ಬಿಗ್ ಬಾಸ್ ರೂಲ್ಸ್ ಚೇಂಜ್! – ಈ ಬಾರಿ ಎಷ್ಟು ದಿನ ನಡೆಯುತ್ತೆ ಗೊತ್ತಾ?
ವಾರದ ಕತೆಯಲ್ಲಿ ಮಿಸ್ಸಾಗಿದ್ಯಾರು?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್.. ಹಿಂದಿ ಬಳಿಕ ಕನ್ನಡದಲ್ಲಿ ಈ ಶೋ ಸೂಪರ್ ಸಕ್ಸಸ್ ಕಂಡಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಈಗಾಗಲೆ 10 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. 11 ಸೀಸನ್ ಗೆ ವೇದಿಕೆ ಸಿದ್ಧವಾಗ್ತಿದೆ. ಸೀಸನ್ 11 ಹೇಗಿರಲಿದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮನೆಮಾಡಿದೆ. ಅಂದ್ಹಾಗೆ ಆರಂಭದ ಸೀಸನ್ ಹಾಗೂ ಕಳೆದ ಸೀಸನ್ ಗೆ ಹೋಲಿಸಿದ್ರೆ ಶೋನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಶೋನಲ್ಲಿ ಕೈ ಬಿಡಲಾಗಿತ್ತು. ಅಷ್ಟಕ್ಕೂ ಬಿಗ್ ಬಾಸ್ನಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ. ಶೋನಲ್ಲಿ ಏನೆಲ್ಲಾ ಮಿಸ್ ಆಗಿದ್ದವು… ಇವೆಲ್ಲದ್ರ ಬಗೆಗಿನ ವಿವರ ಇಲ್ಲಿದೆ.
ಇದನ್ನೂ ಓದಿ: ಮ್ಯಾಕ್ಸಿಗೆ ಪುಟ್ಟಕ್ಕನ ಮಗಳ ಮೇಲೆ ಲವ್? – ಸಹನಾಗೆ ಕಾಳಿಯೇ ಬೆಸ್ಟ್!
100ಕ್ಕೂ ಹೆಚ್ಚು ದಿನ.. ವಿಭಿನ್ನ ಕ್ಷೇತ್ರ.. ವಿಭಿನ್ನ ಮನಸ್ಥಿತಿಯ 15 ಸ್ಪರ್ಧಿಗಳು.. ಇವರನ್ನೆಲ್ಲಾ ಮೊಬೈಲ್ ಇಲ್ಲದೇ, ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೇ ಒಂದೇ ಮನೆಯಲ್ಲಿ ಇರುವಂತೆ ಮಾಡುವುದೇ ಬಿಗ್ ಬಾಸ್ ಶೋದ ಅತಿದೊಡ್ಡ ಟಾಸ್ಕ್.. ಮನೆ ಒಳಗೆ ಇದರ ಜೊತೆಗೆ ಬಿಗ್‌ಬಾಸ್ ನೀಡುವ ಹೊಸ ಹೊಸ ಟಾಸ್ಕ್‌ಗಳು.. ಅದೇ ಸಂದರ್ಭದಲ್ಲೇ ಫ್ರೆಂಡ್ಸ್ ಅಂತ ಅಂದುಕೊಂಡವರ ನಡುವೆಯೇ ನಡೆಯುವ ಕಿತ್ತಾಟ.. ಒಬ್ಬರ ವಿರುದ್ಧ ಒಬ್ಬರು ಹೇಳುವ ಚಾಡಿ ಮಾತು.. ಎದುರಿಗೆ ಚೆನ್ನಾಗಿರುವಂತೆ ನಟಿಸಿ.. ಹಿಂದಿನಿಂದ ಪಿನ್ ಇಡುವವರ ಮುಖಗಳನ್ನು ಅನಾವಣ ಮಾಡುವುದರಿಂದಲೇ ಬಿಗ್‌ಬಾಸ್ ಶೋ ಜನಪ್ರಿಯತೆಯನ್ನು ಗಳಿಸಿದೆ.. ಅದರಲ್ಲೂ ಮೊದಲ ಸೀಸನ್‌ನಿಂದ ಹಿಡಿದ ಹತ್ತನೇ ಸೀಸನ್ ವರೆಗೆ ನೋಡಿದಾಗ, ಅತಿಹೆಚ್ಚು ಗಲಾಟೆ.. ಅತಿಹೆಚ್ಚು ಕಿತ್ತಾಟ.. ಅತಿ ಹೆಚ್ಚು ಗುಂಪುಗಾರಿಕೆ ಅಷ್ಟೇ ಏಕೆ.. ಅತಿಹೆಚ್ಚು ಮನುಷ್ಯತ್ವ ಮರೆತವರ ರೀತಿಯ ವರ್ತನೆ ಕಂಡುಬಂದಿದ್ದು ಬಿಗ್‌ಬಾಸ್ ಸೀಸನ್ 10ರಲ್ಲಿ.. ಹಾಗಿದ್ದರೂ 10ನೇ ಸೀಸನ್ ಈ ಹಿಂದಿನ ಎಲ್ಲಾ ಸೀಸನ್‌ಗಳಿಗಿಂತ ಹೆಚ್ಚಿನ ರೇಟಿಂಗ್ ಅನ್ನು ಕಲರ್ಸ್ ಕನ್ನಡ ಚಾನೆಲ್‌ಗೆ ನೀಡಿತ್ತಂತೆ.. ಇದ್ರಿಂದಾಗಿ ಕಳೆದ ಬಾರಿಯ ಸಕ್ಸಸ್ ಸೂತ್ರದಂತೆ, ಹುಡುಕಿ ಹುಡುಕಿ ವಿವಾದ ಸೃಷ್ಟಿಸುವ.. ಕಿತ್ತಾಟ ಹೆಚ್ಚಿಸುವವರನ್ನೇ ಬಿಗ್‌ಬಾಸ್ ಮನೆಯಲ್ಲಿ ಕೂಡಿ ಹಾಕುವುದು ಗ್ಯಾರಂಟಿ ಎನ್ನುವುದು ವೀಕ್ಷಕರ ಬಲವಾದ ನಂಬಿಕೆ.. ಇನ್ನು ಸೆಪ್ಟೆಂಬರ್ ನಲ್ಲಿ ಶೋ ಆರಂಭವಾಗೋ ಸಾಧ್ಯತೆ ಇದೆ. ಆರಂಭದಲ್ಲಿ ಪ್ರಸಾರವಾಗ್ತಿದ್ದ ಸೀಸನ್ ಗೂ ಹಾಗೂ ಕಳೆದ ಬಾರಿ ಪ್ರಸಾರವಾಗಿದ್ದ ಸೀಸನ್ಗೂ ಭಾರಿ ವ್ಯತ್ಯಾಸ ಇತ್ತು. ‘ಬಿಗ್ ಬಾಸ್’ ಶೋ ತನ್ನ ಫಾರ್ಮ್ಯಾಟ್ ಬದಲಿಸಿಕೊಂಡಿದ್ರೋದರಿಂದಲೇ ರೇಟಿಂಗ್ ಹೆಚ್ಚಾಗಲು ಬಹುಮುಖ್ಯ ಕಾರಣ ಎನ್ನಬಹುದು. ಅಷ್ಟಕ್ಕೂ ಕಳೆದ ‘ಬಿಗ್ ಬಾಸ್‘ ಶೋನಲ್ಲಿ ಏನು ಬದಲಾವಣೆ ಆಗಿದೆ? ವೀಕ್ಷಕರು ಏನು ಮಿಸ್ ಮಾಡಿಕೊಳ್ತಿದ್ದಾರೆ? ಬಿಗ್ ಬಾಸ್ ನಲ್ಲಿ ಏನೆಲ್ಲಾ ಚೇಂಜಸ್ ಮಾಡಲಾಗುತ್ತದೆ ಅಂತಾ ಹೇಳ್ತಾ ಹೋಗ್ತಿನಿ..
ಸೀಕ್ರೆಟ್ ರೂಮ್ ಮಿಸ್ಸಿಂಗ್!
ಬಿಗ್ ಬಾಸ್ ಆರಂಭದ ಸೀಸನ್‌ಗಳಲ್ಲಿ ಸೀಕ್ರೆಟ್ ರೂಮ್ ಅನ್ನೋ ಕಾನ್ಸೆಪ್ಟ್ ಇತ್ತು.. ಸ್ಪರ್ಧಿಗಳನ್ನು ಏಕಾಏಕಿ ಮನೆಯ ಯಾವುದಾದ್ರು ಒಂದು ಬಾಗಿಲಿನಿಂದ ಮಾಯ ಆಗೋ ರೀತಿ ಮಾಡಲಾಗ್ತಿತ್ತು.. ಅಥವಾ ಎಲಿಮಿನೇಟ್ ಆದಂತಹ ಸ್ಪರ್ಧಿಯನ್ನೇ ಕಿಚ್ಚನ ವೀಕೆಂಡ್ ವೇದಿಕೆಗೆ ಕರೆಸದೆ ಸೀಕ್ರೇಟ್ ರೂಮ್ನಲ್ಲಿ ಇಡಲಾಗುತ್ತಿತ್ತು. ಮನೆಯೊಳಗಡೆ ಇರುವ ಸ್ಪರ್ಧಿಗಳು ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ ಅಂತ ಭಾವಿಸ್ತಿದ್ದರು. ಆದರೆ ಅವರು ಸೀಕ್ರೇಟ್ ರೂಮ್ನಲ್ಲಿ ಇದ್ಕೊಂಡು ಮನೆಯಲ್ಲಿ ಯಾರು ಹೇಗೆ ಆಟ ಆಡ್ತಿದ್ದಾರೆ? ಯಾರು ಏನು ಮಾತಾಡ್ತಾರೆ ಅಂತ ಗಮನಿಸ್ತಿದ್ರು.. ಅದಾದ್ಮೇಲೆ ಮತ್ತೆ ಮನೆಯಲ್ಲಿ ಪ್ರತ್ಯಕ್ಷ ಆಗಿ ಎಲ್ಲರಿಗೂ ಶಾಕ್ ನೀಡ್ತಿದ್ರು. ಮನೆಯಲ್ಲಿ ಯಾರು ಹೇಗೆಲ್ಲಾ ಆಡ್ತಿದ್ದಾರೆ ಅಂತಾ ತಿಳ್ಕೊಂಡು ಆಟದ ವರಸೆ ಕೂಡ ಚೇಂಜ್ ಮಾಡ್ಕೊಳ್ತಿದ್ರು.. ನಿಜಕ್ಕೂ ಈ ಟಾಸ್ಕ್ ವೀಕ್ಷಕರಿಗೆ ಮಜಾ ಕೊಡ್ತಿತ್ತು.
ವಾರದ ಕಥೆಯಲ್ಲಿ ಸಖತ್ ಸಂಡೇ ವಿತ್ ಕಿಚ್ಚ ಮಿಸ್ಸಿಂಗ್!!
ಇನ್ನು ವೀಕ್ಷಕರು ತುಂಬಾ ಕುತೂಹಲದಿಂದ ಕಾಯೋದು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ಗಾಗಿ.. ಆದರೆ ಹಿಂದೆಲ್ಲಾ ವಾರದ ಕತೆಯಲ್ಲಿ ಸಖತ್ ಸಂಡೇ ವಿತ್ ಕಿಚ್ಚ ಶೋ ಕೂಡ ಬರುತ್ತಿತ್ತು… ದೊಡ್ಮನೆಯ ವೀಕೆಂಡ್ ವೇದಿಕೆಯಲ್ಲಿ ವಾರಾಂತ್ಯ ಬಂದರೆ ಒಂದಿಲ್ಲೊಂದು ಸೆಲೆಬ್ರಿಟಿಗಳು ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಳ್ತಿದ್ರು.. ಸ್ಟಾರ್ ನಟ-ನಟಿಯರ ಜೊತೆ ಕಿಚ್ಚ ಸುದೀಪ್ ಮಾತುಕತೆ ಬಲು ಮಜವಾಗಿ ಹಾಗೂಅರ್ಥಪೂರ್ಣವಾಗಿ ಇರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಿನಿಮಾ ಪ್ರಚಾರಕ್ಕೆ ಒಂದಿಬ್ಬರು ಅತಿಥಿಗಳು ಈ ಶೋನಲ್ಲಿ ಕಾಣಿಸಿಕೊಳ್ತಾರೆ ಅನ್ನೋದು ಬಿಟ್ಟರೆ ದೊಡ್ಡ ಸ್ಟಾರ್‌ಗಳು ಈ ಶೋನಲ್ಲಿ ಕಾಣಿಸಿಕೊಳ್ಳೋದಿಲ್ಲ.
ಎಲಿಮಿನೇಟ್ ಸ್ಪರ್ಧಿಗಳ ಜೊತೆಯೂ ಮಾತುಕತೆ ಕಡಿಮೆ!!
ದೊಡ್ಮನೆಯಲ್ಲಿ ಪ್ರತಿವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತೆ. ಟಾಸ್ಕ್, ವೋಟ್ ಗಳ ಆಧಾರ ಮೇಲೆ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗುತ್ತೆ. ಹಿಂದಿನ ಸೀಸನ್ ಗಳಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದವರ ಬಳಿ ಕಿಚ್ಚ ಮಾತುಕತೆ ನಡೆಸ್ತಿದ್ರು.. ಮನೆಯಲ್ಲಿ ಏನ್ ಇಷ್ಟ ಆಯ್ತು.. ಯಾವ ಸ್ಪರ್ಧಿ ಇಷ್ಟ ಆಗಿಲ್ಲ.. ಅದಕ್ಕೆ ಕಾರಣಗಳನ್ನ ಕೇಳಲಾಗ್ತಿತ್ತು.. ಆದ್ರೀಗ ನಾಲ್ಕರಿಂದ ಐದು ಪ್ರಶ್ನೆಗಳಲ್ಲಿ ಎಲಿಮಿನೇಟ್ ಆದವರ ಜೊತೆಗಿನ ಮಾತುಕತೆ ಮುಗಿಸಿ ಬೇಗ ಬೇಗನೆ ಮನೆಗೆ ಕಳಿಸಲಾಗ್ತಿದೆ.
ದೊಡ್ಮನೆಯಲ್ಲಿ ಮರೆಯಾದ ಮನರಂಜನೆ!
ದೊಡ್ಮನೆಯಲ್ಲಿ ಟಾಸ್ಕ್ ಹೊರತಾಗಿ ಮನರಂಜನೆಗೂ ತುಂಬಾ ಮಹತ್ವ ನೀಡಲಾಗ್ತಿತ್ತು.. ಸ್ಪರ್ಧಿಗಳು ಮನರಂಜನೆ ನೀಡ್ತಿರೋದು ಕಡಿಮೆ ಮಾಡಿದ್ರೂ ಅಲರ್ಟ್ ಮಾಡಲಾಗ್ತಿತ್ತು.. ಹೀಗಾಗಿ ಈ ಹಿಂದಿನ ಸೀಸನ್ಗಳಲ್ಲಿ ಸ್ಪರ್ಧಿಗಳು ಹಾಡು ಹೇಳ್ತಿದ್ರು, ಡ್ಯಾನ್ಸ್ ಮಾಡ್ತಿದ್ರು, ಕಾಮಿಡಿ ಮಾಡ್ತಿದ್ರು, ಅಥವಾ ತಮ್ಮ ಜೀವನದಲ್ಲಿ ನಡೆದ ಅಥವಾ ತಮಗೆ ಗೊತ್ತಿದ್ದ ಕಥೆಗಳನ್ನು ಹಂಚಿಕೊಳ್ಳುತ್ತಿದ್ದರು. ಇತ್ತೀಚಿನ ಸೀಸನ್ಗಳಲ್ಲಿ ಇದಕ್ಕೆಲ್ಲ ಜಾಗವೇ ಇಲ್ಲ.
ಹಿಂದೆಲ್ಲಾ ‘ಬಿಗ್ ಬಾಸ್’ ನೋಡುವ ಪ್ರೇಕ್ಷಕರು ಎಪಿಸೋಡ್ ನೋಡಿ ನೋಡಿ, ನಕ್ಕು ನಕ್ಕು ಸುಸ್ತಾಗಿದ್ದರು. ಆದ್ರೆ ಕೆಲ ಸೀಸನ್ಗಳಿಂದ ‘ಬಿಗ್ ಬಾಸ್’ ಮನೆಯಲ್ಲಿ ಟಾಸ್ಕ್ ಕಡೆಗೆ ಗಮನ ಜಾಸ್ತಿ ಕೊಡಲಾಗ್ತಿದೆ. ಫಿಸಿಕಲ್ ಟಾಸ್ಕ್ ಜಾಸ್ತಿ ನೀಡಲಾಗ್ತಿದೆ. ಇದರಿಂದ ವೀಕ್ಷಕರಿಗೆ ಬೇಸರ ಆಗ್ತಿದೆ. ಆದ್ರೆ ಇವರ ಜಗಳವೇ ಹೆಚ್ಚು ರೇಟಿಂಗ್ ತಂದು ಕೊಡ್ತಿರೋದ್ರಿಂದ ಮನರಂಜನೆಗಿಂತ ಮನುಷ್ಯತ್ವದ ಅನಾವರಣವೇ ಬಿಗ್‌ಬಾಸ್‌ನ ಉದ್ದೇಶ ಎಂಬಂತಾಗಿದೆ.
ಬಿಗ್ ಬಾಸ್ ಅಂದ್ರೆ ವಾದ – ವಿವಾದ!
ಈಗೀಗ ದೊಡ್ಮೆನೆಯಲ್ಲಿ ಮನರಂಜನೆ ಸಿಗ್ತಾ ಇಲ್ಲ.. ಬರೀ ಕಿತ್ತಾಟವನ್ನೇ ನೋಡ್ಬೇಕು ಅನ್ನೋದು ವೀಕ್ಷಕರ ಕಂಪ್ಲೆಂಟ್.. ಜಗಳ ಮಾಡಿದರೆ, ದನಿ ಎತ್ತಿದರೆ ನಾನು ಇನ್ನೊಂದಿಷ್ಟು ದಿನ ‘ಬಿಗ್ ಬಾಸ್’ ಮನೆಯಲ್ಲಿ ಇರ್ತೀನಿ.. ಫೇಮಸ್ ಆಗ್ತೀನಿ ಅಂತಾ ಸ್ಪರ್ಧಿಗಳು ಕೂಡ ಭಾವಿಸುತ್ತಾರೆ. ಅದರಲ್ಲೂ ಹೆಚ್ಚಿನ ಸ್ಪರ್ಧಿಗಳು ಹಿಂದಿನ ಸೀಸನ್‌ನಲ್ಲಿ ಏನೇನು ನಡೆದಿದೆ ಅನ್ನೋದನ್ನು ನೋಡ್ಕೊಂಡೇ ಬರೋದ್ರಿಂದ ಫೈಟ್ ಮಾಡೋಕೆ ಹೆಚ್ಚು ಪ್ರಿಪೇರ್ ಆದವರಂತೆ ಕಾಣ್ತಿರುತ್ತಾರೆ.. ಅಲ್ಲದೆ, ಹೆಚ್ಚು ಸ್ಟ್ರಾಟಜಿ ಮಾಡೋದ್ರಲ್ಲೇ ಬ್ಯುಸಿ ಆಗಿರುತ್ತಾರೆ.. ಕಳೆದ ಸೀಸನ್‌ನಲ್ಲಂತೂ ಜಗಳಗಳೇ ತುಂಬಿದ್ದರಿಂದ ಅಲ್ಲಿ ಮನರಂಜನೆಗಾಗಲೀ, ಆರೋಗ್ಯಕರ ಸ್ಪರ್ಧೆಯಾಗಲೀ ನಡೆದಿದ್ದೇ ತೀರಾ ಕಡಿಮೆ… ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ತನಿಷಾ ಕುಪ್ಪಂಡ ನಡುವಿನ ಜಗಳವೇ ಹೈಲೈಟ್ ಆಗಿತ್ತು.
ಕಾಂಟ್ರವರ್ಸಿ ಮಾಡಿಕೊಂಡವರಿಗೇ ಚಾನ್ಸ್!
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದವರು, ಕಾಂಟ್ರವರ್ಸಿ ಮಾಡಿದವರಿಗೆ ಬಿಗ್‌ಬಾಸ್ ಶೋದಲ್ಲಿ ಸ್ಪರ್ಧಿಗಳಾಗಿ ಆಯ್ಕೆ ಮಾಡಲು ಹೆಚ್ಚಿನ ಆದ್ಯತೆ ಸಿಗ್ತಿದೆ ಎಂಬ ಅಪವಾದವಿದೆ. ಅಂದಹಾಗೆ ಕನ್ನಡದಲ್ಲಿ ದೊಡ್ಡ ಹೆಸರು ಮಾಡಿರುವ ಸಾಕಷ್ಟು ಕಲಾವಿದರಿದ್ದು, ಅವರಿಗೂ ಈ ಶೋನಲ್ಲಿ ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ ಎನ್ನೋದು ಕೆಲ ವೀಕ್ಷಕರ ಅಭಿಪ್ರಾಯ. ಆದರೆ ಅವರಿಗೆ ‘ಬಿಗ್ ಬಾಸ್’ ಶೋನಲ್ಲಿ ಅವಕಾಶ ಸಿಗುತ್ತದೆಯಾ ಎಂದು ಕಾದು ನೋಡಬೇಕಿದೆ. ಇನ್ನು ಈ ವರ್ಷ ಬಿಗ್ ಬಾಸ್ ಶೋವನ್ನು ಬರೋಬ್ಬರಿ 125 ದಿನಗಳವರೆಗೆ ಕೊಂಡೊಯ್ಯುವ ಪ್ಲಾನ್ ಮಾಡಲಾಗಿದ್ಯಂತೆ.. ಹಾಗೇನಾದ್ರೂ ಆದ್ರೆ ಇದು ಅತಿ ಹೆಚ್ಚು ದಿನಗಳವರೆಗೆ :ನಡೆದ ಬಿಗ್ ಬಾಸ್ ಶೋ ಎಂಬ ದಾಖಲೆಯನ್ನೂ ಬರೆಯಲಿದೆ.. ಒಟ್ಟಿನಲ್ಲಿ ಬಿಗ್ಬಾಸ್ ರಿಯಾಲಿಟಿ ಶೋಗೆ ಅದರದ್ದೇ ಆದ ವೀವರ್ಸ್ ಇದ್ದಾರೆ.. ಯಾವ ಭಾಷೆಯಲ್ಲಿ ಈ ಕಾರ್ಯಕ್ರಮ ಬಂದ್ರೂ ಬೈಕೊಂಡು ಬೈಕೊಂಡು ಜನ ನೋಡ್ತಾರೆ..