ಗೋಬಿ, ಕಬಾಬ್‌ ಬಳಿಕ ಈಗ ಸ್ವೀಟ್‌ ಸರದಿ – ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಸುರಕ್ಷತ ಇಲಾಖೆ!

ಗೋಬಿ, ಕಬಾಬ್‌ ಬಳಿಕ ಈಗ ಸ್ವೀಟ್‌ ಸರದಿ – ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಸುರಕ್ಷತ ಇಲಾಖೆ!

ಇನ್ನೇನು ಸಾಲು ಸಾಲು ಹಬ್ಬಗಳೇ ಬರ್ತಾ ಇದೆ.. ಜನರು ಕೂಡ ಸ್ವೀಟ್‌ ಆರ್ಡರ್‌ ಮಾಡಲು ಮುಂದಾಗಿದ್ದಾರೆ.. ಆದ್ರೀಗ ಸ್ವೀಟ್‌ ಗಳಲ್ಲೂ ಕಲಬೆರಕೆ ಪದಾರ್ಥ ಬಳಕೆ ಮಾಡಲಾಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇದೀಗ ಆಹಾರ ಸುರಕ್ಷತ ಇಲಾಖೆ ಸ್ವೀಟ್ಸ್‌ಗಳ ಗುಣಮಟ್ಟ ಪರೀಕ್ಷೆಗೆ ಮುಂದಾಗಿದೆ.

ಇದನ್ನೂ ಓದಿ: ಸೈಂಟಿಸ್ಟ್​ ಆದಾಕೆ ಈಗ ನಟಿ! – 6 ವರ್ಷ ನಟನೆಗೆ ಬ್ರೇಕ್‌ ಕೊಟ್ಟಿದ್ಯಾಕೆ?

ಇತ್ತೀಚಿನ ದಿನಗಳಲ್ಲಿ ಆಹಾರ ಪಾದಾರ್ಥಗಳಲ್ಲಿ ಜೀವಕ್ಕೆ ಮಾರಕವಾಗುವ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಕಲಬೆರಕೆಯಾದ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆ. ಕಲಬೆರಕೆ ಆಹಾರ ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ತಿವೆ. ಹೀಗಾಗಿ ಇಂತಹ ಆಹಾರ ಪದಾರ್ಥಗಳ ಮೇಲೆ ನಿರ್ಬಂಧ ಹೇರ್ತಿದೆ ಆಹಾರ ಸುರಕ್ಷತ ಇಲಾಖೆ. ಈಗಾಗ್ಲೇ ಗೋಬಿ, ಕಾಟನ್ ಕ್ಯಾಂಡಿ, ಕಬಾಬ್‌‌ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಗೆ ಬ್ರೇಕ್‌ ಹಾಕಿದ್ದು, ಇದೀಗ ಸ್ವೀಟ್ಸ್‌ಗಳ ಗುಣ ಮಟ್ಟ ಪರೀಕ್ಷೆಗೆ ಮುಂದಾಗಿದೆ.

ಹೌದು, ದಸರಾ ಹಾಗೂ ದೀಪಾವಳಿ ಹಿನ್ನೆಲೆ ಜನರು ಹೆಚ್ಚಾಗಿ ಸ್ವೀಟ್ಸ್‌ಗಳನ್ನ ಖರೀದಿ ಮಾಡ್ತಾರೆ. ಆದರೆ ಅನೇಕ‌ ಸ್ವೀಟ್ಸ್‌ಗಳಲ್ಲಿ ಕಲರ್ ಬಳಕೆ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಆಹಾರ ಸುರಕ್ಷತ ಇಲಾಖೆ ಎಲ್ಲಾ ಬ್ರಾಂಡ್‌ಗಳ ಸ್ವೀಟ್ಸ್‌ಗಳನ್ನ ಪರೀಕ್ಷೆ ಮಾಡೋದಕ್ಕೆ ಮುಂದಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ನಮ್ಮ ಆರೋಗ್ಯ ಇಲಾಖೆ ಹಾಗೂ ಫುಡ್​​​ ಸೇಫ್ಟಿ ಅಧಿಕಾರಿಗಳಿಗೆ ಬೇರೆ ಬೇರೆ ಪದಾರ್ಥಗಳನ್ನು, ಸಂಶಯ ಇರುವ ಕಡೆ ಎಲ್ಲಾ ಪ್ರದೇಶಗಳಲ್ಲೂ ತನಿಖೆ ಮಾಡ್ತಾರೆ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇರುತ್ತೆ, ಅದರ ಅನ್ವಯ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಬೇಕರಿಗಳ ಐಟಂಗಳ ಮೇಲೂ ಆಹಾರ ಇಲಾಖೆ ನಿಗಾವಹಿಸಲು ಮುಂದಾಗಿದೆ. ತುಪ್ಪದಿಂದ ತಯಾರಾಗುವ ಸ್ವೀಟ್‌ಗಳ ಮೇಲೂ ಕಣ್ಣಿಟ್ಟಿದೆ. ಹೀಗಾಗಿ ಬೇಕರಿ ಹಾಗೂ ಸ್ವೀಟ್ಸ್‌ ಮಾರಾಟಗಾರರು ಕೂಡ ಅಲರ್ಟ್ ಆಗಿದ್ದಾರೆ.

Shwetha M

Leave a Reply

Your email address will not be published. Required fields are marked *