ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ.. ಕಿಚ್ಚನ ಹುಟ್ಟುಹಬ್ಬದಂದು ಮ್ಯಾಕ್ಸ್ ಮಾಸ್ ಸಾಂಗ್ ಔಟ್‌!

ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ.. ಕಿಚ್ಚನ ಹುಟ್ಟುಹಬ್ಬದಂದು ಮ್ಯಾಕ್ಸ್ ಮಾಸ್ ಸಾಂಗ್ ಔಟ್‌!

ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ.. ಮ್ಯಾಕ್ಸ್‌ ಸಿನಿಮಾದ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ. ಸಾಂಗ್‌ ನಲ್ಲಿ ಕಿಚ್ಚನ ಪಂಚಿಂಗ್‌ ಡೈಲಾಗ್ಸ್‌ಗೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ..

ಇದನ್ನೂ ಓದಿ: ಉಪ್ಪಿ 2 ಮುಂದುವರಿದ ಭಾಗ UI? – ರಿಲೀಸ್‌ ಡೇಟ್‌ ಹಿಂದಿದೆ ಉಪ್ಪಿ ಫಾರ್ಮುಲಾ!

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಬಗ್ಗೆ ಫ್ಯಾನ್ಸ್‌ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.. ಸಿನಿಮಾ ಯಾವಾಗ ರೀಲಿಸ್‌ ಆಗಲಿದೆ ಅಂತಾ ಫ್ಯಾನ್ಸ್‌ ಕಾಯ್ತಾ ಇದ್ರು.. ಇದೀಗ ಸುದೀಪ್  ಹುಟ್ಟುಹಬ್ಬದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್​ನಲ್ಲಿರೋ ಪಂಚಿಂಗ್​ ಡೈಲಾಗ್​ಗಳು ಗಮನ ಸೆಳೆದಿವೆ.

‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂಬ ಸಾಲುಗಳಿಂದ ಈ ಹಾಡು ಆರಂಭ ಆಗುತ್ತದೆ. ‘ಪಂಜ ಎತ್ತಿ ಬಿಟ್ಟ ಅಂದ್ರೆ ಒಂದೂವರೆ ಟನ್ ಬಾಸ್, ರಟ್ಟೇಲ್ ಬಾಳ್ ಬಲ ಎದೆಲ್ ಇದೆ ದಮ್ ಬಾಸ್’ ಎಂಬ ಸಾಲುಗಳು ಗಮನ ಸೆಳೆದಿವೆ. ಅಂದ್ಹಾಗೆ ಮ್ಯಾಕ್ಸಿಮಮ್ ಮಾಸ್  ಹಾಡನ್ನು ಬರೆದಿದ್ದು ನಿರ್ದೇಶಕ ಅನೂಪ್ ಭಂಡಾರಿ ಅವರು.  ಈ ಹಾಡಿಗೆ ಖ್ಯಾತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಅವರು ಈ ಹಾಡನ್ನು ಹಾಡಿದ್ದಾರೆ. ಎಂಸಿ ಬಿಜ್ಜು ಹಾಡಿಗೆ ರ‍್ಯಾಪ್ ಮಾಡಿದ್ದಾರೆ. ಈ ಹಾಡು ಸದ್ಯ ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಈ ಸಾಂಗ್ ರಿಲೀಸ್ ಆದ ಸ್ವಲ್ಪ ಹೊತ್ತಲ್ಲಿ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ಸುದೀಪ್ ಜನ್ಮದಿನಕ್ಕೆ ಈ ಸಾಂಗ್ ರಿಲೀಸ್ ಆಗಿರೋದು ವಿಶೇಷ.

Shwetha M

Leave a Reply

Your email address will not be published. Required fields are marked *