ಬಾಹ್ಯಾಕಾಶದಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ದ – ಅಪಾಯದಲ್ಲಿ ಸುನಿತಾ ವಿಲಿಯಮ್ಸ್‌?

ಬಾಹ್ಯಾಕಾಶದಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ದ – ಅಪಾಯದಲ್ಲಿ ಸುನಿತಾ ವಿಲಿಯಮ್ಸ್‌?

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಹಾಗೂ ಬುಚ್‌ ವಿಲ್ಮೋರ್‌​ ಸುರಕ್ಷಿತವಾಗಿ ಭೂಮಿಗೆ ಬರಲಿ ಎಂದು ಕೋಟ್ಯಂತರ ಮಂದಿ ಪ್ರಾರ್ಥಿಸುತ್ತಿದ್ದಾರೆ. ಇದೀಗ ಬಾಹ್ಯಾಕಾಶದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಬೋಯಿಂಗ್ ಸ್ಟಾರ್‌ಲೈನ‌ರ್ ಸ್ಪೇಸ್ ಕ್ಯಾಪ್ಸುಲ್‌ನಿಂದ ಸೋನಾ‌ರ್ ರೀತಿಯ ವಿಚಿತ್ರ ಹಾಗೂ ನಿಗೂಢ ಶಬ್ದ ಕೇಳುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: KPSC ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ – ಅಧಿಕಾರಿಗಳು ಅಮಾನತು, ಮರು ಪರೀಕ್ಷೆ ನಡೆಸುವಂತೆ ಸಿಎಂ ಘೋಷಣೆ

ಬೋಯಿಂಗ್ ಸ್ಟಾರ್‌ಲೈನರ್ ಸ್ಪೇಸ್ ಕ್ಯಾಪ್ಸುಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಭೂಮಿಗೆ ಆಗಮಿಸುವುದು ವಿಳಂಬವಾಗಲಿದೆ. ಇದೀಗ ಬೋಯಿಂಗ್ ಸ್ಟಾರ್‌ಲೈನ‌ರ್ ಸ್ಪೇಸ್ ಕ್ಯಾಪ್ಸುಲ್‌ನಿಂದ ಸೋನಾ‌ರ್ ರೀತಿಯ ವಿಚಿತ್ರ ಹಾಗೂ ನಿಗೂಢ ಶಬ್ದ ಕೇಳುತ್ತಿದೆ ಎಂದು ಗಗನಯಾತ್ರಿ ಬಚ್ ವಿಲ್ನೋರ್ ತಿಳಿಸಿರುವುದಾಗಿ ನಾಸಾ ವರದಿ ಮಾಡಿದೆ.

ಇತ್ತೀಚೆಗೆ ಅಮೆರಿಕದ ಹೌಸ್ಟನ್‌ನಲ್ಲಿರುವ ನಾಸಾದ ಮಿಷನ್ ಕಂಟ್ರೋಲ್ ಸಂಪರ್ಕಿಸಿ, ವಿಚಿತ್ರ ಶಬ್ದ ಕೇಳಿಬರುತ್ತಿರುವುದಾಗಿ ವಿಲ್ಲೋರ್ ವರದಿ ಮಾಡಿದ್ದಾರೆ. ನಾಸಾ ಜತೆಗಿನ ಧ್ವನಿಮುದ್ರಿತ ಸಂಭಾಷಣೆಯಲ್ಲಿ ವಿಲೋರ್ ಅವರು ಆ ವಿಚಿತ್ರ ಶಬ್ದವನ್ನು ಪುನರಾವರ್ತಿತ, ಜಲಾಂತರ್ಗಾಮಿ ಸೋನಾ‌ರ್ ಅನ್ನು ನೆನಪಿಸುವ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್ ಮಾಡಿದಂತಹ ಧ್ವನಿ ಎಂದು ವಿವರಿಸಿದ್ದಾರೆ. ಸ್ಟಾರ್‌ಲೈನರ್ ನೌಕೆಯ ಆಂತರಿಕ ಸ್ಪೀಕರ್‌ಗೆ ಮೈಕ್ರೋಫೋನ್ ಅನ್ನು ಹಿಡಿದಾಗ ಈ ವಿಲಕ್ಷಣವಾದ ಶಬ್ದ ಕೇಳಿದೆ. ನಾಸಾದ ಮಿಷನ್ ಕಂಟ್ರೋಲ್ ಈ ಧ್ವನಿಯನ್ನು ದೃಢಪಡಿಸಿದ್ದು, ಒಂದು ರೀತಿಯ ಸೋನಾರ್ ಶಬ್ದ ಎಂದು ಹೇಳಿದೆ.

Shwetha M