ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?
ಮೂವರು ಕನ್ನಡಿಗರ ಕನಸು ನನಸಾಗುತ್ತಾ?

ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?ಮೂವರು ಕನ್ನಡಿಗರ ಕನಸು ನನಸಾಗುತ್ತಾ?

ಶ್ರೀಲಂಕಾ ಸರಣಿ ಬಳಿಕ ರೆಸ್ಟ್ ಮೂಡ್​ನಲ್ಲಿದ್ದ ಟೀಂ ಇಂಡಿಯಾ ಸ್ಟಾರ್ಸ್ ಇದೀಗ ದುಲೀಪ್ ಟ್ರೋಫಿ ಮೂಲಕ ಮತ್ತೊಮ್ಮೆ ಮೈದಾನಕ್ಕಿಳಿದಿದ್ದಾರೆ. ಕ್ರಿಕೆಟ್ ಫ್ಯಾನ್ಸ್ ಬಾರೀ ಕುತೂಹಲದಿಂದ ಕಾಯ್ತಾ ಇದ್ದ​ ದುಲೀಪ್ ಟ್ರೋಫಿಯಲ್ಲಿ ಘಟಾನುಘಟಿ ಆಟಗಾರರೇ ಆಡ್ತಿದ್ದಾರೆ. ಇದೇ ಟೂರ್ನಿಯಲ್ಲಿ ಹಲವರ ಟೆಸ್ಟ್ ಭವಿಷ್ಯ ಕೂಡ ನಿಂತಿದೆ. ಅದ್ರಲ್ಲೂ ಕನ್ನಡಿಗರ ಟೀಂ ಇಂಡಿಯಾ ಕನಸು ನನಸು ಮಾಡೋ ಟೂರ್ನಿ ಕೂಡ ಆಗಿದೆ. ಕೆಎಲ್ ರಾಹುಲ್ ಬಾಂಗ್ಲಾ ಸರಣಿಗೆ ಆಯ್ಕೆಯಾಗ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ. ಅಷ್ಟಕ್ಕೂ ದುಲೀಫ್ ಟ್ರೋಫಿ ಯಾರ್ಯಾರಿಗೆ ಇಂಪಾರ್ಟೆಂಟ್. ಕನ್ನಡಿಗರಿಗೆ ಟೀಂ ಇಂಡಿಯಾ ಟೆಸ್ಟ್​ನಲ್ಲಿ ಚಾನ್ಸ್ ಸಿಗುತ್ತಾ? ಕೆಎಲ್ ರಾಹುಲ್ ಮುಂದೆ ಇರೋ ಟಾಸ್ಕ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಹಿ ಜನ್ಮ ರಹಸ್ಯ ರಿವೀಲ್‌ – ತಂದೆ ಬಳಿ ಸೀತಾ ಮಗಳು?

ಟಿ-20, ಒನ್ ಡೇ ಅಂತಾ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಕಮಾಲ್ ಮಾಡ್ತಿದ್ದ ಆಟಗಾರರು ಇದೀಗ ರೆಡ್ ಬಾಲ್​ನಲ್ಲಿ ಸದ್ದು ಮಾಡೋಕೆ ರೆಡಿಯಾಗಿದ್ದಾರೆ. ದೇಶಿ ಕ್ರಿಕೆಟ್ ಟೂರ್ನಿ​​​​​​​ ದುಲೀಪ್​ ಟ್ರೋಫಿ ಆರಂಭ ಆಗಿದ್ದು, ಸೆಪ್ಟೆಂಬರ್​​​​ 22 ರ ತನಕ ಫ್ಯಾನ್ಸ್​​​​ಗೆ ಫುಲ್ ಮೀಲ್ಸ್​ ಸಿಗಲಿದೆ. ನಾಲ್ಕು ತಂಡಗಳು ಈ ಸರಣಿಯಲ್ಲಿ ಜಟಾಪಟಿ ನಡೆಸಲಿದ್ದು, ಮುಂಬರೋ ಬಾಂಗ್ಲಾ ಟೆಸ್ಟ್​ ಸರಣಿಗೆ ತಂಡದ ಆಯ್ಕೆ ದೃಷ್ಟಿಯಿಂದ ಇದು ತುಂಬಾ ಮಹತ್ವ ಪಡೆದಿದೆ. ಏಕಕಾಲಕ್ಕೆ ಎರಡು ಪಂದ್ಯಗಳು ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯದಲ್ಲಿ ಶುಭ್​ಮನ್ ಗಿಲ್ ನಾಯಕತ್ವದ ಟೀಮ್ ಎ ಹಾಗೂ ಅಭಿಮನ್ಯು ಈಶ್ವರನ್ ಮುಂದಾಳತ್ವದ ಟೀಮ್ ಬಿ ತಂಡಗಳು ಮುಖಾಮುಖಿಯಾಗಿವೆ. ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ  ರುತುರಾಜ್ ಗಾಯಕ್ವಾಡ್ ನಾಯಕತ್ವದ ಟೀಮ್ ಸಿ ಹಾಗೂ ಶ್ರೇಯಸ್ ಅಯ್ಯರ್ ಸಾರಥ್ಯದ ಟೀಮ್ ಡಿ ತಂಡಗಳು ಕಣಕ್ಕಿಳಿದಿವೆ. ಟೀಮ್ ಇಂಡಿಯಾ ಸ್ಟಾರ್ ಆಟಗಾರರ ದಂಡೇ ಇಲ್ಲಿದ್ದು, ಭರ್ಜರಿ ಪ್ರದರ್ಶನದ ಮೂಲಕ ಸೆಲೆಕ್ಟರ್ಸ್​ ಮನ ಗೆಲ್ಲೋಕೆ ಕಾಯ್ತಿದ್ದಾರೆ. ಈ ಟೂರ್ನಿ ಕನ್ನಡಿಗರಿಗೂ ಕೂಡ ತುಂಬಾನೇ ಮಹತ್ವದ್ದಾಗಿದೆ.

ಬೆಂಗಳೂರಿನಲ್ಲಿ ಸದ್ದು ಮಾಡ್ತಾರಾ ಲೋಕಲ್ ಬಾಯ್ಸ್?

ದುಲೀಫ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಎ ಮತ್ತು ಬಿ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಸೆಣಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್​ ಅಗರ್ವಾಲ್ ಹಾಗೂ ಪ್ರಸಿದ್ಧ್​ ಕೃಷ್ಣ ಆಡ್ತಿದ್ದಾರೆ. ಹೋಮ್​ಗ್ರೌಂಡ್​ನಲ್ಲಿ ಮೂವರು ಭರ್ಜರಿ ಪ್ರದರ್ಶನ ನೀಡೋ ಜೋಶ್​ನಲ್ಲಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಬಾಂಗ್ಲಾ ಟೆಸ್ಟ್​ ಸರಣಿಗೆ ಕಮ್​​ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇಂಡಿಯಾ ಎ ತಂಡದಲ್ಲಿರೋ ಕೆಎಲ್​​ ರಾಹುಲ್​ ಈ ಪಂದ್ಯಾವಳಿಯ ಸೆಂಟರ್​ ಆಫ್​ ಅಟ್ರಾಕ್ಷನ್ ಆಗಿದ್ದಾರೆ. ಈ ವರ್ಷದ ಇಂಗ್ಲೆಂಡ್​ ವಿರುದ್ಧ ಕೊನೆ ಟೆಸ್ಟ್​ ಆಡಿರೋ ರಾಹುಲ್​​ಗೆ ಕಮ್​ಬ್ಯಾಕ್ ಹಾದಿ ತುಂಬಾನೇ ರಿಸ್ಕಿಯಾಗಿದೆ. ಹೀಗಾಗಿ ದುಲೀಪ್​ ಟ್ರೋಫಿಯಲ್ಲಿ ರನ್ ಹೊಳೆ ಹರಿಸಲೇ ಬೇಕಿದೆ.

ಗಿಲ್ ಕ್ಯಾಪ್ಟನ್ಸಿಯಡಿ ಆಡುತ್ತಿರೋ ಕೆ.ಎಲ್ ರಾಹುಲ್

ಈಗಾಗ್ಲೇ ಟೀಂ ಇಂಡಿಯಾದಲ್ಲಿ ವೈಸ್ ಕ್ಯಾಪ್ಟನ್ಸಿ ಪಡೆದಿರೋ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಕೆಎಲ್ ರಾಹುಲ್ ದುಲೀಫ್ ಟ್ರೋಫಿಯಲ್ಲಿ ಆಡ್ಬೇಕಿದೆ. ಹೀಗಾಗಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಕೆಎಲ್​ಗೆ ಇದೆ. ಈ ಟೂರ್ನಿಯಲ್ಲಿ ಸದ್ದು ಮಾಡಿದ್ರೆ ಮಾತ್ರ ಬಾಂಗ್ಲಾ ಟೆಸ್ಟ್ ಸರಣಿಗೆ ರಾಹುಲ್​ರನ್ನ ಬಿಸಿಸಿಐ ಆಯ್ಕೆ ಕಮಿಟಿ ಪರಿಗಣಿಸಿಲಿದೆ. ಹಾಗೇ ಇಂಡಿಯಾ ಎ ತಂಡದ ಕ್ಯಾಪ್ಟನ್ ಆಗಿರೋ ಶುಭ್​​ಮನ್ ಕೂಡ​​​​​​​​​​​​​ ಪಂದ್ಯದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡೋ ನಿರೀಕ್ಷೆಯಲ್ಲಿದ್ದಾರೆ. ಇಂಡಿಯಾ ಎ ಕ್ಯಾಪ್ಟನ್​ ಗೆದ್ದೇ ತೀರಲು ಪಣತೊಟ್ಟಿದ್ರೆ, ಇತ್ತ ಇಂಡಿಯಾ ಬಿ ಟೀಂ ಭರ್ಜರಿ ಪೈಪೋಟಿಗೆ ಸಿದ್ಧವಾಗಿದೆ.

ಇನ್ನು ಬಾಂಗ್ಲಾ ಸರಣಿಗೆ ಆಯ್ಕೆಯಾಗಲು ಎದುರು ನೋಡ್ತಿರೋ ಟೀಂ ಇಂಡಿಯಾ ಸ್ಟಾರ್ಸ್​ ಕೂಡ  ಈ ಟೂರ್ನಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಲು ಕಾಯ್ತಿದ್ದಾರೆ. ಡೆಬ್ಯು ಟೆಸ್ಟ್​​ನಲ್ಲೆ ಸೆನ್ಷೆಷನ್​ ಸೃಷ್ಟಿಸಿದ್ದ ಸರ್ಫರಾಜ್​​ ಖಾನ್​​​ ದುಲೀಪ್​ ಟ್ರೋಫಿ ಅಗ್ನಿಪರೀಕ್ಷೆ ಕಣವಾಗಿ ಮಾರ್ಪಟ್ಟಿದೆ. ಬಾಂಗ್ಲಾ ಸರಣಿಗೆ ಆಯ್ಕೆಯಾಗಬೇಕಾದ್ರೆ ಮುಂಬೈಕರ್​ ಇಲ್ಲಿ ಪರ್ಫಾಮ್ ಮಾಡಲೇಬೇಕಿದೆ. ಯಾಕಂದ್ರೆ ಮಧ್ಯಮ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್​​​​​ ಹಾಗೂ ರಾಹುಲ್​​, ಸರ್ಫರಾಜ್ ಪೈಪೋಟಿ ಒಡ್ಡಿದ್ದಾರೆ. ಧ್ರುವ್ ಜುರೆಲ್​​, ರಿಷಬ್​​​ ಪಂತ್​​​​​, ಶ್ರೇಯಸ್ ಅಯ್ಯರ್​​ ಹಾಗೂ ಆವೇಶ್ ಖಾನ್​ ಇದು ಪ್ರಮುವಾಗಿದೆ. ದುಲೀಫ್ ಟ್ರೋಫಿಯಲ್ಲಿ ಫೇಲ್ ಆದ್ರೆ ಬಾಂಗ್ಲಾ ಟೆಸ್ಟ್​ ಸರಣಿಯಲ್ಲಿ ಆಡುವ ಕನಸು ನುಚ್ಚುನೂರಾಗಲಿದೆ. ಹೀಗಾಗಿ ಈ ಬಾರಿಯ ದುಲೀಪ್​ ಟ್ರೋಫಿ ಹಿಂದೆಂಗಿಂತಲೂ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇನ್ನು ಈ ಬಾರಿಯ ದುಲೀಪ್ ಟ್ರೋಫಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಇಲ್ಲಿ ಪ್ರತಿ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಹೆಚ್ಚು ಜಯ ಅಥವಾ ಡ್ರಾ ದೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವನ್ನು ಚಾಂಪಿಯನ್​ ಎಂದು ಘೋಷಿಸಲಾಗುತ್ತದೆ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವಿರುವುದಿಲ್ಲ. ಇನ್ನು ದುಲೀಪ್ ಟ್ರೋಫಿಯು ಟೆಸ್ಟ್ ಮಾದರಿಯಲ್ಲಿ ನಡೆಯುತ್ತಿದ್ದರೂ, ಈ ಪಂದ್ಯವು ನಾಲ್ಕು ದಿನದಾಟಗಳಿಗೆ ಸೀಮಿತವಾಗಿರಲಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲಿದೆ. ಅದರಲ್ಲೂ ಭಾರತ ಟೆಸ್ಟ್​ ತಂಡದ ಆಟಗಾರರು ಈ ಟೂರ್ನಿಯಲ್ಲಿ ವಿಫಲರಾದರೆ ಟೀಮ್ ಇಂಡಿಯಾದಿಂದ ಹೊರಬೀಳುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈ ಬಾರಿಯ ದುಲೀಪ್ ಟ್ರೋಫಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Shwetha M

Leave a Reply

Your email address will not be published. Required fields are marked *