ಮುಡಾ ಶಾಕ್.. ಸಿದ್ದು ಕುರ್ಚಿ ಶೇಕ್ – ರಾಜೀನಾಮೆ ಕೊಡ್ತಾರಾ ಮಾಸ್ ಲೀಡರ್?
ತನಿಖೆ ನಡೆದ್ರೆ ಹೊರಬೀಳುತ್ತಾ ರಹಸ್ಯ?

ಮುಡಾ ಶಾಕ್.. ಸಿದ್ದು ಕುರ್ಚಿ ಶೇಕ್ – ರಾಜೀನಾಮೆ ಕೊಡ್ತಾರಾ ಮಾಸ್ ಲೀಡರ್?ತನಿಖೆ ನಡೆದ್ರೆ ಹೊರಬೀಳುತ್ತಾ ರಹಸ್ಯ?

ರಾಜ್ಯ ರಾಜಕಾರಣದ ಮಾಸ್ ಲೀಡರ್ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಹೀಗಾಗಿ ಸಿಎಂ ಸಲ್ಲಿಸಿರುವ ಅರ್ಜಿ ವಜಾಗೊಳಿಸಿ ಆದೇಶಿಸಲಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನ ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪ್ರಕರಣದಿಂದ ರಿಲೀಫ್ ನಿರೀಕ್ಷೆಯಲ್ಲಿದ್ದ ಸಿದ್ದುಗೆ ಬಿಗ್ ಶಾಕ್ ಎದುರಾಗಿದ್ದು, ಇದೀಗ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸ್ತಿದ್ದಾರೆ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯರ ಮುಂದಿನ ಕಾನೂನು ಪ್ರಕ್ರಿಯೆ ಏನಿರಲಿದೆ? ಸಿದ್ದರಾಮಯ್ಯ ವಿರುದ್ಧದ ದೂರಿನ ವಿಚಾರಣೆ ಯಾವ ರೀತಿ ಸಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬ್ಯೂಟಿಫುಲ್ ಗವರ್ನರ್‌ ರಂಗಿನಾಟ! – 58 ಅಧಿಕಾರಿಗಳ ಜೊತೆ ಸಂಬಂಧ!

ಸಿಎಂಗೆ ಬಿಗ್ ಶಾಕ್!

ಮುಡಾ ಹಗರಣ ಸದ್ದು ಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಈ ಪ್ರಕರಣದ ಕುರಿತಾಗಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂದೇ ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಅಧೀನದ ಪೊಲೀಸರು ತನಿಖೆ ನಡೆಸೋದು ಸಮ್ಮತವೇ ಅನ್ನೋ ಪ್ರಶ್ನೆಗಳೂ ಇವೆ. ಇದೆಲ್ಲದ್ರ ನಡುವೆ ಇದೇ ದೂರಿನ ಸಂಬಂಧ ರಾಜ್ಯಪಾಲರು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು. ಸೆಪ್ಟೆಂಬರ್ 5 ರಂದು ಬರೆದಿದ್ದ ಈ ಪತ್ರದಲ್ಲಿ ದೂರುದಾರರು ಮಾಡಿದ್ದ ಸಿಬಿಐ ತನಿಖೆಯ ಉಲ್ಲೇಖವನ್ನೂ ಪ್ರಸ್ತಾಪಿಸಿದ್ದಾರೆ.. ಸಿದ್ದರಾಮಯ್ಯ ಸರ್ಕಾರದ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಪ್ರಕರಣಗಳು ಏನಾಗಿವೆ? ಯಾವ ಪ್ರಕರಣಗಳ ವಿಚಾರಣೆ ನಿರಾಕರಿಸಲಾಗಿದೆ? ಯಾವ ಪ್ರಕರಣಗಳ ವಿಚಾರಣೆಗೆ ಅನುಮತಿ ಸಿಕ್ಕದೆ? ಈ ಕುರಿತ ವರದಿ ಕೊಡಲು ರಾಜ್ಯಪಾಲರು ಕೇಳಿದ್ದಾರೆ. ಈ ಮೂಲಕ ರಾಜ್ಯಪಾಲರ ನಡೆ ಕುತೂಹಲ ಕೆರಳಿಸಿದ್ದು, ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೀಗಾಗಿ ಸಿಎಂ ಅರ್ಜಿಯನ್ನು ತಿರಸ್ಕರಿಸಿದ ಆದೇಶದ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಾಳೆಯೇ ಮೇಲ್ಮನವಿ ಸಲ್ಲಿಸಲು ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಇಂದು ಆದೇಶದ ಪ್ರತಿ ಪಡೆಯಲಿರುವ ವಕೀಲರು, ನಾಳೆಯೇ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಸದ್ಯ ಹೈಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ದೊಡ್ಡ ಹಂಗಾಮವೇ ಸೃಷ್ಟಿಯಾಗಿದೆ. ಬಿಜೆಪಿ ನಾಯಕರೆಲ್ಲಾ ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ಮುಂದುವರೆಸಲು ರೆಡಿಯಾಗಿದೆ. ಹೈಕಮಾಂಡ್ ಜೊತೆ ಇಡೀ ಸಂಪುಟವೇ ಸಿಎಂ ಬೆನ್ನಿಗೆ ನಿಂತಿದೆ. ಇದೆಲ್ಲ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ವಾದಿಸುತ್ತಿದೆ. ಮಧ್ಯಾಹ್ನದ ನಂತ್ರ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಇದು ಮೋದಿ ಸರ್ಕಾರದ ಕುತಂತ್ರದ ರಾಜಕೀಯ ಎಂದು ಆರೋಪಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಡಾ ಕೇಸ್​ ದೊಡ್ಡ ಟ್ವಿಸ್ಟ್​ಗಳನ್ನ ಪಡೆಯೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಈಗ ಇರೋ ಪ್ರಶ್ನೆ ಅಂದ್ರೆ ಸಿಎಂ ವಿರುದ್ಧ ಯಾವ ರೀತಿಯ ತನಿಖೆ ನಡೆಯಬಹುದು? ಲೋಕಾಯುಕ್ತ ಸಂಸ್ಥೆಗೆ ತನಿಖೆ ನಡೆಸಲು ಅವಕಾಶ ನೀಡಬಹುದೇ? ಅಥವಾ ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಗೆ ವಹಿಸಬಹುದೇ? ಅನ್ನೋದು.

Shwetha M

Leave a Reply

Your email address will not be published. Required fields are marked *