RCBನಂತೆ ಫಸ್ಟ್ ಡೇ ಬುಲ್ಸ್ ಕಾಳಗ – ತೆಲುಗು ಟೈಟಾನ್ಸ್ ಗೆ ಗೂಳಿಗಳ ಸವಾಲ್
PKL ಶೆಡ್ಯೂಲ್ ಔಟ್.. ಫೈನಲ್ ಎಲ್ಲಿ?

RCBನಂತೆ ಫಸ್ಟ್ ಡೇ ಬುಲ್ಸ್ ಕಾಳಗ – ತೆಲುಗು ಟೈಟಾನ್ಸ್ ಗೆ ಗೂಳಿಗಳ ಸವಾಲ್PKL ಶೆಡ್ಯೂಲ್ ಔಟ್.. ಫೈನಲ್ ಎಲ್ಲಿ?

ಬೇಟೆಗಾರರ ಬೇಟೆಯಾಡೋ ರಣಬೇಟೆಗಾರರು. ಮದಗಜಗಳನ್ನೂ ಮಕಾಡೆ ಮಲಗಿಸುವಂಥ ಛಲದಂಕಮಲ್ಲರು. ಕಂಬದಂತೆ ಕಟ್ಟುಮಸ್ತಾದ ಕಾಲುಗಳನ್ನೇ ಹಿಡಿದು ಕೆಡವಬಲ್ಲ ಬಲಶಾಲಿಗಳು. ಕೊಬ್ಬಿದ ಗೂಳಿಗಳಂತೆ ಮೈಕಟ್ಟನ್ನ ಹುರಿಗೊಳಿಸಿ ಎದುರಾಳಿಗಳ ಎದೆನಡುಗಿಸೋಕೆ ಕಬಡ್ಡಿ ಕಲಿಗಳೆಲ್ಲಾ ರೆಡಿಯಾಗಿದ್ದಾರೆ. ಕದನ ಕಣದಲ್ಲಿ ಸೆಣಸಾಡೋಕೆ ಇದೀಗ ಮುಹೂರ್ತ ಕೂಡ ಇಟ್ಟಾಗಿದೆ. ಜಗತ್ತಿನ ಅತಿದೊಡ್ಡ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಗೆ ಶೆಡ್ಯೂಲ್ ರಿಲೀಸ್ ಆಗಿದೆ. ಅಕ್ಟೋಬರ್ 8 ರಿಂದ ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಳ್ಳಲಿರುವ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮೊದಲ ದಿನವೇ ತೊಡೆ ತಟ್ಟಲಿದ್ದಾರೆ. ಅಷ್ಟಕ್ಕೂ ಎಲ್ಲೆಲ್ಲಿ ಪಂದ್ಯಗಳು ನಡೆಯಲಿವೆ? ಈ ಬಾರಿ ಏನೆಲ್ಲಾ ರೂಲ್ಸ್ ಇರಲಿದೆ? ಫೈನಲ್ ಯಾವಾಗ? ಬೆಂಗಳೂರು ಬುಲ್ಡ್ ಪಂದ್ಯಗಳು ಯಾವಾಗ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ – ಈ ಕೆಲಸ ಮಾಡಿಲ್ಲ ಅಂದ್ರೆ ಬೀಳುತ್ತೆ ದಂಡ

ಕಬಡ್ಡಿ ಪ್ರೇಮಿಗಳೆಲ್ಲಾ ಕಾಯ್ತಾ ಇದ್ದ ಗಳಿಗೆ ಬಂದೇ ಬಿಟ್ಟಿದೆ. ಪ್ರೊ ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 11ಗೆ ಟೈಮ್ ಟೇಬಲ್ ರಿಲೀಸ್ ಆಗಿದೆ. ಹೈದಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣ ಮೊದಲ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಫಸ್ಟ್ ಫೈಟ್​​ನಲ್ಲೇ ಸ್ಟಾರ್ ವಾರ್ ಫಿಕ್ಸ್ ಆಗಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನ ಎಲ್ಲಾ ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. 2ನೇ ಹಂತವಾಗಿ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲಿದ್ದು, ನವೆಂಬರ್ 10 ರಿಂದ ಡಿಸೆಂಬರ್ 1 ರವರೆಗೆ ನಡೆಯುತ್ತದೆ. 3ನೇ ಹಂತದಲ್ಲಿ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ನಡೆಯಲಿದೆ. ಒಟ್ಟು 12 ತಂಡಗಳು ಕಣಕ್ಕಿಳಿಯಲಿದ್ದು, ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯವು ರಾತ್ರಿ 8 ಗಂಟೆಯಿಂದ ಶುರುವಾದರೆ, 2ನೇ ಪಂದ್ಯವು ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಐಪಿಎಲ್​ನಂತೆಯೇ ಈ ಬಾರಿಯ ಕಬಡ್ಡಿಯಲ್ಲೂ ಕೂಡ ಉದ್ಘಾಟನಾ ಪಂದ್ಯದಲ್ಲೇ ನಮ್ಮ ಬೆಂಗಳೂರು ಬಾಯ್ಸ್ ಕಣಕ್ಕಿಳಿಯಲಿದ್ದಾರೆ. ಭರ್ಜರಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿರುವ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ವೇಳಾಪಟ್ಟಿ ಹೇಗಿದೆ ಅನ್ನೋ ವಿವರ ಇಲ್ಲಿದೆ.

ಬೆಂಗಳೂರು ತಂಡದ ವೇಳಾ ಪಟ್ಟಿ

ದಿನಾಂಕ                   ವಿರುದ್ಧ                        ಸಮಯ

  • ಅ.18             ತೆಲಗು ಟೈಟನ್ಸ್‌                    ರಾತ್ರಿ 8ಕ್ಕೆ
  • ಅ.20            ಗುಜರಾತ್ ಜೈಂಟ್ಸ್                ರಾತ್ರಿ 9ಕ್ಕೆ
  • ಅ.25             ಪುಣೇರಿ ಪಲ್ಟನ್‌                   ರಾತ್ರಿ 9ಕ್ಕೆ
  • ಅ.29            ದಬಾಂಗ್‌ ದೆಹಲಿ ಕೆ.ಸಿ               ರಾತ್ರಿ 9ಕ್ಕೆ
  • ನ.02             ತೆಲಗು ಟೈಟನ್ಸ್‌                       ರಾತ್ರಿ 8ಕ್ಕೆ
  • ನ.04             ತಮಿಳು ತಲೈವಾಸ್                  ರಾತ್ರಿ 8ಕ್ಕೆ
  • ನ.09               ಬಂಗಾಳ ವಾರಿಯರ್ಸ್‌               ರಾತ್ರಿ 9ಕ್ಕೆ
  • ನ.12             ಜೈಪುರ್ ಪಿಂಕ್ ಪ್ಯಾಂಥರ್ಸ್‌             ರಾತ್ರಿ 8ಕ್ಕೆ
  • ನ.16              ದಬಾಂಗ್‌ ದೆಹಲಿ ಕೆ.ಸಿ                  ರಾತ್ರಿ 9ಕ್ಕೆ
  • ನ.18                 ಯು-ಮುಂಬಾ                       ರಾತ್ರಿ 8ಕ್ಕೆ
  • ನ.19                  ಪಾಟ್ನಾ ಪೈರೇಟ್ಸ್‌                     ರಾತ್ರಿ 9ಕ್ಕೆ
  • ನ.21               ಹರಿಯಾಣ ಸ್ಟೀಲರ್ಸ್‌                   ರಾತ್ರಿ 8ಕ್ಕೆ
  • ನ.25                 ಯು-ಮುಂಬಾ                         ರಾತ್ರಿ 8ಕ್ಕೆ
  • ನ.30                  ಪಾಟ್ನಾ ಪೈರೇಟ್ಸ್‌                     ರಾತ್ರಿ 8ಕ್ಕೆ
  • ಡಿ.03                ಗುಜರಾತ್ ಜೈಂಟ್ಸ್‌                    ರಾತ್ರಿ 8ಕ್ಕೆ
  • ಡಿ.10                   ಬಂಗಾಳ ವಾರಿಯರ್ಸ್‌                 ರಾತ್ರಿ 9ಕ್ಕೆ
  • ಡಿ.11                    ಹರಿಯಾಣ ಸ್ಟೀಲರ್ಸ್‌                  ರಾತ್ರಿ 8ಕ್ಕೆ
  • ಡಿ.13                 ಪುಣೇರಿ ಪಲ್ಟನ್‌                         ರಾತ್ರಿ 9ಕ್ಕೆ
  • ಡಿ.17                ಜೈಪೂರ್ ಪಿಂಕ್ ಪ್ಯಾಂಥರ್ಸ್‌                 ರಾತ್ರಿ 9ಕ್ಕೆ
  • ಡಿ.22                    ತಮಿಳು ತಲೈವಾಸ್‌                    ರಾತ್ರಿ 8ಕ್ಕೆ
  • ಡಿ.24                   ಯುಪಿ ಯೋಧಾಸ್‌                     ರಾತ್ರಿ 8ಕ್ಕೆ

ಹೀಗೆ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಒಟ್ಟು 221 ಪಂದ್ಯಗಳನ್ನ ಆಡಲಿದೆ. ಅದ್ರಲ್ಲೂ ಸೀಸನ್​​​ನ ಮೊದಲ ಪಂದ್ಯದಲ್ಲೇ ಗೂಳಿಗಳ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ. ಬುಲ್ಸ್​ ಪಡೆಯ ಡುಬ್ಕಿ ಕಿಂಗ್ ಪ್ರದೀಪ್ ನರ್ವಾಲ್ ಹಾಗೇ ತೆಲುವು ಟೈಟನ್ಸ್​ನ ಪವನ್ ಸೆಹ್ರಾವತ್ ಮುಖಾಮುಖಿಯಾಗ್ತಿದ್ದು ಸ್ಟಾರ್​ವಾರ್ ಅಂತೂ ಪಕ್ಕಾ ಇರಲಿದೆ. ಇನ್ನು ಈ ಆವೃತ್ತಿಯು ಕೇವಲ ಮೂರು ನಗರಗಳಲ್ಲಿ ಮಾತ್ರ ನಡೀತಾ ಇರೋದು ವಿಶೇಷ. ಆದರೆ ಪ್ಲೇಆಫ್‌ಗಳ ವೇಳಾಪಟ್ಟಿ ಮತ್ತು ಅದರ ಪಂದ್ಯಗಳು ನಡೆಯುವ ಸ್ಥಳವನ್ನು ಲೀಗ್​ನ ಕೊನೆಯ ಹಂತದಲ್ಲಿ ಪ್ರಕಟಿಸಲಾಗುತ್ತದೆ. ಇನ್ನು 10ನೇ ಆವೃತ್ತಿಯ ಲೀಗ್​​ನ ಫೈನಲ್​ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಪುಣೇರಿ ಪಲ್ಟನ್ ಚಾಂಪಿಯನ್ ಆಗಿತ್ತು. ಸೋ 11 ಆವೃತ್ತಿಗೆ ಎಲ್ಲಾ ತಂಡದಲ್ಲೂ ಚಾಂಪಿಯನ್ ಪಟ್ಟಕ್ಕೇರೋ ಟಾರ್ಗೆಟ್ ಇಟ್ಟುಕೊಂಡಿದ್ದು ಈಗಾಗ್ಲೇ ಬರ್ಜರಿ ಕಸರತ್ತನ್ನ ಆರಂಭಿಸಿದ್ದಾರೆ. ಬೆಂಗಳೂರು ಬುಲ್ಸ್ ತಯಾರಿ ಅಂತೂ ಇನ್ನೂ ಒಂದು ಕೈ ಜಾಸ್ತಿನೇ ಇದ್ದು, ಕರ್ನಾಟಕದ ಕಬಡ್ಡಿ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

Shwetha M