ಬಿಸ್ಲೆರಿ ಕಂಪನಿ ಟಾಟಾ ತೆಕ್ಕೆಗೆ – ಉತ್ತರಾಧಿಕಾರಿಯಿಲ್ಲದೇ ಕಂಪನಿ ಮಾರಾಟ
ನವದೆಹಲಿ: ದೇಶದ ಪ್ರತಿಷ್ಠಿತ ಕುಡಿಯುವ ನೀರಿನ ಮಾರಾಟ ಕಂಪನಿ ಬಿಸ್ಲೆರಿ ಇದೀಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ಗೆ ಅಂದಾಜು ₹ 6,000-7,000 ಕೋಟಿಗೆ ಮಾರಾಟ ಮಾಡಲು ಒಪ್ಪಂದ ನಡೆಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರೋಗಿಗೆ ವೈದ್ಯನಿಂದ ರಕ್ತದಾನ – ಡಾಕ್ಟರ್ ಮಾನವೀಯತೆಗೆ ಮೆಚ್ಚುಗೆ
82ರ ಹರೆಯದ ಚೌಹಾಣ್ ಅವರು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ಅವರ ಮಗಳು ಜಯಂತಿ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಉದ್ಯಮವನ್ನು ಮುಂದಿನ ಹಂತಕ್ಕೆ ವಿಸ್ತರಿಸಲು ಉತ್ತರಾಧಿಕಾರಿ ಇಲ್ಲ. ಹೀಗಾಗಿ ಬಿಸ್ಲೆರಿಯನ್ನು ಮಾರಾಟ ಮಾಡಲು ರಮೇಶ್ ಮುಂದಾಗಿದ್ದಾರೆ.
ಟಾಟಾ ಗ್ರೂಪ್ ಕಂಪನಿಯನ್ನು ಇನ್ನೂ ಉತ್ತಮವಾಗಿ ಪೋಷಿಸುತ್ತದೆ ಆದರೂ ಬಿಸ್ಲೇರಿ ಮಾರಾಟ “ನೋವಿನ” ನಿರ್ಧಾರವಾಗಿದೆ ಎಂದು ಚೌಹಾನ್ ಹೇಳಿದ್ದಾರೆ.
ಬಿಸ್ಲೆರಿ ಒಪ್ಪಂದದ ಭಾಗವಾಗಿ ಪ್ರಸ್ತುತ ನಿರ್ವಹಣೆಯು ಎರಡು ವರ್ಷಗಳವರೆಗೆ ಮುಂದುವರಿಯುತ್ತದೆ ಎಂದು ವರದಿಯಾಗಿದೆ.