RCBಯಲ್ಲಿದ್ರೆ ಮಾತ್ರ ಫ್ಲಾಪ್ ಶೋ – ಮಾಜಿ ಆಟಗಾರರು ಈಗ ಫುಲ್ ಶೈನ್
ಯಾವ್ಯಾವ ಫ್ರಾಂಚೈಸಿಗಳ ಪರ ಮಿಂಚಿಂಗ್?

RCBಯಲ್ಲಿದ್ರೆ ಮಾತ್ರ ಫ್ಲಾಪ್ ಶೋ – ಮಾಜಿ ಆಟಗಾರರು ಈಗ ಫುಲ್ ಶೈನ್ಯಾವ್ಯಾವ ಫ್ರಾಂಚೈಸಿಗಳ ಪರ ಮಿಂಚಿಂಗ್?

17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರರ ದಂಡನ್ನೇ ಕಂಡಿದೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಪವರ್ ಹಿಟ್ಟರ್ ಎಬಿ ಡಿವಿಲಿಯರ್ಸ್, ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ, ಸ್ಟಾರ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್.. ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳೀತಾನೇ ಹೋಗುತ್ತೆ. ಹೀಗಿದ್ರೂ ಕೂಡ ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರೋಕೆ ಆಗ್ಲಿಲ್ಲ. ಬಟ್ ನಿಮಗೆ ಗೊತ್ತಾ? ಆರ್​ಸಿಬಿ ಪರ ಆಡುವಾಗ ಫ್ಲ್ಯಾಪ್ ಶೋ ತೋರಿದ್ದ ಪ್ಲೇಯರ್ಸ್ ಬೇರೆ ಬೇರೆ ಫ್ರಾಂಚೈಸಿಗಳನ್ನ ಸೇರಿದ ಬಳಿಕ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದ್ದಾರೆ. ಬೆಂಗಳೂರು ತಂಡ ಬಿಟ್ಟ ಮೇಲೆ ಬೇರೆ ಟೀಮ್​ಗಳಲ್ಲಿ ಮಿಂಚುತ್ತಿರೋ ಪ್ಲೇಯರ್ಸ್​ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್

2024ರ ಐಪಿಎಲ್ ಕ್ರಿಕೆಟ್ ಲೋಕದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಆಟಗಾರರ ಹೊಡಿಬಡಿ ಆಟಕ್ಕೆ ಇಡೀ ಜಗತ್ತೇ ಫಿದಾ ಆಗಿತ್ತು. ಟಿ-20 ಫೈಟ್ ಅಂದ್ರೆ ಹಿಂಗಿರ್ಬೇಕಪ್ಪ ಅಂತಾ ಅಭಿಮಾನಿಗಳೂ ಕೂಡ ಮಸ್ತ್ ಎಂಜಾಯ್ ಮಾಡಿದ್ರು. ಅದ್ರಲ್ಲೂ ಬ್ಯಾಟರ್ಸ್ ಆರ್ಭಟಕ್ಕೆ ಬೌಲರ್ಸ್ ಥಂಡಾ ಹೊಡೆದು ಹೋಗಿದ್ರು. ಒಂದೊಂದು ಪಂದ್ಯದಲ್ಲೂ ಹಳೇ ದಾಖಲೆಗಳೆಲ್ಲಾ ಧೂಳೀಪಟವಾಗಿದ್ವು. ಇಷ್ಟೆಲ್ಲಾ ಮಸ್ತ್ ಮಜಾ ಮಾಡಿದ ಆರ್​ಸಿಬಿ ಫ್ಯಾನ್ಸ್​ಗೆ ಒನ್ಸ್ ಅಗೇನ್ ಅದೇ ನಿರಾಸೆ. ಈ ಸಲನೂ ಕಪ್ ಗೆಲ್ಲೋಕೆ ಆಗ್ಲಿಲ್ವಲ್ಲ ಅನ್ನೋದು. ಬಟ್ ಅದಕ್ಕಿಂತ ಬೇಜಾರು ಅಂದ್ರೆ ಬೆಂಗಳೂರು ತಂಡದಲ್ಲೇ ಇದ್ದಾಗ ನೀರಸ ಪ್ರದರ್ಶನ ನೀಡಿದ್ದ ಕೆಲ ಆಟಗಾರರು ಬೇರೆ ಬೇರೆ ಫ್ರಾಂಚೈಸಿಗಳ ಪರ ಅಧ್ಬುತ ಪ್ರದರ್ಶನ ನೀಡಿದ್ರು.

ಇಲ್ಲಿ ಡಲ್.. ಅಲ್ಲಿ ಫೈರ್! 

2024ರ ಐಪಿಎಲ್​ನಲ್ಲಿ ಮೋಸ್ಟ್ ಡೇಂಜರಸ್ ಬ್ಯಾಟ್ಸ್​​ಮನ್ ಆಗಿದ್ದು ಟ್ರಾವಿಸ್ ಹೆಡ್. ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಟ್ರಾವಿಸ್ ಹೆಡ್, ಈ ಹಿಂದೆ ಇದ್ದದ್ದು ಆರ್​ಸಿಬಿ ತಂಡದಲ್ಲಿ. 2016ರ ಆಕ್ಷನ್​ನಲ್ಲಿ 50 ಲಕ್ಷಕ್ಕೆ ಆರ್​ಸಿಬಿ ಸೇರಿದ್ದರು. 2024ರಲ್ಲಿ 6.5 ಕೋಟಿಗೆ ಎಸ್​ಆರ್​ಹೆಚ್​ ಹೆಡ್​ ಅವರನ್ನು ಖರೀದಿಸಿತು. ಈ ಸೀಸನ್​ನಲ್ಲಿ 15 ಪಂದ್ಯಗಳನ್ನ ಆಡಿದ್ದ ಹೆಡ್ 567 ರನ್​ಗಳನ್ನ ಕಲೆ ಹಾಕಿದ್ರು. ಅದ್ರಲ್ಲೂ 191.55 ಸ್ಟ್ರೈಕ್​ರೇಟ್​ನಲ್ಲಿ ಅನ್ನೋದೇ ವಿಶೇಷ. ಹಾಗೇ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮತ್ತೊಬ್ಬ ಹೊಡಿಬಡಿ ಆಟಗಾರ ಹೆನ್ರಿಚ್ ಕ್ಲಾಸೆನ್ ಸಹ ಆರ್​ಸಿಬಿ ತಂಡದಲ್ಲಿದ್ದವರೇ. 5.25 ಕೋಟಿಗೆ ಎಸ್​ಆರ್​ಹೆಚ್ ಸೇರಿರುವ ಕ್ಲಾಸೆನ್, 2024ರಲ್ಲಿ ಬೆಂಕಿಬಿರುಗಾಳಿ ಬ್ಯಾಟಿಂಗ್ ನಡೆಸಿದ್ರು. 16 ಇನ್ನಿಂಗ್ಸ್​ಗಳಲ್ಲಿ ಕಣಕ್ಕಿಳಿದು 479 ರನ್ ಕಲೆ ಹಾಕಿದ್ರು. ಇತ್ತೀಚೆಗಷ್ಟೆ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್​ ಎನಿಸಿಕೊಂಡ ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕೂಡ ಬೆಂಗಳೂರು ತಂಡದ ಹಳೇ ಹುಲಿ.  2014ರಿಂದ21ರವರೆಗೂ ಆರ್​ಸಿಬಿ ಪರ ಆಡಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು. ಈ ಸಲ ರಾಜಸ್ಥಾನದ ಪರ ಅದ್ಭುತ ಪ್ರದರ್ಶನ ನೀಡಿದ್ದ ಚಹಾಲ್ 15 ಪಂದ್ಯಗಳಿಂದ 18 ವಿಕೆಟ್ ಉರುಳಿಸಿದ್ರು. ಇನ್ನು ಸಿಎಸ್​ಕೆ ತಂಡದ ಪರ ಆಡ್ತಿರುವ ಶಿವಂ ದುಬೆ ಕೂಡ ಬೆಂಗಳೂರು ತಂಡದ ಮಾಜಿ ಹುಡುಗ. 2019 ಮತ್ತು 2020ರಲ್ಲಿ ಆರ್​ಸಿಬಿ ಪರ ಆಡಿದ್ದರು. 2022ರಿಂದ ಈವರೆಗೂ ಸಿಎಸ್​ಕೆ ಪರ ಆಡುತ್ತಿರುವ ದುಬೆ ಈ ಬಾರಿ 396 ರನ್ ಬಾರಿಸಿದ್ರು.  ಹಾಗೇ ಕನ್ನಡಿಗ ಕೆಎಲ್ ರಾಹುಲ್ ಕೂಡ ಆರ್​ಸಿಬಿ ತಂಡದಲ್ಲಿ ಇದ್ದವರೇ. ರಾಹುಲ್ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದೇ ಆರ್​ಸಿಬಿಯಿಂದ. ಆದರೆ 2013ರಲ್ಲಿ ಆರ್​ಸಿಬಿ ಸೇರಿದರೂ ಅವರನ್ನು ಮತ್ತೆ ಕೈಬಿಡಲಾಯಿತು. 2016ರಲ್ಲಿ ಮತ್ತೆ ಆರ್​ಸಿಬಿ ತಂಡಕ್ಕೆ ಮರು ಸೇರ್ಪಡೆಯಾದರೂ ಮತ್ತೆ ಕೈಬಿಡಲಾಯಿತು. ಕಳೆದ ಮೂರು ವರ್ಷಗಳಿಂದ ಲಕ್ನೋ ತಂಡದ ನಾಯಕನಾಗಿ ಮುನ್ನಡೆಸ್ತಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡ್ತಿರುವ ಹರ್ಷಲ್ ಪಟೇಲ್ ಕೂಡ 2021ರಿಂದ 23ರವರೆಗೆ ಬೆಂಗಳೂರು ಬಳಗದಲ್ಲೇ ಇದ್ದವ್ರು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರ  24 ವಿಕೆಟ್​ಗಳನ್ನ ಬೇಟೆಯಾಡಿದ್ರು.  ಇನ್ನು ಲಕ್ನೋ ತಂಡದಲ್ಲಿರುವ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ಆರ್​ಸಿಬಿ ತಂಡದ ಭಾಗವಾಗಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಅವರನ್ನು ಕೈಬಿಡಲಾಗಿತ್ತು. ಸದ್ಯ ಎಲ್​ಎಸ್​ಜಿ ಪರ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಹೀಗೆ ಹಲವು ಕ್ರಿಕೆಟಿಗರು ಬೆಂಗಳೂರು ತಂಡದಲ್ಲಿದ್ದಾಗ ಅಷ್ಟೇನು ಉತ್ತಮ ಪ್ರದರ್ಶನ ನೀಡದೇ ಇದ್ರೂ ಈಗ ಬೇರೆ ಬೇರೆ ಫ್ರಾಂಚೈಸಿಗಳ ಪರ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಅವ್ರ ಆಟ ನೋಡಿದಾಗ ಆರ್​ಸಿಬಿ ಫ್ಯಾನ್ಸ್ ಛೇ ಇವ್ನು ನಮ್ಮ ಟೀಮ್​ನಲ್ಲೇ ಇರಬೇಕಿತ್ತು ಅನ್ಕೊಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *