ಪ್ರಿಯಾ ಆರೋಗ್ಯ ಹೇಗಿದೆ? – ಶೂಟಿಂಗ್‌ ಗೆ ಕಮ್‌ ಬ್ಯಾಕ್‌ ಮಾಡ್ತಾರಾ?

ಪ್ರಿಯಾ ಆರೋಗ್ಯ ಹೇಗಿದೆ? – ಶೂಟಿಂಗ್‌ ಗೆ ಕಮ್‌ ಬ್ಯಾಕ್‌ ಮಾಡ್ತಾರಾ?

ಸೀತಾರಾಮ ಸೀರಿಯಲ್‌ ನಲ್ಲಿ ಪ್ರಿಯಾ ಪಾತ್ರದ ಮೂಲಕ ಮಿಂಚುತ್ತಿರುವ ಮೇಘನಾ ಶಂಕರಪ್ಪ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಶೂಟಿಂಗ್‌ ನಿಂದ ದೂರ ಉಳಿದಿದ್ದಾರೆ. ಮತ್ತೆ ಯಾವಾಗ ಡಿಕೆಡಿ ಹಾಗೂ ಸೀತಾರಾಮ ಸೀರಿಯಲ್‌ ನಲ್ಲಿ ಕಾಣಿಸಿಕೊಳ್ತಾರೆ  ಅಂತಾ ಫ್ಯಾನ್ಸ್‌ ಕೂಡ ಕಾಯ್ತಾ ಇದ್ರು.. ಇದೀಗ ಮೇಘನಾ ಆರೋಗ್ಯ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ. ತಮಗೆ ಏನಾಗಿತ್ತು? ಆರೋಗ್ಯ ಹೇಗಿದೆ? ಏನ್‌ ಮೆಡಿಸಿನ್‌ ತಗೊಂಡಿದ್ದಾರೆ? ಯಾವಾಗ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಅಂತಾ ಮೇಘನಾ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಎಸ್‌ವೈ ಗೆ ಬಿಗ್‌ ರಿಲೀಫ್‌! – ಪೋಕ್ಸೋ ಕೇಸ್‌ ವಿಚಾರಣೆ ಸೆ.19ಕ್ಕೆ ಮುಂದೂಡಿದ ಕೋರ್ಟ್

ನಗು ಮೊಗದ ಚೆಲುವೆ.. ಪಟ ಪಟ ಮಾತು.. ನಟನೆಗೂ ಸೈ.. ಡ್ಯಾನ್ಸ್‌ ಗೂ ಸೈ.. ಸೀತಾರಾಮ ಸೀರಿಯಲ್‌ ಪ್ರಿಯಾ ಅಂದ್ರೆ ವೀಕ್ಷಕರಿಗೂ ಅಚ್ಚುಮೆಚ್ಚು.. ತಮ್ಮ ಮಾತು ಹಾಗೂ ನಟನೆಯಿಂದ ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮೇಘನಾ ಶಂಕರಪ್ಪ ಇತ್ತೀಚಿಗೆ ಡಾನ್ಸ್‌ ಕರ್ನಾಟಕ ಡಾನ್ಸ್‌ಗೂ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. ಉಳಿದ ಸ್ಪರ್ಧಿಗಳಿಗೆ ಸಕತ್‌ ಕಾಂಪಿಟೀಷನ್‌ ಕೊಡುತ್ತಿದ್ದ ಮೇಘನಾ ಸದ್ಯ ಎಲ್ಲಾ ಚಿತ್ರೀಕರಣಕ್ಕೂ ಬ್ರೇಕ್‌ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಅನಾರೋಗ್ಯ.

ಹೌದು, ಮೇಘನಾ ಶಂಕರಪ್ಪ ಸದ್ಯ ಅನಾರೋಗ್ಯಕ್ಕೀಡಾಗಿದ್ದಾರೆ. ಕಣ್ಣಿನ ಮೇಲೆ ಗಾಯ ಆಗಿರುವ ಫೋಟೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದರು.. ಅನಾರೋಗ್ಯದ ಕಾರಣಕ್ಕೆ ನಾನು ಕೆಲ ದಿನಗಳ ಕಾಲ ಸೀತಾರಾಮ ಧಾರಾವಾಹಿ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಭಾಗಿಯಾಗೋದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.. ಆದ್ರೆ ತನಗೆ ಏನಾಗಿದೆ? ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನೋದನ್ನ ಹೇಳಿರ್ಲಿಲ್ಲ… ಬೇಗ ಗುಣ ಮುಖರಾಗಿ ಬಂದು ನಿಮ್ಮನೆಲ್ಲ ಮತ್ತೆ ರಂಜಿಸುತ್ತೇನೆ ಅಂತಾ ಮಾತ್ರ ಹೇಳಿಕೊಂಡಿದ್ರು.. ಇದ್ರಿಂದಾಗಿ ಮೇಘಾನಾ ಫ್ಯಾನ್ಸ್‌ ಗೊಂದಲಕ್ಕೆ ಒಳಗಾಗಿದ್ರು.. ತಮ್ಮ ನೆಚ್ಚಿನ ನಟಿಗೆ ಏನಾಯ್ತು ಅಂತಾ ತಲೆ ಕೆಡಿಸಿಕೊಂಡಿದ್ರು.. ಇದೀಗ ನಟಿ ಮೇಘನಾ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ. ತಮಗೆ ಏನಾಯ್ತು ಅಂತಾ ಹೇಳಿದ್ದಾರೆ.

ನಟಿ ಮೇಘನಾ ಸಮಯ ಸಿಕ್ಕಾಗಲೆಲ್ಲಾ ವ್ಲಾಗ್ಸ್‌ ಮಾಡ್ತಾ ಇರ್ತಾರೆ.. ಇದೀಗ ಈ ವ್ಲಾಗ್ಸ್‌ ನಲ್ಲಿ ಫ್ಯಾನ್ಸ್‌ ಪ್ರಶ್ನೆಗೆ ಉತ್ತರಿಸಿದ್ದಾರೆ.. ತಮಗೆ ಏನಾಗಿದೆ ಅನ್ನೋದ್ರ ಬಗ್ಗೆನೂ ಮಾತನಾಡಿದ್ದಾರೆ.. ತನಗೆ ಕಣ್ಣಿನ ಭಾಗದಲ್ಲಿ ಹರ್ಪಿಸ್‌ ಝೋಸ್ಟರ್ ಅಂದ್ರೆ ಸರ್ಪ ಸುತ್ತು ಆಗಿದೆ ಅಂತಾ ಹೇಳಿದ್ದಾರೆ. ಹೀಗಾಗಿ ಕಂಪ್ಲೀಟ್‌ ರೆಸ್ಟ್‌ ಮಾಡ್ಬೇಕು, ಫಿಸಿಕಲ್‌ ಆಕ್ಟಿವಿಟಿ ಏನು ಮಾಡ್ಬಾರ್ದು ಅಂತಾ ಡಾಕ್ಟರ್‌ ಹೇಳಿದ್ದಾರೆ. ಹೀಗಾಗಿ ನಾನು ಶೂಟಿಂಗ್‌ ನಿಂದ ಬ್ರೇಕ್‌ ತೆಗೆದುಕೊಂಡಿದ್ದೇನೆ.. ಚನ್ನಗಿರಿಯ ಪಾಂಡೋಮಟ್ಟಿ ಗ್ರಾಮದಲ್ಲಿರೋ ತಮ್ಮ ಅಜ್ಜಿ ಮನೆಗೆ ಬಂದಿದ್ದೇನೆ.. ಇಲ್ಲಿ ಚಿಕಿತ್ಸೆ ಪಡಿತಾ ಇದ್ದೇನೆ ಅಂತಾ ಹೇಳಿದ್ದಾರೆ.

ಇನ್ನು ಸೀತಾರಾಮ ಸೀರಿಯಲ್‌ ನಲ್ಲಿ ಪ್ರಿಯಾಗೆ ಕ್ಯಾನ್ಸರ್‌ ಇದೆ ಅಂತಾ ತೋರಿಸಲಾಗುತ್ತಿದೆ.. ಇತ್ತ ಮೇಘನಾ ಡಿಕೆಡಿಯಲ್ಲೂ ಕಾಣಿಸಿಕೊಂಡಿರ್ಲಿಲ್ಲ.. ಹೀಗಾಗಿ ಪ್ರಿಯಾ ಪಾತ್ರ ಎಂಡ್‌ ಆಗಲಿದೆ ಅಂತಾ ಫ್ಯಾನ್ಸ್‌ ಮಾತಾಡಿಕೊಂಡಿದ್ರು.. ಇದೀಗ  ಮೇಘನಾ ಯಾವಾಗ ಶೂಟಿಂಗ್‌ ನಲ್ಲಿ ಭಾಗಿಯಾಗುತ್ತಾರೆ ಅನ್ನೋದನ್ನ ಕೂಡ ಹೇಳಿದ್ದಾರೆ.. ತಾನು ಬಹುತೇಕ ಚೇತರಿಕೆ ಕಂಡಿದ್ದೇನೆ.. ಗಾಯ ವಾಸಿ ಆಗ್ತಾ ಬಂದಿದೆ.. ಆದ್ರೆ ಹರ್ಪಿಸ್‌ ಬಂದ್ರೆ ಗಾಯ ಬೇಗ ವಾಸಿ ಆಗಲ್ಲ ಅಂತಾ ಹೇಳ್ತಾರೆ.. ಹೀಗಾಗಿ ಮುಖದಲ್ಲಿ ಕಲೆ ಹಾಗೇ ಉಳಿಯುತ್ತೇ ಅನ್ನೋ ಚಿಂತೆ ಕಾಡ್ತಾ ಇದೆ.. ಆದಷ್ಟು ಬೇಗ ಡಿಕೆಡಿ ಹಾಗೂ ಸೀತಾರಾಮ ಸೀರಿಯಲ್‌ ನಲ್ಲಿ ಭಾಗಿಯಾಗುತ್ತೇನೆ ಅಂತಾ ಹೇಳಿದ್ದಾರೆ.. ನಟಿ ಈಗ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿರೋದ್ರಿಂದ ಫ್ಯಾನ್ಸ್‌ ನಿಟ್ಟುಸಿರು ಬಿಟ್ಟಿದ್ದಾರೆ.. ಆದಷ್ಟು ಬೇಗ ಹುಷಾರಾಗಿ ಬನ್ನಿ ಅಂತಾ ಫ್ಯಾನ್ಸ್‌ ಕಮೆಂಟ್‌ ಮಾಡ್ತಾ ಇದ್ದಾರೆ.

ಇನ್ನು ಹರ್ಪಿಸ್‌ ಝೋಸ್ಟರ್ ಯಾಕೆ ಕಾಣಿಸಿಕೊಳ್ಳುತ್ತೆ ಅಂತಾ ನೋಡೋದಾದ್ರೆ,  ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಕಾರಣದಿಂದ ಉಂಟಾಗುತ್ತದೆ. ಬಾಯಿಯ ಸುತ್ತ  ಅಥವಾ ಜನನಾಂಗಗಳ ಸುತ್ತ ಹೆಚ್ಚಾಗಿ ಹರ್ಪಿಸ್ ಕಾಣಿಸಿಕೊಳ್ಳುತ್ತೆ. ಆದರೆ ಇದು ದೇಹದ ಮೇಲೆ ಎಲ್ಲಿ ಬೇಕಾದ್ರು ಕಾಣಿಸಿಕೊಳ್ಬೋದು. ಆರಂಭದಲ್ಲಿ ಗುಳ್ಳೆಗಳು ಅಥವಾ ದದ್ದು ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ವೈರಸ್ಸನ್ನು ಎದುರಿಸಲು ದೇಹ ತಾಪಮಾನವನ್ನು ಏರಿಸುವ ಕಾರಣ ಜ್ವರ, ಸುಸ್ತು ಸಹಾ ಉಂಟಾಗುತ್ತೆ. ಇವೇ ಸರ್ಪಸುತ್ತಿನ ಆರಂಭಿಕ ಲಕ್ಷಣ. ಬಳಿಕ ನಿಧಾನವಾಗಿ ದದ್ದು ಉಂಟಾದ ಭಾಗದಲ್ಲಿ ಉರಿ ಹೆಚ್ಚಾಗುತ್ತೆ. ಬಳಿಕ ವಕ್ರಾಕಾರದ ಗೆರೆಯಂತೆ ಚರ್ಮ ಕೆಂಪಗಾಗತೊಡಗುತ್ತದೆ. ಈ ಕಾಯಿಲೆಗೆ ವೈರಸ್ ನಿರೋಧಕ ಔಷಧಿಗಳ ಸೇವನೆ ಅಗತ್ಯವಾಗಿದೆ.. ಸರ್ಪಸುತ್ತು ದೇಹಕ್ಕೆ ಹರಡದಂತೆ ತಡೆಗಟ್ಟಲು ದದ್ದು ಕಾಣಿಸಿಕೊಂಡ 72 ಘಂಟೆಗಳ ಒಳಗಾಗಿ ಚಿಕಿತ್ಸೆ ಪ್ರಾರಂಭಿಸಬೇಕು.. ಆರಂಭದಲ್ಲೇ ಚಿಕಿತ್ಸೆ ಪಡೆದುಕೊಂಡ್ರೆ ಶೀಘ್ರವಾಗಿ ಗುಣವಾಗುವ ಸಾಧ್ಯತೆ ಹೆಚ್ಚು..

ಇನ್ನು ಸರ್ಪಸುತ್ತು ಗುಣವಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಬಹುದು.. ದೇಹದಲ್ಲಿ ಸೂಕ್ಷ್ಮಗೆರೆಗಳು ಪ್ರಾರಂಭವಾದ ದಿನದಿಂದ ಕನಿಷ್ಟ ಎರಡು ವಾರಗಳವರೆಗಾದರೂ ಈ ಸೋಂಕು ಆವರಿಸುತ್ತದೆ ಹಾಗೂ ಗರಿಷ್ಟ ನಾಲ್ಕು ವಾರಗಳವರೆಗೂ ಇರಬಹುದು. ದೇಹದಲ್ಲಿ ಗಾಯ ವಾಸಿ ಆದ ಬಳಿಕವೂ ಗೆರೆಗಳಂತೆ ಕಲೆ ಉಳಿದುಕೊಳ್ಳಬಹುದು.. ಈ ಕಲೆಗಳು ಸಂಪೂರ್ಣವಾಗಿ ಚರ್ಮದಿಂದ ಇಲ್ಲವಾಗಲು ಹೆಚ್ಚಿನ ಸಮಯ, ಕೆಲವೊಮ್ಮೆ ವರ್ಷಗಳೇ ಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ ಗಾಯ ವಾಸಿ ಆದ್ರೂ ಚರ್ಮದಡಿಯಲ್ಲಿ ಕೊಂಚ ನೋವು ಉಳಿದುಕೊಳ್ಳುವ ಸಾಧ್ಯತೆ ಇದೆ.. ಹಲವು ಸಮಯಗಳ ವರೆಗೆ ಈ ನೋವು ಕಾಡಬಹುದು. ಹೀಗಾಗಿ ಆದಷ್ಟು ಎಚ್ಚರದಿಂದ ಇರ್ಬೇಕಾಗುತ್ತೆ.. ಸರ್ಪ ಸುತ್ತಿನ ಲಕ್ಷಣ ಕಂಡು ಬಂದಲ್ಲಿ ತಡ ಮಾಡದೇ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳೋದು ಉತ್ತಮ.

Shwetha M

Leave a Reply

Your email address will not be published. Required fields are marked *