ಸೈಂಟಿಸ್ಟ್​ ಆದಾಕೆ ಈಗ ನಟಿ! – 6 ವರ್ಷ ನಟನೆಗೆ ಬ್ರೇಕ್‌ ಕೊಟ್ಟಿದ್ಯಾಕೆ?
ವಿಲನ್‌ ಕಾವೇರಿ ರಿಯಲ್‌ ಜರ್ನಿ!

ಸೈಂಟಿಸ್ಟ್​ ಆದಾಕೆ ಈಗ ನಟಿ! – 6 ವರ್ಷ ನಟನೆಗೆ ಬ್ರೇಕ್‌ ಕೊಟ್ಟಿದ್ಯಾಕೆ?ವಿಲನ್‌ ಕಾವೇರಿ ರಿಯಲ್‌ ಜರ್ನಿ!

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ.. ಕೀರ್ತಿ ಸಾವಿನ ರಹಸ್ಯ ಬಯಲು ಮಾಡ್ಬೇಕು ಅಂತಾ ಲಕ್ಷ್ಮೀ ಶತ ಪ್ರಯತ್ನ ಮಾಡುತ್ತಿದ್ದಾಳೆ.. ಇತ್ತ ಎಲ್ಲಿ ತನ್ನ ಸತ್ಯ ಆಚೆ ಬರುತ್ತೋ ಅನ್ನೋ ಭಯದಲ್ಲೇ ಕಾಲ ಕಳಿತಾ ಇದ್ದಾಳೆ ಕಾವೇರಿ.. ಕಾವೇರಿ ಪಾತ್ರ ಕಂಡು ವೀಕ್ಷಕರು ಕೂಡ ಹಿಡಿ ಹಿಡಿ ಶಾಪ ಹಾಕ್ತಿದ್ದಾರೆ.. ಮಗನ ಮೇಲಿನ ವ್ಯಾಮೋಹಕ್ಕೆ ಇನ್ನೊಬ್ಬರ ಜೀವ ಬಲಿ ತಗೊಳ್ಳೋ ಈಕೆ, ಹೆಣ್ಣೋ.. ಹೆಮ್ಮಾರಿಯೋ ಅಂತಾ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.. ಇದೀಗ ಕಾವೇರಿ ಪಾತ್ರ ಮಾಡ್ರಿರೋ ನಟಿ ರಿಯಲ್‌ ಲೈಫ್‌ ನಲ್ಲಿ ಹೇಗಿರ್ತಾರೆ ಅಂತಾ ವೀಕ್ಷಕರು ತಿಳಿದುಕೊಳ್ಳಲು ಮುಂದಾಗ್ತಿದ್ದಾರೆ.. ಅಷ್ಟಕ್ಕೂ ಕಾವೇರಿ ಪಾತ್ರ ಮಾಡ್ತಿರೋ ನಟಿ ಯಾರು? ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: WTC ಫೈನಲ್.. ಭಾರತಕ್ಕೆ ಸವಾಲೆಷ್ಟು? – ಟೀಂ ಇಂಡಿಯಾ ಮುಂದಿನ ಪಂದ್ಯಗಳೆಷ್ಟು?

ಮಾತೆತ್ತಿದ್ರೆ ಸಾಕು.. ಪುಟ್ಟ ನನ್ನ ಮಗ.. ಅವ್ನ ಮೇಲೆ ನನಿಗೆ ಮಾತ್ರ ಹಕ್ಕಿರೋದು ಅಂತಾ ಹೇಳೋ ಕಾವೇರಿ. ಮಗನ ಮೇಲಿನ ವಿಪರೀತ ಪ್ರೀತಿ, ವ್ಯಾಮೋಹದಿಂದ ಕಾವೇರಿ ಈಗ ದಾರಿ ತಪ್ಪಿದ್ದಾಳೆ. ತನಗೆ ಅಡ್ಡ ಆದವರನ್ನ ಮುಗಿಸ್ತಾ ಬಂದಿದ್ದಾಳೆ.. ಇದೀಗ ಕೀರ್ತಿಯನ್ನ ಕೊಂದು ಲಕ್ಷ್ಮೀಯನ್ನ ಮುಗಿಸಲು ಸ್ಕೆಚ್‌ ಹಾಕಲು ಪ್ಲ್ಯಾನ್‌ ಹಾಕಿದ್ಲು.. ಆದ್ರೆ ಕೀರ್ತಿಯನ್ನ ಬೆಟ್ಟದಿಂದ ದೂಡಿ ಹಾಕಿ ಪೇಚಿಗೆ ಸಿಲುಕಿಕೊಂಡಿದ್ದಾಳೆ.. ಕ್ಷಣ ಕ್ಷಣಕ್ಕೂ ಕಾವೇರಿ ಸೈಕೋ ತರ ಆಡ್ತಿದ್ದಾಳೆ.. ಇದೀಗ ವೀಕ್ಷಕರು ಕೀರ್ತಿಗೆ ಈ ಗತಿ ತಂದಿರೋ ಕಾವೇರಿಗೆ ಹೀಗೆ ಆಗ್ಬೇಕು ಅಂತಾ ಹೇಳ್ತಿದ್ದಾರೆ.. ಅಷ್ಟೇ ಅಲ್ಲ ವಿಲನ್‌ ಕಾವೇರಿ ಪಾತ್ರಕ್ಕೆ ಜೀವ ತುಂಬಿರೋ ಸುಷ್ಮಾ ನಾಣಯ್ಯ ಆಕ್ಟಿಂಗ್‌ ಗೆ ವೀಕ್ಷಕರು ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.. ಸೀರಿಯಲ್‌ ನಲ್ಲಿ ಹೆಮ್ಮಾರಿ ಆಗಿರೋ ಕಾವೇರಿ ರಿಯಲ್‌ ಲೈಫ್‌ ಹೇಗಿದೆ ಹೊತ್ತಾ? ಕಾವೇರಿ ಪಾತ್ರ ಮಾಡ್ತಿರೋ ನಟಿ ಸಖತ್‌ ಮಾರ್ಡನ್‌..  ಸುಷ್ಮಾ ಮೂಲತಃ ಕೂರ್ಗಿನವರು..  ಆದ್ರೆ ದಾವಣಗೆರೆ, ಧಾರವಾಡ, ಬೆಂಗಳೂರು, ಮೈಸೂರಿನಲ್ಲಿ ಓದಿ ಬೆಳದಿದ್ದಾರೆ. ಇದಕ್ಕೆ ಕಾರಣವೂ ಇದೆ.. ಅವ್ರ ತಂದೆ-ತಾಯಿಯ ಕೆಲಸ, ಪೋಷಕರಿಗೆ ಆಗಾಗ ಆಗುತ್ತಿದ್ದ ವರ್ಗಾವಣೆ.. ಹೌದು, ಸುಷ್ಮಾ ಅವರು ಓದು ಕೂಡ ತಂದೆ-ತಾಯಿ ಕೆಲಸವಿದ್ದ ಕಡೆಗೆ ವರ್ಗಾವಣೆಯಾಗುತ್ತಿತ್ತು. ಸಾಕಷ್ಟು ಬಾರಿ ಸ್ಕೂಲ್‌, ಕಾಲೇಜು ಚೇಂಜ್‌ ಮಾಡಿದ್ರು ಅವರ ಓದಿಗೆ ಏನು ಎಫೆಕ್ಟ್‌ ಬಿದ್ದಿಲ್ಲ..  ಸುಷ್ಮಾ ಮೈಕ್ರೋ ಬಯಾಲಜಿಯಲ್ಲಿ ಎಂ ಎಸ್ ಸಿ ಪದವಿ ಪಡೆದಿದ್ದಾರೆ. ಸೈಂಟಿಸ್ಟ್ ಆಗಿ ಕೆಲಕಾಲ ಕೆಲಸವನ್ನೂ ಕೂಡ ಮಾಡಿದ್ದಾರೆ. ಆದರೆ, ಸುಷ್ಮಾ ಅವರ ಮನಸ್ಸು ಸದಾ ನಟನೆಯತ್ತ ಸೆಳೆಯುತ್ತಿದ್ದ ಕಾರಣ ಕೆಲಸ ಬಿಟ್ಟು ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ್ರು..

ಇನ್ನು ಸುಷ್ಮಾ ಅವರ ಮ್ಯಾರೆಜ್ ಲೈಫ್‌ ಕೂಡ ಬಲು ಇಂಟ್ರೆಸ್ಟಿಂಗ್‌ ಆಗಿದೆ.. ಸ್ಕೂಲ್‌ ನಲ್ಲಿ ಫ್ರೆಂಡ್‌ ಆಗಿದ್ದವರೊಂದಿಗೆ ಸುಷ್ಮಾ ದಾಂಪತ್ಯ ಜೀವನಕ್ಕಾ ಕಾಲಿಟ್ಟಿದ್ದಾರೆ.. ಸುಷ್ಮಾ ನಾಣಯ್ಯ ಅವರು ಧಾರವಾಡದ ಶಾಲೆಯಲ್ಲಿ ಓದುವಾಗಲೇ ಪ್ರತೀಕ್ ಮೋರೆ ಎಂಬುವರ ಪರಿಚಯವಾಗಿತ್ತಂತೆ. ಸುಷ್ಮಾ ಅವರು 8ನೇ ಕ್ಲಾಸ್ ನಲ್ಲಿದ್ದಾಗ ಪ್ರತೀಕ್ ಅವರು 9ನೇ ಕ್ಲಾಸ್ನಲ್ಲಿದ್ದರಂತೆ. ಇಬ್ಬರೂ ಅವಾಗಿನಿಂದಲೇ ಫ್ರೆಂಡ್ಸ್‌ ಆಗಿದ್ರು. ಕಾಂಟ್ಯಾಕ್ಟ್ ನಲ್ಲಿದ್ದ ಇವರು ನಂತರದ ದಿನಗಳಲ್ಲಿ ಪ್ರೀತಿ ಮಾಡಿ ಲೈಫ್ ನಲ್ಲಿ ಸೆಟಲ್ ಆದ ಬಳಿಕ ಮನೆಯಲ್ಲಿ ವಿಷಯ ತಿಳಿಸಿದರಂತೆ. ಸುಷ್ಮಾ ಅವರು ಕೂರ್ಗಿ.. ಪ್ರತೀಕ್, ಮರಾಠ ಮೂಲದವರಾದ್ರೂ ಇಬ್ಬರ ಮನೆಯಲ್ಲೂ ವಿರೋಧವಿಲ್ಲದೇ 2013ರಲ್ಲಿ ಮದುವೆಯಾದ್ರು. ಇನ್ನು ಸುಷ್ಮಾ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಅವರ ಗಂಡ ಪ್ರತೀಕ್ ಅವರ ಸಹಕಾರದಿಂದಲೇ ಅಂತೆ..

ಹೌದು, ಚಿಕ್ಕ ವಯಸ್ಸಿನಿಂದಲೂ ಸಂಗೀತ, ನೃತ್ಯ, ರಂಗಭೂಮಿ, ಮೇಕಪ್ ಬಗ್ಗೆ ಸುಷ್ಮಾ ಅವರು ಹೆಚ್ಚು ಆಸಕ್ತಿಯನ್ನು ಹೊಂದಿದ್ದರಂತೆ. ಹೀಗಾಗಿ ರಂಗಭೂಮಿಗೆ ಆಗಮಿಸಿದ ಸುಷ್ಮಾ ಅವರು ಮೊದಲು ಕಾವ್ಯಾ ಕಸ್ತೂರಿ ಧಾರಾವಾಹಿಯಲ್ಲಿ ನಟಿಸಿದರಂತೆ. ಇದಾದ ಬಳಿಕ ʼಅಶ್ವಿನಿ ನಕ್ಷತ್ರ’, ‘ಗುಂಡ್ಯಾನ ಹೆಂಡತಿ’, ‘ಗಾಳಿಪಟ’, ‘ಭಾಗ್ಯವತಿ’, ‘ಮಹಾಭಾರತ’, ‘ರಥಸಪ್ತಮಿ’, ‘ದೀಪವು ನಿನ್ನದೇ’, ‘ಕಾರ್ತಿಕ ದೀಪ’ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದರು. ಬಳಿಕ ಕುಟುಂಬಕ್ಕಾಗಿ ಆರು ವರ್ಷಗಳ ಕಾಲ ಬ್ರೇಕ್ ಪಡೆದರು. ಈ ಸಮಯದಲ್ಲಿ ಕಿರುತರೆಯಿಂದ ದೂರವಿದ್ದರೂ ಕೂಡ ರಂಗಭೂಮಿ ನಂಟು ಹಾಗೆ ಉಳಿಸಿಕೊಂಡಿದ್ದರಂತೆ. ಈ ನಡುವೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುಷ್ಮಾ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಪುನಃ ಕಿರುತೆರೆಗೆ ಆಗಮಿಸಿದರು.  ತಾಯಿ ಕಾವೇರಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಮೇಕಪ್ ಆರ್ಟಿಸ್ಟ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮನೆ, ಮಗಳು, ಧಾರಾವಾಹಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸುಷ್ಮಾ ಅವರಿಗೆ ತಮ್ಮ ಪತಿಯ ಸಪೋರ್ಟ್ ಹೆಚ್ಚಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಸುಷ್ಮಾ ನಾಣಯ್ಯ ಅವರು ಮರಳಿದ್ದರೂ ತಮ್ಮ ನಟನೆಯ ಮೂಲಕ ಮತ್ತೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Shwetha M