ಡೆಂಗ್ಯೂ  ‘ಸಾಂಕ್ರಾಮಿಕ ಕಾಯಿಲೆ’- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ!

ಡೆಂಗ್ಯೂ  ‘ಸಾಂಕ್ರಾಮಿಕ ಕಾಯಿಲೆ’- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ!

ಕರ್ನಾಟಕದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ.  ಡೆಂಗ್ಯೂ ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಪಣತೊಟ್ಟಿದೆ.  ಈ ಹಿನ್ನಲೆ ಡೆಂಗ್ಯೂ  ವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಸರ್ಕಾರ ಘೋಷಿಸಿದೆ. ಇನ್ನು ಮುಂದೆ ಸ್ವಚ್ಚತೆ  ಕಾಪಾಡದವರಿಗೆ ದಂಡ ಬೀಳಲಿದೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್‌ ಸಂಕಷ್ಟ! – 23 ದಿನಗಳಲ್ಲಿ ಎರಡನೇ ಬಾರಿಗೆ ನಾಡದೇವತೆ ದರ್ಶನ ಪಡೆದ ಸಿಎಂ

ಹೌದು, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡಿ ಆಗಸ್ಟ್ 31ರ ಕರ್ನಾಟಕ ಗೆಜೆಟ್​​ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಮನೆ, ಖಾಲಿ ಜಾಗ, ಕಟ್ಟಡದ ಬಳಿ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮವಹಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ  ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

  • ನಿಯಮಗಳು ಹೀಗಿವೆ
  • ಸೊಳ್ಳೆಗಳ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು.
  • ಆಯಾ ಜಾಗದ ಮಾಲೀಕರು ಸೊಳ್ಳೆ ಬಾರದಂತೆ ಕ್ರಮ ವಹಿಸಬೇಕು.
  • ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು.
  • ನಿವೇಶನ ಅಥವಾ ಖಾಲಿ ಜಾಗದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಆ ರೀತಿ ಕಂಡು ಬಂದರೆ ನೋಟೀಸ್ ನೀಡಬೇಕು.
  • 24 ಗಂಟೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ.
  • ಸ್ವತ್ತಿನ ಮಾಲೀಕರು ನಿಗಾ ವಹಿಸಿದೆ ಇದ್ದರೆ, ಸಂಬಂಧ ಪಟ್ಟ ಅಧಿಕಾರಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು.
  • ರಾಸಾಯನಿಕವನ್ನು ಸಿಂಪಡಿಸಬೇಕು. ಇದಕ್ಕೆ ಖರ್ಚಾದ ವೆಚ್ಚವನ್ನು ಸಂಬಂಧ ಪಟ್ಟವರು ನೀಡುವಂತೆ ಕ್ರಮ ವಹಿಸಬೇಕು.
  • ಬಿಬಿಎಂಪಿ ಹಾಗೂ ಮಂಗಳೂರಿನಲ್ಲಿ ತೆರೆದ ಸ್ಥಳದಲಿ ನಿಂತ ನೀರನ್ನ ತೆರವುಗೊಳಿಲು ಆಯಾ ಮಾಲೀಕರೇ ಹೊಣೆ ಸೊಳ್ಳೆ ಉತ್ಪತ್ತಿಯಾಗುವ ಸ್ಥಳವನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.

ಸ್ವಚ್ಛತೆ ಕಾಪಾಡದವರಿಗೆ ಬೀಳಲಿದೆ ದಂಡ

  • ಮನೆಗಳಿಗೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನಿಯಮ ಉಲ್ಲಂಘಿಸಿದರೆ – 400 ರೂಪಾಯಿ ದಂಡ – ನಗರ ಪ್ರದೇಶ ಗ್ರಾಮಾಂತರದಲ್ಲಿ ಓಳಾಂಗಣ ಹಾಗೂ ಹೊರಾಂಗಣಕ್ಕೆ 200 ರೂಪಾಯಿ ದಂಡ.
  • ರೆಸ್ಟೋರಂಟ್ , ಹೋಟೆಲ್, ತಿನಿಸುಗಳು, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ, ಮಾರ್ಕೆಟ್, ಪಾರ್ಕ್, ಮಾಲ್, ಸೂಪರ್ ಮಾರ್ಕೆಟ್ , ತೆಂಗಿನಕಾಯಿ ಮಾರಾಟಗಾರರು, ಕಾರ್ಖಾನೆ, ಕೈಗಾರಿಕೆ, ಥಿಯೇಟರ್, ಶಾಲೆಗಳು, ವಾಣಿಜ್ಯ ಸಂಸ್ಥೆಗಳು, ಕನ್ವೆಷನ್ ಹಾಲ್, ಇವುಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ ನಗರ ಪ್ರದೇಶದಲ್ಲಿ 1 ಸಾವಿರ ರೂ ದಂಡ. ಗ್ರಾಮಾಂತರ ಭಾಗದಲ್ಲಿ 500 ರೂಪಾಯಿ ದಂಡ.
  • ತೆರೆದ ಸ್ಥಳಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ – ನಗರದ ಪ್ರದೇಶದಲ್ಲಿ 2 ಸಾವಿರ ರೂಪಾಯಿ ದಂಡ, ಗ್ರಾಮಾಂತರದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

 

Shwetha M