ಕುಕ್ಕೆ ಚಂಪಾಷಷ್ಠಿಯಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳಿಗೆ ನಿಷೇಧ ?
ಕುಕ್ಕೆ ಕ್ಷೇತ್ರದಲ್ಲಿ ಕಂಡು ಬಂದ ಹಿಂದೂಗಳಿಗೆ ಮಾತ್ರ ಅವಕಾಶ ಅನ್ನೋ ಬ್ಯಾನರ್

ಕುಕ್ಕೆ ಚಂಪಾಷಷ್ಠಿಯಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳಿಗೆ ನಿಷೇಧ ?ಕುಕ್ಕೆ ಕ್ಷೇತ್ರದಲ್ಲಿ ಕಂಡು ಬಂದ ಹಿಂದೂಗಳಿಗೆ ಮಾತ್ರ ಅವಕಾಶ ಅನ್ನೋ ಬ್ಯಾನರ್

ಮಂಗಳೂರು: ಕಾಪು ಮಾರಿಕಾಂಬಾ, ಬಪ್ಪನಾಡು ಜಾತ್ರೆಗಳ ನಂತರ ಇದೀಗ ಕುಕ್ಕೆ ಕ್ಷೇತ್ರದಲ್ಲೂ ಅನ್ಯಮತೀಯ ವ್ಯಾಪಾರಿಗಳಿಗೆ ನಿಷೇಧ ಹೇರಿಕೆಯಾಗುವ ರೀತಿಯಲ್ಲಿ ಬ್ಯಾನರ್ ತಲೆಯೆತ್ತಿದೆ. ನವೆಂಬರ್ 29ರಂದು ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ ನೆರವೇರಲಿದೆ. ಈಗಾಗಲೇ ಕುಕ್ಕೆಯಲ್ಲಿ ಚಂಪಾಷಷ್ಠಿ ಸಂಭ್ರಮ ಶುರುವಾಗಿದೆ. ಹೀಗಿರುವಾಗಲೇ ‘ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಅನ್ನೋ ಬ್ಯಾನರ್ ಕಾಣಿಸಿಕೊಂಡಿದೆ. ​ಕುಕ್ಕೆ ಸುಬ್ರಹ್ಮಣ್ಯ ಜಾತ್ರಾ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸ್ ಠಾಣೆಗೂ ಹಿಂದೂ ಜಾಗರಣ ವೇದಿಕೆಯ ಸುಬ್ರಹ್ಮಣ್ಯ ಘಟಕದ ವತಿಯಿಂದ ದೂರು ಕೂಡಾ ನೀಡಲಾಗಿದೆ.

ಇದನ್ನೂ ಓದಿ :  ಬೋನಿಗೆ ಬೀಳುತ್ತಿಲ್ಲ, ಬೃಂದಾವನವೂ ತೆರೆಯುತ್ತಿಲ್ಲ – ನಷ್ಟದಲ್ಲೇ ನಡೆಯುತ್ತಿದೆ ಚಿರತೆ ಬಂತು ಚಿರತೆ ಕಥೆ

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಚಂಪಾಷಷ್ಠಿ ಉತ್ಸವ ಕಳೆಗಟ್ಟಿರಲಿಲ್ಲ. ಆದರೆ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬ್ಯಾನರ್ ಸುದ್ದಿಯಾಗಿದೆ. ‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್​ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಜಾತ್ರೆಗಳಲ್ಲಿ ಮೊದಲಿನಿಂದಲೂ ಜಾತಿ ಮತ್ತು ಧರ್ಮ ಭೇದವಿಲ್ಲದೆ ವರ್ತಕರು ಅಂಗಡಿಗಳನ್ನು ಹಾಕಿ, ವ್ಯಾಪಾರ ಮಾಡುತ್ತಿದ್ದರು. ಆದರೆ, ಇದೀಗ ದಿಢೀರ್ ಆಗಿ ಬ್ಯಾನರ್​ತಲೆಯೆತ್ತಿದೆ.

suddiyaana