ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಕೌಂಟ್‌ಡೌನ್‌ – ಪೂರ್ಣಾಹುತಿ ಹೋಮದಲ್ಲಿ ಭಾಗಿಯಾದ ಡಿಸಿಎಂ

ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಕೌಂಟ್‌ಡೌನ್‌ – ಪೂರ್ಣಾಹುತಿ ಹೋಮದಲ್ಲಿ ಭಾಗಿಯಾದ ಡಿಸಿಎಂ

ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಕೌಂಟ್‌ ಡೌನ್‌ ಶುರುವಾಗಿದೆ. ಎತ್ತಿನ ಹೊಳೆ ಉದ್ಘಾಟನೆಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್‌ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: 3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್

ಶುಕ್ರವಾರ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ನಡೆದ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌  ಭಾಗಿಯಾಗಿದ್ದಾರೆ. 9 ಪೂರ್ಣಾಹುತಿ ಕುಂಭಗಳಿಗೆ ಬಿಲ್ವ ಪತ್ರೆ ಹಿಡಿದು ಪೂಜೆ ಸಲ್ಲಿಸಿ ಪೂಜೆ ನೆರವೇರಿಸಿದರು. ಇದೇ ವೇಳೆ ಗಣಪತಿ, ವಾಸ್ತು, ಮೃತ್ಯುಂಜಯ, ನವಗ್ರಹ ಹೋಮಗಳನ್ನು ನೆರವೇರಿಸಿದರು.

ಪೂರ್ಣಾಹುತಿ ಹೋಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಡಿಸಿಎಂ ಡಿಕೆಶಿ, ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದು ಐತಿಹಾಸಿಕ ದಿನ, ಐತಿಹಾಸಿಕ ಕ್ಷಣ. ಇದು ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಯೋಜನೆ. ರಾಜ್ಯದ ಜನತೆಗೆ ತುಂಬಾ ಸಂತೋಷವಾಗಿದೆ. ಗೌರಿ ಹಬ್ಬದ ದಿನವೇ ಗಂಗೆ ಪೂಜೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಭಗೀರಥ ಪ್ರಯತ್ನ ಮಾಡಿ ಯೋಜನೆ ಮಾಡಿದೆ. ಈ ಯೋಜನೆ ಜಾರಿ ಸಾದ್ಯವೇ ಇಲ್ಲ ಎಂದಿದ್ದರು, ಆದರೆ ನಾವು ಸವಾಲಾಗಿ ಸ್ವೀಕಾರ ಮಾಡಿ ಜಾರಿ ಮಾಡಿದ್ದೇವೆ ಎಂದು ಬೀಗಿದ್ದಾರೆ.

ಛಲ, ಸಂಕಲ್ಪ, ಸ್ಚಇಚ್ಛೆಯಿಂದ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ನಮ್ಮ ಸಂಕಲ್ಪ, ನಮ್ಮ ಪ್ರತಿಷ್ಠೆ ಕೂಡ ಆಗಿತ್ತು. ಅಧಿಕಾರಿಗಳು, ನೌಕರರು ಯೋಜನೆ ಮಾಡಿದವರು ಎಲ್ಲರ ಪರಿಶ್ರಮ ಇದೆ. ಈ ಯೋಜನೆ ಜಾರಿಗಾಗಿ ಹಲವರು ಪ್ರಯತ್ನ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿ ಜಾರಿ ಮಾಡಿದ್ರು. ಇದು ನನಗೆ ಸಿಕ್ಕ ಭಾಗ್ಯ ಎಂದು ಬಣ್ಣಿಸಿದರು.

Shwetha M

Leave a Reply

Your email address will not be published. Required fields are marked *