ಬಾಂಗ್ಲಾ ಸ್ಪಿನ್ ಅಸ್ತ್ರ.. ಭಾರತಕ್ಕೆ ಕಂಟಕ – ರೋಹಿತ್ & ಕೊಹ್ಲಿ ವಿಕೆಟ್ ವೀಕ್​ನೆಸ್
ಪಾಕ್​ನಂತೆ ಭಾರತಕ್ಕೂ ಕಾದಿದ್ಯಾ ಶಾಕ್?

ಬಾಂಗ್ಲಾ ಸ್ಪಿನ್ ಅಸ್ತ್ರ.. ಭಾರತಕ್ಕೆ ಕಂಟಕ – ರೋಹಿತ್ & ಕೊಹ್ಲಿ ವಿಕೆಟ್ ವೀಕ್​ನೆಸ್ಪಾಕ್​ನಂತೆ ಭಾರತಕ್ಕೂ ಕಾದಿದ್ಯಾ ಶಾಕ್?

ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಆಟಗಾರರು ರೆಸ್ಟ್ ಮೂಡ್​ನಲ್ಲಿದ್ದಾರೆ. ರೋಹಿತ್ ಶರ್ಮಾ  ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮುಂದಿನ ಐದು ತಿಂಗಳಲ್ಲಿ ಭಾರತದ ಮುಂದೆ 10 ಟೆಸ್ಟ್ ಪಂದ್ಯಗಳಿವೆ. ಸುದೀರ್ಘ ಟೆಸ್ಟ್ ಋತುವಿನಲ್ಲಿ ಬಾಂಗ್ಲಾದೇಶದ ಮೊದಲ ಸರಣಿ ಇದಾಗಿದ್ದು, ಬಾರೀ ಕುತೂಹಲ ಮೂಡಿಸಿದೆ.ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸುಮಾರು 24 ವರ್ಷಗಳಿಂದ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿವೆ. ಅಂದಿನಿಂದ ಇಲ್ಲಿಯವರೆಗೆ ಒಟ್ಟು 13 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿವೆ. ಭಾರತ 11 ಪಂದ್ಯಗಳಲ್ಲಿ ಗೆದ್ದಿದ್ರೆ 2 ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಅಂದರೆ ಬಾಂಗ್ಲಾದೇಶ ತಂಡ ಕಳೆದ 24 ವರ್ಷಗಳಿಂದ ಭಾರತದ ವಿರುದ್ಧ ಕನಿಷ್ಠ ಒಂದು ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ. ಸೋ ಈ ಬಾರಿಯೂ ಬಾಂಗ್ಲಾದ ಎದುರು ನಾವೇ ಗೆಲ್ಲೋದು ಅನ್ನೋ ಕಾನ್ಫಿಡೆನ್ಸ್​ನಲ್ಲಿ ಭಾರತೀಯ ಆಟಗಾರರಿದ್ದಾರೆ. ಆದ್ರೆ ಈ ಸಲ ಬಾಂಗ್ಲಾವನ್ನ ಅಷ್ಟು ಈಸಿಯಾಗಿ ತೆಗೆದುಕೊಳ್ಳೋಕೆ ಚಾನ್ಸೇ ಇಲ್ಲ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕ್​ಗೆ ಕಾಲಿಡಲ್ಲ ಟೀಂ ಇಂಡಿಯಾ – ಚಾಂಪಿಯನ್ಸ್ ಟ್ರೋಫಿ ಟೂರ್ನಿ ಎತ್ತಂಗಡಿ

ಬಾಂಗ್ಲಾ ಸ್ಪಿನ್ ಮೋಡಿ! 

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನ ಸೋತಿರೋ ಟೀಂ ಇಂಡಿಯಾ ಪ್ಲೇಯರ್ಸ್ ರೋಹಿತ್ ಮತ್ತು ಕೊಹ್ಲಿಯನ್ನ ಹೊರತುಪಡಿಸಿ ದುಲೀಪ್ ಟ್ರೋಫಿಗೆ ಸಜ್ಜಾಗ್ತಿದ್ದಾರೆ. ಬಟ್ ಅತ್ತ ಬಾಂಗ್ಲಾ ಆಟಗಾರರು ದಶಕಗಳ ಬಳಿಕ ಪಾಕಿಸ್ತಾನ ತಂಡವನ್ನ ಬಗ್ಗು ಬಡಿದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅದೂ ಕೂಡ ರಾವಲ್ಪಿಂಡಿಯಲ್ಲೇ ಪಾಕ್​​ಗೆ ಮಣ್ಣು ಮುಕ್ಕಿಸಿದ್ದಾರೆ. ಈ ಗೆಲುವು ಬಾಂಗ್ಲಾದೇಶ ಸಂಭ್ರಮಕ್ಕೆ ಕಾರಣವಾಗಿದ್ರೆ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಪಾಕಿಸ್ತಾನ ಎದುರು ಟೆಸ್ಟ್​ನಲ್ಲಿ, ಅದೂ ಪಾಕಿಸ್ತಾನದಲ್ಲಿ, ಬಾಂಗ್ಲಾದೇಶ ಗೆಲ್ಲೋದನ್ನ ಯಾವೊಬ್ಬ ಕ್ರಿಕೆಟ್ ಪಂಡಿತರೂ ಊಹೆ ಮಾಡಿರಲಿಲ್ಲ. ಅದು ಅಂತಿಂಥಾ ಸೋಲಲ್ಲ.. 10 ವಿಕೆಟ್​ಗಳ ಸೋಲು.. ತವರಿನಲ್ಲೇ ಇದುವರೆಗೆ 10 ವಿಕೆಟ್​ಗಳ ಸೋಲನ್ನೇ ಕಾಣದ ಪಾಕ್​​ಗೆ ಇದು ಅಕ್ಷರಶಃ ಅಪಮಾನ. ಪಾಕ್ ಪ್ರವಾಸದಲ್ಲಿರುವ ಬಾಂಗ್ಲಾ, ಈ ಸರಣಿ ಮುಕ್ತಾಯದ ಬೆನಲ್ಲೇ ಭಾರತ ಪ್ರವಾಸ ಕೈಗೊಳ್ಳಲಿದೆ. ಭಾರತದ ನೆಲದಲ್ಲಿ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ. ಪಾಕ್​ಗೆ​ ಕೊಟ್ಟಂತೆ ಟೀಮ್​ ಇಂಡಿಯಾಗೆ ಶಾಕ್​ ಕೊಡೋ ಲೆಕ್ಕಾಚಾರದಲ್ಲಿದೆ. ಪಾಕ್​ ಎದುರು ಬಾಂಗ್ಲಾ ಗೆಲುವಿಗೆ ಕಾರಣವೇ ಬಾಂಗ್ಲಾದ ಸ್ಪಿನ್ ಅಸ್ತ್ರ. ಪ್ರಮುಖ ಸ್ಪಿನ್ನರ್​ ತೇಜುಲ್ ಇಸ್ಲಾಂ ಅನುಪಸ್ಥಿತಿಯಲ್ಲಿ ಬಾಂಗ್ಲಾ ಅಷ್ಟು ಕರಾರುವಕ್​ ದಾಳಿ ಸಂಘಟಿಸಿದೆ. 2ನೇ ಇನ್ನಿಂಗ್ಸ್​ನಲ್ಲಿ ಮೆಹಿದಿ ಹಸನ್ ಮಿರಜ್ ಹಾಗೂ ಶಕೀಬ್ ಅಲ್​ ಹಸನ್ ಸ್ಪಿನ್ ದಾಳಿಗೆ ವಿಲವಿಲ ಅಂತಾ ಒದ್ದಾಡಿದ ಪಾಕ್​, ಹೀನಾಯವಾಗಿ ಸೋಲು ಒಪ್ಪಿಕೊಳ್ತು. ಈ ಸ್ಪಿನ್ನರ್​ಗಳೇ ಟೀಮ್ ಇಂಡಿಯಾಗೆ ಮುಳ್ಳಾಗ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಟೀಮ್ ಇಂಡಿಯಾ ಸ್ಪಿನ್​​ ವೀಕ್ನೆಸ್​​ನಿಂದ ಬಳಲುತ್ತಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಶ್ರೀಲಂಕಾ ಸರಣಿ. ಲಂಕಾ ಪ್ರವಾಸದಲ್ಲಿ ಇಂಡಿಯನ್​ ಬ್ಯಾಟರ್ಸ್​ ಸ್ಪಿನ್​ ಎದುರು ತಿಣುಕಾಡಿ ಸೋಲೊಪ್ಪಿಕೊಂಡಿದ್ರು.  ಅದ್ರಲ್ಲೂ ಟೀಂ ಇಂಡಿಯಾದ ಮೇನ್ ಸ್ಟ್ರೆಂಥ್ ಆಗಿರೋ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ 2020ರ ಬಳಿಕ ಹೆಚ್ಚು ಬಾರಿ ಸ್ಪಿನ್ನರ್​​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. 2020ರಿಂದ ವಿರಾಟ್ ಕೊಹ್ಲಿ​, ಸ್ಪಿನ್ನರ್​ಗಳ ಎದುರು ಆಡಿದ 31 ಇನ್ನಿಂಗ್ಸ್​ಗಳಿಂದ 680 ರನ್ ಗಳಿಸಿದ್ದು, ಬರೋಬ್ಬರಿ 21 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಶರ್ಮಾ 32 ಇನ್ನಿಂಗ್ಸ್​​ಗಳಿಂದ 810 ರನ್ ಗಳಿಸಿದ್ದು, 20 ಸಲ ಸ್ಪಿನ್ ಖೆಡ್ಡಾಗೆ ಸಿಲುಕಿದ್ದಾರೆ.

ಇನ್ನು ಪಿಚ್ ಕಂಡಿಷನ್ಸ್ ನೋಡೋದಾದ್ರೆ ಭಾರತ ಹಾಗೂ ಬಾಂಗ್ಲಾ ಪಿಚ್ ಒಂದೇ ಥರ ಇದೆ. ಆದ್ರೆ ಟೀಮ್ ಇಂಡಿಯಾಗೆ ಹೋಲಿಸಿದ್ರೆ ಬಾಂಗ್ಲಾ ಟೆಸ್ಟ್​ ಸರಣಿಯನ್ನಾಡಿ ಭಾರತಕ್ಕೆ ಕಾಲಿಡ್ತಿದೆ. ಟೀಮ್ ಇಂಡಿಯಾ ಪರ ಕೆಲ ಆಟಗಾರರು ತಯಾರಿಗಾಗಿ ದುಲೀಪ್ ಟ್ರೋಫಿ ಆಡ್ತಿದ್ರೆ, ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ನೇರವಾಗಿ  ಅಗ್ನಿಪರೀಕ್ಷೆಗೆ ಧುಮುಕಲಿದ್ದಾರೆ. ಅಲ್ದೇ ಭಾರತದ ಪಿಚ್​ಗಳು ಸ್ಪಿನ್​ಗೆ ಹೆಚ್ಚು ಸಹಾಯಕಾರಿ. ಹೀಗಾಗಿ ಸಾಲಿಡ್​ ಫಾರ್ಮ್​ನಲ್ಲಿರೋ ಬಾಂಗ್ಲಾ ಸ್ಪಿನ್ನರ್ಸ್​, ಭಾರತದ ಬ್ಯಾಟರ್ಸ್​ಗೆ ಸವಾಲಾಗೋದ್ರಲ್ಲಿ ಅನುಮಾನ ಇಲ್ಲ. ಸೋ ಬಾಂಗ್ಲಾ ಹುಲಿಗಳನ್ನ ಎಚ್ಚರಿಯಿಂದಲೇ ಎದುರಿಸಿಬೇಕಿದೆ ಭಾರತೀಯ ಟೈಗರ್ಸ್.

Shwetha M

Leave a Reply

Your email address will not be published. Required fields are marked *