HITಮ್ಯಾನ್ ಉತ್ತರಾಧಿಕಾರಿ GILL – 10 ವರ್ಷ ಕ್ಯಾಪ್ಟನ್ಸಿ ಚೇಂಜ್ ಮಾಡಲ್ವಾ?
ರೋಹಿತ್ ರೆಕಾರ್ಡ್ಸ್ ಮುರಿಯೋಕಾಗುತ್ತಾ?

HITಮ್ಯಾನ್ ಉತ್ತರಾಧಿಕಾರಿ GILL – 10 ವರ್ಷ ಕ್ಯಾಪ್ಟನ್ಸಿ ಚೇಂಜ್ ಮಾಡಲ್ವಾ?ರೋಹಿತ್ ರೆಕಾರ್ಡ್ಸ್ ಮುರಿಯೋಕಾಗುತ್ತಾ?

ಸೆಪ್ಟೆಂಬರ್ ತಿಂಗಳಿಂದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಮೂಲಕ ಮತ್ತೆ ತನ್ನ ಅಭಿಯಾನ ಆರಂಭಿಸಲಿರುವ ಟೀಂ ಇಂಡಿಯಾ ಬಳಿಕ ಸಾಲು ಸಾಲು ಸರಣಿಗಳಲ್ಲಿ ಬ್ಯುಸಿಯಾಗಲಿದೆ. ಆದ್ರೆ ಭಾರತ ತಂಡದ ಮೇನ್ ಟಾರ್ಗೆಟ್ ಇರೋದು 2025ರ ಚಾಂಪಿಯನ್ಸ್ ಟ್ರೋಫಿ ಮೇಲೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಚಾಂಪಿಯನ್ಸ್ ಟ್ರೋಫಿ ಟೂರ್ನಿ ರೋಹಿತ್ ಶರ್ಮಾ ಪಡೆಗೆ ತುಂಬಾನೇ ಇಂಪಾರ್ಟೆಂಟ್. ಈಗಾಗ್ಲೇ ಐಸಿಸಿ ಮೆಗಾ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್​ ಆಗಿದ್ದು, ಬಿಸಿಸಿಐ ಮಾತ್ರ ಈ ವೇಳಾಪಟ್ಟಿಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಬರೋಬ್ಬರಿ 16 ವರ್ಷಗಳ ಬಳಿಕ ಪಾಕ್​ ನೆಲಕ್ಕೆ ಕಾಲಿಟ್ಟು ಭಾರತೀಯ ಟೀಂ ಪಂದ್ಯ ಆಡುತ್ತಾ ಇಲ್ವಾ ಅನ್ನೋದು ಕೂಡ ಇನ್ನೂ ಫೈನಲ್ ಆಗಿಲ್ಲ. ಈಗಿರುವಾಗ್ಲೇ ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ನಾನಾ ಚರ್ಚೆಗೆ ಗ್ರಾಸವಾಗಿದೆ. ಅದುವೇ ರೋಹಿತ್ ಶರ್ಮಾ ಉತ್ತರಾಧಿಕಾದಿ ವಿಚಾರ.

ಇದನ್ನೂ ಓದಿ: 23 ವರ್ಷ.. 10 ವಿಕೆಟ್.. ಬಾಂಗ್ಲಾ ಕೇಕೆ – ಪಾಕಿಸ್ತಾನದ ಕ್ರಿಕೆಟ್ ಕೂಡ ಅಧೋಗತಿ

ಗಿಲ್ ರೋಹಿತ್ ಉತ್ತರಾಧಿಕಾರಿ?  

ಟೀಂ ಇಂಟಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಈಗ 37 ವರ್ಷ. ಐಸಿಸಿ ಚಾಂಪಿಯನ್ ಟ್ರೋಫಿ ನಂತರ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆ ನಂತರ ರೋಹಿತ್​ಗೆ ಭಾರತ ಏಕದಿನ ತಂಡದ ಕ್ಯಾಪ್ಟನ್ಸಿಯಿಂದ ಕೊಕ್​​ ನೀಡುವ ಸಾಧ್ಯತೆ ಇದೆ. ರೋಹಿತ್ ಉತ್ತರಾಧಿಕಾರಿಯಾಗಿ ಶುಭ್​ಮನ್ ಗಿಲ್​ಗೆ ಪಟ್ಟ ಕಟ್ಟಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ. ದೂರ ದೃಷ್ಟಿಯಿಂದ ಎಲ್ಲಾ ಮಾದರಿಯಲ್ಲೂ ಒಬ್ಬರೇ ಟೀಮ್​ ಇಂಡಿಯಾವನ್ನು ಮುನ್ನಡೆಸಬೇಕು. ಮುಂದಿನ 10 ವರ್ಷಗಳ ಕಾಲ ಟೀಮ್​ ಇಂಡಿಯಾ ಕ್ಯಾಪ್ಟನ್​ ಬದಲಾಗಬಾರದು ಎಂದು ಸೆಲೆಕ್ಷನ್​ ಕಮಿಟಿ ಗಿಲ್​ಗೆ ಈಗಾಗಲೇ ಉಪ ನಾಯಕನ ಪಟ್ಟ ಕಟ್ಟಿದೆ. ಮುಂದಿನ ವರ್ಷದ ಚಾಂಪಿಯನ್ ಟ್ರೋಫಿ ನಂತರ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗಲಿದ್ದು, ಗಿಲ್​ ಏಕದಿನ ತಂಡದ ಕ್ಯಾಪ್ಟನ್​ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಶ್ರೀಲಂಕಾ ಪ್ರವಾಸಕ್ಕೆ ಮುನ್ನವೇ ಟೀಮ್​​ ಇಂಡಿಯಾ ಏಕದಿನ ಮತ್ತು ಟಿ20 ತಂಡದ ಉಪ ನಾಯಕನ ಸ್ಥಾನವನ್ನ ಗಿಲ್​ಗೆ ನೀಡಲಾಗಿತ್ತು. ಆದ್ರೆ ಗಿಲ್​ಗೆ ನಾಯಕತ್ವ ನೀಡಿದ್ರೂ ರೋಹಿತ್​ರಂಥ ನಾಯಕ ಮತ್ತೆ ಸಿಗೋದಿಲ್ಲ ಅನ್ನೋದು ಕೂಡ ವಾಸ್ತವ. ಯಾಕಂದ್ರೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿರುವ ಹಲವು ದಿಗ್ಗಜರಿದ್ದಾರೆ. ಹೊರ ದೇಶಗಳಲ್ಲಿ ಅಸಾಧ್ಯ ಎನಿಸಿದ ಸಾಧನೆಗಳನ್ನು ಸಾಧಿಸಿದ್ದಾರೆ. ಪ್ರಮುಖ ಐಸಿಸಿ ಟ್ರೋಫಿಗಳನ್ನು ಭಾರತಕ್ಕಾಗಿ ಗೆದ್ದುಕೊಟ್ಟಿದ್ದಾರೆ. ಆದರೆ ಈ ಎಲ್ಲ ನಾಯಕರಿಗಿಂತ ರೋಹಿತ್ ಶರ್ಮಾ ತುಂಬಾನೇ ಸ್ಪೆಷಲ್ ಎನ್ನಬಹುದು. ಯಾಕಂದ್ರೆ ಟೀಮ್ ಇಂಡಿಯಾದ ನಾಯಕನಾಗಿ ಹಿಟ್‌ಮ್ಯಾನ್ ಅಸಾಮಾನ್ಯ ಯಶಸ್ಸನ್ನು ಸಾಧಿಸಿದ್ದಾರೆ. ಅವರ ನಾಯಕತ್ವದಲ್ಲಿ ತಂಡದ ಗೆಲುವಿನ ಶೇಕಡಾವಾರು ಎಲ್ಲಾ ಸ್ವರೂಪಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚಿದೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕ. 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಸೋತರೂ ರೋಹಿತ್ ಅವರ ತಂತ್ರಗಳು ಯಶಸ್ವಿಯಾಗಿದ್ದವು. ರೋಹಿತ್ ಶರ್ಮಾ ಭಾರತದ ನಾಯಕನಾಗಿ 123 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಟೀಂ ಇಂಡಿಯಾ 94 ಪಂದ್ಯಗಳನ್ನು ಗೆದ್ದು 26ರಲ್ಲಿ ಸೋತಿದೆ. ರೋಹಿತ್ ಗೆಲುವಿನ ಶೇಕಡಾವಾರು 73.91 ಆಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಪರ 300ಕ್ಕೂ ಹೆಚ್ಚು ಗೆಲುವು ದಾಖಲಿಸಿದ ತಂಡದಲ್ಲಿದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಯೂ ರೋಹಿತ್​ಗೆ ಸಿಕ್ಕಿದೆ. ಅಲ್ಲದೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ 1 ಸಾವಿರ ರನ್​ ಸಿಡಿಸಿದ ಆಟಗಾರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಕಂಡ ಯಶಸ್ವೀ ನಾಯಕರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಅದರಲ್ಲೂ ಇಡೀ ತಂಡವನ್ನ ಒಗ್ಗಟ್ಟಿನಿಂದ ಮುನ್ನಡೆಸೋ ಸಾಮರ್ಥ್ಯ ಎಲ್ಲರಿಗಿಂತ ಒಂದು ಕೈ ಜಾಸ್ತಿನೇ ಇದೆ. ಆಟದಲ್ಲೂ ಕೂಡ ಇತರೆ ಆಟಗಾರರಿಗಿಂತ ಒಂದು ಕೈ ಮುಂದು ಎನ್ನುವಂತೆಯೇ ಇದ್ದಾರೆ. ಹೀಗಾಗೇ ರೋಹಿತ್ ಕ್ಯಾಪ್ಟನ್ಸಿಯಲ್ಲಿ ವಿನ್ನಿಂಗ್ ಪರ್ಸೆಂಟೇಜ್ ಕೂಡ ಜಾಸ್ತಿನೇ ಇದೆ. ಬಟ್ ಮುಂದಿನ ದಿನಗಳಲ್ಲಿ ಅವ್ರ ಸ್ಥಾನವನ್ನ ಸಮರ್ಥವಾಗಿ ಯಾರು ನಿಭಾಯಿಸ್ತಾರೆ ಅನ್ನೋ ಪ್ರಶ್ನೆಯೂ ಅಭಿಮಾನಿಗಳನ್ನ ಕಾಡ್ತಿದೆ.

Shwetha M