ಬಿಗ್‌ಬಾಸ್ 11 ಪ್ರೋಮೋದಲ್ಲೇ ಬೆಂಕಿ.. ಬಿರುಗಾಳಿ.. – ಕಿಚ್ಚ ಸುದೀಪ್ ಮಿಸ್ಸಿಂಗ್?

ಬಿಗ್ ಬಾಸ್ ಸೀಸನ್ 10 ಮೊನ್ನೆ ಮೊನ್ನೆ ಮುಗಿದ ಹಾಗಿದೆ.. ಸ್ವರ್ಧಿಗಳ ಹವಾ ಮಾತ್ರ ಜೋರಾಗೆ ಇದೆ.. ಬಿಗ್‌ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಗೆ ಮೊನ್ನೆಯಷ್ಟೇ ಬಹುಮಾನವಾಗಿ ಕಾರು ಕೈ ಸೇರಿತು.. ಇದೀಗ ಬಿಗ್‌ಬಾಸ್ ಸೀಸನ್ 11 ಗೆ ಕೌಂಟ್‌ಡೌನ್ ಶುರುವಾಗಿದೆ.. ಇದೀಗ ಮೊದಲ ಪ್ರೋಮೋ ಕೂಡ ರಿಲೀಸ್ ಆಗಿದೆ.. ಮೊದಲ ಪ್ರೋಮೋದಲ್ಲೇ ಬೆಂಕಿ ನೀರು ಕಾಣಿಸಿಕೊಂಡಿದೆ.. ಇದೀಗ ಪ್ರೋಮೋ ನೋಡಿದ ವೀಕ್ಷಕರು ಈ ಬಾರಿ ಪಕ್ಕಾ ಬೆಂಕಿ.. ಬಿರುಗಾಳಿ ಇದ್ದೇ ಇದೆ ಅಂತಾ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.. ಆದ್ರೆ ಪ್ರೋಮೋದಲ್ಲಿ ಹೌದು ಸ್ವಾಮಿ ಅನ್ನೋ ಡೈಲಾಗ್ ಮಿಸ್ ಆಗಿದೆ.. ಹಾಗಾದ್ರೆ ಈ ಸೀಸಲ್‌ನಲ್ಲಿ ಕಿಚ್ಚ ಇರಲ್ವಾ? ಪ್ರೋಮೋದಲ್ಲಿ ಏನಿ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ದ – ಅಪಾಯದಲ್ಲಿ ಸುನಿತಾ ವಿಲಿಯಮ್ಸ್?
ಬಿಗ್‌ಬಾಸ್ ಕನ್ನಡ ಸೀಸನ್ 11 ಯಾವಾಗ ಬರುತ್ತೆ ಅಂತಾ ಕಾಯ್ತಾ ಇದ್ದವರಿಗೆ ಕಡೆಗೂ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಂತಹ ಮೊದಲ ವಿಡಿಯೋ ರಿಲೀಸ್ ಮಾಡಿದೆ. ಈ ಬಾರಿಯ ಬಿಬಿಕೆಯಲ್ಲಿ ಬೆಂಕಿ ಮತ್ತು ಬಿರುಗಾಳಿ ಇರುವ ಮುನ್ಸೂಚನೆ ಸಿಕ್ಕಿದೆ. ಹೌದು, ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಈವರೆಗೂ ಹತ್ತು ಸೀಸನ್ ಪ್ರಸಾರ ಕಂಡಿದೆ. ಒಂದು ಓಟಿಟಿ ಸೀಸನ್ ನಡೆದಿದೆ. ‘ಬಿಗ್ ಬಾಸ್’ ಲೋಗೋದಲ್ಲಿ ಒಂದೊಂದು ಸೀಸನ್‌ನಲ್ಲೂ ಒಂದೊಂಥರಾ ವಿಶೇಷತೆ ಇತ್ತು. ಅದರಂತೆ ಈ ಬಾರಿಯ ‘ಬಿಗ್ ಬಾಸ್’ ಲೋಗೋದಲ್ಲಿ ಬೆಂಕಿ, ಮಿಂಚು, ಬಿರುಗಾಳಿ, ಸುನಾಮಿ ಎಲ್ಲವೂ ಇದೆ. ಇದೀಗ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿದೆ.
ದೊಡ್ಮನೆ ಅಂದಾಗ ವಿಭಿನ್ನ ಮನಸ್ಥಿತಿಯವರು ಇರ್ತಾರೆ.. ಹೀಗಾಗಿ ಅಲ್ಲಿ ಜಗಳ ಮಾಡೋರೂ ಇರ್ತಾರೆ. ಸೌಮ್ಯ ಸ್ವಭಾವದಿಂದ ನಡೆದುಕೊಳ್ಳೋರೂ ಬರ್ತಾರೆ. ಅಲ್ಲಿಗೆ, ಬೆಂಕಿ ಉಂಡೆಗಳನ್ನ ಉಗುಳುವಂತಹ ಸ್ಪರ್ಧಿಗಳನ್ನ ಈ ಬಾರಿ ನಿರೀಕ್ಷೆ ಮಾಡಬಹುದಾ? ಆ ಬೆಂಕಿಗೆ ತಣ್ಣೀರು ಸುರಿದು ಮನೆಯನ್ನ ಶಾಂತವಾಗಿಡುವ ಸ್ಪರ್ಧಿಗಳೂ ಈ ಸೀಸನ್‌ನಲ್ಲಿ ಇರ್ತಾರಾ? ಎಂಬ ಕುತೂಹಲ ಮನೆ ಮಾಡಿದೆ.
ಇನ್ನು ಬಿಗ್‌ಬಾಸ್ ಸೀಸನ್ 11 ಪ್ರೋಮೋ ನೋಡಿದ ವೀಕ್ಷಕರಿಗೆ ಈ ಬಾರಿ ಕಿಚ್ಚ ಹೋಸ್ಟ್ ಮಾಡ್ತಾರಾ? ಇಲ್ವಾ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ.. ಆದ್ರೆ ಈ ಪ್ರಶ್ನೆಗೆ ಉತ್ತರ ಆ ವಿಡಿಯೋದಲ್ಲಿ ಸಿಕ್ಕಿಲ್ಲ. ಕೇವಲ ಬಿಗ್‌ಬಾಸ್ ಕಣ್ಣು ಮಾತ್ರ ಬೆಂಕಿ ಮತ್ತು ಬಿರುಗಾಳಿಯ ನಡುವೆ ಕಾಣಿಸಿಕೊಂಡಿದೆ. ಜತೆಗೆ, ಎಂದಿನಂತೆ ಹಿನ್ನೆಲೆಯಲ್ಲಿ ಬಿಗ್‌ಬಾಸ್… ಬಿಗ್‌ಬಾಸ್ ಎಂದು ಯುವತಿಯ ಧ್ವನಿ ಕೇಳಿಸಿದೆ. ಆದ್ರೆ ಈ ವಿಡಿಯೋದಲ್ಲಿ ಹೌದು ಸ್ವಾಮಿ” ಎಂದು ಕಿಚ್ಚ ಹೇಳಿಲ್ಲ. ಅದಲ್ಲದೇ ಪ್ರತಿ ಬಾರಿ ಪ್ರೋಮೋದಲ್ಲಿ ಕಿಚ್ಚ ಖಡಕ್ ಎಂಟ್ರಿ ಕೊಡ್ತಿದ್ರು.. ಈ ಬಾರಿಯ ಪ್ರೋಮೋದಲ್ಲಿ ಕಿಚ್ಚನ ಎಂಟ್ರಿ ಇಲ್ಲ.. ಪ್ರೋಮೋದಲ್ಲಿ ಕಿಚ್ಚ ಇಲ್ಲದೇ ಇರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದ್ರೆ ಕಲರ್ಸ್ ಕನ್ನಡವು ಬಿಗ್‌ಬಾಸ್ ಕನ್ನಡ ಸೀಸನ್ 11 ಎಂಬ ಶೀರ್ಷಿಕೆಯಡಿಯಲ್ಲಿ ಕಲರ್‌ಫುಲ್ ಕತೆ, ಕಿಚ್ಚ ಸುದೀಪ್ ಹ್ಯಾಷ್ ಟ್ಯಾಗ್‌ನಡಿ ಈ ವಿಡಿಯೋ ಹಂಚಿಕೊಂಡಿದೆ. ಈ ಹ್ಯಾಷ್‌ಟ್ಯಾಗ್ ನೀಡಿರುವುದರಿಂದ ಈ ಬಾರಿ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಹೋಸ್ಟ್ ಮಾಡುವುದು ಪಕ್ಕಾ ಆಗಿದೆ.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಯಾರೆಲ್ಲಾ ಸ್ಪರ್ಧಿಸಬಹುದು ಎಂಬುದು ಸದ್ಯಕ್ಕೆ ಸೀಕ್ರೆಟ್. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪಟ್ಟಿಗಳು ಓಡಾಡ್ತಾಯಿವೆ. ಅವುಗಳ ಸತ್ಯಾಸತ್ಯತೆ ಗೊತ್ತಾಗೋದು ‘ಬಿಗ್ ಬಾಸ್ ಕನ್ನಡ 11’ ಪ್ರಾರಂಭದ ದಿನದಂದೇ. ಅಂದ್ಹಾಗೆ, ‘ಬಿಗ್ ಬಾಸ್ ಕನ್ನಡ 11’ ಶುರು ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಇನ್ನು ಬಿಗ್‌ಬಾಸ್ ಮನೆ ಎಲ್ಲದೆ ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಾ ಇದೆ. ಬಿಬಿಕೆಯ ಮೊದಲ ಎರಡು ಪ್ರದರ್ಶನಗಳು ಪುಣೆಯ ಲೋನಾವಾಲಾದಲ್ಲಿ ನಡೆದಿತ್ತು. ಇದಾದ ಬಳಿಕ ಬೆಂಗಳೂರಿನ ಫಿಲ್ಮ್ ಸಿಟಿಯಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣ ಮಾಡಲಾಯಿತು. ಕಳೆದ ಸೀಸನ್‌ನಿಂದ ಈ ಮನೆಯಲ್ಲೇ ಶೋ ನಡೆಯುತ್ತಿದ್ದು, ಈ ಬಾರಿಯೂ ಅಲ್ಲೇ ಶೋ ನಡೆಸುವ ಸಾಧ್ಯತೆಯಿದೆ.