ಅಯೋಧ್ಯೆ ರಾಮ ಮಂದಿರದಿಂದ ಸರ್ಕಾರಕ್ಕೆ ಲಾಭ? – ದೇಗುಲದ ಜಿಎಸ್​ಟಿ ಮೊತ್ತ 400 ಕೋಟಿ ರೂ?

ಅಯೋಧ್ಯೆ ರಾಮ ಮಂದಿರದಿಂದ ಸರ್ಕಾರಕ್ಕೆ ಲಾಭ? – ದೇಗುಲದ ಜಿಎಸ್​ಟಿ ಮೊತ್ತ 400 ಕೋಟಿ ರೂ?

ಉತ್ತರ ಪ್ರದೇಶದ ಅಯೋಧ್ಯೆ ನಗರವು ಈಗ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಜನರು ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಆದ್ರೆ ದೇವಸ್ಥಾನದ ಸಂಕೀರ್ಣ ಪೂರ್ಣವಾಗಿ ಸಿದ್ಧವಾಗಿಲ್ಲ. ಇನ್ನೂ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಿಂದ 400 ಕೋಟಿ ರೂನಷ್ಟು ತೆರಿಗೆ ಸಂಗ್ರಹ ಆಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 16 ಟೈಗರ್ಸ್.. ಪ್ಲೇಯಿಂಗ್ 11 ಹೇಗೆ? – ಟೆಸ್ಟ್ ನಲ್ಲಿ ಸ್ಥಾನ ಉಳಿಸಿಕೊಳ್ತಾರಾ KL?

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ. ರಾಮ ಮಂದಿರದ ಸಮುಚ್ಚಯದಲ್ಲಿ ಒಟ್ಟು 18 ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಒಟ್ಟಾರೆ ವೆಚ್ಚ 1,800 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ರಾಮ ಮಂದಿರ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ 400 ಕೋಟಿ ರೂಪಾಯಿ ಜಿಎಸ್​ಟಿ ಆದಾಯ ಸಿಗಬಹುದು ಎಂದು ಹೇಳಿದ್ದಾರೆ.

ಇನ್ನು 70 ಎಕರೆ ಜಾಗದಲ್ಲಿರುವ ಕಾಂಪ್ಲೆಕ್ಸ್​ನಲ್ಲಿ ಒಟ್ಟು 18 ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ, ಶಬರಿ, ತುಳಸೀದಾಸರ ದೇವಸ್ಥಾನಗಳೂ ಇರುತ್ತವೆ. ನೂರಕ್ಕೆ ನೂರು ತೆರಿಗೆ ಕಟ್ಟುತ್ತೇವೆ. ಒಂದು ರುಪಾಯಿಯೂ ಚೌಕಾಸಿ ಮಾಡೋದಿಲ್ಲ,’ ಎಂದು ಚಂಪತ್ ರಾಯ್ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *