ಲಂಡನ್‌ನಲ್ಲಿ ಮನೆ ಕಟ್ಟಿದ ಕೊಹ್ಲಿ? – ಭಾರತ ಬಿಡಲು ಇದೇ ಕಾರಣ?
ವಿರುಷ್ಕಾ ಸೀಕ್ರೆಟ್‌ ರಿವೀಲ್!!

ಲಂಡನ್‌ನಲ್ಲಿ ಮನೆ ಕಟ್ಟಿದ ಕೊಹ್ಲಿ? – ಭಾರತ ಬಿಡಲು ಇದೇ ಕಾರಣ?ವಿರುಷ್ಕಾ ಸೀಕ್ರೆಟ್‌ ರಿವೀಲ್!!

ವಿರಾಟ್‌ ಕೊಹ್ಲಿ.. ಟೀಮ್‌ ಇಂಡಿಯಾದ ಸ್ಪೋಟಕ ಬ್ಯಾಟ್ಸಮನ್..‌ ಕ್ರಿಕೆಟ್‌ ಜಗತ್ತಿಗೆ ಕಿಂಗ್‌ ಆಗಿರೋ ಕೊಹ್ಲಿ ಅದ್ಯಾಕೋ ಲಂಡನ್‌ ಬಿಟ್ಟು ಭಾರತಕ್ಕೆ ಬರೋ ಮನಸ್ಸು ಮಾಡ್ತಿಲ್ಲ.. ಹೆಂಡ್ತಿ ಮಕ್ಕಳ ಜೊತೆ ಲಂಡನ್‌ನಲ್ಲೇ ಕಾಲ ಕಳಿತಾ ಇದ್ದಾರೆ.. ಕ್ರಿಕೆಟ್‌ ಆಡೋ ಟೈಮ್‌ ನಲ್ಲಿ ಭಾರತಕ್ಕೆ ಬರ್ತಾರೆ.. ಟೂರ್ನಿ ಮುಗಿತಿದ್ದಂತೆ ಮತ್ತೆ ಲಂಡನ್‌ಗೆ ಹೋಗ್ತಾರೆ.. ಇತ್ತೀಚೆಗಂತೂ ಕೊಹ್ಲಿ, ಫ್ಯಾಮಿಲಿ ಜೊತೆ ಲಂಡನ್‌ನಲ್ಲೇ ಸೆಟಲ್‌ ಆಗ್ತಾರೆ ಅನ್ನೋ ಮಾತು ಜೋರಾಗೆ ಸದ್ದು ಮಾಡ್ತಾ ಇದೆ.. ಇದೀಗ ಕೊಹ್ಲಿ ಲಂಡನ್‌ ನಲ್ಲಿ ಸೆಟಲ್‌ ಆಗ್ತಾರೆ ಅನ್ನೋ ವದಂತಿಗೆ ಪುಷ್ಠಿ ನೀಡುವಂತಹ ಮತ್ತೊಂದು ಬೆಳವಣಿಗೆ ನಡೆದಿದೆ.. ಅದೇನಪ್ಪಾ ಅಂದ್ರೆ, ಕೊಹ್ಲಿ ಲಂಡನ್‌ನಲ್ಲಿ ಮನೆ ಮಾಡ್ತಾ ಇರೋದು.. ಹೌದು, ವಿರಾಟ್‌ ಲಂಡನ್‌ನಲ್ಲಿ ಮನೆ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ಜೋರಾಗೆ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಕೊಹ್ಲಿ ಲಂಡನ್‌ನಲ್ಲಿ ಯಾಕೆ ಮನೆ ಮಾಡೋ ಪ್ಲಾನ್‌ ಮಾಡಿದ್ರು.. ಲಂಡನ್‌ ಅನ್ನೇ ವಿರಾಟ್‌ ಚೂಸ್‌ ಮಾಡಿದ್ದು ಯಾಕೆ ಇವೆಲ್ಲದ್ರ ಬಗ್ಗೆ ಡೀಟೆಲ್ಸ್‌  ಇಲ್ಲಿದೆ.

ಇದನ್ನೂ ಓದಿ: ಮ್ಯಾಕ್ಸಿಗೆ ಪುಟ್ಟಕ್ಕನ ಮಗಳ ಮೇಲೆ ಲವ್‌? – ಸಹನಾಗೆ ಕಾಳಿಯೇ ಬೆಸ್ಟ್‌!

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರತಕ್ಕೆ ಬರೋತರ ಕಾಣ್ತಾ ಇಲ್ಲ.. ತಮ್ಮ ಫ್ಯಾಮಿಲಿ ಜೊತೆ ಲಂಡನ್‌ನಲ್ಲೇ ಟೈಮ್‌ ಸ್ಪೆಂಡ್‌ ಮಾಡ್ತಾ ಇದ್ದಾರೆ.. ಕಿಂಗ್‌ ಕೊಹ್ಲಿ ಲಂಡನ್‌ನಲ್ಲೇ  ಶಾಶ್ವತವಾಗಿ ಶಿಫ್ಟ್ ಆಗುತ್ತಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇದೀಗ ವಿರಾಟ್‌ ಲಂಡನ್‌ನಲ್ಲೇ ಮನೆ ಮಾಡ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಹೌದು.. ವಿರಾಟ್‌ ಕೊಹ್ಲಿಗೆ ಲಂಡನ್‌ನಲ್ಲಿ ಕಾಲ ಕಳೆಯೋದು ಅಂದರೆ ತುಂಬಾ ಇಷ್ಟವಂತೆ. ಈ ಹಿಂದೆ ಕೆಲ ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ರು.. ಇನ್ನು ಅನುಷ್ಕಾ ಶರ್ಮಾ ಕೂಡ ಅಕಾಯ್‌ ಗೆ ಅಲ್ಲೇ ಜನ್ಮ ನೀಡಿದ್ರು.. ಅದಾದ್ಮೇ ಒಮ್ಮೆ ಮಾತ್ರ ಅನುಷ್ಕಾ ಶರ್ಮಾ ಮಕ್ಕಳ ಜೊತೆ ಭಾರತಕ್ಕೆ ಬಂದಿದ್ರು.. ಅದಾದ್ಮೇಲೆ ಬಂದಿರ್ಲಿಲ್ಲ.. ಮಕ್ಕಳು, ಮಡದಿ ಅಲ್ಲೇ ಇರೋದ್ರಿಂದ ಕೊಹ್ಲಿ ಕೂಡ ಲಂಡನ್‌ ನಲ್ಲೇ ಹೆಚ್ಚು ಇರ್ತಾರೆ..  ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಪರೇಡ್ ಮುಗಿದ ಕೂಡ್ಲೇ ಕೊಹ್ಲಿ ಲಂಡನ್‌ಗೆ ತೆರಳಿದರು. ಅದಾದ್ಮೇಲೆ ಶ್ರೀಲಂಕಾ ಸರಣಿ ಬಳಿಕ ಲಂಡನ್ ತಲುಪಿದ್ದಾರೆ. ಹೀಗಾಗಿ ಕೊಹ್ಲಿ ಲಂಡನ್‌ನಲ್ಲಿ ಮನೆ ಕಟ್ಟುತ್ತಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಅಂದ್ಹಾಗೆ ಭಾರತವನ್ನ ಅಪಾರ ಪ್ರೀತಿಸೋ ಕೊಹ್ಲಿ, ಲಂಡನ್ನಲ್ಲಿ ಸೆಟಲ್‌ ಆಗ್ತಿರೋದು ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ. ಅದಕ್ಕೆ 5 ಕಾರಣಗಳಿವೆ. ಅದೇನು ಅನ್ನೋದನ್ನ ಹೇಳ್ತಿನಿ..

 ರೀಸನ್ ನಂ.1ಲಂಡನ್ ಬ್ಯುಸಿನೆಸ್ ಹಬ್!

ಲಂಡನ್ ಜಾಗತಿಕ ಬ್ಯುಸಿನೆಸ್ ಹಬ್‌ ಗಳಲ್ಲಿ ಒಂದಾಗಿದೆ. ಕೊಹ್ಲಿ ಅನೇಕ ಜಾಹೀರಾತು ಕಂಪನಿಗಳ ಎಂಡೋರ್ಸ್ಮೆಂಟ್ ಹಾಗೂ ಸ್ವಂತ ವ್ಯಾಪಾರ ಉದ್ಯಮ ಹೊಂದಿದ್ದಾರೆ. ಲಂಡನ್ನಲ್ಲಿದ್ರೆ, ಅಂತರಾಷ್ಟ್ರೀಯ ಬ್ರ್ಯಾಂಡ್ಗಳೊಂದಿಗೆ ಸುಲಭವಾಗಿ ಕಾಂಟೇಕ್ಟ್‌ ಇಟ್ಕೋಬೋದು.. ಜೊತೆಗೆ ಬಂಡವಾಳ ಹೂಡಿಕೆಗೆ ಲಂಡನ್ ಸೂಕ್ತ ತಾಣವಾಗಿದೆ.. ಬ್ಯುಸಿನೆಸ್ನಲ್ಲಿ ಎಳ್ಗೆ ಕಾಣೋ ಉದ್ದೇಶದಿಂದಲೂ ಕೊಹ್ಲಿ ಲಂಡನ್ ನಲ್ಲಿ ಸೆಟಲ್‌ ಆಗೋ ಪ್ಲಾನ್‌ ಮಾಡಿದ್ದಾರೆ.

ರೀಸನ್ ನಂ.2  – ಕ್ರಿಕೆಟ್‌ ಟ್ರೈನಿಂಗ್‌ ಗೆ ಉತ್ತಮ ಸೌಕರ್ಯ

ಲಂಡನ್‌ ನಲ್ಲಿ ಕ್ರಿಕೆಟ್‌ ಗೆ ಹೆಚ್ಚಿನ ಸೌಲಭ್ಯಗಳಿವೆ. ಟ್ರೈನಿಂಗ್‌ ಗೂ ಕೂಡ ಉತ್ತಮ ಸೌಲಭ್ಯ ಸಿಗುತ್ತೆ. ಇದು ಸ್ಕಿಲ್ಸ್ ಮೇಲೆ ವರ್ಕೌಟ್ ಮಾಡಲು ತುಂಬಾ ಹೆಲ್ಪ್‌  ಆಗಲಿದೆ. ಅಲ್ಲದೇ ಕೊಹ್ಲಿ ಫಿಟ್ನೆಸ್‌ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಕ್ರಿಕೆಟ್ ಜನಕರ ನಾಡಲ್ಲಿ ವಿಶ್ವ ದರ್ಜೆಯ ಜಿಮ್‌ ಗಳಿವೆ. ನುರಿತ NUTRITIONISTS ಇದ್ದು, ವಿರಾಟ್‌ ಗೆ ಇದು ಹೆಚ್ಚು ನೆರವಾಗಲಿದೆ.

ರೀಸನ್ ನಂ. 3  – ಸಾಮನ್ಯರಂತೆ ಜೀವನ

ಕೆಲ ತಿಂಗಳ ಹಿಂದೆ ಕಿಂಗ್ ಕೊಹ್ಲಿ ಭಾರತದಲ್ಲಿ ಸಾಮಾನ್ಯರಂತೆ ಇರಲು ಕಷ್ಟ ಆಗುತ್ತೆ. ಎಲ್ಲೆಂದರಲ್ಲಿ ಸುತ್ತಾಡೋಕೆ ಆಗಲ್ಲ.. ಆದ್ರೆ ವಿದೇಶದಲ್ಲಿ ನಾವು ಸಾಮಾನ್ಯರಂತೆ ಇರಬಹುದು ಅಂತ ಹೇಳಿಕೊಂಡಿದ್ರು. ಇದೂ ಕೂಡ ಲಂಡನ್ ನಲ್ಲಿ ಇರಲು ಪ್ರಮುಖ ಕಾರಣ ಆಗಿರ್ಬೋದು. ಯಾಕಂದ್ರೆ ವಿದೇಶದಲ್ಲಿ ಕೊಹ್ಲಿ ದಂಪತಿ ತಾವಂದುಕೊಂಡಂತೆ ಖಾಸಗಿತನ ಆನಂದಿಸಬಹುದು. ಅಲ್ಲಿ ಯಾರ ಡಿಸ್ಟರ್ಬೆನ್ಸ್ ಇರಲ್ಲ.. ಈಗಾಗ್ಲೇ ಕೊಹ್ಲಿ ಸಿಟಿಯಲ್ಲಿ ಆರಾಮಾಗಿ ಸುತ್ತಾಡೋ ಸಾಕಷ್ಟು ವಿಡಿಯೋ ವೈರಲ್‌ ಆಗಿದೆ. ಅಷ್ಟೇ ಅಲ್ಲ ಅವರನ್ನ ಯಾರು ಗುರುತಿಸಿಲ್ಲ..

ರೀಸನ್ ನಂ.4ಮಕ್ಕಳ ಬೆಳವಣಿಗೆ

ಇನ್ನು ಕೊಹ್ಲಿ ಲಂಡನ್ನಲ್ಲಿ ಠಿಕಾಣಿ ಹೂಡಲು ಇನ್ನೊಂದು ಕಾರಣ ಇದು. ವಿರಾಟ್ ದಂಪತಿಗೆ ಇಬ್ಬರೂ ಮಕ್ಕಳಿದ್ದಾರೆ. ಲಂಡನ್ನಲ್ಲಿದ್ರೆ ಅವರಿಗೆ ಹೆಚ್ಚು ಸಮಯ ಕೊಡಬಹುದು. ಬೆಳವಣಿಗೆಗೆ ಕೂಡ ಸಹಕಾರಿ ಆಗಲಿದೆ. ಆದ್ರೆ ಭಾರತಕ್ಕೆ ಬಂದ್ರೆ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮಕ್ಕಳ ಕಡೆ ಹೆಚ್ಚು ಗಮನ ನೀಡಲು ಆಗಲ್ಲ. ಇದನ್ನರಿತೆ ಕೊಹ್ಲಿ ದಂಪತಿ ಲಂಡನ್ನಲ್ಲಿ ಬೀಡು ಬಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.

ರೀಸನ್ ನಂ.5 –ಮಾನಸಿಕ ಒತ್ತಡ ನಿರ್ವಹಣೆ

ಪರಿಸರ ಬದಲಾವಣೆ ಮಾನಸಿಕ ಒತ್ತಡ ನಿರ್ವಹಣೆಗೆ ಸಹಕಾರಿಯಾಗಲಿದೆ. ರನ್ ಬರ ಎದುರಿಸ್ತಿರೋದ್ರಿಂದ ಇನ್ನಿಲ್ಲದ ಟೀಕೆಗಳನ್ನ ಎದುರಿಸಬೇಕಾಗಿದೆ. ಆನ್ ಮತ್ತು ಆಫ್ ದಿ ಫೀಲ್ಡ್‌ ನಲ್ಲಿ ಕೊಹ್ಲಿಗೆ ಹೆಚ್ಚು ಒತ್ತಡವಿದೆ. ಫ್ಯಾನ್ಸ್ ಕೂಡ ಕೊಹ್ಲಿ ಕಂಡ್ರೆ ಮುಗಿ ಬೀಳ್ತಾರೆ. ಹೀಗಾಗಿ ಲಂಡನ್‌ ನಲ್ಲಿ ನೆಲೆಸಿದ್ರೆ ಇದ್ಯಾವುದರ ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಇರಬಹುದು.

ಕೊಹ್ಲಿ ಫ್ಯಾಮಿಲಿ ಈ ಎಲ್ಲಾ ಕಾರಣದಿಂದಾಗಿ ಲಂಡನ್‌ನಲ್ಲೇ ಸೆಟಲ್‌ ಆಗ್ತಿದ್ದಾರೆ ಅಂತಾ ಹೇಳಲಾಗ್ತಿದೆ.. ಆದ್ರೆ ಹರಿದಾಡ್ತಿರೋ ಸುದ್ದಿ ಬಗ್ಗೆ ವಿರುಷ್ಕಾ ದಂಪತಿ ಯಾವುದೇ ಸ್ಪಷ್ಟನೆ ನೀಡ್ತಾ ಇಲ್ಲ.. ಮುಂದಿನ ದಿನಗಳಲ್ಲಿ ವಿರಾಟ್‌ ಲಂಡನ್ನಲ್ಲೇ ನೆಲೆಯೂರ್ತಾರಾ? ಅಥವಾ ಮಡದಿ ಮಕ್ಕಳೊಂದಿಗೆ ಭಾರತಕ್ಕೆ ಬರ್ತಾರಾ ಅಂತ ಕಾದು ನೋಡ್ಬೇಕಾಗಿದೆ.

Shwetha M

Leave a Reply

Your email address will not be published. Required fields are marked *