ಡಾರ್ಲಿಂಗ್ ಕೃಷ್ಣ ಮನೆಗೆ ಬಂದ ಪುಟ್ಟ ಗೌರಿ.. – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮನೆಗೆ ಬಂದ ಪುಟ್ಟ ಗೌರಿ.. – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ಸ್ಯಾಂಡಲ್ ವುಡ್‌ ನಟಿ  ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್​ ಕೃಷ್ಣ ಮನೆಗೆ ಪುಟ್ಟಗೌರಿ ಆಗಮನವಾಗಿದೆ. ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಆಟ ಕಾಣಲ್ವಾ? – RCBಗೆ ಇನ್ನಾದರೂ ಬುದ್ದಿ ಬರುತ್ತಾ?

ಮೊದಲ ಮಗುವನ್ನು ಬರಮಾಡಿಕೊಂಡಿರುವ ಬಗ್ಗೆ ಡಾರ್ಲಿಂಗ್‌ ಕೃಷ್ಣ ಸೋಶಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದಾರೆ. ನಮಗೆ ಹೆಣ್ಣು ಮಗು ಜನಿಸಿದೆ. ತಾಯಿ, ಮಗು ಚೆನ್ನಾಗಿದ್ದಾರೆ. ಈ ಪಯಣದಲ್ಲಿ ಪತ್ನಿ ಮಿಲನಾ ನಾಗರಾಜ್ ಅನುಭವಿಸಿದ ಮಾತೃತ್ವದ ನೋವು, ತ್ಯಾಗ ಮತ್ತು ಅವರ ಧೈರ್ಯಕ್ಕೆ ಹೆಮ್ಮೆಪಡುತ್ತೇನೆ. ಅದ್ಭುತ ಪ್ರಯಾಣದಲ್ಲಿ ಸಾಗುತ್ತಿರುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಮಹಿಳೆಯರ ಬಗ್ಗೆ ಗೌರವ ದ್ವಿಗುಣಗೊಂಡಿದೆ. ಈ ಪ್ರಯಾಣ ನನಗೆ ಹೆಮ್ಮೆ ತಂದಿದೆ. ಜೊತೆಗೆ ಅದೃಷ್ಟದ ತಂದೆ ಆಗುತ್ತಿದ್ದೇನೆ. ನನಗೀಗ ಮಗಳಿದ್ದಾಳೆ ಎಂದು ಇನ್​ಸ್ಟಾಗ್ರಾಮ್​​​ನಲ್ಲಿ ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ಈ ಸ್ಟಾರ್​ ಜೋಡಿಯು 2021 ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. 2024ರಲ್ಲಿ ಚೊಚ್ಚಲ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.

Shwetha M