4ನೇ ಕ್ಲಾಸ್‌ ನಲ್ಲಿ ಡ್ಯಾನ್ಸರ್‌.. ಈಗ ಹಿರೋಯಿನ್‌ – ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್‌
ಲಕ್ಷ್ಮೀ ಬಾರಮ್ಮ ನಟಿ ಭೂಮಿಕಾ ಯಾರು?

4ನೇ ಕ್ಲಾಸ್‌ ನಲ್ಲಿ ಡ್ಯಾನ್ಸರ್‌.. ಈಗ ಹಿರೋಯಿನ್‌ – ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್‌ಲಕ್ಷ್ಮೀ ಬಾರಮ್ಮ ನಟಿ ಭೂಮಿಕಾ ಯಾರು?

ಕಲರ್ಸ್‌ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಲಕ್ಷ್ಮೀ ಕೀರ್ತಿಯಾಗಿ ಬದಲಾಗಿದ್ದಾಳೆ. ಆಕೆಯನ್ನ ಕಂಡ್ರೆ ಎಲ್ಲರೂ ಭಯಪಡುವಂತೆ ಆಗಿದೆ.. ಲಕ್ಷ್ಮೀಯಾಗಿ  ನಟಿಸುತ್ತಿರುವ ಭೂಮಿಕಾ ರಮೇಶ್ ನಟನೆಗೆ ವೀಕ್ಷಕರಿಂದ ಫುಲ್‌ ಮಾರ್ಕ್ಸ್‌ ಸಿಕ್ಕಿದೆ. ಅಷ್ಟಕ್ಕೂ ಭೂಮಿಕಾ ರಮೇಶ್ ಯಾರು? ಈಕೆ ರಿಯಲ್‌ ಲೈಫ್‌ ನಲ್ಲಿ ಏನ್‌ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ದಚ್ಚು ಶಿಫ್ಟ್ ಮಾಡಿದವ್ರಿಗೆ ಸಂಕಷ್ಟ – ಬಳ್ಳಾರಿ ಜೈಲು ದಾಸನ ಪಾಲಿಗೆ ವನವಾಸ

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈಗ ಭಾರಿ ಕುತೂಹಲ ಮೂಡಿಸಿದೆ. ಕಾವೇರಿ ಸಂಚಿಗೆ ಕೀರ್ತಿ ಬಲಿಯಾಗಿದ್ದಾಳೆ.. ಇತ್ತ ಲಕ್ಷ್ಮೀಗೂ ಕಾವೇರಿ ಮುಹೂರ್ತ ಇಡಲು ಪ್ಲಾನ್ ಮಾಡಿಕೊಳ್ಳುತ್ತಿರುವಾಗಲೇ ಲಕ್ಷ್ಮೀ ಶಾಕ್‌ ಕೊಟ್ಟಿದ್ದಾಳೆ.. ಲಕ್ಷ್ಮೀಯ ಮೈಯಲ್ಲಿ ಕೀರ್ತಿ ಆತ್ಮ ಸೇರಿಕೊಂಡಿದೆ.. ಲಕ್ಷ್ಮೀ ಮೂಲಕ ಕೀರ್ತಿ ಕಾವೇರಿ ಮೇಲೆ ರಿವೇಂಜ್‌ ತೆಗೆದುಕೊಳ್ಳುತ್ತಿದ್ದಾಳೆ ಅನ್ನೋ ತರ ಸೀರಿಯಲ್‌ ಅನ್ನ ತೋರಿಸಲಾಗ್ತಿದೆ.. ಲಕ್ಷ್ಮೀ ಆಕ್ಟಿಂಗ್‌ ಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದೀಗ ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್‌ ಬಗ್ಗೆ ತಿಳಿದುಕೊಳ್ಳಲು ವೀಕ್ಷಕರು ಉತ್ಸುಕರಾಗಿದ್ದಾರೆ.

ಅಂದ್ಹಾಗೆ ಭೂಮಿಕಾ ರಮೇಶ್ ಮೈಸೂರಿನವರು. ಅವರ ತಂದೆಯ ಹೆಸರು ರಮೇಶ್.  ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದವರು.. ತದನಂತ್ರ ಭೂಮಿಕಾ ಸೀರಿಯಲ್​ಗೆ ಬಂದಿದ್ದಾರೆ.  ನಾಲ್ಕನೇ ತರಗತಿಯಲ್ಲಿದ್ದಾಗಲೇ ತೆಲುಗು ರಿಯಾಲಿಟಿ ಶೋ ಒಂದರಲ್ಲಿ ಭೂಮಿಕಾ ಭಾಗವಹಿಸಿದ್ರು. ನಂತರ ‘ಸೈ ಅಂಟೆ ಸೈ’ ಮಲ್ಟಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. 8ನೇ ತರಗತಿಯಲ್ಲಿದಾಗ ಕನ್ನಡ ರಿಯಾಲಿಟಿ ಶೋ ‘ಡಾನ್ಸಿಂಗ್‌ ಸ್ಟಾರ್‌’ನಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋನಲ್ಲಿ ಇರುವಾಗ ಆಕೆಗೆ ಭರತನಾಟ್ಯ ಗೊತ್ತಿರಲಿಲ್ಲ. ಪಾಶ್ಚಾತ್ಯ ನೃತ್ಯವಷ್ಟೇ ಮಾಡುತ್ತಿದ್ದರು. ನಂತರ ಭರತನಾಟ್ಯ ಕಲಿಯಲು ಪ್ರಾರಂಭಿಸಿದ್ರು. ಈಗ ಭರತನಾಟ್ಯದಲ್ಲಿ ಸೀನಿಯರ್‌ ಮುಗಿಸಿ ವಿದ್ವತ್‌ ತರಬೇತಿಯಲ್ಲಿದ್ದಾರೆ. ಇನ್ನು ಶಾಲೆಯಲ್ಲಿಏಕಪಾತ್ರಾಭಿನಯ ಮಾಡುತ್ತಾ ಬಂದಿದ್ದರು ಭೂಮಿಕಾ. ಆಗ ಇದನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು ಅಂತಾ ಆಕೆ ಅಂದು ಕೊಂಡಿರ್ಲಿಲ್ಲ. ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು ಅಂತಾ ಮಾತ್ರ ಆಕೆಯ ಮನಸ್ಸಲ್ಲಿತ್ತು.  ಬಳಿಕ ನಟನಾ ಹಾದಿಗೆ ತಂದೆ ತಾಯಿಯ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಆಕೆಗೆ ನಟನೆಯತ್ತ ಹೆಚ್ಚು ಒಲವು ತೋರಿದ್ದಾರೆ.

ಸದ್ಯ ಭೂಮಿಕಾ  ರಮೇಶ್ ಲೀಡ್ ಹೀರೋಯಿನ್ ಆಗಿ ಕನ್ನಡ ಮತ್ತು ತೆಲಗು ಸೀರಿಯಲ್​ಗಳಲ್ಲಿಯೂ ಮಿಂಚುತ್ತಿದ್ದಾರೆ. ಜಸ್ಟ್ 20ನೇ ವಯಸ್ಸಿಗೆ ಬಹುಬೇಡಿಕೆಯ ನಟಿಯಾಗಿ ತೆರೆ ಮೇಲೆ ಮಿಂಚುತ್ತಿದ್ದಾರೆ.  ಈಕೆಯನ್ನ ಕಿರುತೆರೆಯ ಕಿರಿಯ ಹೀರೋಯಿನ್ ಅಂತ  ಹೇಳಬಹುದು. ಇದೀಗ ಭೂಮಿಕಾ ಲಕ್ಷ್ಮೀ ಬಾರಮ್ಮ ಜೊತೆಗೆ ತೆಲುಗು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಮೇಘ ಸಂದೇಶಂ ಎಂಬ ಸೀರಿಯಲ್‌ನಲ್ಲೂ ನಟಿಸುತ್ತಿದ್ದಾರೆ. ಭೂಮಿಕಾ ರಮೇಶ್​ಗೆ ನನ್ನರಸಿ ರಾಧೆ ಸೀರಿಯಲ್​ನ ಅಭಿನವ್ ವಿಶ್ವನಾಥನ್ ಜೋಡಿಯಾಗಿದ್ದಾರೆ. ಇವರಿಬ್ಬರು ಅಭಿನಯಿಸಿದ ಸೀರಿಯಲ್ ಮೇಘ ಸಂದೇಶಂ ನಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಭೂಮಿಕಾ. ತೆಲುಗು ಸೀರಿಯಲ್‌ ನಲ್ಲೂ ಭೂಮಿಕಾ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡದಲ್ಲಿ ಈಗಾಗಲೇ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಭೂಮಿಕಾ ರಮೇಶ್ ಮಿಂಚುತ್ತಿದ್ದಾರೆ. ವೈಷ್ಣವ್ ಹೆಂಡತಿಯಾಗಿ ಭಾಗ್ಯ ತಂಗಿಯಾಗಿರುವ ಲಕ್ಷ್ಮಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾಳೆ. ಈ ಸೀರಿಯಲ್ ಕೂಡಾ ಚೆನ್ನಾಗಿಯೇ ಮೂಡಿ ಬರುತ್ತಿದೆ. ಸದ್ಯ ಭೂಮಿಕಾ ರಮೇಶ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಅವರು ಅಪಾರ ಮೆಚ್ಚುಗೆ ಗಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *