Kohli ಜರ್ಸಿ ಸೇಲ್.. ದಾಖಲೆ ಬರೆದ Rohit ಬ್ಯಾಟ್! -KL ರಾಹುಲ್ ಗೆ ಹಣದ ಹೊಳೆ..!

ವಿಶ್ವ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಕ್ರೇಜ್ ಹೇಗಿದೆ ಎನ್ನುವುದರ ಬಗ್ಗೆ ಹೇಳೋ ಅಗತ್ಯವಿಲ್ಲ. ಕ್ರಿಕೆಟ್ನ ಕಿಂಗ್ ಎಂದೇ ಫೇಮಸ್ ಆಗಿರೋ ಕೊಹ್ಲಿ.. ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ಸಾವಿರ ಗಟ್ಟಲೆ ರನ್, ಫೀಲ್ಡಿಂಗ್ ನಲ್ಲಿ ಚಿರತೆಯ ವೇಗ. ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಮೀರಿಸುವವರಿಲ್ಲ. ಅದಕ್ಕೇ ಎಲ್ಲರೂ ಈ ರನ್ ಮಷಿನ್, ಫಿಟ್ ನೆಸ್ ಕಾ ಬಾಪ್ ಅಂತಾ ಕರಿತಾರೆ.. ಜೀವನದಲ್ಲಿ ಒಮ್ಮೆಆದ್ರೂ ಕೊಹ್ಲಿಯನ್ನ ಮೀಟ್ ಮಾಡ್ಬೇಕು.. ಅವರ ಜೊತೆ ಸೆಲ್ಫೀ ತಗೋಬೇಕು.. ಅವರ ಯಾವುದಾದ್ರೂ ಒಂದು ವಸ್ತುನ ಎಷ್ಟು ದುಬಾರಿಯಾದ್ರು ಪರವಾಗಿಲ್ಲ ಖರೀದಿಸ್ಬೇಕು ಅಂತಾ ಅದೆಷ್ಟೋ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇರ್ತಾರೆ.. ಇದೀಗ ಕಿಂಗ್ ಕೊಹ್ಲಿಯ ಜೆರ್ಸಿ ಹರಾಜಿನಲ್ಲಿ ದಾಖಲೆ ಬರೆದಿದೆ.. ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಅಷ್ಟಕ್ಕೂ ಕೊಹ್ಲಿ ಜರ್ಸಿ ಎಷ್ಟು ಲಕ್ಷಕ್ಕೆ ಹರಾಜು ಆಯ್ತು? ಯಾವ ಯಾವ ಸ್ಟಾರ್ಸ್ ಈ ಹರಾಜಿನಲ್ಲಿ ಭಾಗಿಯಾಗಿದ್ರು? ಹರಾಜಿನಲ್ಲಿ ಒಟ್ಟು ಎಷ್ಟು ದುಡ್ಡು ಸಂಗ್ರಹ ಆಯ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಐಶ್ವರ್ಯ – ಅಭಿ ಮಧ್ಯೆ ಡಾಕ್ಟರ್ ವಿಲನ್? – ಐಶ್ ಕಿಸ್ ಕೊಟ್ಟಿದ್ದೇ ಡಿವೋರ್ಸ್ ಗೆ ಕಾರಣ?
ವಿರಾಟ್ ಕೊಹ್ಲಿ. ಈ ಹೆಸರು ಕೇಳಿದ್ರೆ ಕ್ರಿಕೆಟ್ ಪ್ರೇಮಿಗಳ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತೆ. ಕ್ರೀಡಾಂಗಣದ ತುಂಬಾ ಜೈಕಾರ ಮೊಳಗುತ್ತೆ. ವಿರಾಟ್ ಅಗ್ರೆಸ್ಸಿವ್ ಆಟ ಇಡೀ ಜಗತ್ತನ್ನೇ ಸೆಳೆದಿದೆ. ಅದರಲ್ಲೂ ಐಪಿಎಲ್ ಅಂತಾ ಬಂದ್ರೆ ಆರ್ ಸಿಬಿ ಅಭಿಮಾನಿಗಳ ಪಾಲಿಗೆ ವಿರಾಟ್ ಕೊಹ್ಲಿಯೇ ಕಿಂಗ್. ಮೈದಾನದಲ್ಲಿ ದಾಖಲೆ ಬರೆಯುತ್ತಿದ್ದ ಕಿಂಗ್ ಕೊಹ್ಲಿ ಈಗ ಜೆರ್ಸಿ ಹರಾಜಿನಲ್ಲೂ ದಾಖಲೆ ಬರೆದಿದ್ದಾರೆ.. ಇದೀಗ ಅವರ ಜೆರ್ಸಿ ಬರೋಬ್ಬರಿ 40 ಲಕ್ಷಕ್ಕೆ ಸೋಲ್ಡ್ ಔಟ್ ಆಗಿದೆ.
ಹೌದು, ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗೆ “ಕ್ರಿಕೆಟ್ ಫಾರ್ ಚಾರಿಟಿ” ಹರಾಜನ್ನು ಆಯೋಜಿಸಿದ್ದರು. ಈ ಹರಾಜಿನ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಕೆಲಸ ಮಾಡುವ ಸಂಸ್ಥೆಗೆ ಧನ ಸಹಾಯ ಮಾಡುವುದು. ಟೀಮ್ ಇಂಡಿಯಾದ ಹಲವು ಕ್ರಿಕೆಟಿಗರು ತಮ್ಮ ವೈಯಕ್ತಿಕ ವಸ್ತುಗಳನ್ನು ಹರಾಜಿಗೆ ನೀಡಿದ್ದರು. ಇದರಲ್ಲಿ ವಿರಾಟ್ ಕೊಹ್ಲಿ ಧರಿಸಿದ್ದ ಜೆರ್ಸಿ, ಬ್ಯಾಟಿಂಗ್ ವೇಳೆ ಬಳಸುತ್ತಿದ್ದ ಗ್ಲೌಸ್, ರೋಹಿತ್ ಶರ್ಮ ಬ್ಯಾಟ್, ಎಂ.ಎಸ್. ಧೋನಿ ಬ್ಯಾಟ್ ಹಾಗೂ ರಾಹುಲ್ ದ್ರಾವಿಡ್ ಬ್ಯಾಟ್ ಸೇರಿದಂತೆ ಹಲವು ವಸ್ತುಗಳು ಹರಾಜಿಗೆ ಇಟ್ಟಿದ್ರು.. ಈ ಹರಾಜಿನಲ್ಲಿ ಟೀಮ್ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಜೆರ್ಸಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಬರೋಬ್ಬರಿ 40 ಲಕ್ಷ ರೂಪಾಯಿಗೆ ಮಾರಾಟವಾಯಿತು. ಆ ಬಳಿಕ ಕೊಹ್ಲಿ ಬ್ಯಾಟಿಂಗ್ ವೇಳೆ ಬಳಸುತ್ತಿದ್ದ ಗೌಸ್ 28 ಲಕ್ಷ ರೂ.ಗೆ ಮಾರಾಟವಾಗಿದೆ.
ಇನ್ನು ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಕೂಡ ತಮ್ಮ ಬ್ಯಾಟ್ ಅನ್ನ ಹರಾಜಿಗೆ ಇಟ್ಟಿದ್ರು.. ಆ ಬ್ಯಾಟ್ ಬರೋಬ್ಬರಿ 24 ಲಕ್ಷ ರೂಪಾಯಿಗೆ ಸೇಲ್ ಆಗಿದೆ. ಭಾರತಕ್ಕೆ ಸಾಕಷ್ಟು ಐಸಿಸಿ ಟ್ರೋಫಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ಗೆ ಐದು ಬಾರಿ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿರುವ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಅವರು ಬಳಸುತ್ತಿದ್ದ ಬ್ಯಾಟ್ ಅನ್ನ ಹರಾಜಿಗೆ ಇಟ್ಟಿದ್ರು. ಇದು ಬರೋಬ್ಬರಿ 13 ಲಕ್ಷ ರೂಪಾಯಿಗೆ ಹರಾಜಾಗಿದೆ. ಇನ್ನು ಭಾರತದ ಮಾಜಿ ಆಟಗಾರ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೂಡ ತಮ್ಮ ಬ್ಯಾಟ್ ಹಾಗೇ ಜೆರ್ಸಿಯನ್ನ ಹರಾಜಿಗೆ ಇಟ್ಟಿದ್ರು. ಇದು 11 ಲಕ್ಷ ರೂಪಾಯಿಗೆ ಮಾರಾಟ ಆಗಿದೆ. ಇನ್ನು ಕೆಎಲ್ ರಾಹುಲ್ ಧರಿಸಿದ್ದ ಜೆರ್ಸಿಗೆ 11 ಲಕ್ಷ ರೂ.ಗೆ ಮಾರಾಟವಾಗಿದೆ. ಇನ್ನು ಜಸ್ಪ್ರೀತ್ ಬುಮ್ರಾ ಸಹಿ ಮಾಡಿದ ಟೀಮ್ ಇಂಡಿಯಾ ಜೆರ್ಸಿ 8 ಲಕ್ಷ ರೂಪಾಯಿಗೆ ಸೇಲ್ ಆಗಿದೆ. ಅಲ್ಲದೆ ಜಾಸ್ ಬಟ್ಲರ್ ಅವರು ಸಹಿ ಮಾಡಿದ ರಾಜಸ್ಥಾನ್ ರಾಯಲ್ಸ್ ಜೆರ್ಸಿ, ಕ್ವಿಂಟನ್ ಡಿ ಕಾಕ್ ಸಹಿ ಮಾಡಿದ ವಿಕೆಟ್ ಕೀಪಿಂಗ್ ಗ್ಲೌಸ್, ನಿಕೋಲಸ್ ಪೂರನ್ ಅವರ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿ ಕೂಡ ಹರಾಜಿನಲ್ಲಿ ಲಕ್ಷಾಂತರ ರೂಪಾಯಿಗೆ ಸೇಲ್ ಆಗಿವೆ.
ಅಂತೂ ಕೆ ಎಲ್ ರಾಹುಲ್ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಅವರ ‘ಕ್ರಿಕೆಟ್ ಫಾರ್ ಚಾರಿಟಿ’ ಹರಾಜಿನಲ್ಲಿ ಹಲವು ದಿಗ್ಗಜರ ಸ್ಮರಣಿಕೆಳು ಸೇಲ್ ಆಗಿದ್ದು, ವಿಪ್ಲಾ ಫೌಂಡೇಶನ್ಗೆ ಕೋಟ್ಟಿಗಟ್ಟಲೆ ಹಣ ಸಂಗ್ರಹವಾಗಿದೆ. ಈ ಚಾರಿಟಿ ಹರಾಜಿನಲ್ಲಿ ಒಟ್ಟು 1.93 ಕೋಟಿ ರೂಪಾಯಿ ನಿಧಿ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕೆಎಲ್ ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದರ ಬಗ್ಗೆ ಪೋಸ್ಟ್ ಮಾಡಿದ್ದರು. ಹರಾಜು ಯಶಸ್ವಿಯಾಗಿದ್ದು, ಎಲ್ಲ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುವುದು ಎಂದು ಹೇಳಿದ್ದಾರೆ.. ಇಂತಹ ಒಳ್ಳೆಯ ಕೆಲಸ ಮಾಡಿದ ಕೆಎಲ್ ರಾಹುಲ್ ದಂಪತಿಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.