ಶ್ರೀರಸ್ತು ಶುಭಮಸ್ತು ಸಿರಿ ಕಲ್ಯಾಣ – ಚಂದನ ಹುಡುಗ ಯಾರು ಗೊತ್ತಾ?
ತುಳಸಿ ಸೊಸೆ ಮದುವೆಗೆ ಯಾರು ಬಂದ್ರು ?

ಶ್ರೀರಸ್ತು ಶುಭಮಸ್ತು ಸಿರಿ ಕಲ್ಯಾಣ – ಚಂದನ ಹುಡುಗ ಯಾರು ಗೊತ್ತಾ?ತುಳಸಿ ಸೊಸೆ ಮದುವೆಗೆ ಯಾರು ಬಂದ್ರು ?

ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಟಿ ಚಂದನ ಯಾರಿಗೆ ಚಂದನ ರಾಘವೇಂದ್ರ ಯಾರಿಗೆ ಗೊತ್ತಿಲ್ಲ ಹೇಳಿ.. ಸಿರಿ ಅಂತಾನೇ ಫೇಮಸ್‌ ಆಗಿದ್ದಾರೆ.. ತುಳಸಿ ಅಮ್ಮನ ಫ್ರೆಂಡ್‌ ಆಗಿ, ಮುದ್ದಿನ ಸೊಸೆ ಅನ್ನೋದಕ್ಕಿಂತ ಮಗಳಾಗಿ, ಸಮರ್ಥ್‌ ಹೆಂಡತಿಯಾಗಿ ನಟಿಸುತ್ತಿದ್ದರು. ಇದೀಗ ನಟಿ ಚಂದನ ರಿಯಲ್‌ ಲೈಫ್‌ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಚಂದನ ಮದುವೆ ಆಗಿರುವ ಫೋಟೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟಕ್ಕೂ ಚಂದನ ಮದುವೆಯಾಗಿದ್ದು ಎಲ್ಲಿ? ಹುಡುಗ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 4ನೇ ಕ್ಲಾಸ್‌ ನಲ್ಲಿ ಡ್ಯಾನ್ಸರ್‌.. ಈಗ ಹಿರೋಯಿನ್‌ – ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್‌

ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಇದೇ ಸೀರಿಯಲ್​ನಲ್ಲಿ ಸಮರ್ಥ್ ಹೆಂಡತಿ ಹಾಗೂ ತುಳಸಿಯ ಸೊಸೆಯ ಪಾತ್ರದಲ್ಲಿ ನಟಿ ಚಂದನ ರಾಘವೇಂದ್ರ ನಡೆಸುತ್ತಿದ್ರು. ಸಿರಿ ಪಾತ್ರ ವೀಕ್ಷಕರ ಮನಗೆದ್ದಿತ್ತು. ಇದೀಗ ಚಂದನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಸದ್ಯ ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ.

ಚಂದನ ಸಪ್ತಪದಿ ತುಳಿದ ವಿಡಿಯೋವನ್ನ ಸುಷ್ಮಿತಾ ಜಗ್ಗಪ್ಪ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ದೇವಸ್ಥಾನವೊಂದರಲ್ಲಿ ಚಂದನಾ ವಿವಾಹ ಸರಳವಾಗಿ ಹಾಗೂ ಸಾಂಪ್ರದಾಯಬದ್ಧವಾಗಿ ನಡೆದಿದೆ.

ಇನ್ನು ಚಂದನ ಮದುವೆಯಾಗಿರುವ ಹುಡುಗನ ಬಗ್ಗೆ ಹೇಳೋದಾದ್ರೆ, ನಿರೂಪಕಿ ಜಾನ್ವಿ ರಾಯಲ ಹಂಚಿಕೊಂಡ ಮಾಹಿತಿ ಪ್ರಕಾರ ಹುಡುಗನ ಹೆಸರು ಸಂಕೇತ್ ಕಂಪ್ಲಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಇವರು ಲೈಸೆನ್ಸ್ಡ್ ಕಾಂಟ್ರಾಕ್ಟರ್ ಅಂತಾ ತಿಳಿದು ಬಂದಿದೆ.

ಮದುವೆ ಸಮಾರಂಭದಲ್ಲಿ ನಟಿ ಸುಧಾರಾಣಿ , ಶ್ರೀರಸ್ತು ಶುಭಮಸ್ತು ಸೀರಿಯಲ್‌ ತಂಡದವರು ಹಾಗೂ ಕೆಲ ನಟ, ನಟಿಯರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನ ಕನ್ನಡದ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾನ್ವಿ ರಾಯಲ  ಅವರು ಚಂದನ ಗೆಳತಿಯಾಗಿದ್ದು, ಅವರು ಸಹ ಮದ್ವೆ ಸಮಾರಂಭದಲ್ಲಿ ಮಿಂಚಿದ್ದರು, ಜಾನ್ವಿ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಚಂದನ ರಾಘವೇಂದ್ರ ಅರಶಿನ ಶಾಸ್ತ್ರದ ಸುಂದರವಾದ ವಿವಿಧ ಫೋಟೊಗಳನ್ನು ಶೇರ್ ಮಾಡಿದ್ದು, ಇಬ್ಬರಿಗೂ ಜಾನ್ವಿ ಶುಭ ಕೋರಿದ್ದಾರೆ. ಚಂದನ ಹಳದಿ ಬಣ್ಣದ ಪ್ಲೋರಲ್ ಪ್ರಿಂಟ್ ಇರುವ ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

Shwetha M

Leave a Reply

Your email address will not be published. Required fields are marked *