ರೀಲ್ ಅಲ್ಲ.. ರಿಯಲ್‌ ಆಗೇ ಅನಾರೋಗ್ಯ! – ಸೀತಾರಾಮ ಪ್ರಿಯಾಗೆ ಏನಾಯ್ತು?
ಶಾಕಿಂಗ್‌ ವಿಚಾರ ಹೇಳಿದ ಮೇಘನಾ

ರೀಲ್ ಅಲ್ಲ.. ರಿಯಲ್‌ ಆಗೇ ಅನಾರೋಗ್ಯ! – ಸೀತಾರಾಮ ಪ್ರಿಯಾಗೆ ಏನಾಯ್ತು?ಶಾಕಿಂಗ್‌ ವಿಚಾರ ಹೇಳಿದ ಮೇಘನಾ

ಜೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಅತ್ತ ಸಿಹಿ ತಂದೆ ಯಾರು ಅನ್ನೋ ಸತ್ಯ ಗೊತ್ತಾಗುತ್ತಾ ಅನ್ನೋ ಕುತೂಹಲ ಇದ್ರೆ.. ಇತ್ತ ಪ್ರಿಯಾಗೆ ಗಂಭೀರ ಕಾಯಿಲೆ ಇದೆ ಅಂತಾ ತೋರಿಸಲಾಗ್ತಿದೆ. ಈಗ ವೀಕ್ಷಕರು ಪ್ರಿಯಾಗೆ ಏನಾಯ್ತು ಅಂತಾ ತಲೆಕೆಡಿಸಿಕೊಂಡಿದ್ದಾರೆ.. ಈ ಹೊತ್ತಲ್ಲೇ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ  ಶೂಟಿಂಗ್‌ನಲ್ಲಿ ಭಾಗಿಯಾಗಲ್ಲ ಅಂತಾ ಹೇಳಿದ್ದಾರೆ.. ಅಷ್ಟೇ ಅಲ್ಲ ಶಾಕಿಂಗ್‌ ವಿಚಾರವನ್ನ ಕೂಡ ಫ್ಯಾನ್ಸ್‌ಗೆ ಹೇಳಿದ್ದಾರೆ.. ಅಷ್ಟಕ್ಕೂ ಮೇಘನಾಗೆ ಏನಾಯ್ತು? ಯಾಕೆ ಶೂಟಿಂಗ್‌ ಗೆ ಬರಲ್ಲ ಅಂತಾ ಹೇಳಿದ್ರು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 6 ವರ್ಷಗಳಿಂದ ಟೆಸ್ಟ್ ಗಿಲ್ಲ ಪಾಂಡ್ಯ – ಸೀಮಿತ ಓವರ್​ ನಲ್ಲಷ್ಟೇ ಹಾರ್ದಿಕ್ ಆಟ?

ಸೀತಾರಾಮ ಸೀರಿಯಲ್‌ ನಲ್ಲಿ ಪ್ರಿಯಾ ಪಾತ್ರ ವೀಕ್ಷಕರ ಮನಗೆದ್ದಿದೆ.. ಯಾವಾಗಲೂ ಪಟ ಪಟ ಅಂತ ಮಾತನಾಡುವ ಪ್ರಿಯಾ ಅಶೋಕ್‌ನನ್ನು ಪ್ರೀತಿಸಿ ಮದುವೆಯಾಗ್ತಾಳೆ. ನಾಯಕಿ ಸೀತಾಳ ಫ್ರೆಂಡ್ ಆಗಿರೋ ಪ್ರಿಯಾಗೆ ಒಳ್ಳೆಯ ಮನಸ್ಸಿದೆ. ಸ್ವಲ್ಪ ದಪ್ಪ ಆದರೂ ತಲೆ ಕೆಡಿಸಿಕೊಳ್ಳುವ ಪ್ರಿಯಾ ತುಂಬಾನೆ ರೊಮ್ಯಾಂಟಿಕ್. ಎಲ್ಲರನ್ನ ಫ್ರೆಂಡ್ಲಿಯಾಗಿ ಕಾಣ್ತಾಳೆ.. ಹೀಗಿರುವಾಗ ಅವಳಿಗೆ ಗಂಭೀರ ಕಾಯಿಲೆ ಇದೆ ಅಂತಾ ಗೊತ್ತಾಗಿದೆ.  ಆದ್ರೆ ಈ ವಿಷಯ ಅವಳಿಗೆ ಗೊತ್ತಿಲ್ಲ. ಮಗು ಬೇಕು ಎಂದು ಆಸೆಪಡುತ್ತಿದ್ದ ಪ್ರಿಯಾಗೆ ಈ ರೀತಿ ಕಾಯಿಲೆ ಇರೋದು ಗೊತ್ತಾದರೆ ತುಂಬ ಬೇಸರ ಮಾಡಿಕೊಳ್ತಾಳೆ ಅಂತ ಅಶೋಕ್‌ ಈ ವಿಷಯವನ್ನು ಮುಚ್ಚಿಟ್ಟಿದ್ದಾನೆ. ಮೇಘನಾ ಶಂಕರಪ್ಪ ಪ್ರಿಯಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ.. ಸೀರಿಯಲ್‌ ಜೊತೆ ಜೊತೆಗೆ ಮೇಘನಾ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲೂ ಮಿಂಚುತ್ತಿದ್ದರು.. ಆದ್ರೀಗ ಪ್ರಿಯಾ ಪಾತ್ರಧಾರಿ ಮೇಘನಾ ಶಾಕಿಂಗ್‌ ವಿಚಾರ ತಿಳಿಸಿದ್ದಾರೆ. ಏಕಾಏಕಿ ತಾನು ಕೆಲ ದಿನಗಳ ಕಾಲ ಸೀತಾರಾಮ ಸೀರಿಯಲ್‌ ಹಾಗೂ ಡಿಕೆಡಿ ಶೂಟಿಂಗ್‌ನಲ್ಲಿ ಭಾಗಿಯಾಗಲ್ಲ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಕಾರಣವನ್ನ ಕೂಡ ಹೇಳಿದ್ದಾರೆ.

ಸೀತಾರಾಮ ಸೀರಿಯಲ್‌ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  ರಿಯಾಲಿಟಿ ಶೋನಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆದುಕೊಳ್ತಿದೀನಿ ಎಂದು ಮೇಘನಾ ಶಂಕರಪ್ಪ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ನಾನು ಕೆಲ ದಿನಗಳ ಕಾಲ ‘ಸೀತಾರಾಮ’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಭಾಗಿಯಾಗೋದಿಲ್ಲ ಎಂದು ತಿಳಿಸಿದ್ದಾರೆ. ಕಣ್ಣಿನ ಮೇಲೆ ಗಾಯ ಆಗಿರುವ ಫೋಟೋವನ್ನ ಪೋಸ್ಟ್‌ ಮಾಡಿದ್ದಾರೆ.. ಆದ್ರೆ  ತಮಗೆ ಏನಾಗಿದೆ ಎಂಬ ಬಗ್ಗೆ ನಟಿ ಸ್ಪಷ್ಟಣೆ ನೀಡಿಲ್ಲ..

ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರೋ ಪ್ರಿಯಾ, ಈಗ ನಿಜ ಜೀವನದಲ್ಲಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸದ್ಯಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿಯೂ ಮೇಘನಾ ಶಂಕರಪ್ಪ ಭಾಗವಹಿಸೋದಿಲ್ಲ. ಈ ಶೋನಲ್ಲಿ ಮೇಘನಾ ಡ್ಯಾನ್ಸ್ ಅನೇಕರಿಗೆ ಇಷ್ಟ ಆಗಿತ್ತು. ಇವರು ಈ ಶೋನಲ್ಲಿ ತುಂಬ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಅದರೆ ಅನಾರೋಗ್ಯ ಕಾರಣ ನೀಡಿರುವ ಮೇಘನಾ ಯಾವಾಗ ವಾಪಸ್‌ ಬರುತ್ತಾರೆ ಅಂತಾ  ತಿಳಿದುಬಂದಿಲ್ಲ. ಆದಷ್ಟು ಬೇಗ ಮೇಘನಾ ಹುಷಾರಾಗಿ ಬರ್ಲಿ ಅನ್ನೋದೇ ಎಲ್ಲರ ಆಶಯ.

Shwetha M