ಬ್ಯೂಟಿಫುಲ್ ಗವರ್ನರ್ ರಂಗಿನಾಟ! – 58 ಅಧಿಕಾರಿಗಳ ಜೊತೆ ಸಂಬಂಧ!
71 ಕೋಟಿ ದೋಖಾ.. 13 ವರ್ಷ ಜೈಲು ಶಿಕ್ಷೆ!
ದೊಡ್ಡ ಹುದ್ದೆಯಲ್ಲಿದ್ದ ಆ ಮಹಿಳಾ ಅಧಿಕಾರಿ ಮಾಡಿರೋ ಕೆಲಸವನ್ನ ಕೇಳಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತಿರಾ.. ತನ್ನ ಸೌಂದರ್ಯದ ಮೂಲಕವೇ ಪುರುಷರನ್ನ ಸಳೆಯುತ್ತಿದ್ದ ಆ ಚೆಂದುಳ್ಳಿ ಚೆಲುವೆ ಈಗ ಮಾಡಿದ ತಪ್ಪಿಗೆ ಕಂಬಿ ಹಿಂದೆ ಬಿದ್ದಿದ್ದಾಳೆ.. ಹಾಗಿದ್ರೆ ಆ ಲೇಡಿ ಬಾಂಡ್ ಮಾಡಿದ್ದೇನು..? ಎಷ್ಟು ಜನರ ಜೊತೆ ಆಕೆ ಸಂಬಂಧ ಹೊಂದಿದ್ದಳು..? ಅನ್ನೋ ಕಂಪ್ಲೀಂಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಂತ್ ಶೈನ್.. ರಾಹುಲ್ ಸೈಡ್ ಲೈನ್ – ಬ್ಯಾಟಿಂಗ್ ಆರ್ಡರ್ ನಿಂದ BAD LUCK
ದಂತದ ಗೊಂಬೆ ತರ ಇರೋ ಇವಳೇ ನೋಡಿ ಈ ಸ್ಟೋರಿಯ ನಾಯಕಿ.. ಅಲ್ಲ ಅಲ್ಲ ಕಳನಾಯಕಿ.. ಇವಳ್ ಹೆಸರು ಜಾಂಗ್ ಯಾಂಗ್.. ತನ್ನ ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದ್ದಾಳೆ.. ಅಲ್ಲದೇ ಇವಳನ್ನ ಬ್ಯುಟಿಫುಲ್ ಗವರ್ನರ್ ಎಂದು ಕರೆಯಲಾಗುತ್ತೆ.. ಸುಮಾರು 60 ಮಿಲಿಯನ್ ಯುವಾನ್ ಲಂಚವನ್ನು ಸ್ವೀಕರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಅಂದರೆ 71 ಕೋಟಿ 5 ಲಕ್ಷದ 99 ಸಾವಿರದ 312 ರೂಪಾಯಿ ಲಂಚ ಪಡೆದಿರುವುದು ಸಾಬೀತಾಗಿದೆ. 52 ವರ್ಷ ವಯಸ್ಸಿನ ಜಾಂಗ್ ಯಾಂಗ್, ತಮ್ಮ 22ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ್ದರು. ಅಂತಿಮವಾಗಿ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC) ನಲ್ಲಿ ಗವರ್ನರ್ ಮತ್ತು ಉಪ ಕಾರ್ಯದರ್ಶಿ ಸ್ಥಾನಕ್ಕೆ ಏರಿದರು. ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ್ಣು ಮತ್ತು ಕೃಷಿ ಸಂಘವನ್ನು ಪ್ರಾರಂಭಿಸಿ ಜಾಂಗ್ ಹೆಸರುವಾಸಿಯಾದರು. ಆದ್ರೆ ಇವಳ ಮೇಲೆ ಈಗ ಅನೇಕ ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿರೋ ಮತ್ತು 58 ಪುರುಷ ಅಧೀನ ಅಧಿಕಾರಿಗಳೊಂದಿಗೆ ಸಂಬಂಧವನ್ನು ಹೊಂದಿರೋ ಆರೋಪ ಕೇಳಿಬಂದಿದೆ. ಈ ಯಾಂಗ್‌ಗೆ 13 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಮಿಲಿಯನ್ ಯುವಾನ್ ಅಂದ್ರೆ ₹1.18 ಕೋಟಿ ದಂಡ ವಿಧಿಸಲಾಗಿದೆ
ಜನವರಿಯಲ್ಲಿ ಗ್ವಿಝೌ Guizhou ರೇಡಿಯೋ ಮತ್ತು ಟೆಲಿವಿಷನ್ ನಿರ್ಮಿಸಿದ ಸಾಕ್ಷ್ಯಚಿತ್ರವು ಜಾಂಗ್ ಅವರ ವಿವಾದಗಳನ್ನು ಬಹಿರಂಗಪಡಿಸಿತು. ಜಾಂಗ್ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಮತ್ತು ಸರ್ಕಾರದ ಹೂಡಿಕೆಯ ನೆಪದಲ್ಲಿ ಅವರು ಒಲವು ತೋರಿದ ಕಂಪನಿಗಳಿಗೆ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಡಲು ತಮ್ಮ ಸ್ಥಾನವನ್ನು ಬಳಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತನ್ನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಉದ್ಯಮಿಯೊಬ್ಬರಿಗೆ ಹೈಟೆಕ್ ಕೈಗಾರಿಕಾ ಎಸ್ಟೇಟ್‌ನಲ್ಲಿ ಭೂಮಿಯನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
58 ಪುರುಷ ಅಧೀನ ಅಧಿಕಾರಿಗಳೊಂದಿಗೆ ವ್ಯವಹಾರಗಳು
ಭ್ರಷ್ಟಾಚಾರದ ಜೊತೆಗೆ, 58 ಪುರುಷ ಅಧೀನ ಅಧಿಕಾರಿಗಳೊಂದಿಗೆ ಝಾಂಗ್ ಅನುಚಿತ ಸಂಬಂಧವನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಕೆಲವು ವ್ಯಕ್ತಿಗಳು ವೈಯಕ್ತಿಕ ಲಾಭಕ್ಕಾಗಿ ಈ ಸಂಬಂಧ ಇಟ್ಟುಕೊಂಡಿದ್ರೆ , ಇತರರು ಇವಳ ಅಧಿಕಾರದ ಭಯದಿಂದ ಹಾಗೆ ಮಾಡಿದ್ದಾರೆ ಎಂದು ವರದಿಯಾಗಿದೆ. ಜಾಂಗ್ ತನ್ನ ಪ್ರೇಮಿಗಳೊಂದಿಗೆ ಸಮಯ ಕಳೆಯಲು ಸರ್ಕಾರಿ ಹಣ ಬಳಸುತ್ತಿದ್ದಳಂತೆ..ಅಲ್ಲದೇ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಳು ಎಂದು ವರದಿಯಾಗಿದೆ.
ಗ್ವಿಝೌ ಪ್ರಾಂತೀಯ ಶಿಸ್ತು ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿಯು 2023 ರಲ್ಲಿ ಝಾಂಗ್‌ನ ಚಟುವಟಿಕೆಗಳ ಕುರಿತು ತನಿಖೆಯನ್ನು ಪ್ರಾರಂಭಿಸಿತು. ತೀವ್ರ ಶಿಸ್ತು ಮತ್ತು ಕಾನೂನು ಉಲ್ಲಂಘನೆಗಳನ್ನು ಬಹಿರಂಗಪಡಿಸಿತು. ಸಾಕ್ಷ್ಯಚಿತ್ರದ ಬಿಡುಗಡೆಯ ನಂತರ ತನಿಖೆ ತೀವ್ರಗೊಂಡಿತು ಹಾಗೂ ಏಪ್ರಿಲ್ 2023 ರ ಹೊತ್ತಿಗೆ ಝಾಂಗ್ ಅನ್ನು ಬಂಧಿಸಲಾಯಿತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ಅವಳನ್ನು ಅಧಿಕೃತವಾಗಿ ತನ್ನ ಕಛೇರಿಯಿಂದ ತೆಗೆದುಹಾಕಲಾಯಿತು. ಕಮ್ಯುನಿಸ್ಟ್ ಪಕ್ಷದಿಂದ ಹೊರಹಾಕಲಾಯಿತು. ಸದ್ಯ ಈಕೆಗೆ ಈಗ 13 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ..