LSG ಮಾಲೀಕರಿಗೆ KL ಟಾಂಗ್ – ಕನ್ನಡಿಗ ರಾಹುಲ್ RCBಗೆ ಪಕ್ಕಾ
ಮಾಲೀಕ VS ನಾಯಕ ಸರಿಯಾಗಲ್ವಾ?

LSG ಮಾಲೀಕರಿಗೆ KL ಟಾಂಗ್ – ಕನ್ನಡಿಗ ರಾಹುಲ್ RCBಗೆ ಪಕ್ಕಾಮಾಲೀಕ VS ನಾಯಕ ಸರಿಯಾಗಲ್ವಾ?

ಕನ್ನಡಿಗ ಕೆ.ಎಲ್ ರಾಹುಲ್ ಬಿಲ್ ಕುಲ್ ಆಗಿ ಲಕ್ನೋ ಟೀಮ್ ನಲ್ಲಿ ಆಡೋದಿಲ್ಲ. ಆರ್‌ಸಿಬಿ ಬರೋದು ಗ್ಯಾರಂಟಿ ಅನ್ನೋ ವಿಚಾರ ಕೇಳಿಬರ್ತಾನೇ ಇದೆ. ಇದೀಗ ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದೆ. ಕೆ.ಎಲ್ ರಾಹುಲ್​​ ಲಕ್ನೋ ಫ್ರಾಂಚೈಸಿಗೆ ಗುಡ್​ ಬೈ ಹೇಳುವ ಟೈಮ್ ಬಂದಾಗಿದೆ. ಕನ್ನಡಿಗ ರಾಹುಲ್​​​​ ಲಕ್ನೋ ಫ್ರಾಂಚೈಸಿ ಮಾಲೀಕರಿಗೆ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ. ತನಗಾದ ನೋವು, ಅವಮಾನಗಳ ವಿರುದ್ಧ ಗುಡುಗಿದ್ದಾರೆ. ಇದರ ಬೆನ್ನಲ್ಲೇ ಲಕ್ನೋ ಓನರ್ ಓಡೋಡಿ ಬಂದು ಕನ್ನಡಿಗನ ಮೀಟ್ ಮಾಡಿದ್ದೂ ಆಗಿದೆ. ಆದ್ರೆ, ಓನರ್ ಮಾತಿಗೂ, ಕೆ,ಎಲ್ ಮಾತಿಗೂ ತಾಳ ಮೇಳ ಸಿಕ್ತಿಲ್ಲ. ಎಲ್ಲೋ ಏನೋ ಮಿಸ್ ಹೊಡೀತಿದೆ. ಅಷ್ಟಕ್ಕೂ ರಾಹುಲ್​​, ಲಕ್ನೋ ಮಾಲೀಕರ ಬಗ್ಗೆ ಹೇಳಿದ್ದೇನು? ಲಕ್ನೋ ಓನರ್ ಕೆ.ಎಲ್ ಬಗ್ಗೆ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯ ಸ್ವಾರ್ಥಿ, ದುರಹಂಕಾರಿ!! -ಹಾರ್ದಿಕ್‌ ವಿರುದ್ಧ ಗಂಭೀರ ಆರೋಪ?

ಕಳೆದ ಐಪಿಎಲ್ ಸೀಸನ್​ ವೇಳೆ ನಡೆದ ಆ ಒಂದು ಘಟನೆಯನ್ನ ಯಾರೂ ಮರೆತರು ನಮ್ಮ ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳ ಮನಸನ್ನ ಘಾಸಿಗೊಳಿಸಿದ ದಿನ ಅದು. ಅಂದು ಸನ್‌ರೈಸರ್ಸ್ ಹೈದ್ರಾಬಾದ್​ ವಿರುದ್ಧ ಲಕ್ನೋ​​ ಸೋತಿತ್ತು. ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಟೀಮ್ ಸೋಲುತ್ತಿದ್ದಂತೆ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ, ಆನ್​ ಫೀಲ್ಡ್​​ನಲ್ಲೆ ಎಂಟ್ರಿಕೊಟ್ಟಿದ್ದರು. ಕ್ಯಾಪ್ಟನ್ ಕೆ.ಎಲ್ ರಾಹುಲ್ ವಿರುದ್ಧ ಗರಂ ಆಗಿದ್ದೇ ಕಿಡಿಕಾರಲು ಶುರುಮಾಡಿದ್ದರು. ಏರು ಧ್ವನಿಯಲ್ಲೇ ಆನ್​​ ಫೀಲ್ಡ್​ನಲ್ಲಾದ ತಪ್ಪುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಅಂದು ನಮ್ಮ ಹೆಮ್ಮೆಯ ಕನ್ನಡಿಗ ಕ್ರಿಕೆಟಿಗ ಕೆ.ಎಲ್ ರಾಹುಲ್ ತಲೆತಗ್ಗಿಸಿ ಅವಮಾನ ಎದುರಿಸಿದ್ದರು. ಅಂದು ಲಕ್ನೋ ಫ್ರಾಂಚೈಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಫ್ಯಾನ್ಸ್​ ಹಿಗ್ಗಾಮುಗ್ಗಾ ಜಾಡಿಸಿದ್ರು. ಲಕ್ನೋ ಫ್ರಾಂಚೈಸಿ ಓನರ್​​​​ ರಾಹುಲ್​ನ ಅವಮಾನಿಸಿ​ 3 ತಿಂಗಳಾಗಿದೆ. ಇಲ್ಲಿವರೆಗೆ ಆ ಅವಮಾನದ ಬಗ್ಗೆ ಕೆ.ಎಲ್ ರಾಹುಲ್ ಯಾವುದೇ ಸ್ಟೇಟ್ ಮೆಂಟ್ ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಲಕ್ನೋ ಓನರ್ ಬಗ್ಗೆ ಕೆ.ಎಲ್ ಕಿಡಿ ಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರೋ ರಾಹುಲ್​​​, ಲಕ್ನೋ ಮಾಲೀಕರ ನಡೆ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಐಪಿಎಲ್ ಮಾಲೀಕರಿಗೆ ಬ್ಯುಸಿನೆಸ್​ ಹಿನ್ನೆಲೆ ಇರುತ್ತೆ. ಅವರು ಹುಡುಕಾಟ ನಡೆಸಿ ಜಾಗರೂಕತೆಯಿಂದ ತಂಡವನ್ನ ಕಟ್ಟುತ್ತಾರೆ. ಆದರೆ ಪ್ರತಿ ಪಂದ್ಯದಲ್ಲಿ ಗೆಲುವಿನ ಗ್ಯಾರಂಟಿ ಇರಲ್ಲ. ಟಾಪ್​ ಆಟಗಾರರನ್ನ ಅಂಕಿ-ಅಂಶಗಳ ಆಧಾರದ ಮೇಲೆ ಖರೀದಿಸುತ್ತಾರೆ. ಅವರು ಕೂಡ ಕೆಟ್ಟ ಸೀಸನ್ ನೋಡುತ್ತಾರೆ. ಆಟದಲ್ಲಿ ಪ್ರತಿಯೊಬ್ಬ ಆಟಗಾರ ಕೂಡ ಕೆಟ್ಟ ದಿನಗಳನ್ನ ಎದುರಿಸುತ್ತಾನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ​​ರಾಹುಲ್ ಇಲ್ಲಿ ನೇರವಾಗಿ ಸಂಜೀವ್ ಗೋಯೆಂಕಾ ಹೆಸರು ಪ್ರಸ್ತಾಪಿಸದೇ ಇರಬಹುದು. ಆದ್ರೆ ಇನ್​ಡೈರೆಕ್ಟ್​​ ಆಗಿ ಟಾಂಗ್ ಕೊಟ್ಟಿರೋದು ಲಕ್ನೋ ಮಾಲೀಕರಿಗೆ. ಅಂದು ಒಂದು ಸೋಲಿಗೆ ಅವಮಾನ ಎದುರಿಸಿದ ಕೆ.ಎಲ್​ ರಾಹುಲ್, ಇದೀಗ ಆಟದಲ್ಲಿ ಪ್ರತಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಸಂಜೀವ್ ಗೋಯೆಂಕಾಗೆ ಸಖತ್ ಕೌಂಟರ್​ ಕೊಟ್ಟಿದ್ದಾರೆ.

ಇದಾದ ಬೆನ್ನಲ್ಲೇ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಕೂಡಾ ಸೈಲೆಂಟ್ ಆಗಿಲ್ಲ. ಕೊಲ್ಕತ್ತಾದಲ್ಲಿರುವ ತಮ್ಮ ಕಚೇರಿಗೆ ರಾಹುಲ್ ಅವರನ್ನು ಕರೆಸಿಕೊಂಡು LSG ತಂಡದ ಮಾಲೀಕರು ಮಾತುಕತೆ ನಡೆಸಿದ್ದಾರೆ. ಇನ್ನು ಭೇಟಿಯ ವೇಳೆ ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಯಸುತ್ತಿರುವುದಾಗಿ ಸಂಜೀವ್ ಗೊಯೆಂಕಾ ತಿಳಿಸಿದ್ದಾರೆ. ಇದಾಗ್ಯೂ ಕೆಎಲ್ ರಾಹುಲ್ ಅಂತಿಮ ನಿರ್ಧಾರವನ್ನು ತಿಳಿಸಿಲ್ಲ. ಆದರೆ, ಲಕ್ನೋ ಮಾಲೀಕರು ಮಾತ್ರ ನನ್ನ ಕೆ.ಎಲ್ ನಡುವೆ ಯಾವ ಮನಸ್ತಾಪವೂ ಇಲ್ಲ ಅನ್ನೋದನ್ನು ತೋರಿಸುವ ಪ್ರಯತ್ನವಂತೂ ನಡೆಸಿದ್ದಾರೆ.

ಅಂದು ಮನಸ್ತಾಪ ಶುರುವಾಗಲು ಕಾರಣವಾಗಿದ್ದೇ ಲಕ್ನೋ ಫ್ರಾಂಚೈಸಿ ಮಾಲೀಕರ ಅಹಂಕರಾದ ವರ್ತನೆ. ಅಂದಿನಿಂದಲೇ ಫ್ಯಾನ್ಸ್ ರಾಹುಲ್ ಬೆನ್ನಿಗೆ ನಿಂತಿದ್ರು. ಲಕ್ನೋ ಟೀಮ್ ಬಿಟ್ಟು ಬನ್ನಿ ಅಂತಾ ಮನವಿ ಮಾಡಿಕೊಂಡಿದ್ರು. ಬಹುಷಃ ಕೆ.ಎಲ್ ಗೂ ಲಕ್ನೋ ಮಾಲೀಕರ ಅಹಂಕಾರದ ವರ್ತನೆ ಮನಸಿಗೆ ನೋವಾಗಿದ್ದಂತೆ ಕಾಣುತ್ತೆ. ​ಕ್ಯಾಪ್ಟನ್ ರಾಹುಲ್​​ ಆಗಲೇ ಲಕ್ನೋ ತಂಡದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ರು. ಇದೀಗ ರಾಹುಲ್​​​​​​, ಗೋಯೆಂಕಾ ವಿರುದ್ಧ ಗುಡುಗುವ ಮೂಲಕ ತಂಡದಿಂದ ಹೊರಬರುವ ಸುಳಿವು ನೀಡಿದ್ದಾರೆ. ಆಗಿದ್ದೆಲ್ಲಾ ಒಳ್ಳೆಯದಕ್ಕೆ. ನಮ್ಮ ಬೆಂಗಳೂರು ಟೀಮ್ ಗೆ ನಮ್ಮ ಕನ್ನಡಿಗನೇ ಬರಲಿ ಅಂತಾ ಆರ್‌ಸಿಬಿ ಫ್ಯಾನ್ಸ್ ಕೂಡಾ ಬಯಸುತ್ತಿದ್ದಾರೆ. ಆದ್ರೆ, ಲಕ್ನೋ ಓನರ್ ಮಾತ್ರ ಕೆ.ಎಲ್ ರಾಹುಲ್ ಎಲ್ಲೂ ಹೋಗಲ್ಲ ಅನ್ನೋ ಮೆಸೇಜ್ ಪಾಸ್ ಮಾಡಲು ಟ್ರೈ ಮಾಡ್ತಿದ್ದಾರೆ.

ಈಗಾಗ್ಲೇ ರಾಹುಲ್​ ಮೇಲೆ ಅನೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆ ಪೈಕಿ ಆರ್​ಸಿಬಿ ಕೂಡ ಒಂದು. ಈ ಬಾರಿ ಆರ್‌ಸಿಬಿ ಕೂಡಾ ಕನ್ನಡಿಗನ ಮೇಲೆ ಬಿಡ್ಡಿಂಗ್ ಮಾಡಲು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ರಾಹುಲ್​ ಖರೀದಿಗೂ ತೆರೆಮರೆಯಲ್ಲೇ ಕಸರತ್ತು ಅರಂಭಿಸಿದೆ ಎಂದು ಹೇಳಲಾಗ್ತಿದೆ. ಕೆ.ಎಲ್ ರಾಹುಲ್ ಕೂಡಾ ಆರ್‌ಸಿಬಿಗೆ ಬರೋ ಸೂಚನೆ ಕೊಟ್ಟಿದ್ದಾರೆ. ಒಂದು ವೇಳೆ ಕೆ.ಎಲ್ ಬೆಂಗಳೂರು ಟೀಮ್ ಗೆ ಜಾಯ್ನ್ ಆದ್ರೆ, ಕಪ್ ನಮ್ದೇ ಬಿಡಿ. ಅದೇನೇ ಇರಲಿ, ರಾಹುಲ್ ಪರೋಕ್ಷ ಮಾತುಗಳಲ್ಲಿ ಸಂಜೀವ್​ ಗೋಯೆಂಕಾ ವಿರುದ್ಧ ಬೇಸರ ವ್ಯಕ್ತಪಡಿಸುವ ಮೂಲಕ ತನ್ನ ಹಾಗೂ ಲಕ್ನೋ ಮಧ್ಯೆ ಏನೇನೂ ಲ್ಲವೂ ಸರಿಯಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಇನ್ನು ಸದ್ಯದಲ್ಲೇ ಬರುವ ಮೆಗಾ ಆಕ್ಷನ್​ನಲ್ಲಿ ಎಲ್ಲಾ ಡೌಟ್ ಗಳು ಕ್ಲಿಯರ್ ಆಗುತ್ತೆ ಅಷ್ಟೇ.

Shwetha M