ತಿ 700 ದಿನಗಳು. ರಿಷಭ್ ಅನ್ನೋ ರಿಯಲ್ ಹೀರೋ ಟೆಸ್ಟ್ ಅಂಗಳದಲ್ಲೂ ಕಮಾಲ್ ಮಾಡಿದ್ದ. ಹೇಳಿಕೇಳಿ ರಿಷಭ್ ಒಬ್ಬ ವಿಕೆಟ್ ಕೀಪರ್. ಮೊನ್ನೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ನೋಡಿದವರು, ಇವನೇನಾ, ಮೊಣಕಾಲು ಮುರಿದುಕೊಂಡು ತಿಂಗಳುಗಟ್ಟಲೆ ಆಸ್ಪತ್ರೆ ಸೇರಿದವನು ಅಂತಾ ಅಚ್ಚರಿ ಪಟ್ಟಿದ್ರು. ಆ ರೀತಿಯಿತ್ತು ರಿಷಭ್ ಪಂತ್ ಹೊಡಿಬಡಿ ಆಟ. ಜೊತೆಗೆ ವಿಕೆಟ್ ಕೀಪೀಂಗ್ ನಲ್ಲೂ ಅದೇ ಸ್ಟೈಲ್, ಅದೇ ಮಿಂಚಿನ ವೇಗದ ದಾಳಿ. ಡೆಲ್ಲಿ ಹೀರೋ ಹೊಡೆದ ಸೆಂಚೂರಿ ಕೂಡಾ ಅದ್ಭುತವೇ.

ಆದರೆ, ಪಂತ್ರ ಇದೇ ಬೆಂಕಿ ಬಿರುಗಾಳಿಯ ಆಟವೇ ಕನ್ನಡಿಗರ ಟೆನ್ಷನ್ ಹೆಚ್ಚು ಮಾಡಿದ್ದು. ರಿಷಭ್ ಪಂತ್ ಕ್ರಿಕೆಟ್ ಲೋಕದ ರಿಯಲ್ ಹೀರೋ. ಇದ್ರಲ್ಲಿ ನೋ ಡೌಟ್. ಆದ್ರೆ, ನಮ್ಮ ಕನ್ನಡಿಗ ಕ್ರಿಕೆಟರ್ ಕೆ.ಎಲ್ ರಾಹುಲ್ ಗೆ ಯಾವ ಕೊರತೆಯಿದೆ. ಬೆಸ್ಟ್ ವಿಕೆಟ್ ಕೀಪರ್. ಬೆಸ್ಟ್ ಬ್ಯಾಟರ್.. ತಂಡಕ್ಕೆ ಸದಾ ಆಸರೆಯಾಗೋ ಒಬ್ಬ ಒಳ್ಳೇ ಆಟಗಾರ. ಪಂತ್ ಪ್ರತಿ ಪಂದ್ಯದಲ್ಲೂ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ರೆ, ಕೆ.ಎಲ್ ಕೆರಿಯರ್ ಗೆ ಪೆಟ್ಟು ಬೀಳ್ತಾ ಹೋಗ್ತಿದೆಯಾ ಎಂಬ ಸಣ್ಣ ಡೌಟ್ ಶುರುವಾಗತೊಡಗಿದೆ.

ಕೆ.ಎಲ್ ಪಂಥ್ ರೀತಿ ಬೆಂಕಿ ಬಿರುಗಾಳಿಯ ವೇಗದ ಬ್ಯಾಟರ್ ಅಲ್ಲದೇ ಇರಬಹುದು. ಆದರೆ, ಒಂದು ತಂಡಕ್ಕೆ ಬೇಕದ ಕೂಲ್ ಆಂಡ್ ಕಾಮ್ ಕ್ರಿಕೆಟರ್. ರನ್ ಅವಶ್ಯಕತೆ ಇದ್ದಾಗ ರಾಹುಲ್ ಇದ್ದರೆ ಬೆಟರ್ ಅನ್ನೋ ರೀತಿ ಕೆ.ಎಲ್ ಬ್ಯಾಟಿಂಗ್ ಖದರ್ ಇರುತ್ತದೆ. ಹೀಗಾಗಿ ಕೆ.ಎಲ್ ರಾಹುಲ್ ಈಗಿನ ವಿಕೆಟ್ ಕೀಪರ್ ಗೆ ಸವಾಲ್ ಹಾಕುವ ರೀತಿಯಲ್ಲಿ ಆಡಲೇಬೇಕಾದ ಅನಿವಾರ್ಯತೆಯೂ ಇರುತ್ತದೆ. ಯಾಕೆಂದ್ರೆ, ಪ್ರತಿಬಾರಿಯೂ ಕೆ.ಎಲ್ ಪರಿಸ್ಥಿತಿ ಹೇಗಿರುತ್ತೆ ಅಂದ್ರೆ ಡು ಆರ್ ಡೈ ಅನ್ನೋ ರೀತಿ. ಈಗ್ಲೂ ಅಷ್ಟೇ ಬಾಂಗ್ಲಾ ಸರಣಿಯಲ್ಲಿ ಕೆ.ಎಲ್ ತಾಕತ್ತು ತೋರಿಸಲೇಬೇಕು. ಇಲ್ಲಾಂದ್ರೆ ರಾಹುಲ್ ಜಾಗದಲ್ಲಿ ಆಲ್ ರೆಡಿ ರಿಷಭ್ ಪಂತ್ ಪರ್ಮನೆಂಟಾಗಿ ಬರೋ ಸಾಧ್ಯತೆ ಹೆಚ್ಚಾಗಿದೆ. ಅದಕ್ಕೂ ಮಿಗಿಲಾಗಿ ಯಂಗ್ ಕ್ರಿಕೆಟರ್ಸ್ ಕೂಡಾ ಟೀಮ್ ಇಂಡಿಯಾ ಕದ ತಟ್ಟಲು ರೆಡಿಯಾಗಿದ್ದಾರೆ. ಅದಕ್ಕೆ ಹೇಳಿದ್ದು, ರಿಷಭ್ ಪಂಥ್ ಸಾವನ್ನ ಗೆದ್ದು ಬಂದಿರೋ ರೀತಿ ಕ್ರಿಕೆಟ್ ಫ್ಯಾನ್ಸ್ ಗೆ ಖುಷಿ ತಂದಿದೆ. ಆದರೆ, ಒಬ್ಬ ಗೆದ್ದಾಗ ಮತ್ತೊಬ್ಬ ಸೋಲಲೇಬೇಕು. ಆದ್ರೆ, ಆ ಸೋಲು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಅವರದ್ದು ಆಗಬಾರದು ಅನ್ನೋದೇ ಕನ್ನಡಿಗರ ಕೋರಿಕೆ.

Shwetha M

Leave a Reply

Your email address will not be published. Required fields are marked *