ಮತ್ತೊಂದು ಮದುವೆಗೆ ಮುರಳಿ ರೆಡಿ! – ಮಂಟಪಕ್ಕೆ ಬಂದ ಸಹನಾ
ಮದುವೆಗೆ ಒಪ್ಪಿದ್ಲಾ ಪುಟ್ಟಕ್ಕನ ಮಗಳು?

ಮತ್ತೊಂದು ಮದುವೆಗೆ ಮುರಳಿ ರೆಡಿ! – ಮಂಟಪಕ್ಕೆ ಬಂದ ಸಹನಾಮದುವೆಗೆ ಒಪ್ಪಿದ್ಲಾ ಪುಟ್ಟಕ್ಕನ ಮಗಳು?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಈಗ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಿದೆ..  ಪುಟ್ಟಕ್ಕಳ ಹಿರಿಯ ಮಗಳು ಸಹನಾ ಬದುಕಿರುವ ವಿಚಾರ ಎಲ್ಲರಿಗೂ ಗೊತ್ತಾಗೋ ಟೈಮ್‌ ಹತ್ತಿರವಾಗಿದೆ.. ಸಹನಾ ಬದುಕಿರುವ ವಿಚಾರ ಕಾಳಿಗೆ ಗೊತ್ತಾಗಿದೆ. ಆದ್ರೆ ಸತ್ಯ ಯಾರಿಗೂ ಹೇಳೋಕೆ ಆಗದೇ ಒದ್ದಾಡ್ತಾ ಇದ್ದಾನೆ.. ಮತ್ತೊಂದು ಕಡೆ  ಸಹನಾಳ ಗಂಡ ಮುರಳಿ ಎರಡನೇ ಮದುವೆಯಾಗಲು ರೆಡಿ ಆಗಿದ್ದಾನೆ. ಇದೀಗ ಸಹನಾ ಮದುವೆ ಹಾಲ್‌ಗೆ ಬಂದು ಬಿಟ್ಟಿದ್ದಾಳೆ.. ಈಗ ಗಂಡನ ಮದುವೆ ವಿಚಾರ ಗೊತ್ತಾಗಿದೆ. ಇದೀಗ ಮದುವೆ ನಿಲ್ಲತ್ತಾ? ಅಥವಾ ಮುರಳಿ ಮದುವೆ ನಡೆಯಲಿದೆಯಾ ಅನ್ನೋ ಕುತೂಹಲ ಕೆರಳಿದೆ.

ಇದನ್ನೂ ಓದಿ: IND Vs BAN.. ಸೂರ್ಯ ಆಡಲ್ವಾ? – ಟಿ-20 ಸ್ಪೆಷಲಿಸ್ಟ್ ಟೆಸ್ಟ್ ನಲ್ಲಿ ಫೇಲ್

ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂದುಕೊಂಡಿರೋ ಸಹನಾ ಸ್ವಂತ ದುಡಿಮೆ ಶುರು ಮಾಡಿದ್ದಾಳೆ. ಊರಿನಿಂದ ಬಹುದೂರದ ಬೆಂಗಳೂರಿಗೆ ಬಂದು ಕ್ಯಾಂಟೀನ್​ ಶುರು ಮಾಡಿಕೊಂಡಿದ್ದಾಳೆ. ತನಗೋಸ್ಕರ ತನ್ನ ತಾಯಿ ಬೆಂಗಳೂರಿಗೆ ಬಂದು ಊರೂರು ಅಲೆದರೂ ಕೂಡ ಸಹನಾ ಮಾತ್ರ ತಾನು ಬದುಕಿರುವ ವಿಷಯವನ್ನು ರಿವೀಲ್ ಮಾಡಲೇ ಇಲ್ಲ. ಇನ್ನೊಂದು ಕಡೆ ಕಾಳಿ ಕಂಡರೂ ಕೂಡ ಅವನಿಗೂ ಅವಳು ಈ ವಿಷಯವನ್ನು ಯಾರಿಗೂ ಹೇಳಬೇಡ ಅಂತ ಹೇಳಿದ್ದಾಳೆ. ಇತ್ತ  ಸಹನಾ ಸತ್ತು ಹೋದಳು ಎಂಬ ದುಃಖದಲ್ಲಿದ್ದ ಮುರಳಿ ಕುಡಿದು, ಕುಡಿದು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದ. ಮುರಳಿಯನ್ನು ಈ ರೀತಿ ನೋಡಲಾಗದೆ ಪುಟ್ಟಕ್ಕ, ಆತನಿಗೆ ಎರಡನೇ ಮದುವೆ ಮಾಡಿಸಲು ಮುಂದಾಗಿದ್ದಾಳೆ.. ಮುರಳಿ ಜೊತೆ ಕೆಲಸ ಮಾಡುತ್ತಿದ್ದ ಟೀಚರ್‌ ಜೊತೆ ಮದುವೆ ಮಾಡಿಸಲು ಪುಟ್ಟಕ್ಕ ಮುಂದಾಗಿದ್ದಾಳೆ.

ತನ್ನೊಂದಿಗೆ ಇದ್ದಾಗ ತಾಯಿ ಮಾತು ಕೇಳಿ ಸಹನಾಗೆ ಕಾಟ ಕೊಡ್ತಿದ್ದ ಮುರಳಿಗೆ ಹೆಂಡತಿಯನ್ನ ಮರೆಯಲು ಆಗ್ತಿಲ್ಲ..  ಆದರೆ ಪುಟ್ಟಕ್ಕನ ಒತ್ತಾಯಕ್ಕೆ ಮಣಿದು ಅವನು ಇನ್ನೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈಗ ಮುರಳಿ ಮದುವೆಯ ಊಟದ ಕಾಂಟ್ರ್ಯಾಕ್ಟ್ ಸಹನಾಗೆ ಸಿಕ್ಕಿದೆ. ಸಹನಾಳೇ ಈ ಮದುವೆ ಹಾಲ್‌ಗೆ ಬಂದಿದ್ದಾಳೆ. ಆಗ ಕಂಠಿ ಅವಳಿಗೆ ನಿನ್ನ ಗಂಡನ ಮದುವೆ ಆಗ್ತಿದೆ. ವಿನುತಾಳನ್ನ ಮದುವೆ ಆಗ್ತಿದ್ದಾನೆ ಅಂತಾ ಹೇಳಿದ್ದಾನೆ. ಇದನ್ನು ಕೇಳಿ ಸಹನಾ ಕುಸಿದು ಬೀಳ್ತಾಳೆ.

ಇತ್ತ ಸಹನಾ ಬದುಕಿರುವ ವಿಚಾರ ಮದುವೆ ಹೆಣ್ಣು ವಿನುತಾಗೆ ಗೊತ್ತಾಗಿದೆ. ಆಗ ನೀವು ಬದುಕಿರೋ ಸತ್ಯ ಎಲ್ಲರಿಗೂ ಗೊತ್ತಾಗ್ಲಿ.. ಅಂತಾ ಹೇಳಿದ್ದಾಳೆ.. ಆದ್ರೆ ಸಹನಾ ನನ್ನ ಮದುವೆ ಜೀವನ ಮುಗಿದು ಹೋಗಿದೆ. ಮುಹೂರ್ತಕ್ಕೆ ಟೈಮ್‌ ಆಯ್ತು.. ನೀವು ಹೋಗಿ ಅಂತಾ ಹೇಳಿದ್ದಾಳೆ. ಈ ಟೈಮ್‌ನಲ್ಲೇ ಸ್ನೇಹ ಹಾಗೂ ಸುಮಾ ಎಂಟ್ರಿ ಕೊಟ್ಟಿದ್ದಾರೆ.. ಇದೀಗ ಸಹನಾ ತಂಗಿಯರ ಕಣ್ಣಿಗೆ ಬೀಳ್ತಾಳಾ? ಸ್ನೇಹ ಮುರಳಿ ಮದುವೆ ತಡಿತಾಳ ಅಂತಾ ವೀಕ್ಷಕರಲ್ಲಿ ಕುತೂಹಲ ಮೂಡಿದೆ.

Shwetha M