ಬಿಗ್ ಬಾಸ್ ನಿಂದ ಕಿಚ್ಚ ಔಟ್? -ವಾರದ ಕಥೆ ಯಾರ ಜೊತೆ?
ದೊಡ್ಮನೆ ಅಧಿಪತಿ ಇವರೇನಾ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್.. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 1ಗೆ ಕೌಂಟ್ ಡೌನ್ ಶುರುವಾಗಿದೆ.. ಮೊನ್ನೆ ಮೊನ್ನೆಯಷ್ಟೇ ಚಾನೆಲ್ ಶೋ ನ ಲೋಗೋ ಕೂಡ ರಿವೀಲ್ ಮಾಡಿದೆ.. ಆದ್ರೀಗ ಬಿಗ್‌ಬಾಸ್ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ ವೊಂದಿದೆ.. ಬಿಗ್ ಬಾಸ್ ಸೀಸನ್ 11 ನಲ್ಲಿ ಕಿಚ್ಚ ಸುದೀಪ್ ಹೋಸ್ಟ್ ಮಾಡಲ್ಲ ಅನ್ನೋದು.. ಹೌದು ಕಳೆದ ಒಂದು ತಿಂಗಳಿನಿಂದ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದ್ರೀಗ ಕಿಚ್ಚ ಶೋ ಹೋಸ್ಟ್ ಮಾಡ್ತಿಲ್ಲ ಅನ್ನೋದ್ರ ಬಗ್ಗೆ ಕಲರ್ಸ್ ಕನ್ನಡ ಕೂಡ ಸುಳಿವು ಕೊಟ್ಟಿದೆ.. ಅಷ್ಟಕ್ಕೂ ವಾಹಿನಿ ಕೊಟ್ಟ ಸುಳಿವೇನು? ಸುದೀಪ್ ಶೋ ಬಗ್ಗೆ ಹೇಳಿದ್ದೇನು? ಸುದೀಪ್ ಶೋ ನಿಂದ ಹೊರಗುಳಿದ್ರೆ, ಯಾರು ಹೋಸ್ಟ್ ಮಾಡ್ತಾರೆ? ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ಜನಾಂಗೀಯ ಹಿಂಸಾಚಾರದಲ್ಲಿ ನಲುಗಿದ ಮಣಿಪುರ – ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ
ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶೋ ನೋಡಲು ವೀಕ್ಷಕರು ಕಾದು ಕೂತಿದ್ದಾರೆ. ಈ ಬಾರಿಯ ಸೀಸನ್ ಗೆ ಯಾರ್ಯಾರು ಸ್ಪರ್ಧಿಗಳಾಗಿ ಭಾಗವಹಿಸ್ತಾರೆ ಅಂತಾ ಒಂದು ಕಡೆ ಕ್ಯೂರಿಯಾಸಿಟಿ ಇದ್ರೆ.. ಮತ್ತೊಂದ್ಕಡೆ ಕಡೆ ಕಿಚ್ಚ ಶೋ ಹೋಸ್ಟ್ ಮಾಡೋದು ಡೌಟ್ ಅಂತಾ ಹೇಳಲಾಗ್ತಿದೆ.. ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಕೂಡ ಹರಿದಾಡ್ತಾ ಇದೆ..
ಹೌದು, ಕಳೆದ 10 ವರ್ಷಗಳಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವನ್ನ ಕಿಚ್ಚ ಸುದೀಪ್ ಮುನ್ನಡೆಸಿಕೊಂಡು ಬಂದಿದ್ದಾರೆ.. ‘ಬಿಗ್ ಬಾಸ್’ ಎಂದರೆ ಎಲ್ಲರಿಗೂ ಥಟ್ ಅಂತ ನೆನಪಾಗೋದೇ ಸುದೀಪ್. ಈ ಶೋನ ಕಿಂಗ್ ಕಿಚ್ಚ ಅಂತಾನೇ ಹೇಳ್ಬೋದು.. ಈ ಶೋ ಅಷ್ಟು ಹಿಟ್ ಆಗಲು ಸುದೀಪ್ ಕಾರಣ.. ಶೋ ನೋಡದವರು ಕೂಡ ವೀಕೆಂಡ್ ಬರೋದನ್ನೇ ಕಾಯ್ತಾ ಇರ್ತಾರೆ. ಯಾಕಂದ್ರೆ ಕಿಚ್ಚನ ಖದರ್ ನೋಡೋದಿಕ್ಕೆ ವೀಕ್ಷಕರಿಗೂ ಇಷ್ಟ.. ಸ್ಪರ್ಧಿಗಳಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ತೆಗೆದುಕೊಳ್ಳುವ ಕ್ಲಾಸ್, ಕಿಚಾಯಿಸುವ ರೀತಿ, ಆಡುವ ಪ್ರತಿಯೊಂದು ಮಾತುಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಸುದೀಪ್ ಎಂಟ್ರಿಯಾಗ್ತಿದೆ ಅಂದ್ರೆ ಸ್ಪರ್ಧಿಗಳು ಕೂಡ ಅಲರ್ಟ್ ಆಗ್ತಿದ್ರು.. ಸುದೀಪ್ ಸರ್ ಅಂತಾ ಗೌರವ ಕೊಟ್ಟು ಮಾತಾಡ್ತಿದ್ರು.. ಆದ್ರೀಗ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಸುದೀಪ್ ಇರ್ತಾರಾ ಇಲ್ವಾ ಅನ್ನೋ ಅನುಮಾನ ವೀಕ್ಷಕರನ್ನ ಬಲವಾಗಿ ಕಾಡ್ತಿದೆ.. ಯಾಕಂದ್ರೆ ವಾಹಿನಿ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.. ಸುದೀಪ್ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ’ಸಿನಿಮಾಗೆ ನ್ಯಾಯ ಒದಗಿಸಲಾ? ಶೋಗೆ ನ್ಯಾಯ ಒದಗಿಸಲಾ? ನನಗೆ ನಾನು ನ್ಯಾಯ ಒದಗಿಸಿಕೊಳ್ಳಲಾ? ಶೋಗೆ ಟೈಮ್ ಕೊಟ್ಟಿದ್ದೇನೆ. ಶೋ ಮಾಡೋಕೆ ಇಂಟ್ರೆಸ್ಟ್ ಇದೆ. ಆದರೆ, ಕೆಲವೊಮ್ಮೆ ನಾವು ಮೂವ್ ಆನ್ ಆಗಬೇಕು ಅಂತಾ ಮಾತನಾಡಿದ್ರು..
ಅದಾದ್ಮೇಲೆ ಕಿಚ್ಚ ಕೆಲ ದಿನಗಳ ಹಿಂದೆ ವಾಹಿನಿ ಬಿಗ್ ಬಾಸ್ ಕನ್ನಡ ಲೋಗೋ ಕೂಡ ರಿಲೀಸ್ ಮಾಡಿತ್ತು.. ಅಲ್ಲೂ ಕೂಡ ವೀಕ್ಷಕರಿಗೆ ಶಾಕ್ ಎದುರಾಗಿತ್ತು.. ಆ ಪ್ರೋಮೋದಲ್ಲಿ ಕಿಚ್ಚನನ್ನ ತೋರ್ಸಿರ್ಲಿಲ್ಲ.. ವಾಯ್ಸ್ ಕೂಡ ಇರ್ಲಿಲ್ಲ.. ಬರಿ ಕಿಚ್ಚ ಸುದೀಪ್ ಹ್ಯಾಶ್ ಟ್ಯಾಗ್ ಮಾತ್ರ ಹಾಕಲಾಗಿತ್ತು.. ಈ ಹ್ಯಾಶ್ ಟ್ಯಾಗ್ ನೋಡಿದ ಫ್ಯಾನ್ಸ್ ಕಿಚ್ಚ ಈ ಬಾರಿ ಹೋಸ್ಟ್ ಮಾಡೋದು ಪಕ್ಕಾ ಅಂತಾ ಖುಷಿ ಪಟ್ಟಿದ್ರು.. ಆದ್ರೀಗ ಸುದೀಪ್ ಬರುತ್ತಾರೆ ಎಂದು ಕಾದು ಕೂತವರಿಗೆ ಕಲರ್ಸ್ ಕನ್ನಡ ಶಾಕ್ ಕೊಟ್ಟಿದೆ. ಸುದೀಪ್ ಬರೋದು ಅನುಮಾನವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕೆಲವು ವಾರಗಳ ಹಿಂದೆ ರಿಲೀಸ್ ಆಗಿದ್ದ ಪ್ರೋಮೋದಲ್ಲಿನ ಕಿಚ್ಚ ಸುದೀಪ್ ಎಂದು ಹಾಕಲಾಗಿದ್ದ ಹ್ಯಾಶ್ ಟ್ಯಾಗ್ ಅನ್ನ ತೆಗೆಯಲಾಗಿದೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಪ್ರೋಮೋ ಕ್ಯಾಪ್ಶನ್ ಎಡಿಟ್ ಮಾಡಲಾಗಿದೆ. ಕಿಚ್ಚ ಸುದೀಪ್ ಹ್ಯಾಶ್‌ಟ್ಯಾಗ್ ಕಾಣೆಯಾಗಿದೆ. ಬಿಗ್ ಬಾಸ್ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಇನ್‌ಸ್ಟ್ರಾಗ್ರಾಮ್‌ನಲ್ಲಿ ಪಿನ್ ಮಾಡಿ ಇಟ್ಟಿದೆ. ಈ ವಿಡಿಯೋಗೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಇದನ್ನು ಗಮನಿಸಿದ ಬಿಗ್‌ಬಾಸ್ ವೀಕ್ಷಕರು ಸುದೀಪ್ ಬಿಗ್‌ಬಾಸ್ ಕಾರ್ಯಕ್ರಮ ನಡೆಸಿಕೊಡಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮತ್ತೊಂದ್ಕಡೆ ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರೋಮೋ ಶೂಟ್ ಆಗಿದೆ ಅಂತಾ ಹೇಳಲಾಗ್ತಿದೆ. ಸುದೀಪ್ ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತು ಕೂಡ ಕೇಳಿಬಂದಿದೆ. ಆದ್ರೆ ಈ ಬಗ್ಗೆ ಕೂಡ ಅಧಿಕೃತ ಮಾಹಿತಿ ಇಲ್ಲ.. ಇದೀಗ ಕಿಚ್ಚನ ಹೆಸರು ಹ್ಯಾಶ್ ಟ್ಯಾಗ್ ನಿಂದ ತೆಗೆದು ಹಾಕಿರೋದ್ರಿಂದ ಮುಂದೇನಾಗುತ್ತೆ ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಬಿಗ್ ಬಾಸ್ ನಿಂದ ಹೊರ ಬಂದ್ರೆ ಶೋನ ಯಾರು ಹೋಸ್ಟ್ ಮಾಡ್ತಾರೆ ಅನ್ನೋ ಪ್ರಶ್ನೆ ಅನೇಕರನ್ನ ಕಾಡದೇ ಇರಲ್ಲ.. ಈ ಬಗ್ಗೆ ಕೂಡ ಭಾರಿ ಚರ್ಚೆ ಆಗ್ತಿದೆ.. ಮೂವರು ರೇಸ್ ನಲ್ಲಿದ್ದಾರೆ ಅಂತಾ ಹೇಳಲಾಗ್ತಿದೆ.. ಆ ಮೂವರು ಯಾರೆಲ್ಲಾ ಅಂದ್ರೆ.. ಕಾಂತಾರ ಹೀರೋ ರಿಷಭ್ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್.. ಈ ಮೂವರ ಪೈಕಿ ಯಾರಾದ್ರೂ ಒಬ್ರು ಬಿಗ್ ಬಾಸ್ ಹೋಸ್ಟ್ ಮಾಡ್ತಾರೆ ಅಂತಾ ಹೇಳಲಾಗ್ತಿದೆ.. ರಮೇಶ್ ಅರವಿಂದ್ ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹೋಸ್ಟ್ ಮಾಡಿದ್ದಾರೆ.. ಅಭಿಮಾನಿ ಬಳಗ ಕೂಡ ದೊಡ್ಡದಿದೆ.. ಹೀಗಾಗಿ ಬಿಗ್ ಬಾಸ್ ಹೋಸ್ಟ್ ಮಾಡಲು ಇವರಿಗೆ ಅವಕಾಶ ಸಿಗೋ ಚಾನ್ಸ್ ಸಿಗೋ ಸಾಧ್ಯತೆ ಹೆಚ್ಚು.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಸಾಕಷ್ಟು ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.. ನಟನೆ ಜೊತೆಗೆ ನಿರೂಪಣೆಯಲ್ಲೂ ಯಶಸ್ಸು ಕಂಡಿದ್ದಾರೆ. ಇವರು ಕೂಡ ಶೋ ನಡೆಸಲು ಬೆಸ್ಟ್ ಅನ್ನೋ ಚರ್ಚೆ ಕೂಡ ನಡೆದಿದೆ.
ಮತ್ತೊಂದ್ಕಡೆ ರಿಷಭ್ ಶೆಟ್ಟಿ ಹೆಸ್ರು ಕೂಡ ನಿರೂಪಕರ ಲಿಸ್ಟ್ ನಲ್ಲಿ ಇರೋದ್ರಿಂದ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.. ರಿಷಭ್ ಶೆಟ್ಟಿ ನಟನೆಯನ್ನ ಜನ ಮೆಚ್ಚಿಕೊಂಡಿದ್ದಾರೆ.. ಅಭಿಮಾನಿ ಬಳಗ ಕೂಡ ದೊಡ್ಡದಿದೆ.. ಆದ್ರೆ ಈ ವರೆಗೂ ರಿಷಭ್ ಎಲ್ಲೂ ನಿರೂಪಣೆ ಮಾಡಿಲ್ಲ.. ಅವರ ನಿರೂಪಣೆ ಹೇಗಿರಲಿದೆ ಅನ್ನೋ ಕುತೂಹಲ ಅನೇಕರಲ್ಲಿದೆ.
ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಯಾರು ಹೋಸ್ಟ್ ಮಾಡ್ತಾರೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿದೆ. ನಿರೂಪಕರು ಚೇಂಜ್ ಆದ್ರೆ ಟಿಆರ್ ಪಿ ಮೇಲೂ ದೊಡ್ಡ ಹೊಡೆತ ಬೀಳೋ ಚಾನ್ಸ್ ಇದೆ.. ಹೀಗಾಗಿ ವಾಹಿನಿ ಕೂಡ ಎಚ್ಚರಿಕೆಯ ಹೆಜ್ಜೆ ಇಡೋಕೆ ಮುಂದಾಗಿದೆ. ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಡುತ್ತಾರಾ? ಇಲ್ವಾ ಅನ್ನೋ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತ ಮಾಹಿತಿ ಸಿಗಲಿದೆ.