ಬಿಜೆಪಿ ವಿರುದ್ಧ ರೆಬೆಲ್ಸ್ RCB ಅಸ್ತ್ರ – ಯತ್ನಾಳ್ & ಈಶ್ವರಪ್ಪ ಪ್ಲ್ಯಾನ್ ಏನು?
ಬಿಎಸ್ ವೈ & ವಿಜಯೇಂದ್ರಗೆ ಬಿಗ್ ಶಾಕ್

ಬಿಜೆಪಿ ವಿರುದ್ಧ ರೆಬೆಲ್ಸ್ RCB ಅಸ್ತ್ರ – ಯತ್ನಾಳ್ & ಈಶ್ವರಪ್ಪ ಪ್ಲ್ಯಾನ್ ಏನು?ಬಿಎಸ್ ವೈ & ವಿಜಯೇಂದ್ರಗೆ ಬಿಗ್ ಶಾಕ್

ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಅನ್ನೋದು ಮುಚ್ಚಿಟ್ಟಿರೋ ವಿಚಾರವೇನೂ ಅಲ್ಲ. ಯಾವಾಗ ಬಿಎಸ್ ಯಡಿಯೂರಪ್ಪರ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ್ರೋ ಅಲ್ಲಿಂದ ಈಚೆಗೆ ಮತ್ತಷ್ಟು ಧಗಧಗಿಸೋಕೆ ಶುರು ಮಾಡಿದೆ. ಅದ್ರಲ್ಲೂ ಬಿಜೆಪಿಯಲ್ಲಿದ್ರೂ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿರೋ ಬಸನಗೌಡ ಪಾಟೀಲ್ ಯತ್ನಾಳ್ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕೇಸರಿ ಬ್ರಿಗೇಡ್​್ನ ರೆಬೆಲ್​ಗಳೆಲ್ಲಾ ಸೇರಿ ಆರ್​ಸಿಬಿ ಸಂಘ ಕಟ್ಟಿದ್ದಾರೆ. ಅಷ್ಟಕ್ಕೂ ಏನಿದು ಆರ್​ಸಿಬಿ ಸಂಘ? ಯಾರೆಲ್ಲಾ ಇದ್ದಾರೆ? ಇವ್ರ ಉದ್ದೇಶ ಏನು? ಕಮಲ ಕೋಟೆಯಲ್ಲಿ ಎದ್ದಿರೋ ಕಂಪನ ಎಂಥಾದ್ದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಯಲ್ಲಿ KL ಮೈಲುಗಲ್ಲು – 8,000 ರನ್ ಗಡಿ ದಾಟಿದ ಕನ್ನಡಿಗ

ಆರ್ ಸಿಬಿ ಕಟ್ಟಿದ ಯತ್ನಾಳ್!   

ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ಅಂತಾನೇ ಕರೆಸಿಕೊಳ್ಳೋ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ ಬದ್ಧ ವೈರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವಗಿರಿ ಸಿಗ್ಲಿಲ್ಲ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ್ಮೇಲೆ ವಿಪಕ್ಷನಾಯಕನೋ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವೋ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಬಟ್ ಅಲ್ಲಿಯೂ ಬಿಎಸ್​ವೈ ಪುತ್ರ ವಿಜಯೇಂದ್ರ ಬಂದು ಕೂತ್ರು. ಹೀಗಾಗಿ ಕುದ್ದು ಹೋಗಿದ್ದ ಯತ್ನಾಳ್ ಮತ್ತೊಬ್ಬ ರೆಬೆಲ್ ಲೀಡರ್ ಕೆಎಲ್ ಈಶ್ವರಪ್ಪ ಜೊತೆ ಸೇರಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಅಂತಾ ಹೊಸ ಸಂಘಟನೆ ಶುರು ಮಾಡಿದ್ದಾರೆ. ಈ ಹಿಂದೆ ಈಶ್ವರಪ್ಪನವರು ಪ್ರಾರಂಭಿಸಿದ್ದ ರಾಯಣ್ಣ ಬ್ರಿಗೇಡ್‌ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಿತ್ತು. ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾಗಿದ್ದ ರಾಯಣ್ಣ ಬ್ರಿಗೇಡ್ ಜೊತೆಗೆ ಇದೀಗ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಪಂಚಮಸಾಲಿ ಸಮುದಾಯವೂ ಜೊತೆಯಾಗಿದೆ. ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌ ಜೊತೆಗೆ ರಾಣಿ ಚೆನ್ನಮ್ಮ ಬ್ರಿಗೇಡ್‌ ಕಟ್ಟಲು ಈಶ್ವರಪ್ಪ ಹಾಗೂ ಯತ್ನಾಳ್ ಪ್ಲಾನ್ ಮಾಡಿದ್ದಾರೆ. ಅಕ್ಟೋಬರ್ 20ರಂದು ಬಾಗಲಕೋಟೆಯಲ್ಲಿ ನಡೆಯುವ ಸಂಘಟನೆಯ ಸಭೆಯಲ್ಲಿ ಈ ಕುರಿತ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಅತೃಪ್ತ ನಡೆ, ಪಕ್ಷದಿಂದ ಉಚ್ಚಾಟಿತಗೊಂಡ ಈಶ್ವರಪ್ಪ ಗೆ ಯತ್ನಾಳ್ ಬೆಂಬಲದ ಬಗ್ಗೆಯೂ ಚರ್ಚೆ ನಡೆದಿದೆ. ಚೆನ್ನಮ್ಮ ರಾಯಣ್ಣ ಬ್ರಿಗೇಡ್ ಮಾಡುವ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ್ದ ಈಶ್ವರಪ್ಪ ಅವರು, ಯತ್ನಾಳ್ ನನ್ನನ್ನು ಸಿಎಂ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಹಾಗೇ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಯಣ್ಣ ಮತ್ತು ಚೆನ್ನಮ್ಮ ಒಟ್ಟಿಗೆ ರಕ್ತ ಹಚ್ಚಿಕೊಂಡು ಹುಟ್ಟಿದ್ದಾರೆ. ಅದೇ ರೀತಿ ಈಶ್ವರಪ್ಪ ಮತ್ತು ಯತ್ನಾಳ್ ಒಗ್ಗೂಡಿ ಚೆನ್ನಮ್ಮ ರಾಯಣ್ಣ ಬ್ರಿಗೇಡ್ ಮಾಡಲಿ ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಅಕ್ಟೋಬರ್ 20ರಂದು ರಾಯಣ್ಣ ಬ್ರಿಗೇಡ್ ಸಲುವಾಗಿ ಕೂಡಲಸಂಗಮದಲ್ಲಿ ಸಭೆ ನಡೆಸಿಲಿದ್ದೇವೆ. ರಾಜ್ಯದ್ಯಂತ ಹಿಂದುಳಿದ ವರ್ಗಗಳ ಸುಮಾರು 2.000 ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಎಲ್ಲವೂ ನಿರ್ಧಾರ ಆಗುತ್ತೆ ಎಂದಿದ್ದಾರೆ.

ಇಲ್ಲಿ ಇನ್ನೊಂದು ವಿಚಾರ ಅಂದ್ರೆ ಬಸನಗೌಡ ಪಾಟೀಲ್ ಯತ್ನಾಳ್​ಗೆ ರಮೇಶ್ ಜಾರಕಿಹೊಳಿ ಅವ್ರ ಬೆಂಬಲವೂ ಇದೆ. ಈ ಬ್ರಿಗೇಡ್ ಬಗ್ಗೆ ಮಾತನಾಡಿರೋ ಯತ್ನಾಳ್, ರಾಜ್ಯದಲ್ಲಿ ಸಿದ್ದರಾಮಯ್ಯನ ಬಿಟ್ರೆ ಈಶ್ವರಪ್ಪರೇ ಕಿಂಗ್. ಈಶ್ವರಪ್ಪಗೆ ಯಾರು ಅನ್ಯಾಯ ಮಾಡಿದ್ದಾರೆ ಅಂತಾ ನಿಮಗೂ ಗೊತ್ತು, ನಮಗೂ ಗೊತ್ತು. ಕೆಎಸ್ ಈಶ್ವರಪ್ಪನ ಮತ್ತೆ ವಾಪಸ್ ಕರ್ಕೊಂಡ ಹೋಗ್ತಿವಿ, ಈಶ್ವರಪ್ಪನ ಸಿಎಂ ಮಾಡೋತನಕ ನಾವು ಬಿಡೋದಿಲ್ಲ ಎಂದು ಶಪಥ ಮಾಡಿದ್ದಾರೆ. ಇದೇ ವೇಳೆ ಬಿಎಸ್​​ವೈ ಮತ್ತು ವಿಜಯೇಂದ್ರ ವಿರುದ್ಧ ಕಿಡಿಕಾರಿರೋ ಯತ್ನಾಳ್, ಯಾರು ಹಿಂದೂ ಪರವಾಗಿ ಮಾತಾಡ್ತಾರೆ ಅವರು ಟಾರ್ಗೆಟ್ ಆಗ್ತಾರೆ. ಯಾರು ಅಡ್ಜಸ್ಟ್ಮೆಂಟ್ ಮಾಡ್ತಿಕೊಳ್ಳುತ್ತಿದ್ದಾರೆ ಅವರು ಅಧಿಕಾರ ಅನುಭವಿಸುತ್ತಿದ್ದಾರೆ. ಇಬ್ಬರು ಮಕ್ಕಳು ಆರಿಸಿ ಬಂದು ಬರೆ ಸುಮ್ಮ ಪಾದಯಾತ್ರೆ ಮಾಡೋದು, ವಿಧಾನಸೌಧ ಒಳಗೆ ತೀವ್ರವಾಗಿ ಖಂಡಿಸುತ್ತೇನೆ ಅನ್ನೋದೂ, ಹೊರಗೆ ಬಂದು ಹಲ್ಲು ಕಿಸಿಯೋದು ಅಷ್ಟೇ ಎಂದು ಲೇವಡಿ ಮಾಡಿದ್ದಾರೆ. ಹಾಗೇ ರಾಯಣ್ಣ ಚನ್ನಮ್ಮ ಬ್ರಿಗೇಡ್​​ನ ಬಲಿಷ್ಠಗೊಳಿಸೋದಾಗಿ ಸವಾಲು ಹಾಕಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *