ರೇಣುಕಾಸ್ವಾಮಿ ಕೊಲೆ – ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಸಿದ್ಧತೆ

ರೇಣುಕಾಸ್ವಾಮಿ ಕೊಲೆ – ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಸಿದ್ಧತೆ

ರೇಣುಕಾ ಸ್ವಾಮಿ ಕೊಲೆ ಕೇಸ್‌ ನಲ್ಲಿ ದರ್ಶನ್‌, ಪವಿತ್ರ ಗೌಡ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ. ಇದೀಗ ಮತ್ತೆ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ.

ಇದನ್ನೂ ಓದಿ: ನಾಡಿನಾದ್ಯಂತ ಸ್ವರ್ಣಗೌರಿ ವ್ರತ ಆಚರಣೆ – ಹಬ್ಬದ ಹಿನ್ನೆಲೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ರೇಣುಕಾಸ್ವಾಮಿ ಕೇಸ್‌ ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆಗೂ ಮೊದಲು ಪವಿತ್ರಾ ಗೌಡ ಹಾಗೂ ಇತರರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಅವುಗಳು ರಿಜೆಕ್ಟ್ ಆಗಿದ್ದವು. ಈಗ ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ. ವಿಜಯಲಕ್ಷ್ಮೀ ಅವರು ಸೆಪ್ಟೆಂಬರ್ 5ರಂದು ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಬೇಲ್ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ವಿಜಯಲಕ್ಷ್ಮೀ ಜೊತೆ ಮಾತುಕತೆ ವೇಳೆ ಜಾರ್ಜ್‌ ಶೀಟ್​ನಲ್ಲಿರುವ ಅಂಶಗಳ ಬಗ್ಗೆ ದರ್ಶನ್​ಗೆ ಮಾಹಿತಿ ನೀಡಲಾಗಿದೆ. ಇದಕ್ಕೂ ಮೊದಲು ದರ್ಶನ್ ಅವರು ದೂರವಾಣಿ ಮೂಲಕ ವಕೀಲರ ಜೊತೆ ಮಾತನಾಡಿದ್ದರು. ಈ ವೇಳೆ ಜಾಮೀನಿನ ವಿಚಾರವಾಗಿ ಚರ್ಚೆ ನಡೆದಿದೆ.

ವಿಜಯಲಕ್ಷ್ಮೀ ಜೊತೆ ವಕೀಲರು ಬೇಲ್ ಅರ್ಜಿ ಕಳುಹಿಸಿದ್ದರು. ವಕೀಲರ ಜೊತೆ ಮಾತುಕತೆ ಬಳಿಕ ಬೇಲ್ ದರ್ಶನ್ ಅರ್ಜಿಗೆ ಸಹಿಹಾಕಿದ್ದರು. ವಿಜಯಲಕ್ಷ್ಮೀ ಹಾಗೂ ದಿನಕರ್ ಸಹಿ ಪಡೆದು ಹೋದ ಬಳಿಕ ಜೈಲಿಗೆ ನೋಟರಿ ಬಂದಿದೆ. ಸರ್ಕಾರಿ ನೋಟರಿಯವರು ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀನು ಅರ್ಜಿ ಹಾಗೂ ಅಫಿಡವಿಟ್ ರೆಡಿ ಮಾಡಿದ್ದಾರೆ.

ವಿಜಯಲಕ್ಷ್ಮೀ ಅವರು ದರ್ಶನ್ ಅರೆಸ್ಟ್ ಆದ ಬಳಿಕ ಸಾಕಷ್ಟು ನೊಂದಿದ್ದಾರೆ. ನಾನಾ ದೇವಾಲಯಗಳಿಗೆ ಅವರು ಭೇಟಿ ನೀಡುತ್ತಾ ಇದ್ದಾರೆ. ಇತ್ತೀಚೆಗೆ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಬಂದಿದ್ದರು ಎಂದು ವರದಿ ಆಗಿದೆ.

Shwetha M

Leave a Reply

Your email address will not be published. Required fields are marked *