RCBಯ KGF ಗ್ಯಾಂಗ್ ಛಿದ್ರ.. ಫಾಫ್ & ಮ್ಯಾಕ್ಸ್ ವೆಲ್ ಗೆ ಗೇಟ್ ಪಾಸ್ – ಕ್ಯಾಪ್ಟನ್ ರೇಸ್.. ಯಾರಾಗ್ತಾರೆ BOSS?
ಆಟ ಅಂದ್ಮೇಲೆ ಸೋಲು ಗೆಲುವು ಕಾಮನ್. ಬಟ್ ಸ್ಪೋರ್ಟ್ಸ್ ಸ್ಪಿರಿಟ್ ಇರ್ಬೇಕು ಅನ್ನೋದನ್ನ ಆರ್‌ಸಿಬಿ ಫ್ಯಾನ್ಸ್ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ. ಸತತ 17 ವರ್ಷಗಳಿಂದ ಟ್ರೋಫಿ ಗೆಲ್ಲದೇ ಇದ್ರೂ ನಮ್ಮ ಸಪೋರ್ಟ್ ನಿಮಗೇ ಅಂತಾ ಬೆಂಗಳೂರು ತಂಡಕ್ಕೆ ಅನ್ಲಿಮಿಟೆಡ್ ಮೀಲ್ಸ್ ಥರ ಸಪೋರ್ಟ್ ಮಾಡ್ತಾನೇ ಬರ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕೂಡ ಕಪ್ ಗೆಲ್ಲದೇ ಇದ್ರೂ ಅಭಿಮಾನಿಗಳನ್ನ ಯಾವತ್ತೂ ನಿರಾಸೆ ಮಾಡಿಲ್ಲ. ತಮ್ಮ ಹೊಡಿಬಡಿ ಆಟದಿಂದಲೇ ಫುಲ್ ಎಂಟರ್ಟೈನ್ ಮಾಡ್ತಿದ್ದಾರೆ. ಬಟ್ 2025ರ ಐಪಿಎಲ್ಗೆ ಆರ್‌ಸಿಬಿ ಫ್ಯಾನ್ಸ್ ಕೆಲ ಸ್ಟಾರ್ ಹಿಟ್ಟರ್ಗಳನ್ನೇ ಮಿಸ್ ಮಾಡಿಕೊಳ್ಳಲಿದ್ದಾರೆ. ಅದ್ರಲ್ಲೂ ಕೆಜಿಎಫ್ ಗ್ಯಾಂಗ್ನ ಖದರ್ ಇನ್ಮುಂದೆ ನಿಮಗೆ ನೋಡೋಕೆ ಸಿಗಲ್ಲ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕ್ಯಾನ್ಸರ್ ಔಷಧಿ ತೆರಿಗೆ ಶೇಕಡಾ12 ರಿಂದ ಶೇಕಡಾ 5 ಕ್ಕೆ ಇಳಿಸಿದ ಸರ್ಕಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಘಟಾನುಘಟಿ ಆಟಗಾರರನ್ನೇ ಕಂಡಿರೋ ಟೀಂ. ಯುನಿವರ್ಸಲ್ ಬಾಸ್ ಕ್ರಿಸ್ಗೇಲ್, 360 ಡಿಗ್ರಿ ಖ್ಯಾತಿಯ ದಿಗ್ಗಜ ಬ್ಯಾಟರ್ ಎ.ಬಿ ಡಿವಿಲಿಯರ್ಸ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ ಹೀಗೆ ಸ್ಟಾರ್ ಆಟಗಾರರ ದಂಡೇ ಬೆಂಗಳೂರು ತಂಡವನ್ನ ಪ್ರತಿನಿಧಿಸಿದೆ. ಅದ್ರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಟೀಂ ಅಂದ್ರೆ ಕೆಜಿಎಫ್ ಗ್ಯಾಂಗ್ ಥಟ್ ಅಂತಾ ಕಣ್ಮುಂದೆ ಬರ್ತಿತ್ತು. ಕೆ ಅಂದ್ರೆ ಕೊಹ್ಲಿ, ಜಿ ಅಂದ್ರೆ ಗ್ಲೆನ್ ಮ್ಯಾಕ್ಸ್ ವೆಲ್, ಎಫ್ ಅಂದ್ರೆ ಫಾಫ್ ಡುಪ್ಲೆಸಿಸ್ ಅನ್ನೋದು ಅದ್ರ ಅರ್ಥ. ಈ ಮೂವರು ಮೈದಾನಕ್ಕಿಳಿದ್ರೆ ಬೆಂಗಳೂರು ತಂಡಕ್ಕೆ ಸೋಲೇ ಇಲ್ಲ ಅನ್ನೋದು ಫ್ಯಾನ್ಸ್ ಲೆಕ್ಕಾಚಾರ. ಬಟ್ 2025ರ ಐಪಿಎಲ್ಗೆ ಈ ಗ್ಯಾಂಗ್ ಛಿದ್ರವಾಗ್ತಿದೆ.
ಕೆಜಿಎಫ್ ಗ್ಯಾಂಗ್ ಛಿದ್ರ!
2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಹರಾಜಿಗೆ ಅಂತಿಮ ನಿಯಮಗಳನ್ನ ಬಿಸಿಸಿಐ ಸಿದ್ಧಪಡಿಸ್ತಿದೆ. ಸೋ ಈ ಆಕ್ಷನ್ಗೂ ಮುನ್ನ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನೇ ರಿಲೀಸ್ ಮಾಡಬೇಕಾಗುತ್ತೆ. ಅದ್ರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ರಿಲೀಸ್ ಆಗಲಿದ್ದಾರೆ ಎಂದು ನ್ಯಾಷನಲ್ ಮೀಡಿಯಾಗಳಲ್ಲಿ ವರದಿಯಾಗಿದೆ. ಈ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಆರ್‌ಸಿಬಿ ಫ್ರಾಂಚೈಸಿ ಒಲವು ತೋರಿಸಿಲ್ಲ. ಹೀಗಾಗಿ ಫಾಫ್ ಮತ್ತು ಮ್ಯಾಕ್ಸಿ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್ ಆಗಿದೆ. ಈ ಮೂಲಕ ಬೆಂಗಳೂರು ತಂಡದ ಕೆಜಿಎಫ್ ಗ್ಯಾಂಗ್ನ ಅಬ್ಬರ ಇನ್ಮುಂದೆ ನೋಡೋಕೆ ಆಗಲ್ಲ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಆರ್‌ಸಿಬಿ ತಂಡದ ಕೆಜಿಎಫ್ ಜೋಡಿಗಳಾಗಿ ಗುರುತಿಸಿಕೊಂಡಿದ್ದರು. ಇನ್ನು ಈ ಇಬ್ಬರು ಆಟಗಾರರನ್ನ ಫ್ರಾಂಚೈಸಿ ರಿಲೀಸ್ ಮಾಡೋಕೆ ಕಾರಣ ಕೂಡ ಇದೆ. 2025ರ ಐಪಿಎಲ್ಗೆ ಆರ್‌ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆಯಿದೆ. 2022 ರಿಂದ ಆರ್‌ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. 45 ಪಂದ್ಯಗಳಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿರುವ ಫಾಫ್ 15 ಅರ್ಧಶತಕಗಳೊಂದಿಗೆ ಒಟ್ಟು 1636 ರನ್ ಕಲೆಹಾಕಿದ್ದಾರೆ. ಆದ್ರೆ ಫಾಫ್ಗೆ 40 ವರ್ಷ ದಾಟಿರೋದ್ರಿಂದ ಭವಿಷ್ಯದ ದೃಷ್ಟಿಯಿಂದ ಫಾಫ್ ಡುಪ್ಲೆಸಿಸ್ ಅವರನ್ನು ಕೈ ಬಿಡಲು ಆರ್‌ಸಿಬಿ ನಿರ್ಧರಿಸಿದೆ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕೈ ಬಿಡುವ ನಿರ್ಧಾರಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಪ್ರದರ್ಶನ. ಐಪಿಎಲ್ 2024 ರಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿಯೇ ಆರ್‌ಸಿಬಿ ಮ್ಯಾಕ್ಸ್ವೆಲ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ. ಇದರೊಂದಿಗೆ ಆರ್‌ಸಿಬಿ ತಂಡದ KGF ಬಳಗದಿಂದ G ಅಂದ್ರೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು F ಅಂದ್ರೆ ಫಾಫ್ ಡುಪ್ಲೆಸಿಸ್ ಹೊರಬೀಳುವುದು ಬಹುತೇಕ ಫೈನಲ್ ಆಗಿದೆ.
ಸೋ ಅಂತಿಮವಾಗಿ ಮ್ಯಾಕ್ಸ್ವೆಲ್ ಮತ್ತು ಫಾಫ್ ತಂಡದಿಂದ ಹೊರ ಬಂದ್ರೆ ಅವ್ರ ಪ್ಲೇಸ್ಗೆ ಯಾರನ್ನ ರಿಪ್ಲೇಸ್ ಮಾಡ್ಬೇಕು ಅನ್ನೋ ಸವಾಲು ಕೂಡ ಬೆಂಗಳೂರು ಫ್ರಾಂಚೈಸಿ ಮುಂದಿದೆ. ಕಳೆದ 17 ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಆರ್‌ಸಿಬಿ ತಂಡ ಈ ಬಾರಿಯಾದರೂ ಟ್ರೋಫಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಹೀಗಾಗಿ ಸ್ಟಾರ್ ಆಟಗಾರರನ್ನೇ ತಂಡಕ್ಕೆ ಖರೀದಿ ಮಾಡಿಕೊಳ್ಳೋಕೆ ಮುಂದಾಗಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಸ್ಟಾರ್ ಪ್ಳೇಯರ್ಸ್ ಈ ಬಾರಿಗೆ ಆಕ್ಷನ್ಗೆ ಬರ್ತಾರೆ ಅನ್ನೋ ಸುದ್ದಿ ಇದೆ. ಹೀಗಾಗಿ ಎಲ್ಲಾ ಌಂಗಲ್ಗಳಿಂದಲೂ ಬೆಂಗಳೂರು ತಂಡಕ್ಕೆ ಫಿಟ್ ಆಗುವ ಆಟಗಾರರ ಮೇಲೆ ಬಿಡ್ ಮಾಡೋ ಲೆಕ್ಕಾಚಾರದಲ್ಲಿದೆ. ಆದ್ರೆ ಬೆಂಗಳೂರು ತಂಡಕ್ಕೆ ಯಾರೇ ಬಂದ್ರೂ ಕೂಡ ಫ್ಯಾನ್ಸ್ ಕೆಜಿಎಫ್ ಗ್ಯಾಂಗ್ನ ಮಿಸ್ ಮಾಡಿಕೊಳ್ಳೋದಂತೂ ಸುಳ್ಳಲ್ಲ.