ಮಗುವಿನಿಂದ ತುಳಸಿಗೆ ಅಪಾಯ – ಕಮೆಂಟ್ ಗೆ ಹೆದರಿದ್ರಾ ಡೈರೆಕ್ಟರ್?
ಶ್ರೀರಸ್ತು ಶುಭಮಸ್ತು ಕತೆ ಫುಲ್ ಚೇಂಜ್?

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಶ್ರೀರಸ್ತು ಶುಭ ಮಸ್ತು ಸೀರಿಯಲ್ ಸದ್ಯ ರೋಚಕ ಘಟ್ಟ ತಲುಪಿದೆ.. ಸೀರಿಯಲ್ ಡೈರೆಕ್ಟರ್ ಟ್ವಿಸ್ಟ್ ಕೊಡಲು ಹೋಗಿ ಮತ್ತಿನ್ನೇನೋ ಆಗಿದೆ.. ಧಾರವಾಹಿ ಕತೆ ನೋಡಿ ವೀಕ್ಷಕರು ಕೂಡ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದರು.. ಸಮಾಜಕ್ಕೆ ಒಳ್ಳೆ ಸಂದೇಶ ಕೊಡಿ ಅಂತ ಹೇಳಿದ್ರು.. ಅಷ್ಟೇ ಅಲ್ಲ.. ನಟಿ ಸುಧಾರಾಣಿ, ವೆಂಕಟ್ ರಾವ್ ಅವರಂತ ಹಿರಿಯ ನಟರು ಸೀರಿಯಲ್ ನಿಂದ ಹೊರ ಬನ್ನಿ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ರು.. ವೀಕ್ಷಕರ ಕಮೆಂಟ್ಸ್ ಗೆ ಬೇಸತ್ತು ಸೀರಿಯಲ್ ಪ್ರೋಮೋದ ಕಮೆಂಟ್ ಸೆಕ್ಷನ್ ಅನ್ನ ಕೂಡ ಆಫ್ ಮಾಡಲಾಗಿತ್ತು.. ಇದೀಗ ಸೀರಿಯಲ್ ಡೈರೆಕ್ಟರ್ ಮತ್ತೊಂದು ಬದಲಾವಣೆ ತರ್ತಿದ್ದಾರೆ..
ಇದನ್ನೂ ಓದಿ :ದಿನೇದಿನೆ ಹೆಚ್ಚುತ್ತಿದೆ ಸೈಬರ್ ಕ್ರೈಂ..!- ನೀವು ಎಷ್ಟು ಸೇಫ್..? ಹೇಗಿದೆ ದೋಖಾ..?
ಶ್ರೀರಸ್ತು ಶುಭಮಸ್ತು ಸೀರಿಯಲ್ ಸದ್ಯ ಭಾರಿ ಚರ್ಚೆಯಲ್ಲಿದೆ.. ಅಜ್ಜಿಯಾಗೋ ವಯಸ್ಸಲ್ಲಿ ತುಳಿಸಿ ತಾಯಿಯಾಗ್ತಿದ್ದಾಳೆ ಅಂತಾ ತೋರಿಸಲಾಗಿತ್ತು. ಸೀರಿಯಲ್ ಟ್ವಿಸ್ಟ್ ಗೆ ವೀಕ್ಷಕರೇ ಕಂಗಾಲಾಗಿದ್ರು. ಸೋಶಿಯಲ್ ಮೀಡಿಯಾ ದಲ್ಲಿ ಇದು ಟ್ರೋಲ್ ಮೇಲೆ ಟ್ರೋಲ್ ಆಗಿತ್ತು. ಈ ವಯಸ್ಸಿನಲ್ಲಿ ತುಳಸಿ ಗರ್ಭಧರಿಸೋದು ಎಷ್ಟು ಸರಿ ಅಂತ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಆರ್ ಪಿ ಗಿಟ್ಟಿಸಿಕೊಳ್ಳಲು ಕಥೆಯ ದಾರಿಯನ್ನೇ ಬದಲಿಸೋದು ಸರಿಯಲ್ಲ ಎಂದಿದ್ದರು ಫ್ಯಾನ್ಸ್. ಸುಧಾರಾಣಿಗೆ ಈ ಪಾತ್ರ ಸೂಟ್ ಆಗೋದಿಲ್ಲ.. ಈತರ ಟ್ವಿಸ್ಟ್ ಕೊಟ್ಟ ಅವರಿಗೆ ಅವಮಾನ ಮಾಡಲಾಗ್ತಿದೆ.. ಎಂದು ವೀಕ್ಷಕರು ಕಮೆಂಟ್ ಹಾಕ್ತಿರು.. ಅಷ್ಟೇ ಅಲ್ಲ ಸುಧಾರಾಣಿ, ದತ್ತ ಪಾತ್ರ ಮಾಡ್ತಿರುವ ವೆಂಟಕ್ ರಾವ್ ಅವರು ಸೀರಿಯಲ್ ನಿಂದ ಹೊರ ಬನ್ನಿ ಅಂತಾ ವೀಕ್ಷಕರು ಮನವಿ ಮಾಡಿದ್ರು.. ನಿರ್ದೇಶಕರ ಮೇಲೆ ಗರಂ ಆಗಿದ್ದ ವೀಕ್ಷಕರು, ಬಾಯಿಗೆ ಬಂದಂತೆ ಕಮೆಂಟ್ ಮಾಡಿದ್ರು. ಟ್ರೋಲ್, ಕಮೆಂಟ್ಸ್ ನೋಡಿ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡಿತ್ತು. ಆದ್ರೂ ವೀಕ್ಷಕರು ಬಿಟ್ಟಿರಲಿಲ್ಲ. ಬೇರೆ ಸೀರಿಯಲ್ ಪ್ರೋಮೋಗಳ ಕಮೆಂಟ್ ಸೆಕ್ಷನ್ ನಲ್ಲಿ ಸರಿಯಾಗೆ ಕ್ಲಾಸ್ ತಗೊಂಡಿದ್ರು.. ತುಳಸಿ ಗರ್ಭಿಣಿ ಆಗೋದು ಬೇಡ ಎಂದಿದ್ದ ವೀಕ್ಷಕರಿಗೆ ಖುಷಿ ಸುದ್ದಿ ಸಿಕ್ಕಂತಿದೆ.
ಹೌದು.. ತುಳಸಿ ಹಾಗೂ ಮಾಧವ್ ಗೆ ಈಗಾಗಲೇ ದೊಡ್ಡ ಮಕ್ಕಳಿದ್ದಾರೆ. ಎಲ್ಲರೂ ಮದುವೆಯಾಗಿದ್ದು, ಮೊಮ್ಮಕ್ಕಳನ್ನು ಬಯಸುತ್ತಿರುವ ತುಳಸಿಯನ್ನ ಗರ್ಭಿಣಿ ಅಂತ ತೋರಿಸಲಾಗ್ತಿದೆ.. ತುಳಸಿ ಮಾಧವ್ ಗೆ ಈ ವಿಚಾರನ ಹೇಳಿದ್ದಾಳೆ.. ಮಾಧವ್ ಕೂಡ ಈ ವಿಷ್ಯವನ್ನು ಆರಾಮವಾಗಿ ತೆಗೆದುಕೊಂಡಿದ್ದ. ನಮ್ಮ ಮದುವೆಯಲ್ಲೂ ಜನ ಮಾತನಾಡಿದ್ರು. ಈಗ್ಲೂ ಮಾತನಾಡ್ತಾರೆ. ಹಾಗಂತ ಜನರಿಗೆ ಹೆದರಿ ಕೂರಲು ಆಗುತ್ತಾ ಎಂಬುದು ಮಾಧವ್ ಪ್ರಶ್ನೆಯಾಗಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ತುಳಸಿಗೆ ಬೆಂಬಲವಾಗಿ ನಿಂತಿದ್ದ ಮಾಧವ್, ತುಳಸಿಯನ್ನು ಆಸ್ಪತ್ರೆಗೆ ಕರೆದೊಯ್ದು ಡಾಕ್ಟರ್ ಅಭಿಪ್ರಾಯ ಕೇಳಿದ್ದಾರೆ. ಇಲ್ಲೂ ಈ ಟ್ವಿಸ್ಟ್ ನೀಡಲಾಗಿದೆ. ವೀಕ್ಷಕರ ಕಮೆಂಟ್ ಗೆ ಹೆದರಿ, ಡೈರೆಕ್ಟರ್ ಕಥೆ ಬದಲಿಸ್ತಿದ್ದಾರಾ ಅನ್ನೋ ಪ್ರಶ್ನೆ ಕಾಡ್ತಾ ಇದೆ.
ಹೌದು, ಜೀ ಕನ್ನಡ ಸೀರಿಯಲ್ ಪ್ರೋಮೊ ರಿಲೀಸ್ ಮಾಡಿದೆ.. ತುಳಸಿ ಮಾಧವ್ ಡಾಕ್ಷರ್ ಬಳಿ ಹೋಗಿದ್ದಾರೆ.. ಈ ವೇಳೆ ಡಾಕ್ಟರ್ ಮಗು ಬೇಡ ಎಂಬ ಮಾತನ್ನು ಹೇಳಿದ್ದಾರೆ. ತುಳಸಿಗೆ ವಯಸ್ಸಾಗಿದೆ. ಈ ಸಮಯದಲ್ಲಿ ಮಗು ಹೊಟ್ಟೆಯಲ್ಲಿರೋದು ಬಹಳ ಅಪಾಯ. ಮಗು ಹಾಗೂ ತಾಯಿ ಇಬ್ಬರ ಪ್ರಾಣಕ್ಕೂ ಅಪಾಯವಾಗ್ಬಹುದು. ಹಾಗಾಗಿ ಆಪರೇಷನ್ ಮಾಡಿಸೋದೇ ಬೆಸ್ಟ್ ಎಂದು ಡಾಕ್ಟರ್ ಹೇಳ್ತಾರೆ. ಈ ಮಾತನ್ನು ಕೇಳಿದ ಮಾಧವ್ ಹಾಗೂ ತುಳಸಿ ಶಾಕ್ ಆಗ್ತಾರೆ. ಮಗುವನ್ನು ತೆಗೆಯೋ ನೋವು ಅವರನ್ನು ಕಾಡ್ತಿದೆ. ಮಗು ಇದ್ರೆ ಎಂಬ ಮಾಧವ್ ಮಾತಿಗೆ, ವೈದ್ಯರು ಖಡಕ್ ಆಗಿ ಉತ್ತರ ನೀಡಿದ್ದು, ನೋಡಿ ಮುಂದೆ ಏನಾಗುತ್ತೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ. ಅಲ್ಲದೆ ನಿರ್ಧಾರವನ್ನು ತುಳಸಿ ಹಾಗೂ ಮಾಧವ್ ಗೆ ಬಿಟ್ಟಿದ್ದಾರೆ.
ಇದೀಗ ಪ್ರೋಮೋ ಪೋಸ್ಟ್ ಆಗ್ತಿದ್ದಂತೆ ಧಾರಾವಾಹಿ ವೀಕ್ಷಕರು ಖುಷಿಯಾಗಿದ್ದಾರೆ. ಜನರ ಮಾತು ಕೇಳಿ ಕೊನೆಗೂ ಡೈರೆಕ್ಟರ್ ಕಥೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಚೆನ್ನಾಗಿ ಬೈದಿರೋದಕ್ಕೆ ಡೈರೆಕ್ಟರ್ ಕಥೆಯನ್ನೇ ಬದಲಿಸಿದ್ದಾರೆ. ಒಳ್ಳೆಯ ಕೆಲಸ. ಸುಧಾರಾಣಿ ವ್ಯಕ್ತಿತ್ವಕ್ಕೆ ಇದು ಶೋಭೆ ತರುತ್ತಿರಲಿಲ್ಲ ಎಂದಿದ್ದಾರೆ ಫ್ಯಾನ್ಸ್. ವೀಕ್ಷಕರ ಒತ್ತಾಯದ ಮೇರೆಗೆ ಸ್ಟೋರಿ ಚೇಂಜ್ ಆಗಿದೆ, ಪ್ರತಿ ದಿನ ನಮಗೆ ಹೇಗೆ ಕಥೆ ಬೇಕು ಅಂತ ಹೇಳ್ತೇವೆ, ಹಾಗೆ ಬದಲಿಸಿ ಅಂತ ಕೆಲವರು ಮಾಡಿದ್ದಾರೆ. ಆದ್ರೆ ಕೆಲವರು, ಇಷ್ಟಕ್ಕೆ ಖುಷಿಪಡಬೇಡಿ. ಬೇಬಿನಾ ಟೆಕ್ನಾಲಜಿ ಬಳಸಿ ಡೆವಲಪ್ ಮಾಡಿ ಆರೋಗ್ಯಕರ ಮಗು ಹುಟ್ಟುವಂತೆ ಮಾಡ್ಬಹುದು.. ಇಲ್ಲ ತುಳಸಿ ಸಾಯಿಸಿ ಈ ಮಗುವನ್ನು ಪೂರ್ಣಿಗೆ ಕೊಡಬಹುದು ಅಂತ ತಾವೇ ಕಥೆ ಊಹೆ ಶುರು ಮಾಡಿದ್ದಾರೆ. ಮತ್ತೂ ಕೆಲವರು ಇದೇ ಕತೆ ಇಡ್ಕೊಂಡು ಇನ್ನೊಂದು ಸೀರಿಯಲ್ ಮಾಡಿ.. ಆದ್ರೆ ಅದ್ರ ಆ ದಂಪತಿಗೆ ಮಗು ಇರೋದು ಬೇಡ.. ತುಂಬಾ ವರ್ಷಗಳ ನಂತ್ರ ಮಗು ಆಗೋತರ ಮಾಡಿ.. ಹ್ಯಾಪಿ ಎಂಡಿಂಗ್ ಕೊಡಿ ಅಂತಿದ್ದಾರೆ ಸೀರಿಯಲ್ ಫ್ಯಾನ್ಸ್..
ಒಟ್ಟಿನಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್ ಅನ್ನ ವೀಕ್ಷಕರು ಸಿಕ್ಕಾಪಟ್ಟೆ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.. ಕತೆ ಹೀಗೆ ಸಾಗ್ಬೇಕು.. ಟ್ವಿಸ್ಟ್ ಕೊಡಲು ಹೋಗಿ, ಸೀರಿಯಲ್ ಹಾಳು ಮಾಡ್ಕೋಬೇಡಿ ಅಂತಾ ಸೀರಿಯಲ್ ಟೀಮ್ ಗೆ ಸಜೆಷನ್ ಕೊಡ್ತಿದ್ದಾರೆ..