ಪಂತ್ ಶೈನ್.. ರಾಹುಲ್ ಸೈಡ್ ಲೈನ್ – ಬ್ಯಾಟಿಂಗ್ ಆರ್ಡರ್ ನಿಂದ BAD LUCK 
KL ಕರಿಯರ್.. DANGER ZONE 

ಪಂತ್ ಶೈನ್.. ರಾಹುಲ್ ಸೈಡ್ ಲೈನ್ – ಬ್ಯಾಟಿಂಗ್ ಆರ್ಡರ್ ನಿಂದ BAD LUCK KL ಕರಿಯರ್.. DANGER ZONE 

 ಮೊದಲ ಟೆಸ್ಟ್ ಮ್ಯಾಚ್​ನಲ್ಲಿ ಬಾಂಗ್ಲಾದೇಶವನ್ನ ಬಗ್ಗುಬಡಿದಿರೋ ಟೀಂ ಇಂಡಿಯಾ ಸೆಕೆಂಡ್ ಮ್ಯಾಚ್​ಗೆ ಭರ್ಜರಿ ಕಸರತ್ತು ನಡೆಸ್ತಿದೆ. ಮೊದಲ ಪಂದ್ಯ ಆಡಿದ್ದ ಆಟಗಾರರೇ ಸೆಕೆಂಡ್ ಮ್ಯಾಚ್​ಗೂ ಕಂಟಿನ್ಯೂ ಮಾಡಲಾಗಿದೆ. ಆದ್ರೆ ಕನ್ನಡಿಗರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಕೆಎಲ್ ರಾಹುಲ್​ಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡ್ತಾರೋ ಇಲ್ಲ ಮತ್ತೊಮ್ಮೆ ಸೈಡ್​ಲೈನ್ ಮಾಡ್ತಾರೋ ಅನ್ನೋದು. ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿ ಎಡವುತ್ತಿರೋ ರಾಹುಲ್​ರ ಕ್ರಿಕೆಟ್ ಕರಿಯರೇ ಈಗ ಡೇಂಜರ್ ಜೋನ್​ನಲ್ಲಿದೆ. ಅದಕ್ಕೆ ತಕ್ಕನಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಪ್ರಯೋಗ ಕೂಡ ಕೆಎಲ್​ಗೆ ಹಿನ್ನಡೆ ಉಂಟು ಮಾಡ್ತಿದೆ. ಅಷ್ಟಕ್ಕೂ ಟೀಂ ಇಂಡಿಯಾದಲ್ಲಿ ರಾಹುಲ್​ಗೆ ಅನ್ಯಾಯ ಆಗ್ತಿದ್ಯಾ? ಪಂತ್ ಎಂಟ್ರಿಯಿಂದ ಕೆಎಲ್ ಕ್ರಿಕೆಟ್ ಕರಿಯರ್ ಮೇಲೆ ಪರಿಣಾಮ ಬೀರುತ್ತಿದ್ಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗೂಗ್ಲಿಗೆ ಬೋಲ್ಡ್ ಆದ ಪೃಥಿ – ಬಾಲ್ಯದ ಗೆಳತಿಯೇ ಆರ್.‌ ಅಶ್ವಿನ್ ಸಂಗಾತಿ!

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಮ್ಯಾಚ್​​ನಲ್ಲಿ ಬಾಂಗ್ಲಾದೇಶ ತಂಡವನ್ನು 280 ರನ್‌ಗಳ ಬೃಹತ್ ಅಂತರದಿಂದ ಭಾರತ ಸೋಲಿಸಿದೆ. ಮೊದಲ ದಿನ ಮೊದಲ ಸೆಷನ್ ನಲ್ಲಿ ಭಾರತಕ್ಕೆ ಆಘಾತ ಎದುರಾಗಿದ್ದು ಬಿಟ್ರೆ ಟೀಂ ಇಂಡಿಯಾ ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿತ್ತು. ಬಟ್ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಷ್ಟೇನು ಸದ್ದು ಮಾಡ್ಲಿಲ್ಲ. ಹಾಗೇ ಕೆಎಲ್ ರಾಹುಲ್ ಕೂಡ ಶೈನ್ ಆಗ್ಲಿಲ್ಲ. ರೋಹಿತ್ & ಕೊಹ್ಲಿ ಲೆಜೆಂಡರಿ ಕ್ರಿಕೆಟರ್ಸ್ ಆಗಿರೋದ್ರಿಂದ ಅವ್ರು ಆಡಿದ್ರೂ ಆಡದೇ ಇದ್ರೂ ತಂಡದಲ್ಲಿ ಅವ್ರ ಸ್ಥಾನವಂತೂ ಖಚಿತ. ಬಟ್ ಈಗ ಕಾಡ್ತಿರೋ ಪ್ರಶ್ನೆ ಮುಂದಿನ ಪಂದ್ಯಗಳಿಗೆ ಕೆಎಲ್​ರನ್ನ ಪರಿಗಣನೆ ಮಾಡ್ತಾರಾ ಅನ್ನೋದು.

ಎರಡನೇ ಇನ್ನಿಂಗ್ಸ್​ ನಲ್ಲಿ ರಾಹುಲ್ ಗೆ ಸಿಗ್ಲಿಲ್ಲ ಬಿಗ್ ಸ್ಕೋರ್ ಚಾನ್ಸ್!

ಚೆನ್ನೈ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಸಂಕಷ್ಟದ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದಿದ್ದ ಕೆಎಲ್ ರಾಹುಲ್ 52 ಎಸೆತಗಳಲ್ಲಿ 16 ರನ್ ಗಳಿಸಿ ಔಟ್ ಆದ್ರು. ಭಾರೀ ಇನ್ನಿಂಗ್ಸ್ ಆಡುವ ಅವಕಾಶ ಸಿಕ್ಕರೂ ಬಳಸಿಕೊಳ್ಳದೆ ಕೈ ಜಾರಿದ್ದರು. ಇದರೊಂದಿಗೆ 2ನೇ ಇನ್ನಿಂಗ್ಸ್ ನಲ್ಲಾದರೂ ಭರ್ಜರಿ ಬ್ಯಾಟಿಂಗ್ ನಿರೀಕ್ಷೆ ಮಾಡಲಾಗಿತ್ತು. 19 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 22 ರನ್ ರಾಹುಲ್ ಗಳಿಸಿ ಲಯಕ್ಕೆ ಬಂದಿದ್ದರು. ಅಲ್ಲದೇ ಒಳ್ಳೆಯ ಇನ್ನಿಂಗ್ಸ್ ನಿರೀಕ್ಷೆ ಮೂಡಿಸಿದ್ರು. ಬಟ್ ಅಷ್ಟ್ರಲ್ಲೇ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ರು.  ಹಾಗೇನಾದ್ರೂ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕನಿಷ್ಠ ಆಫ್ ಸೆಂಚುರಿ ಸಿಡಿಸಿದ್ರೂ ಕೂಡ  ಬಿಗ್ ಬೂಸ್ಟ್​ ಸಿಗುತ್ತಿತ್ತು. ಆದರೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರು. ಸುದೀರ್ಘ ಟೆಸ್ಟ್ ಸೀಜನ್ ಇರೋದ್ರಿಂದ ರಾಹುಲ್ ಗೆ  ಮಿಡಲ್ ಅರ್ಡರ್ ಬ್ಯಾಟರ್ ಫಾರ್ಮ್ ಗೆ ಮರಳುವುದು ತುಂಬಾನೇ ಇಂಪಾರ್ಟೆಂಟ್ ಆಗಿತ್ತು. ಬಟ್ ಆ ಚಾನ್ಸ್ ಕೂಡ ಮಿಸ್ ಆಗಿ ಹೋಯ್ತು.

ಟೀಂ ಇಂಡಿಯಾಗೆ ಮಿಡಲ್ ಆರ್ಡರ್ ನಲ್ಲಿ ಮೇನ್ ಪಿಲ್ಲರ್!

ಸದ್ಯ ಕ್ರಿಕೆಟ್ ದುನಿಯಾದ ಕ್ಲಾಸ್ ಬ್ಯಾಟರ್‌ಗಳಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರಮುಖರು. ಅದ್ರಲ್ಲೀ ಒನ್​ಡೇ ಫಾರ್ಮೆಟ್​ನಲ್ಲಿ ಟೀಂ ಇಂಡಿಯಾದ ಕೀ ಪ್ಲೇಯರ್. ಕಳೆದ 3 ವರ್ಷಗಳಿಂದಲೂ ತಂಡದ ಮಿಡಲ್ ಅರ್ಡರ್ ಬ್ಯಾಟಿಂಗ್‌ನ ಮೇನ್ ಪಿಲ್ಲರ್ ಆಗಿದ್ದಾರೆ/ ಕಳೆದ ವರ್ಷ ನಡೆದ ಏಕದಿನ ಟೂರ್ನಿಯೇ ಅದಕ್ಕೆ ಸಾಕ್ಷಿ.  ಟೂರ್ನಿಯಲ್ಲಿ ಅಬ್ಬರಿಸಿದ್ದ ರಾಹುಲ್, 11 ಪಂದ್ಯಗಳಿಂದ 75.33ರ ಸರಾಸರಿಯಲ್ಲಿ 452 ರನ್ ಕಲೆಹಾಕಿದ್ರು. ಏಕದಿನ ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲೂ ರಾಹುಲ್ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನಾಡಿದ್ದಾರೆ. 2021ರಲ್ಲಿ ಲಾರ್ಡ್ಸ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಶತಕ ಬಾರಿಸಿದ್ರು. ಆ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ರು. ಇನ್ನು ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ಮಿಂಚಿದ್ರು. ಇವೆರೆಡು ಇನ್ನಿಂಗ್ಸ್‌ಗಳೇ ಸಾಕು, ರಾಹುಲ್ ವರ್ಲ್ಡ್‌ ಕ್ಲಾಸ್ ಬ್ಯಾಟ್ಸ್‌ಮನ್ ಅಂತ ಹೇಳೋದಕ್ಕೆ. ಇಷ್ಟೆಲ್ಲಾ ಇದ್ರೂ ರಾಹುಲ್‌ಗೆ  ಮಾತ್ರ ತಂಡದಲ್ಲಿ ಪದೇ ಪದೇ ಅನ್ಯಾಯ ಮಾಡಲಾಗ್ತಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ರಾಹುಲ್‌ಗೆ ಅನ್ಯಾಯವಾಗಿದೆ.

ಒನ್ ಡೌನ್ ಆರ್ಡರ್ ನಲ್ಲಿ ಬ್ಯಾಟಿಂಗ್ ಗೆ ಕಳಿಸಿದ್ದೇಕೆ?

ಟೆಸ್ಟ್ ಕ್ರಿಕೆಟ್​ನಲ್ಲಿ ತಾಳ್ಮೆಯ ಆಟವಾಡುವ ಕೆಎಲ್ ರಾಹುಲ್, ಈವರೆಗೂ 8 ಶತಕಗಳನ್ನ ಬಾರಿಸಿದ್ದಾರೆ. ಇದ್ರಲ್ಲಿ 7 ಶತಕಗಳು ವಿದೇಶದಲ್ಲಿ ಸಿಡಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎರಡೆರೆಡು ಶತಕ ಅಂದ್ರೆ, ಸಾಮಾನ್ಯ ಸಾಧನೆ ಅಲ್ಲ. ಇಷ್ಟೆಲ್ಲಾ ಇದ್ರೂ ರಾಹುಲ್ ಟ್ಯಾಲೆಂಟ್ ಮತ್ತು ಸಾಮರ್ಥ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ.  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಪಡೆ, 34 ರನ್‌ಗೆ 3 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ರಾಹುಲ್ ಕ್ರೀಸ್​ಗೆ ಇಳಿತಾರೆ ಅಂತ ಎಲ್ಲಾ ಅಂದುಕೊಂಡಿದ್ರು. ಯಾಕಂದ್ರೆ ಪಂತ್‌ಗೆ ಕಂಪೇರ್ ಮಾಡಿದ್ರೆ, ರಾಹುಲ್ ಟಾಪ್ ಕ್ವಾಲಿಟಿ ಪ್ಲೇಯರ್. ಅನುಭವದಲ್ಲೂ ಸೀನಿಯರ್. ಹೀಗಿದ್ರೂ ರಾಹುಲ್ ಬದಲು ಪಂತ್ ಕಣಕ್ಕಿಳಿದ್ರು. 39 ರನ್‌ ಗಳಿಸಿ ಡೆಲ್ಲಿ ಡ್ಯಾಶರ್ ಪಂತ್ ಔಟಾದ್ರು. ರಾಹುಲ್ 6ನೇ ಕ್ರಮಾಂಕದಲ್ಲಿ ಆಡಿ 16 ರನ್‌ಗಳಿಸಿ ಔಟಾದ್ರು. ಇನ್ನು 2ನೇ ಇನ್ನಿಂಗ್ಸ್​ನಲ್ಲೂ ಅದೇ ಕಥೆ. ರಾಹುಲ್‌ಗಿಂತ ಮೊದಲೇ ರಿಷಭ್ ಪಂತ್​ರನ್ನ ಕಳಿಸಲಾಯ್ತು. ಭರ್ಜರಿ ಶತಕ ಸಿಡಿಸಿ ಪಂತ್ ಮಿಂಚಿದ್ರು. ಪಂತ್ ಒಬ್ಬ ಅಧ್ಬುತ ಆಟಗಾರ. ಅದ್ರಲ್ಲಿ ಎರಡು ಮಾತುಲ್ಲ. ಬಟ್ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್‌ಗೆ ತೆಗೆದುಕೊಂಡ ಇದೇ ನಿರ್ಧಾರ ಈಗ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ರಾಹುಲ್ ಮೇಲೆ ಅವ್ರಿಗೆ ನಂಬಿಕೆ ಇರಲಿಲ್ವಾ? ಯಾಕಂದ್ರೆ ಸಾಮಾನ್ಯವಾಗಿ ಎಡಗೈ ಸ್ಪಿನ್ನರ್ಗಳಿದ್ದಾಗ ಮಾತ್ರ ಎಡಗೈ ಬ್ಯಾಟರ್‌ಗಳನ್ನು ಕಳಿಸಲಾಗುತ್ತೆ.  ಪಂತ್‌ರನ್ನ ಕಳಿಸಿದಾಗ ಎಡಗೈ ಸ್ಪಿನ್ನರ್‌ಗಳು ಇರಲಿಲ್ಲ. ಇಷ್ಟಾದ್ರೂ ರಾಹುಲ್ ಬದಲು ಪಂತ್‌ರನ್ನ ಅಪ್ ದಿ ಆರ್ಡರ್ ಕಳಿಸಿದ್ಯಾಕೆ ಅನ್ನೋ ಪ್ರಶ್ನೆ ಮೂಡಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಪ್ರಯೋಗ ಮಾಡಿದ್ದ ಬಿಸಿಸಿಐ!

ರಾಹುಲ್​ಗೆ ಈ ರೀತಿಯ ಅನ್ಯಾಯ ಆಗಿದ್ದು ಇದೇ ಮೊದಲೇನೂ ಅಲ್ಲ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ರಾಹುಲ್‌ರನ್ನ ಸೈಡ್​ಲೈನ್ ಮಾಡಲಾಗಿತ್ತು. 6, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳಿಸಲಾಗಿತ್ತು. ಸೆಕೆಂಡ್ ಮ್ಯಾಚ್​ನಲ್ಲಿ ಡಕ್ ಔಟ್ ಆಗಿದ್ದಕ್ಕೆ ಸರಣಿಯ 3ನೇ ಏಕದಿನ ಪಂದ್ಯದ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿತ್ತು. ಹಾಗೆ ನೋಡಿದ್ರೆ ರಾಹುಲ್ ಒಬ್ಬರೇ ತಂಡದ ಸೋಲಿಗೆ ಕಾರಣರಾಗಿರಲಿಲ್ಲ.  ಹೀಗಿದ್ರೂ, ರಾಹುಲ್‌ರನ್ನ ಮಾತ್ರ ಡ್ರಾಪ್ ಮಾಡಲಾಗಿತ್ತು.

ಸದ್ಯ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ, ಆಲ್‌ರೌಂಡರ್ಸ್​ ಹಾಗೂ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದ್ದರು. ಉಳಿದಂತೆ ಟಾಪ್ ಆರ್ಡರ್​ನಲ್ಲಿ ನಾಯಕ ರೋಹಿತ್, ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ರನ್​ ಗಳಿಸಲು ವಿಫಲರಾಗಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಬ್ಬರ ತಲೆದಂಡವಾಗುವ ಸಾಧ್ಯತೆಗಳು ಹೆಚ್ಚಿವೆ. ರಾಹುಲ್ ಕೂಡ ತೀರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡ್ತಿದ್ದು ಈಸಿಯಾಗಿ ವಿಕೆಟ್ ಒಪ್ಪಿಸ್ತಿದ್ದಾರೆ. ಕೆಲ ಕ್ರಿಕೆಟ್ ಫ್ಯಾನ್ಸ್ ಕೂಡ ರಾಹುಲ್​ರನ್ನ ತಂಡದಿಂದ ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ಹೀಗೇ ಕಂಟಿನ್ಯೂ ಆದ್ರೆ ಕೆಎಲ್ ರಾಹುಲ್ ಕ್ರಿಕೆಟ್ ಕರಿಯರ್​ಗೆ ದೊಡ್ಡ ಪೆಟ್ಟು ಬೀಳೋದಂತೂ ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *