ಕ್ಯಾನ್ಸರ್‌ ಔಷಧಿ ತೆರಿಗೆ ಶೇಕಡಾ12 ರಿಂದ ಶೇಕಡಾ 5 ಕ್ಕೆ ಇಳಿಸಿದ ಸರ್ಕಾರ

ಕ್ಯಾನ್ಸರ್‌ ಔಷಧಿ ತೆರಿಗೆ ಶೇಕಡಾ12 ರಿಂದ ಶೇಕಡಾ 5 ಕ್ಕೆ ಇಳಿಸಿದ ಸರ್ಕಾರ

ಕ್ಯಾನ್ಸರ್‌ ಚಿಕಿತ್ಸೆಗೆ ಬಳಸಲಾಗುವ ಕೆಲವು ಔಷಧಿಗಳ ಜಿಎಸ್‌ಟಿ ದರವನ್ನು ಕಡಿಮೆ ಮಾಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. ಇದ್ರಿಂದಾಗಿ ಕ್ಯಾನ್ಸರ್‌ ರೋಗಿಗಳಿಗೆ ಕೊಂಚ ರಿಲೀಫ್‌ ಸಿಕ್ಕಂತಾಗಿದೆ.

ಇದನ್ನೂ ಓದಿ: ಪ್ರಿಯಾ ಆರೋಗ್ಯ ಹೇಗಿದೆ? – ಶೂಟಿಂಗ್‌ ಗೆ ಕಮ್‌ ಬ್ಯಾಕ್‌ ಮಾಡ್ತಾರಾ?

ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮಾಹಿತಿ ನೀಡಿದ್ದಾರೆ. ಕೆಲವು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಕೌನ್ಸಿಲ್ ಸಹ ನಮ್ಕೀನ್ ಮೇಲಿನ ದರವನ್ನು ಶೇ.18 ರಿಂದ ಶೇ.12 ಕ್ಕೆ ಇಳಿಸಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ವೈದ್ಯಕೀಯ ಆರೋಗ್ಯ ವಿಮೆಯ ಮೇಲಿನ ದರ ಕಡಿತದ ಕುರಿತು ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.‌

ಇನ್ನು ಕಳೆದ ಆರು ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್‌ನಿಂದ ಗಳಿಸಿದ ಆದಾಯವು ಶೇ.412 ರಷ್ಟು ಹೆಚ್ಚಾಗಿದೆ. ಆನ್‌ಲೈನ್ ಗೇಮಿಂಗ್‌ನಿಂದ ಆದಾಯವು ಆರು ತಿಂಗಳಲ್ಲಿ 6,909 ಕೋಟಿ ರೂ.ಗೆ ಹೆಚ್ಚಾಗಿದೆ. ಇದಲ್ಲದೇ, ಕಳೆದ ಆರು ತಿಂಗಳಲ್ಲಿ ಕ್ಯಾಸಿನೊಗಳ ಆದಾಯವು ಶೇ.34 ರಷ್ಟು ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *