ಕ್ರಿಕೆಟರ್ಸ್ ಗೆ ಕೋಟಿ ಕೋಟಿ ಹಣ – BCCI & IPLನಿಂದ ಎಷ್ಟು ವೇತನ?
ಕೊಹ್ಲಿ, ರೋಹಿತ್, ರಾಹುಲ್ ಗೆ ಎಷ್ಟು?

ಕ್ರಿಕೆಟರ್ಸ್ ಗೆ ಕೋಟಿ ಕೋಟಿ ಹಣ – BCCI & IPLನಿಂದ ಎಷ್ಟು ವೇತನ?ಕೊಹ್ಲಿ, ರೋಹಿತ್, ರಾಹುಲ್ ಗೆ ಎಷ್ಟು?

ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್‌ ಲೀಗ್‌ ಅಂದ್ರೆ ಅದು ಐಪಿಎಲ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಪ್ರತೀ ಬಾರಿ ಐಪಿಎಲ್ ಆಯೋಜನೆಯಿಂದ ಬಿಸಿಸಿಐ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತೆ. ಅದ್ರಲ್ಲೂ ಕಳೆದ ಮೂರು ಸೀಸನ್​ಗಳಲ್ಲಿ ವರ್ಷದಿಂದ ವರ್ಷಕ್ಕೆ ಇನ್ಕಂ ಒನ್ ಟು ತ್ರಿಬಲ್ ಆಗಿದೆ. ಅಷ್ಟೇ ಅಲ್ಲದೆ ಆಟಗಾರರು ಕೂಡ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಫ್ರಾಂಚೈಸ್‌ಗಳು ಕೂಡಾ ಕೋಟಿಗಳ ಲೆಕ್ಕದಲ್ಲಿ ಸಂಪಾದನೆ ಮಾಡುತ್ತದೆ. ಭಾರತದ ಹಲವು ಆಟಗಾರರು ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ದೊಡ್ಡ ಮೊತ್ತವನ್ನೇ ಪಡೆಯುತ್ತಿದ್ದಾರೆ. 2024ರಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಒಪ್ಪಂದಗಳಿಂದ‌ ಅತಿ ಹೆಚ್ಚು ಸಂಪಾದಿಸುವ ಟಾಪ್ 10 ಭಾರತೀಯ ಕ್ರಿಕೆಟಿಗರು ಯಾರ್ಯಾರು  ಅನ್ನೋ ಡೀಟೇಲ್ಸ್‌ ಇಲ್ಲಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾರತೀಯ ಆಟಗಾರರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಕೆ.ಎಲ್ ರಾಹುಲ್. ಲಕ್ನೋ ಸೂಪರ್ ಜೇಂಟ್ಸ್ ತಂಡದ ನಾಯನಾಗಿರುವ ಕನ್ನಡಿಗ ರಾಹುಲ್ ಬಿಸಿಸಿಐ ನಿಂದ ವಾರ್ಷಿಕ 5 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಹಾಗೇ ಐಪಿಎಲ್​ನಲ್ಲಿ ಲಕ್ನೋ ತಂಡದ ಮಾಲೀಕರಿಂದ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಟೀ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಿಸಿಸಿಐನಿಂದ 7 ಕೋಟಿ ಹಾಗೇ ಐಪಿಎಲ್​ನಲ್ಲಿ 16 ಕೋಟಿ ಗಳಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿರುವ ರಿಷಭ್ ಪಂತ್​ಗೆ ಬಿಸಿಸಿಐ 3 ಕೋಟಿ ಕೊಡ್ತಿದ್ರೆ ಡಿಸಿ ಫ್ರಾಂಚೈಸಿ 16 ಕೋಟಿ ರೂಪಾಯಿ ನೀಡುತ್ತಿದೆ. ಸಿಎಸ್​ಕೆಯ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಬಿಸಿಸಿಐನಿಂದ 7 ಕೋಟಿ ಐಪಿಎಲ್​ನಿಂದ 16 ಕೋಟಿ ಸಿಗ್ತಿದೆ. ಟೀಂ ಇಂಡಿಯಾ ಹಾಗೇ ಐಪಿಎಲ್​ನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ಪರ ಆಡ್ತಿದ್ದಾರೆ. ವಿರಾಟ್​ಗೆ ಬಿಸಿಸಿಐನಿಂದ 7 ಕೋಟಿ ಹಾಗೇ ಐಪಿಎಲ್​ನಿಂದ 15.25 ಕೋಟಿ ಪಡೆಯುತ್ತಿದ್ದಾರೆ. ಮುಂಬೈ ತಂಡದ ಸಾರಥ್ಯ ವಹಿಸಿಕೊಂಡಿರೋ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ 5 ಕೋಟಿ ಕೊಟ್ರೆ ನೀತಾ ಅಂಬಾನಿ ಬ್ರಿಗೇಟ್ 15 ಕೋಟಿ ನೀಡ್ತಿದೆ. ಹಾಗೇ ಟೀ ಇಂಡಿಯಾದ ಸ್ಟಾರ್ ಬೌಲರ್ಸ್ ಜಸ್ಪ್ರೀತ್ ಬುಮ್ರಾಗೆ ಬಿಸಿಸಿಐ 7 ಕೋಟಿ ಕೊಡ್ತಿದೆ. ಹಾಗೇ ಐಪಿಎಲ್​ನಲ್ಲಿ ಎಂಐ ಪರ ಆಡ್ತಿದ್ದು 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಕೆಕೆಆರ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬಿಸಿಸಿಐನಿಂದ 5 ಕೋಟಿ ಪಡೆಯುತ್ತಿದ್ದಾರೆ. ಹಾಗೇ ಐಪಿಎಲ್ ಫ್ರಾಂಚೈಸಿಯಿಂದ 12.25 ಕೋಟಿ ಸಿಗ್ತಿದೆ. ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿರೋ ಶುಭ್​ಮನ್ ಗಿಲ್ ಬಿಸಿಸಿಐನಿಂದ 5 ಕೋಟಿ, ಐಪಿಎಲ್​ನಿಂದ 8 ಕೋಟಿ ಸಂಪಾದಿಸುತ್ತಿದ್ದಾರೆ. ಇನ್ನು ಮುಂಬೈನ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಿಸಿಸಿಐನಿಂದ 3 ಕೋಟಿ ಹಾಗೇ ಐಪಿಎಲ್​ನಿಂದ 8 ಕೋಟಿ ಪಡೆಯುತ್ತಿದ್ದಾರೆ.

ಒಟ್ನಲ್ಲಿ ಟೀಂ ಇಂಡಿಯಾದ ಆಟಗಾರರು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಸಂಭಾವನೆ ಹೆಚ್ಚಿಸಿಕೊಳ್ತಿದ್ದಾರೆ. ಅಷ್ಟೇ ಅಲ್ದೇ ಮೈದಾನದ ಹೊರಗೂ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಇನ್​ಕ್ರೀಸ್ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, 2024ರಲ್ಲಿ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗನಾಗಿ ಸಚಿನ್ ತೆಂಡೂಲ್ಕರ್ ಮುಂದುವರೆದಿದ್ದಾರೆ. ಜಂಟಲ್‌ಮೆನ್‌ ಗೇಮ್‌ಗೆ ವಿದಾಯ ಹೇಳಿದರೂ, 150 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಸಚಿನ್ ಭಾರತದ ಶ್ರೀಮಂತ ಕ್ರಿಕೆಟಿಗನಾಗಿದ್ದಾರೆ. ಎಂಎಸ್ ಧೋನಿ 110 ಮಿಲಿಯನ್ ಡಾಲರ್‌ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 93 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.‌ ಸದ್ಯ ಕ್ರಿಕೆಟ್ ಅನ್ನೋದು ಜಸ್ಟ್ ಗೇಮ್ ಆಗಿರದೇ ಕ್ರಿಕೆಟರ್ಸ್​ನೂ ಕೂಡ ಕುಬೇರರನ್ನಾಗಿಸುತ್ತಿದೆ.

Shwetha M

Leave a Reply

Your email address will not be published. Required fields are marked *