ತರುಣ್‌ – ಸೋನಲ್‌ ಗೆ ಮತ್ತೊಮ್ಮೆ ಮದುವೆ! – ಮಾಲ್ಡೀವ್ಸ್‌ ನಲ್ಲಿ ಹನಿಮೂನ್
ಸ್ಟೇಜ್‌ ನಲ್ಲಿ ನಿರ್ದೇಶಕ ಕಣ್ಣೀರಿಟ್ಟಿದ್ದೇಕೆ?

ತರುಣ್‌ – ಸೋನಲ್‌ ಗೆ ಮತ್ತೊಮ್ಮೆ ಮದುವೆ! – ಮಾಲ್ಡೀವ್ಸ್‌ ನಲ್ಲಿ ಹನಿಮೂನ್ಸ್ಟೇಜ್‌ ನಲ್ಲಿ ನಿರ್ದೇಶಕ ಕಣ್ಣೀರಿಟ್ಟಿದ್ದೇಕೆ?

ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಸದ್ಯ ಟ್ರೆಂಡಿಗ್‌ನಲ್ಲಿರೋ ಜೋಡಿ.. ಸೋಶಿಯಲ್‌ ಮೀಡಿಯಾಗಳಲ್ಲೂ ಇವರಿಬ್ಬರದ್ದೇ ಫೋಟೋ, ವಿಡಿಯೋಗಳು ಸದ್ದು ಮಾಡ್ತಾ ಇದೆ.. ಈ ಕ್ಯೂಟ್‌ ಜೋಡಿಯ ಬಾಂಡಿಂಗ್ ನೋಡುವುದಕ್ಕೇನೆ ಖುಷಿ. ಲವ್ ಹೇಗಾಯ್ತು.. ಅವರಿಬ್ರು ಕ್ಲೋಸ್‌ ಆಗಿದ್ದು ಹೇಗೆ ಅನ್ನೋದನ್ನ ಕೂಡ ತಿಳ್ಕೊಂಡಿದ್ದಾಯ್ತು.. ಇದೀಗ ಈ ಜೋಡಿ ಮತ್ತೊಂದು ಬಾರಿ ಮದುವೆ ಆಗಲಿದ್ದಾರೆ..

ಇದನ್ನೂ ಓದಿ: ಟಾಲಿವುಡ್​ಗೆ ಶಾಸಕ ಪ್ರದೀಪ್ ಈಶ್ವರ್ – ಚಿರಂಜೀವಿ ಚಿತ್ರದಲ್ಲಿ ಡೈಲಾಗ್ ಕಿಂಗ್

ಕಾಟೇರ ಡೈರೆಕ್ಟರ್‌  ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ.. ಮದುವೆ ಆದ ಬಳಿಕ ಈ ಜೋಡಿ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.. ಆ್ಯಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್‌ಗೂ ವಿಶೇಷ ಸಂದರ್ಶನ ಕೊಟ್ಟಿತ್ತು ಈ ಜೋಡಿ. ಅದಾದ್ಮೇಲೆ ಡಿಕೆಡಿಯಲ್ಲೂ ಈ ಜೋಡಿ ಪಾಲ್ಗೊಂಡಿದ್ದು, ಹತ್ತಾರು ವಿಚಾರಗಳನ್ನ ಶೇರ್‌ ಮಾಡಿರೋದು ನಿಮ್ಗೆ ಗೊತ್ತೇ ಇದೆ.. ನಟ ದರ್ಶನ್‌, ಯೋಗರಾಜ್ ಭಟ್, ಕ್ಯಾಮರಾಮನ್ ಸುಧಾಕರ್,  ಚಿಕ್ಕಣ್ಣ ಇವರೆಲ್ಲಾ ಸೇರಿಯೇ ಈ ಜೋಡಿಯನ್ನ ಒಂದು ಮಾಡಿದ್ದು. ಈ ವಿಚಾರವನ್ನ ಸೋನಲ್ ಮತ್ತು ತರುಣ್ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಹೊಸ ಸಮಾಚಾರ ಏನಪ್ಪಾ ಅಂದ್ರೆ.. ತರುಣ್ ಸುಧೀರ್ ಮತ್ತು ಸೋನಲ್ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ.

ಹೌದು, ತರುಣ್‌ – ಸೋನಲ್‌ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ರು.. ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಹೀಗಾಗಿ ಅವರ ಸಂಪ್ರದಾಯದಂತೆ ಸೆ.1ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಮದುವೆ ಬಳಿಕ ಆರತಕ್ಷತೆ ಕೂಡ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ. ಈ ವಿಚಾರವನ್ನ ಕೂಡ ತರುಣ್ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿಯೇ ಹೇಳಿಕೊಂಡಿದ್ದಾರೆ.

ಇನ್ನು ತರುಣ್ ಸುಧೀರ್ ಹಾಗೂ ಸೋನಲ್ ಹನಿಮೂನ್‌ಗೆ ಹೋಗೋ ಪ್ಲಾನ್ ಕೂಡ ಮಾಡಿದ್ದಾರೆ. ರಿಸೆಪ್ಷನ್‌ ಬಳಿಕ ಮಾಲ್ಡೀವ್ಸ್  ಹೋಗುವ ಪ್ಲಾನ್ ಮಾಡಿದ್ದೇವೆ  ಅಂತಾ ಈ ಜೋಡಿ ಹೇಳಿಕೊಂಡಿದೆ.

ಇನ್ನು ತರುಣ್ ಸುಧೀರ್ ಗೆ ತಂದೆ‌ ಅಂದ್ರೆ ತುಂಬಾ ಇಷ್ಟ. ತಂದೆ ಹೋದ ಮೇಲೆ ತಾಯಿ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಮದುವೆ ಸಮಯದಲ್ಲೂ ತರುಣ್ ತಮ್ಮ ತಂದೆ ಸುಧೀರ್ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಎಂಬಂತೆ‌ ಸುಧೀರ್ ಫೋಟೋಗಳನ್ನೇ ಇಟ್ಟಿದ್ದರು. ಇದೀಗ ಜೀ ಕನ್ನಡ ಸ್ಪೆಷಲ್ ಗಿಫ್ಟ್ ನೀಡಿದೆ. ಎಐ ಮೂಲಕ ಸುಧೀರ್ ಅವರ ವಾಯ್ಸ್ ಕ್ರಿಯೇಟ್ ಮಾಡಿ, ಅದನ್ನ ಪ್ಲೇ ಮಾಡಲಾಗಿದೆ. ಇದನ್ನು ಕೇಳಿಸಿಕೊಂಡ ತರುಣ್‌ಗೆ ತಂದೆಯ ನೆನಪಾಗಿದೆ. ಅಷ್ಟೇ ಅಲ್ಲ ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಜೀಕನ್ನಡ ತರುಣ್‌ ಗೆ ಮತ್ತೊಂದು ಬೆಲೆಕಟ್ಟಲಾಗದ ಉಡುಗೊರೆ ನೀಡಿದೆ. ತರುಣ್‌ ಫ್ಯಾಮಿಲಿ ಫೋಟೋ ಫ್ರೇಮ್‌ವೊಂದನ್ನ ಕೊಟ್ಟಿದೆ. . ತರುಣ್ ಸೋನಲ್ ಜೊತೆಗೆ ಅಪ್ಪ ಅಮ್ಮ ಇರುವಂತ ಫ್ಯಾಮಿಲಿ ಫೋಟೋವೊಂದನ್ನು ಗಿಫ್ಟ್ ಆಗಿ ನೀಡಿದೆ ಜೀಕನ್ನಡ ವಾಹಿನಿ. ಇದನ್ನ ನೋಡಿದ ತರುಣ್‌, ನಾನು ನಿಜಕ್ಕೂ ನಿರೀಕ್ಷೆ ಮಾಡಿರಲಿಲ್ಲ. ತಾಳಿ ಕಟ್ಟುವಾಗಲೂ ಅಂದುಕೊಂಡಿದ್ದೆ ಅವರು ಇರಬೇಕಿತ್ತು ಅಂತ. ನಂಗೆ ತುಂಬಾ ಸ್ಪೆಷಲ್ ಗಿಫ್ಟ್‌ ಇದು ಎಂದಿದ್ದಾರೆ. ಒಟ್ಟಾರೆ ತರುಣ್‌ ಸೋನಲ್‌ ಜೋಡಿ ಸಿಕ್ಕಾ ಪಟ್ಟೆ ಟ್ರೆಂಡಿಗ್‌ನಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *