ಕನ್ನಡಿಗರ ಆಟ ಕಾಣಲ್ವಾ? – RCBಗೆ ಇನ್ನಾದರೂ ಬುದ್ದಿ ಬರುತ್ತಾ?
ಕರುಣ್, ಮನೋಜ್ ಭಾಂಡಗೆ ಚಾನ್ಸ್

ಕನ್ನಡಿಗರ ಆಟ ಕಾಣಲ್ವಾ? – RCBಗೆ ಇನ್ನಾದರೂ ಬುದ್ದಿ ಬರುತ್ತಾ?ಕರುಣ್, ಮನೋಜ್ ಭಾಂಡಗೆ ಚಾನ್ಸ್

ಕ್ರಿಕೆಟ್ ಅನ್ನೋದು ಕೇವಲ ಸ್ಟಾರ್ ಆಟಗಾರರಿಗೆ ಮಾತ್ರ ಸೀಮಿತವಲ್ಲ. ರಾಜ್ಯಗಳಲ್ಲಿ, ಅಷ್ಟೇ ಯಾಕೆ ಹಳ್ಳಿ ಹಳ್ಳಿಗಳಲ್ಲೂ ಪ್ರತಿಭಾವಂತ ಕ್ರಿಕೆಟರ್ಸ್ ಇದ್ದಾರೆ. ಅದರಲ್ಲೂ ನಮ್ಮ ರಾಜ್ಯದಲ್ಲೇ ಸ್ಟಾರ್ ಕ್ರಿಕೆಟರ್ಸ್ ಇದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಈಗ ನಡೆಯುತ್ತಿರೋ ಮಹಾರಾಜ ಟ್ರೋಫಿ ಟೂರ್ನಮೆಂಟ್. ಇಲ್ಲಿ ನಮ್ಮ ಕನ್ನಡಿಗ ಕ್ರಿಕೆಟರ್ಸ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕನ್ನಡಿಗರ ಕ್ರಿಕೆಟ್ ಅಬ್ಬರ ನೋಡಿ ಆರ್‌ಸಿಬಿ ಫ್ಯಾನ್ಸ್ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ಸ್ ಮಾಡ್ತಿದ್ದಾರೆ. ನಮ್ಮದೇ ಆಟಗಾರರಿಗೆ ಟೀಮ್ ನಲ್ಲಿ ಚಾನ್ಸ್ ಕೊಡಿ ಅಂತಾ ಕೇಳ್ತಿದ್ದಾರೆ. ಯಾರೆಲ್ಲಾ ಆರ್‌ಸಿಬಿ ಟೀಮ್ ಗೆ ಬೇಕು?. ಕನ್ನಡಿಗರ ಆಟ ಆರ್‌ಸಿಬಿ ಪ್ರಾಂಚೈಸಿ ಗಮನಕ್ಕೆ ಬರ್ತಿಲ್ವಾ? ಆರ್‌ಸಿಬಿ ಟೀಮ್ ಈ ಬಾರಿಯಾದ್ರೂ ಕನ್ನಡಿಗರಿಗೆ ಇಂಪಾರ್ಟೆನ್ಸ್ ಕೊಡುತ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಸಾಧನೆ – 1,303 ದಿನಗಳಿಂದ ಟೆಸ್ಟ್ ಗೆಲ್ಲದ ಪಾಕ್ ಗೆ ತೀವ್ರ ಮುಖಭಂಗ

ಈ ಬಾರಿ ನಡೆಯುತ್ತಿರೋ ಮಹಾರಾಜ ಟ್ರೋಫಿ ಮೇಲೆ ಆರ್‌ಸಿಬಿ ಫ್ಯಾನ್ಸ್ ಕಣ್ಣು ಬಿದ್ದಿದೆ. ಈ ಬಾರಿಯೇ ಯಾಕೆ ಇಷ್ಟೊಂದು ಹೈಪ್ ಅಂತೀರಾ. ಈ ಬಾರಿಯೇ ಐಪಿಎಲ್ ನ ಮೆಗಾ ಆಕ್ಷನ್ ನಡೆಯಲಿದೆ. ಇಲ್ಲಿ ಆರ್‌ಸಿಬಿ ಕೂಡಾ ಬೆಸ್ಟ್ ಟೀಮ್ ಕಟ್ಟಬೇಕಿದೆ. ಹೀಗಾಗಿ ನೀವು ಕನ್ನಡಿಗ ಕ್ರಿಕೆಟರ್ಸ್ ನ್ನೇ ಪಿಕ್ ಮಾಡಿ ಅಂತಿದ್ದಾರೆ ಆರ್‌ಸಿಬಿ ಫ್ಯಾನ್ಸ್.

ತ್ರಿಶತಕ ವೀರ ಕನ್ನಡಿಗ RCBಗೆ ಬೇಡವೇ? -ಕರುಣ್ ನಾಯರ್ ತಾಕತ್ತು ಇನ್ನೂ ಅರ್ಥವಾಗ್ತಿಲ್ವಾ?

ಕರುಣ್ ನಾಯರ್ ತ್ರಿಶತಕ ವೀರ. ಆದರೆ, ಅದೆಷ್ಟೇ ಸಾಧನೆ ಮಾಡಿದ್ರೂ, ಅದೆಷ್ಟೇ ರನ್ ಹೊಳೆ ಸುರಿಸಿದ್ರೂ ಈತನಿಗೆ ಕ್ರಿಕೆಟ್ ನಲ್ಲಿ ಆಗಿರೋ ಅನ್ಯಾಯ ಯಾರಿಗೂ ಆಗಿಲ್ಲ. ಒಂದ್ ರೀತಿಯಲ್ಲಿ ಹೇಳೋದಾದ್ರೆ, ಈ ಕನ್ನಡಿಗ ಕರುಣ್ ನಾಯರ್ ಒಂಥರಾ ಅನ್ ಲಕ್ಕಿ ಪ್ಲೇಯರ್. ಈತನ ಜಾಗದಲ್ಲಿ, ಕರುಣ್ ಹೊಡೆದ ರನ್ ಗಳನ್ನ ಯಾವುದಾದರೂ ಮುಂಬೈ ಆಟಗಾರ ಹೊಡೆದಿದ್ರೆ ಲೆಕ್ಕಾಚಾರವೇ ಬೇರೆ ಆಗ್ತಿತ್ತು. ಕರುಣ್ ಥರಾ ಆಟ ಆಡೋ ಯಾವೊಬ್ಬ ಮುಂಬೈಕರ್ ನನ್ನ ಸುಮ್ಮನೆ ಕೂರಿಸೋದೇ ಇಲ್ಲ. ಆದ್ರೆ, ನಮ್ಮ ಕನ್ನಡಿಗರಿಂದರೆ ಅದ್ಯಾಕೋ ಅಸಡ್ಡೆ. ಬೇರೆ ಬಿಡಿ ನಮ್ಮ ಬೆಂಗಳೂರು ತಂಡವೆಂದೇ ಐಪಿಐಲ್ ನಲ್ಲಿ ಕಣಕ್ಕಿಳಿದ ಆರ್‌ಸಿಬಿಗೂ ಈ ಕನ್ನಡಿಗನ ತಾಕತ್ತೂ ಅರ್ಥವಾಗ್ತಿಲ್ಲ.  ಭಾರತೀಯ ಕ್ರಿಕೆಟ್ ನಲ್ಲಿ ಸದಾ ತುಳಿತಕ್ಕೊಳಗಾಗುತ್ತಲೇ ಬಂದಿದ್ದಾರೆ ಕರುಣ್ ನಾಯರ್. 8 ವರ್ಷಗಳ ಹಿಂದೆ ಕರುಣ್ ನಾಯರ್ ಮಾಡಿದ ಸಾಧನೆಯನ್ನ ಮರೆಯಲು ಸಾಧ್ಯವೇ ಇಲ್ಲ ಬಿಡಿ. ಟೆಸ್ಟ್ ಕ್ರಿಕೆಟ್ ನಲ್ಲಿ ನಮ್ಮ ಕರುಣ್ ನಾಯರ್ ತ್ರಿಶತಕ ಸಿಡಿಸಿದ್ದರು. ಆದ್ರೆ, ಟೀಮ್ ಇಂಡಿಯಾದಲ್ಲಿ ಟೆಸ್ಟ್ ಸರಣಿಗೆ ಆಯ್ಕೆ ಮಾಡುವಾಗಲೆಲ್ಲಾ ಕರುಣ್ ನಾಯರ್ ಎಂಬ ದಾಖಲೆ ವೀರ ನಮ್ಮೊಳಗಿದ್ದಾನೆ ಅನ್ನೋದನ್ನ ಯಾರೂ ಕೂಡಾ ನೆನಪಿಸಿಕೊಳ್ತಿಲ್ಲ. ಟೀಮ್ ಇಂಡಿಯಾದಲ್ಲಿ ಯಾವ್ಯಾವುದೋ ಕಾರಣಕ್ಕೆ ಸ್ಥಾನ ಸಿಗಲಿಲ್ಲ ಓಕೆ. ಹಾಗಂತಾ ಕರ್ನಾಟಕದಲ್ಲಾದ್ರು ಇಂಥಾ ತಾಕತ್ತು ಇರೋ ಬ್ಯಾಟರ್ ಗೆ ಚಾನ್ಸ್ ಕೊಡಬಹುದಲ್ವಾ. ಕರ್ನಾಟಕದಲ್ಲಿ ಚಾನ್ಸ್ ಸಿಗದೆ ಇದ್ದಾಗ ಕರುಣ್ ನಾಯರ್ ವಿದರ್ಭಕ್ಕಾಗಿ ಆಡಿದ್ರು. ಅಲ್ಲಿ ತಾನು ಬೆಸ್ಟ್ ಕ್ರಿಕೆಟರ್ ಅನ್ನೋದನ್ನ ಪ್ರೂವ್ ಮಾಡಿದ್ರು. ಇತ್ತೀಚೆಗೆ ಡೊಮೆಸ್ಟಿಕ್‌ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕರುಣ್ ನಾಯರ್ ಈಗ ಮಹಾರಾಜ ಟ್ರೋಫಿಯಲ್ಲೂ ಅಬ್ಬರಿಸುತ್ತಿದ್ದಾರೆ. ಕರುಣ್ ನಾಯರ್ ಅಬ್ಬರ ನಮ್ಮ ಆರ್‌ಸಿಬಿ ಮ್ಯಾನೇಜ್ ಮೆಂಟ್ ಕಣ್ಣು ತೆರೆಸಲಿ ಅಂತಿದ್ದಾರೆ ಫ್ಯಾನ್ಸ್.

IPLನಲ್ಲಿ ಬೆಂಚ್ ಕಾದ ಮನೋಜ್ ಭಾಂಡಗೆ ಅವಕಾಶ ನೀಡದೇ ಸತಾಯಿಸಿದ RCB

ನಮ್ಮವರ ತಾಕತ್ತು ನಮಗೆ ಗೊತ್ತಾಗಲ್ಲ ಅಂತಾ. ಈಗ ನೋಡಿ ಮಹರಾಜಾ ಟಿ20 ಟೂರ್ನಿಯಲ್ಲಿ ನಮ್ಮ ರಾಯಚೂರು ಹುಡುಗ ಆಡಿರೋ ರೀತಿಗೆ ಫ್ಯಾನ್ಸ್ ಆರ್‌ಸಿಬಿ ಮ್ಯಾನೇಜ್ ಮೆಂಟ್ ನ್ನ ತರಾಟೆಗೆ ತೆಗೆದುಕೊಳ್ತಿದ್ದಾರೆ. ಮನೋಜ್ ಭಾಂಡಗೆ ಬಲಗೈ ಮಧ್ಯಮ ವೇಗಿ. ಎಡಗೈ ದಾಂಡಿಗ. ಪವರ್ ಹಿಟ್ಟಿಂಗ್ ಸಿಕ್ಸರ್ ಭಾರಿಸೋದ್ರಲ್ಲಿ ಎಕ್ಸ್‌ಫರ್ಟ್. ಇಂಥಾ ಟ್ಯಾಲೆಂಟ್ ಇರೋ ಕನ್ನಡಿಗನನ್ನ ಎರಡು ಸೀಸನ್ ಗಳಲ್ಲಿ ಆರ್‌ಸಿಬಿ ಕೇವಲ ಬೆಂಚ್ ಬಿಸಿ ಮಾಡಲು ಬಳಸಿಕೊಂಡಿತ್ತು. ಬಹುಷಃ ಈಗಲಾದ್ರೂ ಆರ್‌ಸಿಬಿ ಮ್ಯಾನೇಜ್ ಮೆಂಟ್ ಮಹಾರಾಜಾ ಟ್ರೋಫಿ ಟೂರ್ನಿಯನ್ನ ಅಬ್ಸವ್ರ್ ಮಾಡ್ತಿದ್ರೆ ಇಂಥಾ ಪ್ರತಿಭೆಗಳಿಗೆ ಒಂದು ಚಾನ್ಸ್ ಕೊಡಬಹುದು. ಬಂಗಾರ ನಮ್ಮಲ್ಲೇ ಇದ್ರೂ ಬೇರೆ ದೇಶದಿಂದ ಹುಡುಕಿ ತರ್ತಿದ್ದಾರಲ್ಲಾ, ಇಂಥವರಿಗೆ ಏನ್ ಹೇಳ್ಬೇಕೋ..

GT ಬಿಟ್ಟು RCB ಸೇರ್ತಾರಾ ಪವರ್ ಹಿಟ್ಟರ್ – IPLನಲ್ಲಿ ಮೌಲ್ಯ ಹೆಚ್ಚಿಸಿಕೊಳ್ತಾರಾ ಅಭಿನವ್ ಮನೋಹರ್‌?

ಅಸಾಧಾರಣ ಬ್ಯಾಟಿಂಗ್‌ ಮೂಲಕ ತಂಡದ ಪರ ಏಕಾಂಗಿ ಹೋರಾಟ ನಡೆಸೋ ಸ್ಟಾರ್ ಕ್ರಿಕೆಟರ್ ಅಂದರೆ ಅಭಿನವ್ ಮನೋಹರ್. ಪವರ್‌ ಹಿಟ್ಟರ್ ಅಭಿನವ್ ಮನೋಹರ್‌ ಅಬ್ಬರ ಈ ಬಾರಿ ಮಹಾರಾಜ ಟ್ರೋಫಿ ಟೂರ್ನಿಯಲ್ಲಂತೂ ಜೋರಾಗಿಯೇ ಇತ್ತು. ಅಭಿನವ್ ಮನೋಹರ್‌, 10 ಪಂದ್ಯಗಳಲ್ಲಿ ಬರೋಬ್ಬರಿ 507 ರನ್‌ಗಳನ್ನು ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಕೇವಲ ಸಿಕ್ಸರ್‌ಗಳಿಂದಲೇ 312 ರನ್‌ ಕಲೆಹಾಕಿದ್ದಾರೆ. ಬರೋಬ್ಬರಿ 52 ಸಿಕ್ಸರ್‌ ಕಲೆಹಾಕಿದ್ದಾರೆ ಅಭಿನವ್. ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಅಭಿನವ್‌ ಮನೋಹರ್‌ ಅವರು ಮುಂಬರುವ ಮೆಗಾ ಆಕ್ಷನ್‌ಗೆ ಬರಲಿ ಅಂತಾನೇ ಕಾಯ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್. ಐಪಿಎಲ್‌ ಅಖಾಡದಲ್ಲಿ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ತಮ್ಮದೇ ಛಾಪು ಮೂಡಿಸಿರುವ 29 ವರ್ಷದ ಅಭಿನವ್, ಈ ಬಾರಿ ಜಿಟಿ ತಂಡದಲ್ಲಿ ಉಳಿಯೋದು ಡೌಟ್. ಹೀಗಾಗಿ ಮುಂಬರುವ ಮೆಗಾ ಆಕ್ಷನ್‌ಗೆ ಗುಜರಾತ್‌ ಟೈಟನ್ಸ್‌ ಫ್ರಾಂಚೈಸಿ ಬಿಟ್ಟುಕೊಟ್ಟಿದ್ದೇ ಆದರೆ, ಭಾರಿ ಬೆಲೆಗೆ ಮಾರಾಟವಾಗ್ತಾರೆ. ಹಾಗೇ ಮಾರಾಟವಾದ್ರೆ ಆರ್‌ಸಿಬಿಗೇ ಆಗಲಿ ಅಂತಿದ್ದಾರೆ ಫ್ಯಾನ್ಸ್. ಮನೆಯಲ್ಲೇ ತುಪ್ಪ ಇಟ್ಕೊಂಡು ಊರೂರು ಅಲೆಯೋದಾದ್ರೂ ತಪ್ಪುತ್ತೆ ಅಂತಾ ಆರ್‌ಸಿಬಿ ಪ್ರಾಂಚೈಸಿಗೆ ಫ್ಯಾನ್ಸ್ ಬುದ್ದಿಮಾತು ಹೇಳ್ತಿದ್ದಾರೆ.

ನಮ್ಮ ಕರ್ನಾಟಕದಲ್ಲೇ ಎಂತೆಂಥಾ ಕ್ರಿಕೆಟರ್ಸ್ ಇದ್ದಾರೆ ಅಂತಾ ಇದ್ರಿಂದ ಗೊತ್ತಾಗುತ್ತೆ. ಇಂಥಾ ಬೆಸ್ಟ್ ಕ್ರಿಕೆಟಿಗರು ನಮ್ಮಲ್ಲೇ ಇರುವಾಗ ಆರ್‌ಸಿಬಿ ಯಾಕೆ ಬ್ಯಾಟ್ ಬೀಸಲು ಮರೆತವರನ್ನ ಕರೆದು ಟೀಮ್ ಕಟ್ಟುತ್ತೋ? ಗೊತ್ತೇ ಆಗಲ್ಲ.

Shwetha M

Leave a Reply

Your email address will not be published. Required fields are marked *