ಹಾರ್ದಿಕ್ ಪಾಂಡ್ಯಗೆ ಜೊತೆಯಾದ ಮಗ ಅಗಸ್ತ್ಯ – ಬಾಯ್‌ಫ್ರೆಂಡ್ ಜೊತೆ ನತಾಶಾ ಸುತ್ತಾಟ

ಹಾರ್ದಿಕ್ ಪಾಂಡ್ಯಗೆ ಜೊತೆಯಾದ ಮಗ ಅಗಸ್ತ್ಯ – ಬಾಯ್‌ಫ್ರೆಂಡ್ ಜೊತೆ ನತಾಶಾ ಸುತ್ತಾಟ

ಟೀಮ್ ಇಂಡಿಯಾ ಬೌಲರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ಈಗಾಗಲೇ ಡೈವೋರ್ಸ್ ಕೊಟ್ಟಾಗಿದೆ. ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಘೋಷಿಸಿದ ನಂತರ ನಟಿ ನತಾಶಾ ತಮ್ಮ ಮಗ ಅಗಸ್ತ್ಯ ಜೊತೆ ಸರ್ಬಿಯಾಗೆ ತೆರಳಿದ್ದೂ ಆಗಿದೆ. ಇದೀಗ ಸರ್ಬಿಯಾದಿಂದ ವಾಪಸ್ ಬಂದಿರುವ ನತಾಶಾ ತಮ್ಮ ಮಗ ಆಗಸ್ತ್ಯನನ್ನು ಹಾರ್ದಿಕ್ ಪಾಂಡ್ಯಾ ಮನೆಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: 3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್

ಹಾರ್ದಿಕ್ ಪಾಂಡ್ಯ ಅವರ ಸೋದರ  ಕೃನಾಲ್ ಪಾಂಡ್ಯಾ ಪತ್ನಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ಮಗ ಕಯಿರ್‌ನೊಂದಿಗೆ ನತಾಶಾ ಹಾಗೂ ಹಾರ್ದಿಕ್ ಪುತ್ರ ಆಗಸ್ತ್ಯನೂ ಇರುವುದನ್ನು ಕಾಣಬಹುದು. ಇಬ್ಬರನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪಂಕುರಿ ಶರ್ಮಾ ಪುಸ್ತಕವನ್ನು ಮಕ್ಕಳಿಗೆ ಓದಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಮತ್ತೊಂದೆಡೆ ಮಗ ಅಗಸ್ತ್ಯನನ್ನು ಅಪ್ಪ ಹಾರ್ದಿಕ್ ಪಾಂಡ್ಯ ಮನೆಗೆ ಬಿಟ್ಟು ಬಂದ ನಟಿ ನತಾಶಾ ತನ್ನ ಬಾಯ್ ಫ್ರೆಂಡ್ ಜೊತೆ ಇರೋ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜಿಮ್‌ನಲ್ಲಿ ಮಾಡೆಲ್ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಅವರೊಂದಿಗೆ ಮಿರರ್ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು ಅತ್ತ ವಿಚ್ಛೇದನದ ನಂತರ, ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ದಿನಗಳಲ್ಲಿ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇಬ್ಬರೂ ಒಟ್ಟಿಗೆ ಗ್ರೀಸ್‌ಗೆ ವಿಹಾರಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಈಗ ನತಾಶಾ ಕೂಡಾ ಬಾಯ್ ಫ್ರೆಂಡ್ ಫೋಟೋ ಶೇರ್ ಮಾಡಿಕೊಂಡಿದ್ದು, ಮಾಜಿ ಪತಿ ಹಾರ್ದಿಕ್ ಪಾಂಡ್ಯಗೆ ಸರಿಯಾಗೇ ಟಕ್ಕರ್ ಕೊಡುತ್ತಿದ್ದಾರೆ.

 

Sulekha