ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ – ಕ್ರೀಡಾಪಟುಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ – ಕ್ರೀಡಾಪಟುಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಭಾರತದ ಕ್ರೀಡಾಪಟುಗಳು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. 6 ದಿನಗಳಲ್ಲಿ ಭಾರತ ಕ್ರೀಡಾಪಟುಗಳು ಒಟ್ಟು 20 ಪದಕಗಳನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಇದನ್ನೂ ಓದಿ: IND Vs BAN.. ಸೂರ್ಯ ಆಡಲ್ವಾ? – ಟಿ-20 ಸ್ಪೆಷಲಿಸ್ಟ್ ಟೆಸ್ಟ್ ನಲ್ಲಿ ಫೇಲ್

ಪ್ಯಾರಾಲಿಂಪಿಕ್ಸ್‌ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಸದ್ಯ ಭಾರತ ಪದಕ ಪಟ್ಟಿ 20ಕ್ಕೆ ಹೆಚ್ಚಾಗಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದಿದೆ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕ್ರೀಡಾಪಟುಗಳಿಗೆ ಕರೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ಪ್ರವಾಸದಲ್ಲಿದ್ದು, ಇದರ ನಡುವೆ ಬಿಡುವು ಮಾಡಿಕೊಂಡು ಭಾರತೀಯ ಕ್ರೀಡಾಪಟುಗಳನ್ನು ಕರೆ ಮಾಡಿ ಹುರಿದುಂಬಿಸಿರುವುದು ವಿಶೇಷ. ಅಲ್ಲದೆ ಈ ವೇಳೆ ಭಾರತದ ಪ್ಯಾರಾಲಿಂಪಿಕ್ ಆಟಗಾರರಾದ ಯೋಗೇಶ್ ಕಥುನಿಯಾ, ಸುಮಿತ್ ಅಂತಿಲ್, ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರೊಂದಿಗೆ ಮಾತನಾಡಿದರು.

ಕ್ರೀಡಾಪಟುಗಳಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ, ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಶ್ಲಾಘಿಸಿದರು. ಇದೇ ವೇಳೆ ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಯೋಗೇಶ್ ಕಥುನಿಯಾ ಅವರೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ, ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಯೋಗೇಶ್ ಕಥುನಿಯಾ ಅವರ ತಾಯಿಯು ಗರ್ಭಕಂಠದ ಸಮಸ್ಯೆಯಿಂದ ಬಳಲುತ್ತಿದ್ದು, ಇದಾಗ್ಯೂ ಮಗ ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಮಗನನ್ನು ಹೆತ್ತ ತಾಯಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

ಇದೇ ವೇಳೆ ವಿದೇಶಿ ಪ್ರವಾಸದಲ್ಲಿದ್ದರೂ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಮಾಹಿತಿ ಪಡೆಯುತ್ತಿರುವ ಪ್ರಧಾನಿಯ ನಡೆಗೆ ಯೋಗೇಶ್ ಧನ್ಯವಾದಗಳನ್ನು ಅರ್ಪಿಸಿದರು. ಈ ಶ್ಲಾಘನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ನಾನು ಜಗತ್ತಿನ ಎಲ್ಲೇ ಇರಲಿ, ನಾನು ಭಾರತದಲ್ಲಿ ವಾಸಿಸುತ್ತಿರುತ್ತೇನೆ ಎಂದರು.

Shwetha M

Leave a Reply

Your email address will not be published. Required fields are marked *